• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಗಡಿ ಮೀರಿದ ಕನ್ನಡದ ಕಥೆ: 57ನೇ IFFIನಲ್ಲಿ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಗೌರವ, ಕನ್ನಡಿಗರಿಗೆ ಅರ್ಪಣೆ

ಗಡಿ ಮೀರಿದ ಕನ್ನಡದ ಕಥೆ: 57ನೇ IFFIನಲ್ಲಿ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಗೌರವ, ಕನ್ನಡಿಗರಿಗೆ ಅರ್ಪಣೆ

57ನೇ IFFI 2026ನಲ್ಲಿ 'ಕಾಂತಾರ: ಎ ಲೆಜೆಂಡ್ – ಚಾಪ್ಟರ್ 1' ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ (ರಜತ ಮಯೂರ) ಪ್ರಶಸ್ತಿ ಮತ್ತು ವಿಶೇಷ ತೀರ್ಪುಗಾರರ ಮೆಚ್ಚುಗೆ—ಹೀಗೆ ಡಬಲ್ ಗೌರವ ಸಿಕ್ಕಿದೆ. ಶಂಕರ್ ನಾಗ್ ನಂತರ 47 ವರ್ಷಗಳ ಬಳಿಕ ಈ ಪ್ರಶಸ್ತಿ ಪಡೆದ ಕನ್ನಡದ ನಟ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Written ByKrishna NK
Published: Nov 29, 2026, 19:42 IST|Updated: Nov 29, 2026, 19:45 IST
joinshare
ಗಡಿ ಮೀರಿದ ಕನ್ನಡದ ಕಥೆ: 57ನೇ IFFIನಲ್ಲಿ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಗೌರವ, ಕನ್ನಡಿಗರಿಗೆ ಅರ್ಪಣೆ
Image Credit: Rishab shetty

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಮುತ್ಯಾಲಮಡುವು ಬಳಿ ದಂತಚೋರರ ಬೇಟೆ : 7 ಆನೆ ದಂತಗಳ ಜೊತೆ ಮೂವರು ಅರೆಸ್ಟ್

ಮುತ್ಯಾಲಮಡುವು ಬಳಿ ದಂತಚೋರರ ಬೇಟೆ : 7 ಆನೆ ದಂತಗಳ ಜೊತೆ ಮೂವರು ಅರೆಸ್ಟ್

2

ಕ್ಷೇತ್ರ ಮರುವಿಂಗಡಣೆ ಮಸೂದೆಗೆ 371 ಸಂಸದರ ಬೆಂಬಲ? ಗೆಲುವಿನ ವಿಶ್ವಾಸದಲ್ಲಿ ಎನ್‌ಡಿಎ!

3

ಗಡಿ ಮೀರಿದ ಕನ್ನಡದ ಕಥೆ: 57ನೇ IFFIನಲ್ಲಿ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಗೌರವ, ಕನ್ನಡಿಗರಿಗೆ ಅರ್ಪಣೆ

4

ಗೆಳತಿಯ ಜೊತೆ ಖಾಸಗಿ ಕ್ಷಣ.. ಖ್ಯಾತ ನಟನ ಫೋಟೋ ವೈರಲ್, ಫ್ಯಾನ್ಸ್ ಶಾಕ್!

5

ಹೆರಿಗೆ ವೇಳೆ ನಟಿ ಸಮಂತಾ ಜೀವಕ್ಕೇ ಕಂಟಕ? ಮಗುವೋ ತಾಯಿಯೋ!! ಅಂದು ನಡೆದ್ದಿದ್ದು ಈ ದೇವರ ಪವಾಡವೇ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಪಣಜಿ (ಗೋವಾ): ಶನಿವಾರ ಮುಕ್ತಾಯವಾದ 57ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI 2026) ಕನ್ನಡದ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಭರ್ಜರಿ ಗೌರವ ಸಿಕ್ಕಿದೆ. 'ಕಾಂತಾರ: ಎ ಲೆಜೆಂಡ್ – ಚಾಪ್ಟರ್ 1' ಸಿನಿಮಾದಲ್ಲಿನ ತಮ್ಮ ನಟನೆಗಾಗಿ ಅವರಿಗೆ ಅತ್ಯುತ್ತಮ ನಟ (ರಜತ ಮಯೂರ / ಸಿಲ್ವರ್ ಪೀಕಾಕ್) ಪ್ರಶಸ್ತಿ ಲಭಿಸಿದೆ. ಇದರ ಜೊತೆಗೆ, ಇದೇ ಸಿನಿಮಾದ ನಿರ್ದೇಶನಕ್ಕಾಗಿ ವಿಶೇಷ ತೀರ್ಪುಗಾರರ ಮೆಚ್ಚುಗೆಗೂ ಅವರು ಪಾತ್ರರಾಗಿದ್ದಾರೆ.

