• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಕ್ಯಾಬ್ & ಬೈಕ್ ಚಾಲಕರ ಟಾರ್ಗೆಟ್ ಮಾಡಿ ಸುಲಿಗೆ ಮಾಡ್ತಿದ್ದ ಗ್ಯಾಂಗ್ ಲಾಕ್

ಕ್ಯಾಬ್ & ಬೈಕ್ ಚಾಲಕರ ಟಾರ್ಗೆಟ್ ಮಾಡಿ ಸುಲಿಗೆ ಮಾಡ್ತಿದ್ದ ಗ್ಯಾಂಗ್ ಲಾಕ್

ಕ್ಯಾಬ್‌ ಹಾಗೂ ಬೈಕ್‌ ಚಾಲಕರನ್ನೇ ಟಾರ್ಗೆಟ್‌ ಮಾಡಿ ಸುಲಿಗೆ ಮಾಡುತ್ತಿದ್ದ ಗ್ಯಾಂಗ್‌ ಅನ್ನು ವೈಟ್‌ ಫೀಲ್ಡ್‌ ಪೊಲೀಸರು ಬಂಧಿಸಿದ್ದಾರೆ.

Written ByYashaswini V
Published: Nov 26, 2026, 11:26 IST|Updated: Nov 26, 2026, 11:27 IST
joinshare
ಕ್ಯಾಬ್ & ಬೈಕ್ ಚಾಲಕರ ಟಾರ್ಗೆಟ್ ಮಾಡಿ ಸುಲಿಗೆ ಮಾಡ್ತಿದ್ದ ಗ್ಯಾಂಗ್ ಲಾಕ್

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಕಿತ್ತಳೆಗಿಂತ 5 ಪಟ್ಟು ಹೆಚ್ಚು ವಿಟಮಿನ್ ಸಿ.. ರಕ್ತದಲ್ಲಿನ ಸಕ್ಕರೆ ನಿಯಂತ್ರಿಸುವ ಅದ್ಭುತ ಹಣ್ಣು!

ಕಿತ್ತಳೆಗಿಂತ 5 ಪಟ್ಟು ಹೆಚ್ಚು ವಿಟಮಿನ್ ಸಿ.. ರಕ್ತದಲ್ಲಿನ ಸಕ್ಕರೆ ನಿಯಂತ್ರಿಸುವ ಅದ್ಭುತ ಹಣ್ಣು!

2

ಕ್ಯಾಬ್ & ಬೈಕ್ ಚಾಲಕರ ಟಾರ್ಗೆಟ್ ಮಾಡಿ ಸುಲಿಗೆ ಮಾಡ್ತಿದ್ದ ಗ್ಯಾಂಗ್ ಲಾಕ್

3

ಬೆಂಗಳೂರಿನ 100ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಇಂದು ವಿದ್ಯುತ್‌ ವ್ಯತ್ಯಯ : ಬೆಳಗ್ಗೆಯಿಂದ ಸಂಜೆವರೆಗೂ ಇರಲ್ಲ ಕರೆಂಟ್‌

4

ನವೆಂಬರ್ 27ರಿಂದ ಸತತ 3 ದಿನ ಬ್ಯಾಂಕ್ ಬಂದ್‌.. ಹಣಕಾಸಿನ ಕೆಲಸವಿದ್ರೆ ಇಂದೇ ಮುಗಿಸಿಕೊಳ್ಳಿ!

