• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಯುಟಿಲಿಟಿ
  • /ತುಪ್ಪ ಕೆಟ್ಟೋಗಿದೆಯಾ ಅಂತ ಗುರುತಿಸೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

ತುಪ್ಪ ಕೆಟ್ಟೋಗಿದೆಯಾ ಅಂತ ಗುರುತಿಸೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

ಅಡುಗೆ ಮನೆಯಲ್ಲಿ ತುಪ್ಪದ ಪಾತ್ರ ದೊಡ್ಡದು. ಆದರೆ ಮನೇಲಿ ತಂದಿಡೋ ತುಪ್ಪನ ಎಷ್ಟು ದಿನ ಬಳಸಬಹುದು? ಅದು ಕೆಟ್ಟೋಗಿದೆಯಾ ಅಂತ ಗುರುತಿಸೋದು ಹೇಗೆ ಅನ್ನೋದು ಅದೆಷ್ಟೋ ಜನರಿಗೆ ಗೊತ್ತಿಲ್ಲ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Written ByKrishna NK
Published: Oct 18, 2026, 03:46 PM IST|Updated: Oct 18, 2026, 03:49 PM IST
joinshare
ತುಪ್ಪ ಕೆಟ್ಟೋಗಿದೆಯಾ ಅಂತ ಗುರುತಿಸೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
Image Credit: Ghee store tips

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಸುನಾಮಿ .. ಸಿದ್ದರಾಮಯ್ಯ ಪರ ಬ್ಯಾಟ್

ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಸುನಾಮಿ .. ಸಿದ್ದರಾಮಯ್ಯ ಪರ ಬ್ಯಾಟ್

2

ಕೊಟ್ಟಿಗೆಗೆ ನುಗ್ಗಿ ಬೀದಿ ನಾಯಿಗಳಿಂದ ಕುರಿ-ಮೇಕೆಗಳ ಮಾರಣಹೋಮ : ಪಿಡಿಒ ನಿರ್ಲಕ್ಷ್ಯಕ್ಕೆ ರೈತರು ಕಂಗಾಲು

3

ತಿರುಮಲಕ್ಕೆ ಹೋಗುವ ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್‌.. ಹಬ್ಬದ ರಜೆಗೆ ಈ ರೈಲುಗಳಲ್ಲಿ ಸೀಟು ಖಾಲಿ!

4

ವಿಚ್ಛೇದನದ ಬಳಿಕ ಮಿತಿಮೀರಿದ ಕುಡಿತದ ಚಟ! 26 ದಿನ ಪುನರ್ವಸತಿ ಕೇಂದ್ರದಲ್ಲಿದ್ದ ಯಜ್ವೇಂದ್ರ ಚಹಲ್

5

ನೀವು ಬೆಳಿಗ್ಗೆ ಬಿಸಿನೀರು ಕುಡಿಯುತ್ತಿದ್ದೀರಾ? ಈ ತಪ್ಪುಗಳನ್ನು ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

How to store ghee : ಭಾರತೀಯ ಅಡುಗೆಮನೆಯಲ್ಲಿ ತುಪ್ಪಕ್ಕಿರೋ ಸ್ಥಾನವೇ ಬೇರೆ. ಊಟದ ರುಚಿ ಹೆಚ್ಚಿಸೋದ್ರಿಂದ ಹಿಡಿದು ಆರೋಗ್ಯದವರೆಗೆ ತುಪ್ಪ ತುಂಬಾನೇ ಮುಖ್ಯ. ಆದ್ರೆ, ನಾವು ಮನೇಲಿ ತಂದುಡೋ ತುಪ್ಪನ ಎಷ್ಟು ದಿನ ಬಳಸಬಹುದು? ಅದು ಕೆಟ್ಟೋಗಿದೆಯಾ ಅಂತ ಹೇಗೆ ಗುರುತಿಸೋದು? ಇಲ್ಲಿದೆ ಕಂಪ್ಲೀಟ್ ಮಾಹಿತಿ.

ತುಪ್ಪದ ಶೇಖರಣಾ ಅವಧಿ ಎಷ್ಟು?
ಸಾಮಾನ್ಯವಾಗಿ ಶುದ್ಧವಾದ ದೇಸಿ ತುಪ್ಪ 9 ರಿಂದ 18 ತಿಂಗಳವರೆಗೆ ಚೆನ್ನಾಗಿರುತ್ತೆ. ಆದ್ರೆ ಇದು ತುಪ್ಪನ ಎಲ್ಲಿ ಇಡ್ತೀವಿ, ಗಾಳಿ ತಗಲ್ದಾ ಅನ್ನೋದರ ಮೇಲೆ ಡಿಪೆಂಡ್ ಆಗಿರುತ್ತೆ. ಅಂಗಡಿಯಿಂದ ತಂದಿದ್ರೆ ಅದರ ಪ್ಯಾಕೆಟ್ ಮೇಲೆ ಇರೋ ಎಕ್ಸ್‌ಪೈರಿ ಡೇಟ್ ಚೆಕ್ ಮಾಡ್ಕೊಳ್ಳಿ. ಮನೇಲಿ ಮಾಡಿರೋದಾದ್ರೆ, ನೀರು ಬೀಳದಂಗೆ ನೋಡ್ಕೊಂಡ್ರೆ ತಿಂಗಳುಗಟ್ಟಲೆ ಕೆಡೋದಿಲ್ಲ.

