Tirupathur Accident Viral Video: ರಸ್ತೆಯಲ್ಲಿ ಸಂಚರಿಸುತ್ತಿದ್ದ ಗೂಡ್ಸ್ ವಾಹನದ ಚಾಲಕನ ನಿರ್ಲಕ್ಷ್ಯದಿಂದ ರಸ್ತೆ ಬದಿಯಲ್ಲಿದ್ದ ಪೊಲೀಸ್ ಬ್ಯಾರಿಕೇಡ್ ಉರುಳಿಬಿದ್ದು, ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆಯರ ಜೀವಕ್ಕೆ ಕುತ್ತುಂಟು ಮಾಡಿತ್ತು. ಈ ಅಪಘಾತದ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ತಿರುಪತ್ತೂರು ಜಿಲ್ಲೆಯ ಪಾಲನಂಕುಪ್ಪಂ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ವೇಗವಾಗಿ ಬಂದ ಗೂಡ್ಸ್ ವಾಹನ ಬ್ಯಾರಿಕೇಡ್‌ಗೆ ಡಿ*ಕ್ಕಿ ಹೊಡೆದ ಪರಿಣಾಮ ಅದು ರಸ್ತೆಯ ಮಧ್ಯಭಾಗಕ್ಕೆ ಉರುಳಿದೆ. ಇದೇ ವೇಳೆ ಅಲ್ಲಿಗೆ ಬಂದ ಸ್ಕೂಟರ್ ಬ್ಯಾರಿಕೇಡ್‌ಗೆ ಸಿಲುಕಿಕೊಂಡು ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ಸ್ಕೂಟರ್‌ನಲ್ಲಿದ್ದ ಇಬ್ಬರು ಮಹಿಳೆಯರು ರಸ್ತೆಗೆ ಬಿದ್ದಿದ್ದಾರೆ. ಈ ಸಂಪೂರ್ಣ ಘಟನೆ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅಪಘಾತದ ದೃಶ್ಯ ಆತಂಕ ಮೂಡಿಸಿದೆ.
ವೇಗವಾಗಿ ಬಂದ ಗೂಡ್ಸ್ ವಾಹನದಿಂದ ಎಡವಟ್ಟು!
ತಿರುಪತ್ತೂರಿನ ಪಾಲನಂಕುಪ್ಪಂ ಪ್ರದೇಶದಲ್ಲಿ ರಸ್ತೆ ಸಂಚಾರ ಎಂದಿನಂತೆ ಸಾಗುತ್ತಿದ್ದ ಸಂದರ್ಭದಲ್ಲಿ ಗೂಡ್ಸ್ ವಾಹನವೊಂದು ವೇಗವಾಗಿ ಬಂದಿದೆ. ರಸ್ತೆ ಬದಿಯಲ್ಲಿದ್ದ ಪೊಲೀಸ್ ಬ್ಯಾರಿಕೇಡ್‌ಗೆ ವಾಹನ ಡಿ*ಕ್ಕಿ ಹೊಡೆದಿದೆ. ಡಿ*ಕ್ಕಿಯ ರಭಸಕ್ಕೆ ಬ್ಯಾರಿಕೇಡ್ ತನ್ನ ಸ್ಥಳದಿಂದ ಕಿತ್ತುಕೊಂಡು ಇನ್ನೊಂದು ರಸ್ತೆಯ ಕಡೆಗೆ ಉರುಳಿದೆ. ಗೂಡ್ಸ್ ವಾಹನ ಮುಂದಕ್ಕೆ ಸಾಗುತ್ತಿದ್ದಂತೆಯೇ ಬ್ಯಾರಿಕೇಡ್ ರಸ್ತೆಯ ಮೇಲೆ ಅಡ್ಡವಾಗಿ ಬಿದ್ದಿದೆ. ಈ ವೇಳೆ ಎದಿರು ರಸ್ತೆಯಲ್ಲಿ ಬರುತ್ತಿದ್ದ ಇತರ ವಾಹನಗಳಿಗೂ ಅಪಾಯ ಎದುರಾಗಿದೆ. ಆದರೆ ಮುಂದಿನ ಕ್ಷಣದಲ್ಲಿ ಸಂಭವಿಸಿದ ಘಟನೆ ಮತ್ತಷ್ಟು ಆತಂಕಕಾರಿಯಾಗಿದೆ.
ಬ್ಯಾರಿಕೇಡ್‌ಗೆ ಸಿಲುಕಿ ರಸ್ತೆಗೆ ಬಿದ್ದ ಸ್ಕೂಟರ್ ಸವಾರರು
Tirupathur - A dramatic accident was caught on camera in the Palnankuppam area of Tirupathur after a speeding goods vehicle crashed into a papaya tree standing by the roadside. The impact uprooted the tree, sending it crashing onto two women travelling on a scooter. The sudden fall of the tree knocked the scooter off balance, throwing the riders onto the road. Fortunately, the women escaped with minor injuries and had a narrow escape from what could have been a fatal accident.
