• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಯುಟಿಲಿಟಿ
  • /ಟಿವಿ, ಮೊಬೈಲ್ ನೋಡುತ್ತಾ ಊಟ ಮಾಡ್ತೀರಾ? ಹಾಗಿದ್ರೆ ಇಂದಿನಿಂದಲೇ ಈ ಟಿಪ್ಸ್‌ ಫಾಲೋ ಮಾಡಿ

ಟಿವಿ, ಮೊಬೈಲ್ ನೋಡುತ್ತಾ ಊಟ ಮಾಡ್ತೀರಾ? ಹಾಗಿದ್ರೆ ಇಂದಿನಿಂದಲೇ ಈ ಟಿಪ್ಸ್‌ ಫಾಲೋ ಮಾಡಿ

ಊಟ ಮಾಡುವಾಗ ಟಿವಿ ಅಥವಾ ಮೊಬೈಲ್ ನೋಡುವುದರಿಂದ ಆಹಾರದ ಮೇಲಿನ ಗಮನ ಕಡಿಮೆಯಾಗಬಹುದು. ಆಯುರ್ವೇದದ ಆಹಾರ ಕ್ರಮದ ಪ್ರಕಾರ, ಶಾಂತವಾಗಿ ಕುಳಿತು ಆಹಾರವನ್ನ ಚೆನ್ನಾಗಿ ಅಗಿದು ತಿನ್ನುವುದು ಉತ್ತಮ. ಊಟದಲ್ಲಿ ಆರು ರುಚಿಗಳಿರುವ ಆಹಾರಕ್ಕೆ ಆದ್ಯತೆ ನೀಡುವುದು, ರಾತ್ರಿ ಹಗುರವಾದ ಊಟ ಮಾಡುವುದು, ಮಲಗುವ 2–3 ಗಂಟೆಗಳ ಮುಂಚೆ ಆಹಾರ ಸೇವಿಸುವುದು ಹಾಗೂ ಊಟದ ಬಳಿಕ ಸ್ವಲ್ಪ ನಡೆಯುವುದು ಆರೋಗ್ಯಕರ ಅಭ್ಯಾಸಗಳಾಗಿವೆ. ಊಟದ ತಕ್ಷಣ ಭಾರವಾದ ವ್ಯಾಯಾಮ ಮಾಡುವುದನ್ನೂ ತಪ್ಪಿಸುವಂತೆ ಸಲಹೆ ನೀಡಲಾಗಿದೆ.

Written ByPuttaraj K Alur
Published: Oct 31, 2026, 07:35 PM IST|Updated: Oct 31, 2026, 07:46 PM IST
joinshare
ಟಿವಿ, ಮೊಬೈಲ್ ನೋಡುತ್ತಾ ಊಟ ಮಾಡ್ತೀರಾ? ಹಾಗಿದ್ರೆ ಇಂದಿನಿಂದಲೇ ಈ ಟಿಪ್ಸ್‌ ಫಾಲೋ ಮಾಡಿ
Image Credit: Eating Habits

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಜನರೇ ಮಳೆ ನಿಂತಿಲ್ಲ.. ಮತ್ತೆ ಅಬ್ಬರಿಸಲಿದ್ದಾನೆ ವರಣ : ನವೆಂಬರ್ 7 ರವರೆಗೆ ರಾಜ್ಯದ ಈ ಭಾಗಕ್ಕೆ ಅಲರ್ಟ್‌ ಘೋಷಣೆ

ಜನರೇ ಮಳೆ ನಿಂತಿಲ್ಲ.. ಮತ್ತೆ ಅಬ್ಬರಿಸಲಿದ್ದಾನೆ ವರಣ : ನವೆಂಬರ್ 7 ರವರೆಗೆ ರಾಜ್ಯದ ಈ ಭಾಗಕ್ಕೆ ಅಲರ್ಟ್‌ ಘೋಷಣೆ

2

SBI FD: 444 ದಿನಗಳ ಎಫ್‌ಡಿಯಲ್ಲಿ ₹2.50 ಲಕ್ಷ ಹೂಡಿಕೆ ಮಾಡಿದ್ರೆ ಎಷ್ಟು ಬಡ್ಡಿ ಸಿಗುತ್ತೆ?

