• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕ್ರೀಡೆ
  • /ವಿಚ್ಛೇದನದ ಬಳಿಕ ಮಿತಿಮೀರಿದ ಕುಡಿತದ ಚಟ! 26 ದಿನ ಪುನರ್ವಸತಿ ಕೇಂದ್ರದಲ್ಲಿದ್ದ ಯಜ್ವೇಂದ್ರ ಚಹಲ್

ವಿಚ್ಛೇದನದ ಬಳಿಕ ಮಿತಿಮೀರಿದ ಕುಡಿತದ ಚಟ! 26 ದಿನ ಪುನರ್ವಸತಿ ಕೇಂದ್ರದಲ್ಲಿದ್ದ ಯಜ್ವೇಂದ್ರ ಚಹಲ್

Yuzvendra Chahal alcohol addiction: ಭಾರತೀಯ ಕ್ರಿಕೆಟಿಗ ಯಜ್ವೇಂದ್ರ ಚಹಲ್ ಅವರು ವಿಚ್ಛೇದನದ ಬಳಿಕ ಎದುರಿಸಿದ ವೈಯಕ್ತಿಕ ಸವಾಲುಗಳು ಹಾಗೂ ಮದ್ಯಪಾನದ ಅವಲಂಬನೆಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

Written ByChetana Devarmani
Published: Oct 18, 2026, 04:22 PM IST|Updated: Oct 18, 2026, 04:23 PM IST
joinshare
ವಿಚ್ಛೇದನದ ಬಳಿಕ ಮಿತಿಮೀರಿದ ಕುಡಿತದ ಚಟ! 26 ದಿನ ಪುನರ್ವಸತಿ ಕೇಂದ್ರದಲ್ಲಿದ್ದ ಯಜ್ವೇಂದ್ರ ಚಹಲ್

About the Author

Chetana Devarmani

Chetana Devarmani

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."
Read More

Trending

  • News
  • Photos
  • Videos
ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಸುನಾಮಿ .. ಸಿದ್ದರಾಮಯ್ಯ ಪರ ಬ್ಯಾಟ್

ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಸುನಾಮಿ .. ಸಿದ್ದರಾಮಯ್ಯ ಪರ ಬ್ಯಾಟ್

2

ಕೊಟ್ಟಿಗೆಗೆ ನುಗ್ಗಿ ಬೀದಿ ನಾಯಿಗಳಿಂದ ಕುರಿ-ಮೇಕೆಗಳ ಮಾರಣಹೋಮ : ಪಿಡಿಒ ನಿರ್ಲಕ್ಷ್ಯಕ್ಕೆ ರೈತರು ಕಂಗಾಲು

3

ತಿರುಮಲಕ್ಕೆ ಹೋಗುವ ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್‌.. ಹಬ್ಬದ ರಜೆಗೆ ಈ ರೈಲುಗಳಲ್ಲಿ ಸೀಟು ಖಾಲಿ!

4

ವಿಚ್ಛೇದನದ ಬಳಿಕ ಮಿತಿಮೀರಿದ ಕುಡಿತದ ಚಟ! 26 ದಿನ ಪುನರ್ವಸತಿ ಕೇಂದ್ರದಲ್ಲಿದ್ದ ಯಜ್ವೇಂದ್ರ ಚಹಲ್

