• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಯುಟಿಲಿಟಿ
  • /ಹೋಂಡಾದ ಮೊದಲ ಮೇಡ್‌ ಇನ್‌ ಇಂಡಿಯಾ ಎಲೆಕ್ಟ್ರಿಕ್‌ SUV! ಶೀಘ್ರವೇ ಮಾರುಕಟ್ಟೆಗೆ ಎಂಟ್ರಿ!

ಹೋಂಡಾದ ಮೊದಲ ಮೇಡ್‌ ಇನ್‌ ಇಂಡಿಯಾ ಎಲೆಕ್ಟ್ರಿಕ್‌ SUV! ಶೀಘ್ರವೇ ಮಾರುಕಟ್ಟೆಗೆ ಎಂಟ್ರಿ!

ಹೋಂಡಾದ ಮೊದಲ ಮೇಡ್‌-ಇನ್‌-ಇಂಡಿಯಾ ಎಲೆಕ್ಟ್ರಿಕ್‌ ಎಸ್‌ಯುವಿ ‘ಹೋಂಡಾ ಆಲ್ಫಾ’ ಡಿಸೆಂಬರ್‌ 2ರಂದು ಜಾಗತಿಕವಾಗಿ ಅನಾವರಣಗೊಳ್ಳಲಿದೆ. ಹೊಸ ಟೀಸರ್‌ನಲ್ಲಿ ಕಾರಿನ ಮುಂಭಾಗದ ಲೈಟಿಂಗ್‌, ಬಂಪರ್‌ ಮತ್ತು ಗ್ರಿಲ್‌ನ ಕೆಲವು ವಿನ್ಯಾಸಗಳು ಕಾಣಿಸಿಕೊಂಡಿವೆ. ರಾಜಸ್ಥಾನದ ಟಪೂಕರ ಘಟಕದಲ್ಲಿ ಉತ್ಪಾದನೆಯಾಗಲಿರುವ ಈ ಕಾರನ್ನ ದೇಶೀಯ ಮಾರುಕಟ್ಟೆಯ ಜೊತೆಗೆ ವಿದೇಶಗಳಿಗೂ ಮಾರಾಟ ಮಾಡುವ ಯೋಜನೆ ಇದೆ. ಆದರೆ ಬ್ಯಾಟರಿ ಸಾಮರ್ಥ್ಯ, ರೇಂಜ್‌, ಬೆಲೆ ಮತ್ತು ಚಾರ್ಜಿಂಗ್‌ ವಿವರಗಳನ್ನ ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ.

Written ByPuttaraj K Alur
Published: Nov 29, 2026, 20:23 IST|Updated: Nov 29, 2026, 20:31 IST
joinshare
ಹೋಂಡಾದ ಮೊದಲ ಮೇಡ್‌ ಇನ್‌ ಇಂಡಿಯಾ ಎಲೆಕ್ಟ್ರಿಕ್‌ SUV! ಶೀಘ್ರವೇ ಮಾರುಕಟ್ಟೆಗೆ ಎಂಟ್ರಿ!
Image Credit: Honda ALPHA

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಬೆಳಿಗ್ಗೆ ಚಹಾ ಕುಡಿಯಬೇಕೋ ಅಥವಾ ಕಾಫಿನೋ? ಆಹಾರ ತಜ್ಞರ ಸಲಹೆ ಕೇಳಿದ್ರೆ ಶಾಕ್‌ ಆಗ್ತೀರಾ

ಬೆಳಿಗ್ಗೆ ಚಹಾ ಕುಡಿಯಬೇಕೋ ಅಥವಾ ಕಾಫಿನೋ? ಆಹಾರ ತಜ್ಞರ ಸಲಹೆ ಕೇಳಿದ್ರೆ ಶಾಕ್‌ ಆಗ್ತೀರಾ

2

ಹೋಂಡಾದ ಮೊದಲ ಮೇಡ್‌ ಇನ್‌ ಇಂಡಿಯಾ ಎಲೆಕ್ಟ್ರಿಕ್‌ SUV! ಶೀಘ್ರವೇ ಮಾರುಕಟ್ಟೆಗೆ ಎಂಟ್ರಿ!

