• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಕೊಟ್ಟಿಗೆಗೆ ನುಗ್ಗಿ ಬೀದಿ ನಾಯಿಗಳಿಂದ ಕುರಿ-ಮೇಕೆಗಳ ಮಾರಣಹೋಮ : ಪಿಡಿಒ ನಿರ್ಲಕ್ಷ್ಯಕ್ಕೆ ರೈತರು ಕಂಗಾಲು

ಕೊಟ್ಟಿಗೆಗೆ ನುಗ್ಗಿ ಬೀದಿ ನಾಯಿಗಳಿಂದ ಕುರಿ-ಮೇಕೆಗಳ ಮಾರಣಹೋಮ : ಪಿಡಿಒ ನಿರ್ಲಕ್ಷ್ಯಕ್ಕೆ ರೈತರು ಕಂಗಾಲು

ಬೆಂಗಳೂರು ಗ್ರಾಮಾಂತರ: ಬೀದಿನಾಯಿಗಳ ದಾಳಿಗೆ ಹತ್ತಕ್ಕೂ ಹೆಚ್ಚು ಕುರಿ ಹಾಗೂ ಮೇಕೆಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನಲ್ಲಿ ವರದಿಯಾಗಿದೆ. ತಾಲ್ಲೂಕಿನ ಮಲ್ಲೇಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರೈತರು ಕಂಗಾಲಾಗಿದ್ದಾರೆ.

Written ByKrishna NK
Published: Oct 18, 2026, 05:11 PM IST|Updated: Oct 18, 2026, 05:12 PM IST
joinshare
ಕೊಟ್ಟಿಗೆಗೆ ನುಗ್ಗಿ ಬೀದಿ ನಾಯಿಗಳಿಂದ ಕುರಿ-ಮೇಕೆಗಳ ಮಾರಣಹೋಮ : ಪಿಡಿಒ ನಿರ್ಲಕ್ಷ್ಯಕ್ಕೆ ರೈತರು ಕಂಗಾಲು
Image Credit: Bengaluru crime news

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
‘ರಾಹುಲ್ ಗಾಂಧಿ ಒರಿಜಿನಲ್ ಬ್ರೀಡ್ ಅಲ್ಲ’; ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ತೀವ್ರ ವಾಗ್ದಾಳಿ

‘ರಾಹುಲ್ ಗಾಂಧಿ ಒರಿಜಿನಲ್ ಬ್ರೀಡ್ ಅಲ್ಲ’; ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ತೀವ್ರ ವಾಗ್ದಾಳಿ

2

ಕರ್ನಾಟಕ ಬಂದ್‌..! ವಾರದೊಳಗೆ ರೈತರ ಬೇಡಿಕೆ ಈಡೇರದಿದ್ದರೆ ವಾಟಾಳ್‌ ಉಗ್ರ ಹೋರಾಟದ ಎಚ್ಚರಿಕೆ

3

ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಸುನಾಮಿ .. ಸಿದ್ದರಾಮಯ್ಯ ಪರ ಬ್ಯಾಟ್

4

ಕೊಟ್ಟಿಗೆಗೆ ನುಗ್ಗಿ ಬೀದಿ ನಾಯಿಗಳಿಂದ ಕುರಿ-ಮೇಕೆಗಳ ಮಾರಣಹೋಮ : ಪಿಡಿಒ ನಿರ್ಲಕ್ಷ್ಯಕ್ಕೆ ರೈತರು ಕಂಗಾಲು

5

ತಿರುಮಲಕ್ಕೆ ಹೋಗುವ ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್‌.. ಹಬ್ಬದ ರಜೆಗೆ ಈ ರೈಲುಗಳಲ್ಲಿ ಸೀಟು ಖಾಲಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ದೇವನಹಳ್ಳಿ : ಮಲ್ಲೇಪುರ ಗ್ರಾಮದ ರೈತರಾದ ನಾಗಪ್ಪ ಹಾಗೂ ರಂಗಪ್ಪ ಎಂಬುವರಿಗೆ ಸೇರಿದ ಕುರಿ ಮತ್ತು ಮೇಕೆಗಳ ಮೇಲೆ ಈ ದಾಳಿ ನಡೆದಿದೆ. ರಾತ್ರಿ ವೇಳೆ ಬೀದಿನಾಯಿಗಳು ಏಕಾಏಕಿ ಕುರಿ ಕೊಟ್ಟಿಗೆಗೆ ನುಗ್ಗಿ ಮನಬಂದಂತೆ ದಾಳಿ ನಡೆಸಿವೆ. ನಾಯಿಗಳ ರಕ್ತಸಿಕ್ತ ದಾಳಿಗೆ ಸಿಲುಕಿ ಕೊಟ್ಟಿಗೆಯಲ್ಲೇ ಹತ್ತಕ್ಕೂ ಹೆಚ್ಚು ಕುರಿ ಹಾಗೂ ಮೇಕೆಗಳು ಪ್ರಾಣ ಬಿಟ್ಟಿವೆ. ಬೆಳಿಗ್ಗೆ ಬಂದು ನೋಡಿದಾಗ ರೈತರಿಗೆ ತಮ್ಮ ಮೂಕ ಪ್ರಾಣಿಗಳು ಸತ್ತು ಬಿದ್ದಿರುವುದು ಕಂಡುಬಂದು ಕಣ್ಣೀರು ಹಾಕುವಂತಾಯಿತು.

