Smart Dog Viral Video: ಬೈಕ್ ರೈಡ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಕೆಲವರು ತಮ್ಮ ಮುದ್ದಾದ ಪ್ರಾಣಿಗಳನ್ನೂ ಕಾರು-ಬೈಕ್‌ನಲ್ಲಿ ಕರೆದುಕೊಂಡು ಹೋಗುವುದನ್ನ ನೀವು ನೋಡಿಯೇ ಇರ್ತಿರಿ. ಅದೇ ರೀತಿ ಪ್ರೀತಿಯ ಮಾಲೀಕನ ಜೊತೆ ಬೈಕ್‌ನಲ್ಲಿ ಸುತ್ತಾಡುವ ಅವಕಾಶ ಸಿಕ್ಕರೆ ಸಾಕು, ಶ್ವಾನಗಳಿಗೆ ಖುಷಿಗೆ ಪಾರವೇ ಇರುವುದಿಲ್ಲ. ಇಂತಹದ್ದೇ ಮುದ್ದಾದ ದೃಶ್ಯವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ಬೈಕ್ ರೈಡ್‌ಗೆ ಹೋಗಲು ಆಸೆ ವ್ಯಕ್ತಪಡಿಸುವ ಸಾಕುನಾಯಿ, ಹೆಲ್ಮೆಟ್ ಧರಿಸುವಂತೆ ಮಾಲೀಕ ಹೇಳುತ್ತಿದ್ದಂತೆ ತೋರಿಸುವ ಬುದ್ಧಿವಂತಿಕೆ ನೆಟ್ಟಿಗರ ಮನ ಗೆದ್ದಿದೆ. ಈ ವಿಡಿಯೋ ಮನರಂಜನೆಯ ಜೊತೆಗೆ ಸಂಚಾರ ಸುರಕ್ಷತೆಯ ಮಹತ್ವದ ಸಂದೇಶವನ್ನೂ ಸಾರುತ್ತಿದೆ.
ಬೈಕ್ ರೈಡ್‌ಗೆ ಶ್ವಾನದ ಆಸೆ!
ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ತಮ್ಮ ಬೈಕ್ ಮೇಲೆ ಕುಳಿತಿರುವುದನ್ನ ಕಾಣಬಹುದು. ಈ ವೇಳೆ ಅವರ ಸಾಕುನಾಯಿ ಕೂಡ ಬೈಕ್ ರೈಡ್‌ಗೆ ಹೋಗಬೇಕು ಎಂಬ ಆಸೆಯಿಂದ ಮಾಲೀಕನ ಬಳಿ ಬರುತ್ತದೆ. ತನ್ನನ್ನೂ ಬೈಕ್‌ನಲ್ಲಿ ಕರೆದುಕೊಂಡು ಹೋಗುವಂತೆ ಕೇಳುವ ರೀತಿಯಲ್ಲಿ ಶ್ವಾನ ವರ್ತಿಸುತ್ತದೆ. ಪ್ರೀತಿಯ ಸಾಕುಪ್ರಾಣಿಯ ಈ ಮುದ್ದಾದ ವರ್ತನೆ ನೋಡುಗರ ಮುಖದಲ್ಲಿ ನಗು ಮೂಡಿಸುತ್ತದೆ. ಆದರೆ ಮಾಲೀಕ ತನ್ನ ಮುದ್ದಿನ ಶ್ವಾನವನ್ನ ಬೈಕ್‌ನಲ್ಲಿ ಕರೆದೊಯ್ಯಲು ಒಂದು ಷರತ್ತು ವಿಧಿಸುತ್ತಾನೆ. ಅದೇನೆಂದರೆ ಬೈಕ್ ರೈಡ್‌ಗೆ ಬರುವ ಮೊದಲು ಹೆಲ್ಮೆಟ್ ಧರಿಸಬೇಕು ಎಂಬುದು!
ಹೆಲ್ಮೆಟ್ ಬೇಡವೆಂದು ಕೆಳಕ್ಕೆ ಎಸೆದ ಶ್ವಾನ!
