• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ದೂರು ದಾಖಲು ಬೆನ್ನಲ್ಲೇ ಸ್ಪೋಟಕ ಹೇಳಿಕೆ ನೀಡಿದ ನಟ ಧನ್ವೀರ್‌..! ಇದು ಮುಖವಾಡ ಕಳಚುವ ಸಮಯ..

ದೂರು ದಾಖಲು ಬೆನ್ನಲ್ಲೇ ಸ್ಪೋಟಕ ಹೇಳಿಕೆ ನೀಡಿದ ನಟ ಧನ್ವೀರ್‌..! ಇದು ಮುಖವಾಡ ಕಳಚುವ ಸಮಯ..

ಅತ್ತ ನಟ ದರ್ಶನ್ ಕೇಸ್‌ ವಿಚಾರ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಇತ್ತ ನಟ ಧನ್ವೀರ್‌ ವಿರುದ್ಧ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ಆರ್‌ ಆರ್‌ ನಗರದ ಪೊಲೀಸ್ ಠಾಣೆಯಲ್ಲಿ ಆಡಿಯೋ ಸಮೇತ ದೂರು ದಾಖಲಿಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ನಟ ಧನ್ವೀರ್ ಪ್ರತಿಕ್ರಿಯೆ ನೀಡಿದ್ದಾರೆ.. ಅಸಲಿಗೆ ಹೇಳಿದ್ದೇನು..? ಇಲ್ಲಿದೆ ಸಂಪೂರ್ಣ ವರದಿ..

Written ByKrishna NK
Published: Oct 23, 2026, 07:55 PM IST|Updated: Oct 23, 2026, 07:59 PM IST
joinshare
ದೂರು ದಾಖಲು ಬೆನ್ನಲ್ಲೇ ಸ್ಪೋಟಕ ಹೇಳಿಕೆ ನೀಡಿದ ನಟ ಧನ್ವೀರ್‌..! ಇದು ಮುಖವಾಡ ಕಳಚುವ ಸಮಯ..
Image Credit: Actor dhanveer gowda news

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಧನ್ವೀರ್‌-ನಾಗರಾಜ್‌ ವಾಟ್ಸ್‌ಆ್ಯಪ್ ಚಾಟ್ ಬಹಿರಂಗ..! ದರ್ಶನ್‌ ಪತ್ನಿಗೂ ಕೆಟ್ಟ ಪದ ಬಳಕೆ.. ಪ್ರತಿದೂರು ದಾಖಲು

ಧನ್ವೀರ್‌-ನಾಗರಾಜ್‌ ವಾಟ್ಸ್‌ಆ್ಯಪ್ ಚಾಟ್ ಬಹಿರಂಗ..! ದರ್ಶನ್‌ ಪತ್ನಿಗೂ ಕೆಟ್ಟ ಪದ ಬಳಕೆ.. ಪ್ರತಿದೂರು ದಾಖಲು

2

ಕರ್ನಾಟಕದಲ್ಲಿ ಅ.29ರವರೆಗೂ ಮಳೆ ಅಬ್ಬರ! ಬೆಂಗಳೂರು ಸೇರಿ ದಕ್ಷಿಣ ಒಳನಾಡಿಗೆ ಯೆಲ್ಲೋ ಅಲರ್ಟ್

3

ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ : ಶೇ. 69.16ರಷ್ಟು ಮತದಾನ

4

ಟೋಲ್ ಕಲೆಕ್ಷನ್‌ನಲ್ಲಿ ಭಾರೀ ಅಕ್ರಮ! ನೈಸ್ ಗೋಲ್ಮಾಲ್‌ನ ಮತ್ತೊಂದು ಅಕ್ರಮ ಬಯಲಿಗೆಳೆದ ಎಚ್‌ಡಿಕೆ

5

ದೂರು ದಾಖಲು ಬೆನ್ನಲ್ಲೇ ಸ್ಪೋಟಕ ಹೇಳಿಕೆ ನೀಡಿದ ನಟ ಧನ್ವೀರ್‌..! ಇದು ಮುಖವಾಡ ಕಳಚುವ ಸಮಯ..

