• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಫ್ರೀಡಂ ಪಾರ್ಕ್‌ನಲ್ಲಿ ಅರಳಿದ ʼಗುಲಾಬಿ ಯೋಧರುʼ: ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಕಲಾವಿದೆ ಅಲಕಾ ರಾವ್‌ ವಿಶಿಷ್ಟ ಕಲಾ ನಮನ

ಫ್ರೀಡಂ ಪಾರ್ಕ್‌ನಲ್ಲಿ ಅರಳಿದ ʼಗುಲಾಬಿ ಯೋಧರುʼ: ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಕಲಾವಿದೆ ಅಲಕಾ ರಾವ್‌ ವಿಶಿಷ್ಟ ಕಲಾ ನಮನ

60 ಅಡಿ ಗುಲಾಬಿ ಸೀರೆಯಲ್ಲಿ ಆಶಾ ಕಾರ್ಯಕರ್ತೆಯರ ಹೋರಾಟದ ಕಥೆ: ಫ್ರೀಡಂ ಪಾರ್ಕ್‌ನಲ್ಲಿ ಗಮನ ಸೆಳೆದ ಗುಲಾಬಿ ಯೋಧರು - ಅಂತ್ಯವಿಲ್ಲದ ಸಮುದ್ರದ ವಿಶಿಷ್ಟ ಕಲಾಕೃತಿ.

Written ByYashaswini V
Published: Nov 26, 2026, 12:01 IST|Updated: Nov 26, 2026, 12:10 IST
joinshare
ಫ್ರೀಡಂ ಪಾರ್ಕ್‌ನಲ್ಲಿ ಅರಳಿದ ʼಗುಲಾಬಿ ಯೋಧರುʼ: ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಕಲಾವಿದೆ ಅಲಕಾ ರಾವ್‌ ವಿಶಿಷ್ಟ ಕಲಾ ನಮನ

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಫ್ರೀಡಂ ಪಾರ್ಕ್‌ನಲ್ಲಿ ಅರಳಿದ ʼಗುಲಾಬಿ ಯೋಧರುʼ: ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಕಲಾವಿದೆ ಅಲಕಾ ರಾವ್‌ ವಿಶಿಷ್ಟ ಕಲಾ ನಮನ

ಫ್ರೀಡಂ ಪಾರ್ಕ್‌ನಲ್ಲಿ ಅರಳಿದ ʼಗುಲಾಬಿ ಯೋಧರುʼ: ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಕಲಾವಿದೆ ಅಲಕಾ ರಾವ್‌ ವಿಶಿಷ್ಟ ಕಲಾ ನಮನ

2

ಕಿತ್ತಳೆಗಿಂತ 5 ಪಟ್ಟು ಹೆಚ್ಚು ವಿಟಮಿನ್ ಸಿ.. ರಕ್ತದಲ್ಲಿನ ಸಕ್ಕರೆ ನಿಯಂತ್ರಿಸುವ ಅದ್ಭುತ ಹಣ್ಣು!

3

ಕ್ಯಾಬ್ & ಬೈಕ್ ಚಾಲಕರ ಟಾರ್ಗೆಟ್ ಮಾಡಿ ಸುಲಿಗೆ ಮಾಡ್ತಿದ್ದ ಗ್ಯಾಂಗ್ ಲಾಕ್

4

ಬೆಂಗಳೂರಿನ 100ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಇಂದು ವಿದ್ಯುತ್‌ ವ್ಯತ್ಯಯ : ಬೆಳಗ್ಗೆಯಿಂದ ಸಂಜೆವರೆಗೂ ಇರಲ್ಲ ಕರೆಂಟ್‌

5

ನವೆಂಬರ್ 27ರಿಂದ ಸತತ 3 ದಿನ ಬ್ಯಾಂಕ್ ಬಂದ್‌.. ಹಣಕಾಸಿನ ಕೆಲಸವಿದ್ರೆ ಇಂದೇ ಮುಗಿಸಿಕೊಳ್ಳಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಗೌರವ ಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಹೋರಾಟ ಇಂದೂ ಸಹ ಮುಂದುವರೆದಿದೆ. ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಕಲಾವಿದೆ ಅಲಕಾ ರಾವ್‌ ʼಗುಲಾಬಿ ಯೋಧರುʼ ಎಂಬ ಹೆಸರಿನಲ್ಲಿ ವಿಶೇಷವಾದ ರೀತಿಯಲ್ಲಿ ಕಲಾ ನಮನವನ್ನು ಸಲ್ಲಿಸಿದ್ದಾರೆ.