ಶ್ವಾನಕ್ಕಾಗಿ ಮಾಲೀಕ ಮೊದಲೇ ಹೆಲ್ಮೆಟ್ ವ್ಯವಸ್ಥೆ ಮಾಡಿರುತ್ತಾನೆ. ಆದರೆ ಆರಂಭದಲ್ಲಿ ಶ್ವಾನ ಆ ಹೆಲ್ಮೆಟ್ ಅನ್ನ ಕೆಳಕ್ಕೆ ಎಸೆಯುತ್ತದೆ. ತನಗೆ ಹೆಲ್ಮೆಟ್ ಬೇಡ ಎಂಬಂತೆ ವರ್ತಿಸುವ ಶ್ವಾನವನ್ನ ಕಂಡು ಮಾಲೀಕ ಕೂಡ ತನ್ನದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾನೆ. ಹೆಲ್ಮೆಟ್ ಧರಿಸಿದರೆ ಮಾತ್ರ ಬೈಕ್ ರೈಡ್‌ಗೆ ಕರೆದುಕೊಂಡು ಹೋಗುವುದಾಗಿ ಮಾಲೀಕ ಸ್ಪಷ್ಟಪಡಿಸುತ್ತಾನೆ. ಅಷ್ಟೇ ಅಲ್ಲ ಹೆಲ್ಮೆಟ್ ಇಲ್ಲದೆ ಬೈಕ್ ಹತ್ತಲು ಅವಕಾಶವಿಲ್ಲ ಎಂಬ ಸಂದೇಶವನ್ನೂ ನೀಡುತ್ತಾನೆ. ಈ ಮಾತು ಕೇಳಿದ ಬಳಿಕ ಶ್ವಾನದ ವರ್ತನೆಯಲ್ಲಿ ಬದಲಾವಣೆ ಕಾಣಿಸುತ್ತದೆ.
ಮಾಲೀಕನ ಷರತ್ತಿಗೆ ಶ್ವಾನದ ಸ್ಮಾರ್ಟ್ ಉತ್ತರ!
பைக் எடுத்தால் ஹெல்மெட்டை மறக்காதே. அது விதி இல்லை அதுதான் வாழ்க்கை ஹெல்மெட் என்பது தலைக்கு மட்டும் கவசம் இல்லை,அது குடும்பத்தின் சந்தோஷத்திற்கே கவசம் https://t.co/a30bgnUjY2
— Rajini (@rajini198080) October 23, 2026
ಬೈಕ್ ರೈಡ್‌ಗೆ ಹೋಗುವ ಆಸೆ ಹೊಂದಿದ್ದ ಶ್ವಾನ, ತಾನು ಕೆಳಕ್ಕೆ ಎಸೆದಿದ್ದ ಹೆಲ್ಮೆಟ್ ಅನ್ನ ತಕ್ಷಣವೇ ಬಾಯಿಯಿಂದ ಕಚ್ಚಿ ಎತ್ತಿಕೊಳ್ಳುತ್ತದೆ. ಬಳಿಕ ಅದನ್ನ ತನ್ನ ಮಾಲೀಕನಿಗೆ ನೀಡುತ್ತದೆ. ಹೆಲ್ಮೆಟ್ ಧರಿಸಿದರೆ ಮಾತ್ರ ರೈಡ್‌ಗೆ ಅವಕಾಶ ಎಂಬ ವಿಚಾರವನ್ನ ಅರ್ಥಮಾಡಿಕೊಂಡಂತೆ ಶ್ವಾನ ತೋರಿಸುವ ವರ್ತನೆ ವಿಡಿಯೋದಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ನಂತರ ಮಾಲೀಕ ಬೈಕ್ ಹತ್ತುವಂತೆ ಸೂಚಿಸಿದಾಗ ಶ್ವಾನ ಖುಷಿಯಿಂದ ಬೈಕ್ ಏರುತ್ತದೆ. ತನ್ನ ಮುದ್ದಿನ ಸಂಗಾತಿಯ ಈ ವರ್ತನೆಯಿಂದ ಸಂತೋಷಗೊಂಡ ಮಾಲೀಕ, ಅದರ ತಲೆಗೆ ಹೆಲ್ಮೆಟ್ ಹಾಕುತ್ತಾನೆ. ಮಾಲೀಕ ಮತ್ತು ಶ್ವಾನದ ನಡುವಿನ ಈ ಮುದ್ದಾದ ಸಂಭಾಷಣೆ ಹಾಗೂ ಪರಸ್ಪರ ಹೊಂದಾಣಿಕೆ ನೋಡುಗರ ಗಮನ ಸೆಳೆಯುತ್ತದೆ.
ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾದ ವಿಡಿಯೋ
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಗಮನ ಸೆಳೆದಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಶ್ವಾನದ ಬುದ್ಧಿವಂತಿಕೆ, ಮಾಲೀಕನ ಕಾಳಜಿ ಮತ್ತು ಅವರಿಬ್ಬರ ನಡುವಿನ ಆತ್ಮೀಯ ಸಂಬಂಧಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಾಕುಪ್ರಾಣಿಗಳ ಮೇಲಿನ ಪ್ರೀತಿ ಎಂದರೆ ಅವುಗಳಿಗೆ ಆಹಾರ ನೀಡುವುದು, ಆಟವಾಡಿಸುವುದು ಮಾತ್ರವಲ್ಲ; ಅವುಗಳ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸುವುದು ಅಗತ್ಯ ಎಂಬುದನ್ನ ಈ ದೃಶ್ಯ ನೆನಪಿಸುತ್ತದೆ. ಶ್ವಾನಕ್ಕಾಗಿ ಪ್ರತ್ಯೇಕ ಹೆಲ್ಮೆಟ್ ವ್ಯವಸ್ಥೆ ಮಾಡಿರುವ ಮಾಲೀಕನ ನಡೆ ಕೂಡ ಹಲವರ ಗಮನ ಸೆಳೆದಿದೆ.
ಮನರಂಜನೆಯ ಜೊತೆಗೆ ಸುರಕ್ಷತೆಯ ಸಂದೇಶ
ಈ ವಿಡಿಯೋ ಕೇವಲ ಮುದ್ದಾದ ಶ್ವಾನದ ವರ್ತನೆಗೆ ಸೀಮಿತವಾಗಿಲ್ಲ. ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವುದು ಎಷ್ಟು ಮುಖ್ಯ ಎಂಬುದನ್ನೂ ನೆನಪಿಸುತ್ತದೆ. ರಸ್ತೆ ಅಪಘಾತಗಳು ಸಂಭವಿಸಿದಾಗ ತಲೆಗೆ ಗಂಭೀರ ಗಾಯವಾಗುವುದನ್ನ ತಡೆಯುವಲ್ಲಿ ಹೆಲ್ಮೆಟ್ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಬೈಕ್ ಸವಾರಿ ಮಾಡುವಾಗ ಚಾಲಕ ಮಾತ್ರವಲ್ಲ, ಹಿಂಬದಿ ಸವಾರರೂ ಸೂಕ್ತ ಹೆಲ್ಮೆಟ್ ಧರಿಸುವುದು ಅತ್ಯಗತ್ಯ. ಅದೇ ರೀತಿ ಸಾಕುಪ್ರಾಣಿಗಳನ್ನ ಬೈಕ್‌ನಲ್ಲಿ ಕರೆದೊಯ್ಯುವಾಗ ಅವುಗಳ ಸುರಕ್ಷತೆಗೂ ಆದ್ಯತೆ ನೀಡಬೇಕು.
ಪ್ರಾಣಿಗಳಿಗೆ ಸರಿಯಾಗಿ ಹೊಂದುವ ಸುರಕ್ಷತಾ ಸಾಧನಗಳನ್ನ ಬಳಸುವುದರ ಜೊತೆಗೆ, ಅವು ಚಾಲಕನ ಗಮನಕ್ಕೆ ಅಡ್ಡಿಯಾಗದಂತೆ ಮತ್ತು ಅಪಾಯಕ್ಕೆ ಸಿಲುಕದಂತೆ ನೋಡಿಕೊಳ್ಳುವುದು ಮುಖ್ಯ. ಒಟ್ನಲ್ಲಿ ಒಂದು ಪುಟ್ಟ ಶ್ವಾನದ ಬುದ್ಧಿವಂತಿಕೆ ಮತ್ತು ಮಾಲೀಕನ ಕಾಳಜಿ ಮನರಂಜನೆಯ ಜೊತೆಗೆ ದೊಡ್ಡ ಸಂದೇಶವನ್ನೇ ನೀಡಿದೆ. ಬೈಕ್ ರೈಡ್ ಎಷ್ಟೇ ಖುಷಿ ನೀಡಿದರೂ ಸುರಕ್ಷತೆ ಮೊದಲು; ಹೆಲ್ಮೆಟ್ ಧರಿಸುವುದು ಆಯ್ಕೆಯಲ್ಲ, ಜೀವ ರಕ್ಷಣೆಯ ಜವಾಬ್ದಾರಿ!