3

ಮುತ್ಯಾಲಮಡುವು ಬಳಿ ದಂತಚೋರರ ಬೇಟೆ : 7 ಆನೆ ದಂತಗಳ ಜೊತೆ ಮೂವರು ಅರೆಸ್ಟ್

4

ಕ್ಷೇತ್ರ ಮರುವಿಂಗಡಣೆ ಮಸೂದೆಗೆ 371 ಸಂಸದರ ಬೆಂಬಲ? ಗೆಲುವಿನ ವಿಶ್ವಾಸದಲ್ಲಿ ಎನ್‌ಡಿಎ!

5

ಗಡಿ ಮೀರಿದ ಕನ್ನಡದ ಕಥೆ: 57ನೇ IFFIನಲ್ಲಿ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಗೌರವ, ಕನ್ನಡಿಗರಿಗೆ ಅರ್ಪಣೆ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Honda ALPHA Electric SUV: ಭಾರತದ ಎಲೆಕ್ಟ್ರಿಕ್‌ ವಾಹನ ಮಾರುಕಟ್ಟೆಗೆ ಪ್ರವೇಶಿಸಲು ಜಪಾನ್‌ನ ಪ್ರಮುಖ ವಾಹನ ತಯಾರಿಕಾ ಕಂಪನಿ ಹೋಂಡಾ ಸಜ್ಜಾಗಿದೆ. ಕಂಪನಿಯ ಮೊದಲ ಮೇಡ್‌-ಇನ್‌-ಇಂಡಿಯಾ ಎಲೆಕ್ಟ್ರಿಕ್‌ ಎಸ್‌ಯುವಿ 'ಹೋಂಡಾ ಆಲ್ಫಾ' (Honda ALPHA) ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಹೊಸ ಎಲೆಕ್ಟ್ರಿಕ್‌ ಕಾರಿನ ಕುರಿತು ಗ್ರಾಹಕರಲ್ಲಿ ಕುತೂಹಲ ಹೆಚ್ಚುತ್ತಿರುವ ಬೆನ್ನಲ್ಲೇ ಹೋಂಡಾ ಸಂಸ್ಥೆ ಮತ್ತೊಂದು ಟೀಸರ್‌ ಬಿಡುಗಡೆ ಮಾಡಿದೆ. ಡಿಸೆಂಬರ್‌ 2ರಂದು ಈ ಕಾರಿನ ಜಾಗತಿಕ ಅನಾವರಣ ನಡೆಯಲಿದ್ದು, ಇದರೊಂದಿಗೆ ಹಲವು ಪ್ರಮುಖ ಮಾಹಿತಿಗಳು ಹೊರಬರುವ ನಿರೀಕ್ಷೆಯಿದೆ.

ಹೊಸ ಟೀಸರ್‌ನಲ್ಲಿ ಏನೆಲ್ಲಾ ಕಾಣಿಸಿದೆ?

ಹೋಂಡಾ ಬಿಡುಗಡೆ ಮಾಡಿರುವ ಹೊಸ ಟೀಸರ್‌ನಲ್ಲಿ ಮುಂಬರುವ ಆಲ್ಫಾ ಎಲೆಕ್ಟ್ರಿಕ್‌ ಎಸ್‌ಯುವಿಯ ಪ್ರೊಡಕ್ಷನ್‌ ಮಾದರಿಯ ಕೆಲವು ವಿನ್ಯಾಸದ ವಿವರಗಳು ಕಾಣಿಸಿಕೊಂಡಿವೆ. ಆದರೆ ಕಾರಿನ ಮುಂಭಾಗದ ಬಹುಪಾಲು ಭಾಗವನ್ನ ಬಿಳಿ ಬಟ್ಟೆಯಿಂದ ಮುಚ್ಚಲಾಗಿದೆ. ಹೀಗಾಗಿ ಸಂಪೂರ್ಣ ವಿನ್ಯಾಸವನ್ನ ಇನ್ನೂ ಬಹಿರಂಗಪಡಿಸಿಲ್ಲ. ಟೀಸರ್‌ನಲ್ಲಿ ಕಾರಿನ ಮುಂಭಾಗದ ಲೈಟಿಂಗ್‌ ವ್ಯವಸ್ಥೆ, ಬಂಪರ್‌ ಮತ್ತು ಗ್ರಿಲ್‌ನ ಕೆಲವು ಭಾಗಗಳನ್ನ ನೋಡಬಹುದು. ವಾಹನದ ನಂಬರ್‌ ಪ್ಲೇಟ್‌ನಲ್ಲಿ 'ALPHA' ಎಂಬ ಹೆಸರೂ ಕಾಣಿಸಿಕೊಂಡಿದೆ. ಈ ಮೂಲಕ ಕಂಪನಿಯು ತನ್ನ ಹೊಸ ಎಲೆಕ್ಟ್ರಿಕ್‌ ಎಸ್‌ಯುವಿಯ ಹೆಸರನ್ನ ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