5

ದಿನ ಭವಿಷ್ಯ 26-11-2026: ಗುರುವಾರದಂದು ಮೃಗಶಿರಾ ನಕ್ಷತ್ರದಲ್ಲಿ ಸಿದ್ಧ ಯೋಗ.. ಈ ರಾಶಿಯವರಿಗೆ ಕಂಕಣ ಭಾಗ್ಯ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಕ್ಯಾಬ್‌ ಮತ್ತು ಬೈಕ್‌ ಚಾಲಕರನ್ನೇ ಗುರಿಯಾಗಿಸಿ ಅವರಿಂದ ಹಣ ವಸೂಲಿ ಮಾಡುತ್ತಿದ್ದ ನಾಲ್ವರು ಆರೋಪಿಗಳ ಹೆಡೆಮುರಿ ಕಟ್ಟಿರುವ ವೈಟ್ ಫೀಲ್ಡ್ ಪೊಲೀಸರು ಅವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಬಂಧಿತ ಆರೋಪಿಗಳನ್ನು ಮನೋಜ್, ಪ್ರಿತಂ ಪ್ರಕಾಶ್, ಸೈಯದ್ ಶಫಿ, ಅಖಿಲೇಶ್ ಎಂದು ಹೇಳಲಾಗಿದೆ.

ಸುಲಿಗೆ ಮಾಡ್ತಿದ್ದ ಗ್ಯಾಂಗ್ ಲಾಕ್: 
ಬೆಂಗಳೂರಿನಲ್ಲಿ ಕ್ಯಾಬ್‌ ಹಾಗೂ ಬೈಕ್‌ ಚಾಲಕರಿಂದ ಸುಲಿಗೆ ಮಾಡುತ್ತಿದ್ದ ಗ್ಯಾಂಗ್‌ ಬಂಧನದ ಬಗ್ಗೆ ಬೆಂಗಳೂರು ಪೂರ್ವ ಕಮಿಷನರ್ ಡಾ. ಹರ್ಷಾ ಪ್ರತಿಕ್ರಿಯೆ ನೀಡಿದ್ದು, ಮುಖ್ಯ ಆಯುಕ್ತರು ಸಂಘಟಿತ ಅಪರಾಧ ಮಟ್ಟ ಹಾಕಲು ಸೂಚನೆ ನೀಡಿದ್ದರು. ಈ ಹಿನ್ನಲೆಯಲ್ಲಿ ನಾವು ರೌಡಿಶೀಟರ್‌ಗಳ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ಮಾಡಿದ್ದೆವು. ನಾವು ಅವರನ್ನ ತನಿಖೆ ಮಾಡಿದಾಗ ಹಲವು ವಿಚಾರ ಬಯಲಾಗಿದೆ. ಈ ಸಂದರ್ಭದಲ್ಲಿ ಬೆಂಗಳೂರಿನ ಹೊರಭಾಗದಲ್ಲಿ ಸುಲಿಗೆ ಮಾಡುವ ಗ್ಯಾಂಗ್ ಇರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು ಎಂದು ತಿಳಿಸಿದರು.

ರ್ಯಾಪಿಡೋ ಚಾಲಕನಿಂದ ದೂರು:
ನಗರದ ಹೊರಭಾಗದಲ್ಲಿ ಸುಲಿಗೆ ಮಾಡುವ ಗ್ಯಾಂಗ್ ಬಗ್ಗೆ ಮೊಹಮ್ಮದ್ ನಿಸಾರ್ ಎಂಬಾ ರ್ಯಾಪಿಡೋ ಚಾಲಕನಿಂದ ದೂರು ಬಂದಿತ್ತು. ನಳ್ಳೂರು ಹಳ್ಳಿಯ ನಿರ್ಜನ ಪ್ರದೇಶದಲ್ಲಿ ರ್ಯಾಪಿಡೋ ಚಾಲಕ ಸಾಗುತ್ತಿದ್ದ ಸಂದರ್ಭದಲ್ಲಿ ವ್ಯಾಗನರ್ ಕಾರಿನಲ್ಲಿ ಬಂದಿದ್ದ ಆರೋಪಿಗಳು ಆತನನ್ನು ಅಡ್ಡಗಟ್ಟಿ ಹ*ಲ್ಲೆ ಮಾಡಿ ಹಣ ಹಾಕಿಸಿಕೊಂಡಿದ್ದರು. ಈ ಬಗ್ಗೆ ಮೊಹಮ್ಮದ್‌ ನಿಸಾರ್‌ ದೂರು ದಾಖಲಿಸಿದ್ದರು. ದೂರು ಬಂದ ತಕ್ಷಣ ನಮ್ಮ ಪೊಲೀಸರು ಅಲರ್ಟ್ ಆಗಿ ಕಾರ್ಯಾಚರಣೆ ಮಾಡಿದ್ದರು. ತಕ್ಷಣ ಘಟನೆ ಸ್ಥಳಕ್ಕೆ‌ ಹೋದಾಗ ಗ್ಯಾಂಗ್ ಸುಲಿಗೆ ಮಾಡಿ ತಪ್ಪಿಸಿಕೊಂಡಿದ್ದರು. 