— NextMinute News (@nextminutenews7) November 26, 2026
ಇದೇ ಸಮಯದಲ್ಲಿ ಇಬ್ಬರು ಮಹಿಳೆಯರು ಸ್ಕೂಟರ್‌ಗಳಲ್ಲಿ ಆ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದರು. ರಸ್ತೆಯ ಮೇಲೆ ಉರುಳಿಬಿದ್ದಿದ್ದ ಬ್ಯಾರಿಕೇಡ್ ಅವರ ಸ್ಕೂಟರ್‌ಗಳಿಗೆ ಅಡ್ಡಿಯಾಗಿದೆ. ಬ್ಯಾರಿಕೇಡ್‌ಗೆ ಎಗರಿಬಂದ ಕೂಡಲೇ ಸ್ಕೂಟರ್ ನಿಯಂತ್ರಣ ಕಳೆದುಕೊಂಡು ರಸ್ತೆಯ ಮೇಲೆಯೇ ಉರುಳಿದೆ. ಇದರಿಂದ ಸ್ಕೂಟರ್‌ನಲ್ಲಿದ್ದ ಇಬ್ಬರು ಮಹಿಳೆಯರು ರಸ್ತೆಗೆ ಬಿದ್ದಿದ್ದಾರೆ. ಒಬ್ಬ ಮಹಿಳೆ ರಸ್ತೆಯ ಮೇಲೆ ಬಿದ್ದಿರುವುದು ಸಿಸಿಟಿವಿ ದೃಶ್ಯದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಮತ್ತೊಬ್ಬ ಮಹಿಳೆ ಸ್ಕೂಟರ್ ಬಳಿ ನಿಂತು ಪರಿಸ್ಥಿತಿಯನ್ನ ನಿಭಾಯಿಸಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತದೆ. ಎಲ್ಲವೂ ಕೆಲವೇ ಸೆಕೆಂಡುಗಳಲ್ಲಿ ನಡೆದಿದ್ದು, ಗೂಡ್ಸ್ ವಾಹನದ ಡಿಕ್ಕಿಯಿಂದ ಉಂಟಾದ ಅನಾಹುತಕ್ಕೆ ಅಮಾಯಕ ಮಹಿಳೆಯರು ಬಲಿಯಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅನಾಹುತ!
ಅಪಘಾತದ ತೀವ್ರತೆಯನ್ನ ಗಮನಿಸಿದರೆ ಮಹಿಳೆಯರಿಗೆ ಗಂಭೀರ ಗಾಯಗಳಾಗುವ ಸಾಧ್ಯತೆಯೂ ಇತ್ತು. ಆದರೆ ಅದೃಷ್ಟವಶಾತ್ ಇಬ್ಬರೂ ಮಹಿಳೆಯರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗೂಡ್ಸ್ ವಾಹನದ ಡಿಕ್ಕಿಯಿಂದ ಬ್ಯಾರಿಕೇಡ್ ರಸ್ತೆಗೆ ಬಿದ್ದಿದ್ದು, ಅದೇ ಬ್ಯಾರಿಕೇಡ್ ಮತ್ತೊಂದು ಬದಿಯ ವಾಹನದ ಸವಾರರಿಗೆ ಅಪಾಯ ತಂದೊಡ್ಡಿದೆ. ಒಂದು ವಾಹನ ಮಾಡಿದ ತಪ್ಪಿನಿಂದ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದವರಿಗೆ ಹೇಗೆ ಅನಿರೀಕ್ಷಿತ ತೊಂದರೆ ಎದುರಾಗಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ವೈರಲ್
ಈ ಅಪಘಾತದ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಗೂಡ್ಸ್ ವಾಹನ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆಯುವುದು, ಬ್ಯಾರಿಕೇಡ್ ರಸ್ತೆಗೆ ಉರುಳುವುದು, ಬಳಿಕ ಸ್ಕೂಟರ್‌ನಲ್ಲಿ ಬರುತ್ತಿದ್ದ ಮಹಿಳೆಯರು ನಿಯಂತ್ರಣ ಕಳೆದುಕೊಂಡು ರಸ್ತೆಗೆ ಬೀಳುವುದು ಸೇರಿದಂತೆ ಘಟನೆಯ ಪ್ರಮುಖ ಕ್ಷಣಗಳು ವಿಡಿಯೋದಲ್ಲಿ ಸೆರೆಯಾಗಿವೆ. ಅಪಘಾತದ ನಂತರ ಸ್ಥಳದಲ್ಲಿದ್ದವರು ಮಹಿಳೆಯರ ನೆರವಿಗೆ ಧಾವಿಸಿರುವುದೂ ದೃಶ್ಯದಲ್ಲಿ ಕಾಣಿಸುತ್ತದೆ. ತಮಿಳುನಾಡಿನ ತಿರುಪತ್ತೂರು ಜಿಲ್ಲೆಯ ಪಾಲನಂಕುಪ್ಪಂನಲ್ಲಿ ನಡೆದ ಈ ಘಟನೆ ಇದೀಗ ಗಮನ ಸೆಳೆಯುತ್ತಿದೆ.
ಒಟ್ನಲ್ಲಿ ಗೂಡ್ಸ್ ವಾಹನದ ಡಿಕ್ಕಿಯಿಂದ ಉರುಳಿಬಿದ್ದ ಬ್ಯಾರಿಕೇಡ್ ಇಬ್ಬರು ಮಹಿಳೆಯರ ಪಾಲಿಗೆ ಅಪಾಯವಾಗಿ ಪರಿಣಮಿಸಿದೆ. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