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು : ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ನೀಡಿದ ದೂರಿಗೆ ಸಂಬಂಧಿಸಿದಂತೆ ನಟ ಧನ್ವೀರ್ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ ಅವರ ಪರವಾಗಿ ಧ್ವನಿ ಎತ್ತಿದ್ದಕ್ಕೆ ಮತ್ತು ನಿಲುವು ತಾಳಿದ್ದಕ್ಕೆ ಕೆಲವರು ಈ ರೀತಿ ಕುತಂತ್ರ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ..

ಆರ್‌ಆರ್ ನಗರ ಪೊಲೀಸ್ ಠಾಣೆಯಲ್ಲಿ ಮ್ಯಾನೇಜರ್ ನಾಗರಾಜ್ ಅವರು ಆಡಿಯೋ ಸಮೇತ ದೂರು ದಾಖಲಿಸಿರುವ ವಿಚಾರದ ಬಗ್ಗೆ ಮಾತನಾಡಿರುವ ನಟ ಧನ್ವೀರ್.. ಯಾರೂ ಕೂಡ ಸುಮ್ಮನೆ ಮತ್ತೊಬ್ಬರಿಗೆ ಬಯ್ಯುವುದಿಲ್ಲ. ಆ ಮ್ಯಾನೇಜರ್‌ಗೆ ನಾನು ಬೈದಿರುವುದರ ಹಿಂದೆ ಬಹಳ ಬಲವಾದ ಕಾರಣವಿದೆ. ಆ ಕಾರಣ ಏನು ಎಂಬುದನ್ನು ದೂರು ಕೊಟ್ಟವರನ್ನೇ ನೀವು ಕೇಳಿ. ಆ ಸತ್ಯಾಂಶ ಹೊರಬಂದಾಗ ಮಾತ್ರ ಯಾರ್ಯಾರ ಅಸಲಿ ಬಣ್ಣ ಹಾಗೂ ಮುಖವಾಡಗಳು ಏನೆಂಬುದು ಸಾರ್ವಜನಿಕರಿಗೆ ಸಂಪೂರ್ಣವಾಗಿ ತಿಳಿಯುತ್ತದೆ ಎಂದು ಹೇಳುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ..

ಅಷ್ಟೇ ಅಲ್ಲದೆ, ತಾವು ಯಾರ ಮೇಲೂ ವೈಯಕ್ತಿಕ ದ್ವೇಷದಿಂದ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿರುವ ಧನ್ವೀರ್, "ನಾನು ಬೈದಿದ್ದು ಅಥವಾ ಧ್ವನಿ ಎತ್ತಿದ್ದು ಕೇವಲ ದರ್ಶನ್ ಅಣ್ಣನ ವಿಚಾರಕ್ಕಾಗಿಯೇ ಹೊರತು, ಬೇರೆ ಯಾವುದೇ ವೈಯಕ್ತಿಕ ವಿಚಾರಕ್ಕಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಆ ಮನುಷ್ಯನಿಗೆ ಯಾರು ಅನ್ಯಾಯ ಮಾಡಲು ಹೊರಟಿದ್ದಾರೋ, ಅಂತಹವರ ವಿರುದ್ಧವೇ ನಾನು ಧ್ವನಿ ಎತ್ತಿದ್ದೇನೆ. ದರ್ಶನ್ ಅವರ ಪರವಾಗಿ ನಾನು ನಿಂತಿರುವುದು ಕೆಲವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ, ಅದಕ್ಕೇ ಇಂತಹ ತಂತ್ರಗಳನ್ನು ಮಾಡುತ್ತಿದ್ದಾರೆ ಎಂದು ಧನ್ವೀರ್‌ ಗುಡುಗಿದ್ದಾರೆ..