ಆಧುನಿಕ ವಿನ್ಯಾಸದ ನಿರೀಕ್ಷೆ

ಇದಕ್ಕೂ ಮೊದಲು ಹೋಂಡಾ ಸಂಸ್ಥೆಯು ಆಲ್ಫಾ ಕಾರಿನ ಹೊರಭಾಗ ಮತ್ತು ಒಳಾಂಗಣ ವಿನ್ಯಾಸದ ಸ್ಕೆಚ್‌ಗಳನ್ನ ಬಿಡುಗಡೆ ಮಾಡಿತ್ತು. ಈ ಚಿತ್ರಗಳಲ್ಲಿ ಕಾರಿನ ವಿನ್ಯಾಸವು ಆಧುನಿಕ ಎಸ್‌ಯುವಿಯ ರೂಪದಲ್ಲಿ ಕಾಣಿಸಿಕೊಂಡಿತ್ತು. ವಿಶೇಷ ವಿನ್ಯಾಸದ ಲೈಟಿಂಗ್‌ ವ್ಯವಸ್ಥೆ, ಗಟ್ಟಿಮುಟ್ಟಾದ ಬಾಡಿ ರಚನೆ ಮತ್ತು ವಿಭಿನ್ನ ಆಕಾರದ ವಿನ್ಯಾಸ ಗಮನ ಸೆಳೆದಿದ್ದವು. ಕಾರಿನ ಒಳಾಂಗಣದಲ್ಲಿಯೂ ಹೊಸ ವಿನ್ಯಾಸದ ಡ್ಯಾಶ್‌ಬೋರ್ಡ್‌ ಹಾಗೂ ದೊಡ್ಡ ಗಾತ್ರದ ಇನ್ಫೋಟೈನ್‌ಮೆಂಟ್‌ ಡಿಸ್‌ಪ್ಲೇ ಇರುವ ನಿರೀಕ್ಷೆಯಿದೆ. ಆದರೆ ಅಂತಿಮ ಕ್ಯಾಬಿನ್‌ ವಿನ್ಯಾಸ ಮತ್ತು ಯಾವೆಲ್ಲಾ ಫೀಚರ್‌ಗಳನ್ನ ನೀಡಲಾಗುತ್ತದೆ ಎಂಬುದನ್ನ ಹೋಂಡಾ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಡಿಸೆಂಬರ್‌ 2ರ ಅನಾವರಣದ ವೇಳೆ ಈ ಕುರಿತ ಹೆಚ್ಚಿನ ವಿವರಗಳು ಲಭ್ಯವಾಗುವ ಸಾಧ್ಯತೆಯಿದೆ.

ಭಾರತದಲ್ಲೇ ಉತ್ಪಾದನೆ, ವಿದೇಶಗಳಿಗೂ ಮಾರಾಟ

ಹೋಂಡಾ ಆಲ್ಫಾ ಕಂಪನಿಯ ಮೊದಲ ಮೇಡ್‌-ಇನ್‌-ಇಂಡಿಯಾ ಜಾಗತಿಕ ಎಲೆಕ್ಟ್ರಿಕ್‌ ಎಸ್‌ಯುವಿಯಾಗಿದೆ. ಈ ಕಾರಿನ ಉತ್ಪಾದನೆ ರಾಜಸ್ಥಾನದ ಟಪೂಕರದಲ್ಲಿರುವ ಹೋಂಡಾ ಘಟಕದಲ್ಲಿ ನಡೆಯಲಿದೆ. ಭಾರತದಲ್ಲಿ ತಯಾರಾಗುವ ಈ ವಾಹನವನ್ನ ದೇಶೀಯ ಗ್ರಾಹಕರಿಗೆ ಮಾತ್ರವಲ್ಲದೆ ವಿದೇಶಿ ಮಾರುಕಟ್ಟೆಗಳಿಗೂ ಪೂರೈಸುವ ಯೋಜನೆಯನ್ನ ಕಂಪನಿ ಹೊಂದಿದೆ. ಭಾರತವನ್ನ ಈ ಮಾದರಿಯ ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಬಳಸಿಕೊಳ್ಳಲು ಹೋಂಡಾ ನಿರ್ಧರಿಸಿದೆ. ಹೀಗಾಗಿ ಈ ಕಾರು ಕಂಪನಿಯ ಎಲೆಕ್ಟ್ರಿಕ್‌ ವಾಹನಗಳ ಯೋಜನೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಭಾರತದಲ್ಲಿಯೇ ಜಾಗತಿಕ ಅನಾವರಣ ನಡೆಯುತ್ತಿರುವುದು ಮತ್ತೊಂದು ವಿಶೇಷ.