ಪಿಡಿಒ ನಿರ್ಲಕ್ಷ್ಯವೇ ಕಾರಣವೆಂದು ಗ್ರಾಮಸ್ಥರ ಆರೋಪ
ಮಲ್ಲೇಪುರ ಗ್ರಾಮದಲ್ಲಿ ಬೀದಿನಾಯಿಗಳ ಹಾವಳಿ ವಿಪರೀತ ಹೆಚ್ಚಾಗಿದೆ. ಈ ಹಿಂದೆ ಕೂಡ ಇದೇ ಗ್ರಾಮದಲ್ಲಿ ಬೀದಿನಾಯಿಗಳು ಕುರಿಗಳ ಮೇಲೆ ದಾಳಿ ನಡೆಸಿದ್ದವು. ಆ ಸಂದರ್ಭದಲ್ಲೇ ಎಚ್ಚೆತ್ತುಕೊಳ್ಳಬೇಕಿದ್ದ ಸ್ಥಳೀಯ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹಿಂದಿನ ಘಟನೆ ನಡೆದಾಗ ಸ್ಥಳೀಯರು ನಲ್ಲೂರು ಗ್ರಾಮ ಪಂಚಾಯ್ತಿ ಪಿಡಿಒಗೆ ದೂರು ನೀಡಿ, ಬೀದಿನಾಯಿಗಳ ಹಾವಳಿ ನಿಯಂತ್ರಿಸುವಂತೆ ಮನವಿ ಮಾಡಿದ್ದರು.

ಆದರೆ, ಸಾರ್ವಜನಿಕರ ದೂರಿಗೆ ಪಿಡಿಒ ಕ್ಯಾರೆ ಎನ್ನದೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಮತ್ತು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಿಡಿಒ ಅವರ ಈ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದಿಂದಾಗಿಯೇ ಇಂದು ಲಕ್ಷಾಂತರ ರೂಪಾಯಿ ಮೌಲ್ಯದ ಮೂಕ ಪ್ರಾಣಿಗಳು ಮಾರಣಹೋಮಕ್ಕೆ ಬಲಿಯಾಗಿವೆ ಎಂದು ರೈತರು ಆರೋಪಿಸಿದ್ದಾರೆ.

ಕಷ್ಟಪಟ್ಟು ಸಾಕಿದ್ದ ಕುರಿ-ಮೇಕೆಗಳನ್ನು ಕಳೆದುಕೊಂಡಿರುವ ಬಡ ರೈತ ನಾಗಪ್ಪ ಹಾಗೂ ರಂಗಪ್ಪಗೆ ಸರ್ಕಾರ ಮತ್ತು ಆಡಳಿತದಿಂದ ಕೂಡಲೇ ಸೂಕ್ತ ಪರಿಹಾರ ನೀಡಬೇಕು. ಸಾರ್ವಜನಿಕರ ದೂರುಗಳನ್ನು ಗಂಭೀರವಾಗಿ ಪರಿಗಣಿಸದೆ ಕರ್ತವ್ಯಲೋಪ ಎಸಗಿರುವ ನಲ್ಲೂರು ಗ್ರಾಮ ಪಂಚಾಯ್ತಿ ಪಿಡಿಒ ಅಧಿಕಾರಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಹಾಗೂ ಗ್ರಾಮದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೀದಿನಾಯಿಗಳ ಹಾವಳಿಯನ್ನು ತಡೆಗಟ್ಟಲು ಸಂಬಂಧಪಟ್ಟ ಇಲಾಖೆಯವರು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಹಾಗೂ ರೈತರು ಒತ್ತಾಯಿಸಿದ್ದಾರೆ.

Add Zee News as a Preferred Source
TAGS:
Kannada News