ಗುಲಾಬಿ ಯೋಧರು - ಅಂತ್ಯವಿಲ್ಲದ ಸಮುದ್ರ: ಆಶಾ ಕಾರ್ಯಕರ್ತೆಯರ ಕಲಾವಿದೆ ಅಲಕಾ ರಾವ್ ಗೌರವ ನಮನ: 
ಅಂತ್ಯವಿಲ್ಲದ ಸಮುದ್ರ, ಲೆಕ್ಕವಿಲ್ಲದಷ್ಟು ಕೈಗಳು.. ಒಂದೇ ಗುರುತು, ಒಂದೇ ಹೋರಾಟ, ಒಂದೇ ಮುನ್ನಡೆ ಎಂಬರ್ಥದಲ್ಲಿ 60 ಅಡಿ ಗುಲಾಬಿ ಸೀರೆಯಲ್ಲಿ ಆಶಾ ಕಾರ್ಯಕರ್ತೆಯರ ಹೋರಾಟದ ಕಥೆ ಬಣ್ಣಿಸಲಾಗಿದ್ದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಈ ವಿಶಿಷ್ಟ ಕಲಾಕೃತಿ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ.

ಈ ಕಲಾಕೃತಿಯು ಕಲಾವಿದೆ ಅಲಕಾ ರಾವ್ ಅವರ ಸಾರಥ್ಯದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಧೈರ್ಯ, ಒಗ್ಗಟ್ಟು ಮತ್ತು ಹಕ್ಕುಗಳ ಹೋರಾಟಕ್ಕೆ ಅರ್ಪಿಸಿದ ಒಂದು ಗೌರವವಾಗಿದೆ.

ಆರು ಅಡಿ ಅಗಲ ಮತ್ತು ಅರವತ್ತು ಅಡಿ ಉದ್ದದ ಬಟ್ಟೆಯನ್ನು ಒಂದು ದೊಡ್ಡ ಗುಲಾಬಿ ಬಣ್ಣದ ಸೀರೆಯಂತೆ ರೂಪಿಸಲಾಗಿತ್ತು. ಈ ಸೀರೆ ಆಶಾ ಕಾರ್ಯಕರ್ತೆಯರ ಒಗ್ಗಟ್ಟಿನ ಗುರುತು. ಅದು ಅವರ ಅಸ್ಮಿತೆ, ಶಕ್ತಿ ಮತ್ತು ಪರಸ್ಪರರ ಬೆಂಬಲದ ಸಂಕೇತ ಎಂದು ಹೇಳಲಾಗಿದೆ.

ಗುಲಾಬಿ ಬಣ್ಣದ ಕೈಮುದ್ರೆಗಳು: 
ಆಶಾ ಕಾರ್ಯಕರ್ತೆಯರು ಸೀರೆಯ ಮೇಲೆ ಗಾಢ ಗುಲಾಬಿ ಬಣ್ಣದ ಕೈಮುದ್ರೆಗಳನ್ನು ಒತ್ತಿದ್ದಾರೆ. ಪ್ರತಿಯೊಂದು ಕೈ ಮುದ್ರೆಯೂ ಒಬ್ಬೊಬ್ಬ ಮಹಿಳೆಯ ಬದುಕು, ಶ್ರಮ, ಸೇವೆ ಮತ್ತು ಹೋರಾಟವನ್ನು ಪ್ರತಿನಿಧಿಸುತ್ತದೆ. ಕೈಗಳು ಬೇರೆ ಬೇರೆಯಾಗಿರಬಹುದು, ಆದರೆ ಅವುಗಳ ಶಕ್ತಿ ಒಂದಾದಾಗ ದೊಡ್ಡ ಶಕ್ತಿಯಾಗುತ್ತದೆ.

ಎತ್ತಿದ ಕೈಗಳು ಮತ್ತು ಮುಷ್ಟಿಗಳು: 
ಬಟ್ಟೆಯ ಮೇಲ್ಭಾಗದಲ್ಲಿ ಕಪ್ಪು ಬಣ್ಣದ ಎತ್ತಿದ ಕೈಗಳು ಮತ್ತು ಬಿಗಿದ ಮುಷ್ಟಿಗಳ ಮುದ್ರೆಗಳಿವೆ. ಇವು ಧೈರ್ಯ, ಪ್ರತಿಭಟನೆ, ಒಗ್ಗಟ್ಟು ಮತ್ತು ನಮ್ಮ ಧ್ವನಿಯನ್ನು ಕೇಳಿಸಲೇಬೇಕೆಂಬ ಛಲವನ್ನು ತೋರಿಸುತ್ತವೆ. ಇಲ್ಲಿ ಯಾರ ಮುಖವೂ ಇಲ್ಲ. ಏಕೆಂದರೆ ಇದು ಒಬ್ಬಿಬ್ಬರ ಹೋರಾಟವಲ್ಲ, ಸಾವಿರಾರು ಆಶಾ ಕಾರ್ಯಕರ್ತೆಯರ ಹೋರಾಟ.