2025ರ ಕಾನ್ಸೆಪ್ಟ್‌ ಮಾದರಿಯ ಮುಂದುವರಿದ ರೂಪ

ಹೋಂಡಾ ಆಲ್ಫಾ ಕಾರನ್ನ ಮೊದಲ ಬಾರಿಗೆ 2025ರಲ್ಲಿ ನಡೆದ ಜಪಾನ್‌ ಮೊಬಿಲಿಟಿ ಶೋನಲ್ಲಿ '0 Alpha' ಎಂಬ ಕಾನ್ಸೆಪ್ಟ್‌ ಮಾದರಿಯಾಗಿ ಪ್ರದರ್ಶಿಸಲಾಗಿತ್ತು. ಇದೀಗ ಆ ಕಾನ್ಸೆಪ್ಟ್‌ನ ಆಧಾರದಲ್ಲಿ ಉತ್ಪಾದನಾ ಮಾದರಿಯನ್ನ ಸಿದ್ಧಪಡಿಸಲಾಗುತ್ತಿದೆ. ಕಂಪನಿಯ ಎಲೆಕ್ಟ್ರಿಕ್‌ ವಾಹನಗಳ ಯೋಜನೆಗೆ ಈ ಕಾರು ಹೊಸ ಅಧ್ಯಾಯವಾಗಲಿದೆ.

ಬ್ಯಾಟರಿ, ರೇಂಜ್‌ ಬಗ್ಗೆ ಇನ್ನೂ ಕುತೂಹಲ

ಹೊಸ ಟೀಸರ್‌ನಲ್ಲಿ ಕಾರಿನ ವಿನ್ಯಾಸದ ಕೆಲವು ವಿವರಗಳು ಮಾತ್ರ ಬಹಿರಂಗವಾಗಿವೆ. ಇದರ ಬ್ಯಾಟರಿ ಸಾಮರ್ಥ್ಯ, ಎಲೆಕ್ಟ್ರಿಕ್‌ ಮೋಟಾರ್‌ ಸಾಮರ್ಥ್ಯ, ಒಂದು ಬಾರಿ ಚಾರ್ಜ್‌ಗೆ ಸಿಗುವ ರೇಂಜ್‌ ಮತ್ತು ಚಾರ್ಜಿಂಗ್‌ ವೇಗದ ಕುರಿತು ಹೋಂಡಾ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಕಾರಿನ ಬೆಲೆ ಹಾಗೂ ಭಾರತದಲ್ಲಿ ಮಾರಾಟ ಆರಂಭಿಸುವ ದಿನಾಂಕವೂ ಇನ್ನೂ ಪ್ರಕಟವಾಗಿಲ್ಲ. ಡಿಸೆಂಬರ್‌ 2ರಂದು ನಡೆಯಲಿರುವ ಜಾಗತಿಕ ಅನಾವರಣದಲ್ಲಿ ಈ ಪ್ರಮುಖ ಮಾಹಿತಿಗಳು ಹೊರಬರುವ ನಿರೀಕ್ಷೆಯಿದೆ. ಹೀಗಾಗಿ ಹೋಂಡಾದ ಮೊದಲ ಮೇಡ್‌-ಇನ್‌-ಇಂಡಿಯಾ ಎಲೆಕ್ಟ್ರಿಕ್‌ ಎಸ್‌ಯುವಿ ಯಾವ ವಿನ್ಯಾಸ, ತಂತ್ರಜ್ಞಾನ ಮತ್ತು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಬರಲಿದೆ ಎಂಬುದನ್ನ ತಿಳಿಯಲು ಗ್ರಾಹಕರು ಕಾಯುತ್ತಿದ್ದಾರೆ.

Add Zee News as a Preferred Source
TAGS:
Tech
Kannada News