5

ನೀವು ಬೆಳಿಗ್ಗೆ ಬಿಸಿನೀರು ಕುಡಿಯುತ್ತಿದ್ದೀರಾ? ಈ ತಪ್ಪುಗಳನ್ನು ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Yuzvendra Chahal alcohol addiction: ಟೀಂ ಇಂಡಿಯಾದ ಖ್ಯಾತ ಲೆಗ್ ಸ್ಪಿನ್ನರ್ ಯಜ್ವೇಂದ್ರ ಚಹಲ್ ತಮ್ಮ ವೈಯಕ್ತಿಕ ಜೀವನದ ಕಠಿಣ ಹಂತದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ವಿಚ್ಛೇದನದ ಬಳಿಕ ಕುಡಿತದ ಚಟ ಮಿತಿಮೀರಿತ್ತು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತು ಪುನರ್ವಸತಿ ಕೇಂದ್ರಕ್ಕೆ ದಾಖಲಾಗಬೇಕಾಯಿತು. ಅಲ್ಲಿ 26 ದಿನಗಳ ಕಾಲ ಇದ್ದೆ ಎಂದು ಚಹಲ್ ಬಹಿರಂಗಪಡಿಸಿದ್ದಾರೆ. ಮಾಜಿ ಭಾರತೀಯ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡುವಾಗ ತಮ್ಮ ಜೀವನದಲ್ಲಿ ಎದುರಾದ ಸವಾಲುಗಳನ್ನು ಹಂಚಿಕೊಂಡಿದ್ದಾರೆ.

ಐಪಿಎಲ್ ಇತಿಹಾಸದ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರಾಗಿರುವ ಚಹಲ್, ಕ್ರಿಕೆಟ್ ಮೈದಾನದಲ್ಲಿ ತಮ್ಮ ಪ್ರದರ್ಶನದ ಮೂಲಕ ಗುರುತಿಸಿಕೊಂಡಿದ್ದಾರೆ. ಆದರೆ ವೈಯಕ್ತಿಕ ಜೀವನದಲ್ಲಿ ಹಲವು ಕಷ್ಟಗಳನ್ನು ಎದುರಿಸಿದ್ದಾರೆ. ಇದೀಗ ತಮ್ಮ ಮದ್ಯಪಾನದ ಚಟದ ಕುರಿತು ಮಾತನಾಡಿರುವ ಅವರು, ಆ ಹಂತದಿಂದ ಹೊರಬರಲು ಕುಟುಂಬದವರು ಮತ್ತು ಸ್ನೇಹಿತರು ನೀಡಿದ ಬೆಂಬಲ ಮಹತ್ವದ್ದಾಗಿತ್ತು ಎಂದು ಹೇಳಿದ್ದಾರೆ.

ಯಜ್ವೇಂದ್ರ ಚಹಲ್ ಪ್ರಕಾರ, 2011ರಲ್ಲಿ ಐಪಿಎಲ್‌ಗೆ ಪ್ರವೇಶಿಸಿದ ಸಮಯದಿಂದಲೇ ಮದ್ಯಪಾನದ ಅಭ್ಯಾಸ ಆರಂಭವಾಗಿತ್ತು. ಆರಂಭದಲ್ಲಿ ಯುವ ವಯಸ್ಸು ಮತ್ತು ಪಾರ್ಟಿಗಳ ವಾತಾವರಣದಿಂದಾಗಿ ಈ ಅಭ್ಯಾಸ ಬೆಳೆಯಿತು. ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಒಮ್ಮೆ ಜೀವನದಲ್ಲಿ ಸಮತೋಲನ ಬಹಳ ಮುಖ್ಯ ಎಂದು ಹೇಳಿದ್ದನ್ನು ಚಹಲ್ ನೆನಪಿಸಿಕೊಂಡಿದ್ದಾರೆ.

ಆದರೆ ವಿಚ್ಛೇದನದ ಬಳಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ತಮ್ಮ ಮಾನಸಿಕ ಸ್ಥಿತಿ ಉತ್ತಮವಾಗಿರಲಿಲ್ಲ ಮತ್ತು ಮದ್ಯಪಾನದ ಪ್ರಮಾಣ ಮಿತಿಮೀರಿತ್ತು ಎಂದು ಅವರು ತಿಳಿಸಿದ್ದಾರೆ. ಕಳೆದ ವರ್ಷದ ಕೌಂಟಿ ಕ್ರಿಕೆಟ್ ಬಳಿಕ ಮದ್ಯಪಾನದ ಚಟ ಎಲ್ಲ ಮಿತಿಗಳನ್ನೂ ದಾಟಿತ್ತು. ಹೀಗಾಗಿ ಪುನರ್ವಸತಿ ಕೇಂದ್ರಕ್ಕೆ ದಾಖಲಾಗಬೇಕಾಯಿತು. ಅಲ್ಲಿ 26 ದಿನಗಳ ಕಾಲ ಇದ್ದೆ. ಈಗ ಅದನ್ನು ಹೇಗೆ ನಿಭಾಯಿಸಬೇಕು ಎಂಬುದು ನನಗೆ ತಿಳಿದಿದ ಎಂದು ಯಜ್ವೇಂದ್ರ ಚಹಲ್ ಹೇಳಿದ್ದಾರೆ.