ಈ ಪ್ರಶಸ್ತಿಯ ಮೂಲಕ ರಿಷಬ್ ಶೆಟ್ಟಿ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. 1979ರಲ್ಲಿ 'ಒಂದಾನೊಂದು ಕಾಲದಲ್ಲಿ' ಸಿನಿಮಾದ ಅಭಿನಯಕ್ಕಾಗಿ ಶಂಕರ್ ನಾಗ್ ಅವರು ಅತ್ಯುತ್ತಮ ನಟನಾಗಿ ರಜತ ಮಯೂರ ಪ್ರಶಸ್ತಿ ಪಡೆದಿದ್ದರು. ಅದಾಗಿ ಬರೋಬ್ಬರಿ 47 ವರ್ಷಗಳ ನಂತರ, ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಕನ್ನಡದ ನಟ ಎಂಬ ಹೆಗ್ಗಳಿಕೆ ಈಗ ರಿಷಬ್ ಶೆಟ್ಟಿ ಅವರ ಪಾಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಿನಿಮಾಗಳ ಕಥೆ ಹೇಳುವ ಶೈಲಿಗೆ ದೇಶ-ವಿದೇಶಗಳಲ್ಲಿ ಒಳ್ಳೆಯ ಮನ್ನಣೆ ಸಿಗುತ್ತಿದೆ. ಭಾಷೆ, ಗಡಿಗಳ ಹಂಗಿಲ್ಲದೆ ಪ್ರೇಕ್ಷಕರ ಮನಗೆಲ್ಲುವ ಶಕ್ತಿ ಕನ್ನಡ ಚಿತ್ರರಂಗಕ್ಕಿದೆ ಎಂಬುದಕ್ಕೆ ಈ ಪ್ರಶಸ್ತಿ ಮತ್ತೊಂದು ಸಾಕ್ಷಿಯಾಗಿದೆ. ನಮ್ಮ ಕರಾವಳಿ ಮತ್ತು ಕರ್ನಾಟಕದ ಜಾನಪದ ಪರಂಪರೆ, ಮಣ್ಣಿನ ಸೊಗಡನ್ನು ಇಟ್ಟುಕೊಂಡು ಮಾಡಿದ 'ಕಾಂತಾರ: ಎ ಲೆಜೆಂಡ್ – ಚಾಪ್ಟರ್ 1' ಸಿನಿಮಾ, ಒಂದು ಕಥೆಯನ್ನು ಪ್ರಾಮಾಣಿಕವಾಗಿ ಹೇಳಿದರೆ ಅದಕ್ಕೆ ಭಾಷಾಂತರದ ಅಗತ್ಯವೇ ಇರುವುದಿಲ್ಲ ಎನ್ನುವುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದೆ.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ರಿಷಬ್ ಶೆಟ್ಟಿ, ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. "ಕಾಂತಾರ ನನಗೆ ಎಂದಿಗೂ ಕೇವಲ ಒಂದು ಸಿನಿಮಾ ಆಗಿರಲಿಲ್ಲ. ಈ ಗೌರವ ಕರ್ನಾಟಕಕ್ಕೆ ಸಲ್ಲಬೇಕು. ನಮ್ಮ ಜಾನಪದ ಪರಂಪರೆ, ನಮ್ಮ ದೇವರುಗಳು, ಜನರು ಮತ್ತು ಹಲವು ಶತಮಾನಗಳಿಂದ ನಮ್ಮ ಮಣ್ಣಿನಲ್ಲಿ ಜೀವಂತವಾಗಿರುವ ಕಥೆಗಳಿಗೆ ಇದು ಸಲ್ಲುತ್ತದೆ" ಎಂದು ಅವರು ಹೇಳಿದರು.

ಮುಂದುವರಿದು ಮಾತನಾಡಿದ ಅವರು, "47 ವರ್ಷಗಳ ಬಳಿಕ ಶಂಕರ್ ನಾಗ್ ಅವರ ಹೆಸರಿನ ಜೊತೆಗೆ ನನ್ನ ಹೆಸರು ಬರುತ್ತಿರುವುದು ಕೇವಲ ನನ್ನ ಸಾಧನೆಯಲ್ಲ, ಇದೊಂದು ದೊಡ್ಡ ಜವಾಬ್ದಾರಿಯೂ ಹೌದು. ಈ ಗೌರವವನ್ನು ತುಂಬಾ ವಿನಯ ಮತ್ತು ಕೃತಜ್ಞತೆಯಿಂದ ಸ್ವೀಕರಿಸುತ್ತೇನೆ. ಕಾಂತಾರ ನನಗೆ ಒಂದು ಸಿನಿಮಾಗಿಂತ ಹೆಚ್ಚಾಗಿ ಅದೊಂದು ಪ್ರಾರ್ಥನೆಯಾಗಿತ್ತು" ಎಂದು ಭಾವುಕರಾಗಿ ನುಡಿದರು.

ಇನ್ನು ಗೋವಾಕ್ಕೆ ತೆರಳಿದ್ದ ವೇಳೆ ರಿಷಬ್ ಶೆಟ್ಟಿ ಅವರು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದರು. ಒಟ್ಟಿನಲ್ಲಿ, 57ನೇ ಐಎಫ್ಎಫ್ಐನಲ್ಲಿ ಕನ್ನಡದ ಕೀರ್ತಿ ಪತಾಕೆ ಮತ್ತೊಮ್ಮೆ ಎತ್ತರಕ್ಕೆ ಹಾರಿದೆ.

Add Zee News as a Preferred Source
TAGS:
Kannada News