ಹೆಜ್ಜೆ ಗುರುತುಗಳು: 
ಬಟ್ಟೆಯ ಕೆಳಭಾಗದಲ್ಲಿರುವ ಒಂದೇ ದಿಕ್ಕಿನ ಕಪ್ಪು ಹೆಜ್ಜೆ ಗುರುತುಗಳು ಅವರ ವರ್ಷಗಳ ಸೇವೆ, ದಿನನಿತ್ಯದ ಓಡಾಟ ಮತ್ತು ನ್ಯಾಯದ ಕಡೆಗೆ ಸಾಗುತ್ತಿರುವ ಹೆಜ್ಜೆಗಳನ್ನು ಸೂಚಿಸುತ್ತವೆ.

ಕೊನೆಯೇ ಇಲ್ಲದ ಹೋರಾಟ: 
ಬಟ್ಟೆಯ ಆರಂಭದಲ್ಲಿ ಕೆಲವು ಆಶಾ ಕಾರ್ಯಕರ್ತೆಯರು ಕೈ ಎತ್ತಿ ನಿಲ್ಲುತ್ತಾರೆ. ಮುಂದೆ ಸಾಗಿದಂತೆ ಕೈಮುದ್ರೆಗಳು, ಮುಷ್ಟಿಗಳು ಮತ್ತು ಹೆಜ್ಜೆ ಗುರುತುಗಳೇ ಕಾಣಿಸುತ್ತವೆ. ಕೊನೆಯಲ್ಲಿ ಯಾರೂ ನಿಂತಿರುವುದಿಲ್ಲ. ಇದು ಆಶಾ ಕಾರ್ಯಕರ್ತೆಯರ ಅಂತ್ಯವಿಲ್ಲದ ಸಮುದ್ರದಂತೆ ಕಾಣಬೇಕು. ಅಂದರೆ, ಈ ಹೋರಾಟಕ್ಕೆ ಕೊನೆಯೇ ಇಲ್ಲ.

ಈ ಕಲಾಕೃತಿ ಅಚ್ಚುಕಟ್ಟಾಗಿರುವುದಕ್ಕಿಂತ ಎಲ್ಲರೂ ಸೇರಿ ಮಾಡಿದಂತಿರಬೇಕು. ಏಕೆಂದರೆ ಇದು ಆಶಾ ಕಾರ್ಯಕರ್ತೆಯರ ಬಗ್ಗೆ ಬೇರೆಯವರು ಮಾಡುವ ಕಲೆಯಲ್ಲ; ಆಶಾ ಕಾರ್ಯಕರ್ತೆಯರೇ ತಮ್ಮ ಕೈಗಳಿಂದ ಸೃಷ್ಟಿಸುವ ಕಲಾಕೃತಿ.

ಬಟ್ಟೆ ಅರವತ್ತು ಅಡಿಗೆ ಮುಗಿಯಬಹುದು. ಆದರೆ ಅವರ ಹೋರಾಟಕ್ಕೆ ಕೊನೆಯಿಲ್ಲ!
ಅವರಿಗೆ ಮುಖಗಳಿಲ್ಲದಿರಬಹುದು, ಆದರೆ ಧ್ವನಿ ಇಲ್ಲ ಎಂದಲ್ಲ. ಅವರು ಲೆಕ್ಕವಿಲ್ಲದಷ್ಟು, ಆದರೆ ಹೋರಾಟದಲ್ಲಿ ಒಂದಾಗಿದ್ದಾರೆ. ನಾವು ಇಲ್ಲಿದ್ದೇವೆ. ನಮಗೂ ಬೆಲೆ ಇದೆ. ನಮ್ಮ ಹೋರಾಟ ಮುಂದುವರಿಯುತ್ತದೆ ಎಂಬ ಸಂದೇಶವನ್ನು ಕಲಾಕೃತಿ ಸಾರುತ್ತದೆ. ‌


 

Add Zee News as a Preferred Source
TAGS:
Kannada News
Govt Schemes