ನಾವು ಕಾರಿನ ರೆಂಟಲ್ ಅಗ್ರಿಗೇಟರ್ ಬಗ್ಗೆ ಮಾಹಿತಿ ಕಲೆ ಹಾಕಿ, ದರೋಡೆಕೋರರನ್ನು ಬಂಧಿಸಲು ಎರಡು ಮೂರು ಕಿಲೋ ಮೀಟರ್ ಚೇಸ್ ಮಾಡಿದ್ದೆವು. ಆದರೆ ವೇಗವಾಗಿ ಹೋಗ್ತಾ ಇದ್ದ ಕಾರಣ ಇಂಜಿನ್ ಆಫ್ ಮಾಡಿಸಿದ್ವಿ. ಆಗ ಎಂಜಿನ್ ಸರಿ ಮಾಡಲು ಕಾರಿನಿಂದ ಇಳಿದಾಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ವೇಳೆ ಮೂರು ಜನರನ್ನು ಅಲ್ಲೇ ಅರೆಸ್ಟ್ ಮಾಡಿದ್ದೆವರು. ಒಬ್ಬ ತಪ್ಪಿಸಿಕೊಂಡಿದ್ದ, ಆತನನ್ನೂ ಹುಡುಕಿ ಬಂಧನ ಮಾಡಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಮೂರು ತಿಂಗಳಿನಲ್ಲಿ ಮೂವತ್ತು ಸುಲಿಗೆ:
ಬಂಧಿತ ನಾಲ್ಕು ಜನರು ವೈಟ್ ಫಿಲ್ಡ್ ನ ಗಾಂಧಿಪುರದ ನಿವಾಸಿಗಳಾಗಿದ್ದು,  ಆರೋಪಿಗಳೆಲ್ಲರೂ ಮಾದಕ ದ್ರವ್ಯದ ವ್ಯಸಕ್ಕೆ ಬಿದ್ದಿದ್ದರು, ನಂತರ ರಾಬರಿ ಮಾಡ್ತಾ ಇದ್ರು. ಸುಲಿಗೆ ಮಾಡಿದ್ದ ಹಣವನ್ನ ಡ್ರಗ್ ಪೆಡ್ಲರ್ ಒಬ್ಬನಿಗೆ ವರ್ಗಾವಣೆ ಮಾಡಿದ್ದರು. ಮೂರು ತಿಂಗಳಿನಲ್ಲಿ ಮೂವತ್ತು ಸುಲಿಗೆ ಮಾಡಿದ್ದಾಗಿ ಅವರು ಹೇಳಿದ್ದಾರೆ. ನಾವು ಸಾಕ್ಷ್ಯ ಕಲೆ ಹಾಕಿದಾಗ ಹನ್ನೊಂದು ಘಟನೆ ನಮಗೆ ಗೊತ್ತಾಗಿದೆ. ಚಿಕ್ಕ ಅಮೌಂಟ್ ಹೋಗಿದೆ ಅಂತ ತಲೆ ಕಡೆಸಿಕೊಂಡಿರಲಿಲ್ಲ. ವಿಕ್ಟಿಮ್ ಹುಡುಕಿ ಮತ್ತೆ ಎರಡು ಪ್ರಕರಣ ದಾಖಲು ಮಾಡಿದ್ದೆವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 
 

Add Zee News as a Preferred Source
TAGS:
Crime
Kannada News