ತುಪ್ಪ ಕೆಟ್ಟಿದೆ ಅಂತ ಗುರುತಿಸೋದು ಹೇಗೆ?
ವಾಸನೆ ಬದಲಾವಣೆ: ಫ್ರೆಶ್ ತುಪ್ಪಕ್ಕೆ ಒಳ್ಳೆ ಘಮ ಇರುತ್ತೆ. ಆದ್ರೆ ಹುಳಿ ವಾಸನೆ, ಹಳಸಿದ ಎಣ್ಣೆ ತರ ವಾಸನೆ ಬಂದ್ರೆ ಅದು ಕೆಟ್ಟೋಗಿದೆ ಅಂತ ಅರ್ಥ.
ರುಚಿ ನೋಡಿದ್ರೆ ಗೊತ್ತಾಗುತ್ತೆ: ತುಪ್ಪ ಕಹಿ ಅಥವಾ ಹುಳಿಯಾಗಿದ್ರೆ ಅದನ್ನ ಮುಟ್ಟಲೇಬೇಡಿ. ಕೊಬ್ಬು ಆಕ್ಸಿಡೀಕರಣ ಆಗೋದ್ರಿಂದ ಟೇಸ್ಟ್ ಚೇಂಜ್ ಆಗುತ್ತೆ.
ಬಣ್ಣ ಹಾಗೂ ಫಂಗಸ್: ತುಪ್ಪ ತಿಳಿ ಹಳದಿ ಅಥವಾ ಗೋಲ್ಡನ್ ಕಲರ್‌ನಲ್ಲಿರಬೇಕು. ತೀರಾ ಗಾಢವಾದ್ರೆ ಅಥವಾ ಬೂದು ಬಣ್ಣ ತಿರುಗಿದ್ರೆ ಹುಷಾರ್. ಅದರಲ್ಲಿ ನೀರು ಸೇರಿ ಬಿಳಿ, ಹಸಿರು ಅಥವಾ ಕಪ್ಪು ಕಲೆಗಳಂದ್ರೆ (ಫಂಗಸ್) ಆ ತುಪ್ಪವನ್ನೇ ಸಂಪೂರ್ಣವಾಗಿ ಎಸೆದುಬಿಡಿ.

ತುಪ್ಪ ಹೆಚ್ಚು ದಿನ ತಾಜಾವಾಗಿರಲು ಸಿಂಪಲ್ ಟಿಪ್ಸ್
ತುಪ್ಪ ತೆಗೆಯುವಾಗ ಯಾವಾಗಲೂ ಶುದ್ಧ ಹಾಗೂ ಒಣಗಿದ ಚಮಚ ಮಾತ್ರ ಬಳಸಿ. ಒದ್ದೆ ಸ್ಪೂನ್ ಹಾಕಿದ್ರೆ ಬೇಗ ನಶ್ಯ ಆಗುತ್ತೆ.
ಗಾಳಿ ಆಡದ ಗಾಜಿನ ಅಥವಾ ಸ್ಟೀಲ್ ಪಾತ್ರೆಗಳಲ್ಲಿ ಹಾಕಿಡಿ.
ಬಿಸಿಲು ಬೀಳದ, ತಂಪಾದ ಜಾಗದಲ್ಲಿ ಸ್ಟೋರ್ ಮಾಡಿ.
ಒಂದೇ ಸಲ ದೊಡ್ಡ ಡಬ್ಬಿಯಿಂದ ತೆಗೆಯೋ ಬದಲು, ಸಣ್ಣ ಸಣ್ಣ ಒಣ ಪಾತ್ರೆಗಳಿಗೆ ಹಾಕಿಟ್ಟುಕೊಂಡ್ರೆ ತುಪ್ಪ ತುಂಬಾ ದಿನ ಫ್ರೆಶ್ ಆಗಿರುತ್ತೆ.

ಗಮನಿಸಿ : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಕೇವಲ ಸಾಮಾನ್ಯ ತಿಳುವಳಿಕೆಗಾಗಿ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳನ್ನು ಆಧರಿಸಿದೆ. ತುಪ್ಪದ ಗುಣಮಟ್ಟ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಅಥವಾ ನಿಮಗೆ ಸಂದೇಹವಿದ್ದಲ್ಲಿ, ತಜ್ಞರ ಅಥವಾ ವೈದ್ಯರ ಸಲಹೆ ಪಡೆಯುವುದು ಉತ್ತಮ. ಈ ಮಾಹಿತಿಯನ್ನು Zee News Kannada ಖಚಿತಪಡಿಸುವುದಿಲ್ಲ.

Add Zee News as a Preferred Source
TAGS:
Kannada News