ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಸುನಾಮಿ ಎದ್ದಿದೆ. ದೋಸ್ತಿಗಳೆಲ್ಲಾ ಒಂದಾಗಿ ಸಿದ್ದರಾಮಯ್ಯ ಪರ ಬ್ಯಾಟ್ ಬೀಸ್ತಿದ್ದಾರೆ. ಅದ್ರಲ್ಲೂ ಕೇಂದ್ರ ಸಚಿವ ಕುಮಾರಸ್ವಾಮಿ ಅಂತೂ ದಿನಕ್ಕೊಂದು ಬ್ರಹ್ಮಸ್ತ್ರಗಳ ಪ್ರಯೋಗಿಸ್ತಿದ್ದಾರೆ. ಅದರೆ ತನಿಖೆ ನಡೆಸ್ತಿರೋ ಸಿಸಿಬಿ ಪೊಲೀಸರಿಗೆ ವಿಡಿಯೋ ಮೂಲ ಹುಡುಕಾಟವೇ ಸವಲಾಗಿದೆ. 15 ಜನರ ವಿಚಾರಣೆ ಮಾಡಿದ್ರು ಸುಳಿವೇ ಸಿಗ್ತಿಲ್ಲ
ಮಾಜಿ ಸಿಎಂ ಸಿದ್ದರಾಮಯ್ಯರ 4 ದಶಕದ ಕಳಂಕ ರಹಿತ ರಾಜಕರಣಕ್ಕೆ ಕಪ್ಪು ಮಸಿ ಬಳಿಯಲು ಕಿಡಿಗೇಡಿಗಳಿಂದ ಷಡ್ಯಂತ್ರ ನಡೆದಿದೆ. ಇದೇ ಪ್ರಕರಣ ಈಗ ರಾಜಕೀಯದಲ್ಲಿ ಬಿರುಗಳಿ ಎಬ್ಬಿಸಿದೆ. ಸ್ಟಿಂಗ್ ಆಪರೇಷನ್ ಹೆಸರಲ್ಲಿ ಸಿದ್ದರಾಮಯ್ಯರ ಬಗ್ಗೆ ಅಪಪ್ರಚಾರ ಮಾಡಲಾಗ್ತಿದೆ ಅಂತ ದೋಸ್ತಿ ನಾಯಕರು ಬೀದಿಗಿಳಿದಿದ್ದಾರೆ. ಅದ್ರಲ್ಲೂ ಕೇಂದ್ರ ಸಚಿವ ಕುಮಾರಸ್ವಾಮಿ ಅಂತೂ ನಿತ್ಯವೂ ಮಾಜಿ ಸಿಎಂ ಸಿದ್ದು ಪರ ಮಾತನಾಡುತ್ತಾ ಸ್ಟಿಂಗ್ ಮಾಂತ್ರಿಕರು ಯಾರು ಅಂತ ಪ್ರಶ್ನಿಸ್ತಿದ್ದಾರೆ. ಆದರೆ ಇಲ್ಲಿ ಸ್ಟಿಂಗ್ ವಿಡಿಯೋ ಮೂಲ ಹುಡುಕಿ ಹೊರಟಿರುವ ಸಿಸಿಬಿ ಪೊಲೀಸರು ಸೂತ್ರಧಾರಿಗಳ ಪತ್ತೆಗೆ ಸರ್ಕಸ್ ನಡೆಸ್ತಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ವಿಡಿಯೋ ಲಿಂಕ್ ಸಮೇತ ದೂರು ಕೊಟ್ರು ಪೊಲೀಸರು ವಿಡಿಯೋ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಈವರೆಗೂ ಬರೊಬ್ಬರಿ 15ಕ್ಕೂ ಹೆಚ್ಚು ಜನತನ್ನ ಸೈಬರ್ ಕ್ರೈಂ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಆ ವಿಡಿಯೋದಲ್ಲಿರುವ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದ್ದಾರೆ.