ಈ ನಿರ್ಧಾರ ತಮ್ಮ ವೈಯಕ್ತಿಕ ಜೀವನದಲ್ಲಿ ದೊಡ್ಡ ಬದಲಾವಣೆ ತಂದಿತು. ಭಾವನೆಗಳನ್ನು ಸಮತೋಲನದಲ್ಲಿಟ್ಟುಕೊಳ್ಳಲು ಸಾಧ್ಯವಾಯಿತು. ಜೀವನದ ಬಗ್ಗೆ ಹೆಚ್ಚು ಪ್ರಬುದ್ಧತೆ ಬೆಳೆಸಿಕೊಂಡೆ ಎಂದು ಅವರು ವಿವರಿಸಿದ್ದಾರೆ. ಮದ್ಯಪಾನದ ಚಟ ಮುಂದುವರಿದರೆ ತಾನು ಅತ್ಯಂತ ಪ್ರೀತಿಸುವ ಕ್ರಿಕೆಟ್‌ಗೇ ಹಾನಿಯಾಗಬಹುದು ಎಂಬ ಅರಿವು ಚಹಲ್‌ಗೆ ಬಂದಿತ್ತು. ಹೀಗಾಗಿ ಆ ಅಭ್ಯಾಸಕ್ಕೆ ಅಂತ್ಯ ಹಾಡಲು ನಿರ್ಧರಿಸಿದರು.

“ನಾನು ಇದೇ ದಾರಿಯಲ್ಲಿ ಮುಂದುವರಿದರೆ, ನಾನು ಹೆಚ್ಚು ಪ್ರೀತಿಸುವ ಕ್ರಿಕೆಟ್ ಅನ್ನೇ ಹಾಳುಮಾಡಿಕೊಳ್ಳುತ್ತೇನೆ ಎಂದು ಅರಿತುಕೊಂಡೆ. ಹೀಗಾಗಿ ಅದನ್ನು ನಿಲ್ಲಿಸಿದೆ. ಈಗ ನಾನು ಹೆಚ್ಚು ಸಂತೋಷವಾಗಿದ್ದೇನೆ ಮತ್ತು ಉತ್ತಮ ಸ್ಥಿತಿಯಲ್ಲಿದ್ದೇನೆ” ಎಂಬುದು ಚಹಲ್ ಹೇಳಿದ್ದಾರೆ.

ತಮ್ಮ ದೈಹಿಕ ಸಾಮರ್ಥ್ಯದಲ್ಲಿಯೂ ಸುಧಾರಣೆ ಕಂಡಿದ್ದಾಗಿ ಅವರು ಹೇಳಿದ್ದಾರೆ. ಕಳೆದ ಐಪಿಎಲ್ ಅವಧಿಯಲ್ಲಿ ಜಿಮ್ ವ್ಯಾಯಾಮ, ಫೀಲ್ಡಿಂಗ್ ಅಭ್ಯಾಸ ಮತ್ತು ತರಬೇತಿಯನ್ನು ಸರಿಯಾಗಿ ಮಾಡಲು ಸಾಧ್ಯವಾಗಿತ್ತು. ದೇಹ ಮತ್ತೆ 30 ವರ್ಷದ ಯುವಕನಂತಿದೆ ಎಂಬ ಅನುಭವವಾಗಿತ್ತು ಎಂದು ತಿಳಿಸಿದ್ದಾರೆ. 
 

Add Zee News as a Preferred Source
TAGS:
Cricket