ಇತ್ತೀಚೆಗೆ ಜೈಲಿಗೆ ಭೇಟಿ ನೀಡಿದಾಗ ನಟ ದರ್ಶನ್, ವಿಜಯಲಕ್ಷ್ಮಿ ಹಾಗೂ ಧನ್ವೀರ್ ನಡುವೆ ರಾಜಿ ಪಂಚಾಯಿತಿ ನಡೆಯಿತು ಎಂಬ ಹರಿದಾಡುತ್ತಿರುವ ವಾದಗಳಿಗೆ ತೆರೆ ಎಳೆದಿರುವ ಅವರು, "ನಾನು ಜೈಲಿಗೆ ಹೋಗಿ ದರ್ಶನ್ ಅಣ್ಣನನ್ನು ಭೇಟಿ ಮಾಡಿ ಮಾತನಾಡಿಸಿಕೊಂಡು ಬಂದಿದ್ದೇನೆ ಅಷ್ಟೇ. ಅಲ್ಲಿ ಯಾವುದೇ ರೀತಿಯ ಸಮಾಧಾನ ಅಥವಾ ರಾಜಿ ಸಂಧಾನದ ಮಾತುಕತೆಗಳು ನಡೆದಿಲ್ಲ. ನಾನು ಎಂದೆಂದಿಗೂ ಅವರ ಪರವಾಗಿಯೇ ಇದ್ದು, ಅವರಿಂದ ಯಾವುದೇ ದೂರ ಉಳಿದುಕೊಂಡಿಲ್ಲ" ಎಂದು ತಿಳಿಸಿದ್ದಾರೆ.

ಮುಖವಾಡ ಕಳಚುವ ಎಚ್ಚರಿಕೆ ನೀಡಿದ ಧನ್ವೀರ್‌
ಈ ಪ್ರಕರಣದ ನಡುವೆ ಸಂಚಲನ ಹೇಳಿಕೆ ನೀಡಿದ ನಟ, ಸಮಾಜದಲ್ಲಿ ಮುಖವಾಡ ಧರಿಸಿ ಬದುಕುತ್ತಿರುವವರ ಅಸಲಿ ಮುಖವಾಡ ಕಳಚಿ ಬೀಳುವ ಸಮಯ ಹತ್ತಿರ ಬಂದಿದೆ. ನಮ್ಮ ಕಡೆ ನ್ಯಾಯ, ನೀತಿ ಮತ್ತು ಸತ್ಯವಿರುವಾಗ ನಾನು ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ. ಅತೀ ಶೀಘ್ರದಲ್ಲೇ ಒಂದು ಪ್ರೆಸ್‌ಮೀಟ್ ಕರೆದು, ನನ್ನದೇ ಶೈಲಿಯಲ್ಲಿ ಎಲ್ಲಾ ಸತ್ಯಾಂಶಗಳನ್ನು ಜನರ ಮುಂದೆ ಬಿಚ್ಚಿಡುತ್ತೇನೆ ಎಂದು ಎಚ್ಚರಿಕೆ ನೀಡಿದರು..

ಒಟ್ಟಾರೆಯಾಗಿ, ನಟ ದರ್ಶನ್ ಮತ್ತು ಅವರ ಕುಟುಂಬದ ಸುತ್ತಲಿನ ಬೆಳವಣಿಗೆಗಳು ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಈ ವಿವಾದದಲ್ಲಿ ನಟ ಧನ್ವೀರ್ ಅವರ ನೇರ ಮಾತುಗಳು ಸ್ಯಾಂಡಲ್‌ವುಡ್‌ನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಮ್ಯಾನೇಜರ್ ನೀಡಿರುವ ದೂರು ಹಾಗೂ ಧನ್ವೀರ್ ಅವರ ಎಚ್ಚರಿಕೆಯು ಮುಂದಿನ ದಿನಗಳಲ್ಲಿ ಯಾವೆಲ್ಲಾ ಹೊಸ ಸತ್ಯಗಳನ್ನು ಹೊರಹಾಕಲಿದೆ ಮತ್ತು ಈ ವಿವಾದ ಎಲ್ಲಿಗೆ ಬಂದು ನಿಲ್ಲಲಿದೆ ಎಂಬುದನ್ನು ಕಾದು ನೋಡಬೇಕಿದೆ.

Add Zee News as a Preferred Source
TAGS:
Cinema