ಆದ್ರೆ ವಿಡಿಯೋ ಎಲ್ಲಿಂದ ಅಪ್ಲೋಡ್ ಆಗಿದೆ ಎಂಬುದಕ್ಕೆ ಈವರೆಗೆ ಖಚಿತ ಸಾಕ್ಷ್ಯ ಸಿಕ್ಕಿಲ್ಲ. ಪ್ರವೈಟ್ ವಿಪಿಎನ್ ಬಳಸಿ ಭಾರತದಿಂದಲೇ ವಿಡಿಯೋ ಅಪ್ಲೋಡ್ ಮಾಡಲಾಗಿತ್ತಾ..? ಅಥವಾ ವಿದೇಶದ ಕೈಚಳಕ ಇದ್ಯಾ ಅನ್ನೋದು ಮಾತ್ರ ನಿಗೂಢವಾಗಿದೆ. ಸದ್ಯ ಮಾಜಿ ಸಿಎಂಗೆ ಕಳಂಕ ತರಲು ಯತ್ನಿಸಿದ ಆ ವಿಡಿಯೋವನ್ನ 2022ರಲ್ಲಿ ರೆಕಾರ್ಡ್ ಮಾಡಲಾಗಿತ್ತು ಎಂಬ ಮಾಹಿತಿ ಸಿಕ್ಕಿದೆ. ಆದರೆ ಇದೊಂದನ್ನ ಬಿಟ್ರೆ ತನಿಖೆಯಲ್ಲಿ ಬೇರೆ ಪ್ರಮುಖ ಅಂಶಗಳು ಸಿಸಿಬಿ ಪೊಲೀಸರಿಗೆ ಸಿಕ್ಕಿಲ್ಲ.
ಇದೀಗ ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯರನ್ನ ಸಿಎಂ ಪಟ್ಟದಿಂದ ಕೆಳಗಿಳಿಸಲು ಡಿ.ಕೆ. ಶಿವಕುಮಾರ್ ಸೇರಿ ಎಲ್ಲರೂ ವ್ಯವಸ್ಥಿತ ಪಿತೂರಿ ಮಾಡಿದ್ದಾರೆ ಅಂತ ಬಾಂಬ್ ಸಿಡಿಸಿದ್ದಾರೆ. ಸಿದ್ದರಾಮಯ್ಯ ಎಲ್ಲವನ್ನೂ ಶಾಂತವಾಗಿ ಗಮನಿಸುತ್ತಿದ್ದಾರೆ ಎನ್ನುತ್ತಾ ಕಾಂಗ್ರೆಸ್ನ ಮಾಜಿ ಸಿಎಂ ಪರ ಬಿಜೆಪಿಯ ಮಾಜಿ ಸಿಎಂ ಸಾಫ್ಟ್ ಮಾತುಗಳನ್ನಾಡಿದ್ದಾರೆ.
ಇಲ್ಲಿ ವಿಡಿಯೋ ಅಪ್ಲೋಡ್ ಮಾಡಿದವರ ಗುರುತು, ಬಳಸಿದ ಡಿವೈಸ್ ಹಾಗೂ ಅಪ್ಲೋಡ್ ಆದ ಸ್ಥಳದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿಲ್ಲ. ಸದ್ಯ ,15 ಜನರನ್ನ ವಿಚಾರಣೆ ನಡೆಸಿ ಸದ್ಯಕ್ಕೆ ಬಿಟ್ಟು ಕಳುಹಿಸಿರುವ ಸೈಬರ್ ಕ್ರೈಂ ಪೊಲೀಸರು, ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ. ಅತ್ತ ಮೆಟಾ ಹಾಗೂ ಯೂಟ್ಯೂಬ್ ಗೆ ವಿಡಿಯೋ ಬಗ್ಗೆ ಮಾಹಿತಿ ನೀಡುವಂತೆ ಮೇಲ್(Mail) ಮಾಡಿದ್ದಾರೆ. ಸದ್ಯ ಸ್ಟಿಂಗ್ ನ ಸೂತ್ರಧಾರಿಗಳು ಬಲೆ ಬೀಳ್ತಾರಾ ಅನ್ನೋದೇ ಉತ್ತರ ಸಿಗದ ಪ್ರಶ್ನೆ