3

ಟಿವಿ, ಮೊಬೈಲ್ ನೋಡುತ್ತಾ ಊಟ ಮಾಡ್ತೀರಾ? ಹಾಗಿದ್ರೆ ಇಂದಿನಿಂದಲೇ ಈ ಟಿಪ್ಸ್‌ ಫಾಲೋ ಮಾಡಿ

4

ರೈತರ ಕಲ್ಯಾಣಕ್ಕಾಗಿ ಹಾಲಿನ ದರ ಹೆಚ್ಚಳ ಮಾಡಲಾಗಿದೆ : ಸಚಿವ ರಘುಮೂರ್ತಿ ಸಮರ್ಥನೆ

5

Viral Video: ಐಫೋನ್ ಬದಲು ಮಗಳಿಗೆ ಕೀಪ್ಯಾಡ್ ಫೋನ್ ಕೊಡಿಸಿದ ಅಪ್ಪ! ಪುಟ್ಟ ಕಂದನ ಖುಷಿಗೆ ಮನಸೋತ ನೆಟ್ಟಿಗರು

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Eating Habits: ಟಿವಿ ವೀಕ್ಷಿಸುತ್ತಾ ಅಥವಾ ಮೊಬೈಲ್‌ನಲ್ಲಿ ವಿಡಿಯೋ ನೋಡುತ್ತಾ ಊಟ ಮಾಡುವ ಅಭ್ಯಾಸ ಅನೇಕರಲ್ಲಿದೆ. ಕೆಲವರು ಊಟದ ಸಮಯದಲ್ಲಿ ಧಾರಾವಾಹಿ, ಸಿನಿಮಾ ಅಥವಾ ಸುದ್ದಿಗಳನ್ನ ವೀಕ್ಷಿಸಿದರೆ, ಇನ್ನೂ ಕೆಲವರು ಮೊಬೈಲ್‌ನಲ್ಲಿ ತೊಡಗಿಕೊಂಡೇ ಆಹಾರ ಸೇವಿಸುತ್ತಾರೆ. ಆದರೆ ಆಹಾರ ಸೇವಿಸುವಾಗ ಅದರ ಮೇಲೆಯೇ ಗಮನ ಹರಿಸುವುದು ಮುಖ್ಯವೆಂದು ಆಯುರ್ವೇದದ ಆಹಾರ ಪದ್ಧತಿಗಳು ತಿಳಿಸುತ್ತವೆ. ಆಹಾರವನ್ನ ಹೇಗೆ ಸೇವಿಸುತ್ತೇವೆ ಎಂಬುದೂ ನಮ್ಮ ದೈನಂದಿನ ಆಹಾರ ಕ್ರಮದಲ್ಲಿ ಮಹತ್ವ ಹೊಂದಿದೆ.

ಊಟ ಮಾಡುವಾಗ ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಆಹಾರವನ್ನ ಸರಿಯಾಗಿ ಅಗಿಯುವುದರ ಕಡೆಗೆ ಗಮನ ಕಡಿಮೆಯಾಗಬಹುದು. ಹೀಗಾಗಿ ಊಟದ ಸಮಯದಲ್ಲಿ ಶಾಂತ ವಾತಾವರಣಕ್ಕೆ ಆದ್ಯತೆ ನೀಡುವುದು, ಆಹಾರವನ್ನ ನಿಧಾನವಾಗಿ ಅಗಿಯುವುದು ಮತ್ತು ನಿಯಮಿತ ಆಹಾರ ಕ್ರಮವನ್ನ ಪಾಲಿಸುವುದಕ್ಕೆ ಮಹತ್ವ ನೀಡಲಾಗಿದೆ.

ಟಿವಿ, ಮೊಬೈಲ್ ನೋಡುತ್ತಾ ಊಟ ಮಾಡುವುದು ತಪ್ಪಿಸಿ

ಆಯುರ್ವೇದದ ಪ್ರಕಾರ, ಆಹಾರ ಸೇವಿಸುವಾಗ ಶಾಂತವಾದ ಮತ್ತು ಸ್ವಚ್ಛವಾದ ಸ್ಥಳದಲ್ಲಿ ಕುಳಿತುಕೊಳ್ಳುವುದು ಉತ್ತಮ. ಊಟದ ಸಮಯದಲ್ಲಿ ಟಿವಿ ನೋಡುವುದು, ಮೊಬೈಲ್ ಬಳಸುವುದು ಅಥವಾ ಜೋರಾಗಿ ಮಾತನಾಡುವುದನ್ನ ತಪ್ಪಿಸುವಂತೆ ಸಲಹೆ ನೀಡಲಾಗಿದೆ. ಆಹಾರದ ಕಡೆಗೆ ಗಮನ ಹರಿಸಿ, ಪ್ರತಿಯೊಂದು ತುತ್ತನ್ನೂ ಚೆನ್ನಾಗಿ ಅಗಿದು ತಿನ್ನಬೇಕು. ತುಂಬಾ ವೇಗವಾಗಿ ಆಹಾರ ನುಂಗುವುದನ್ನೂ ತಪ್ಪಿಸಬೇಕು.

ಅತಿಯಾಗಿ ಬಿಸಿಯಾದ ಅಥವಾ ತಣ್ಣನೆಯ ಆಹಾರ ಬೇಡ

ಆಹಾರ ಸೇವಿಸುವಾಗ ಅದರ ತಾಪಮಾನದ ಬಗ್ಗೆಯೂ ಗಮನ ನೀಡಬೇಕು. ತುಂಬಾ ಬಿಸಿಯಾದ ಆಹಾರ ಅಥವಾ ಫ್ರಿಜ್‌ನಿಂದ ತೆಗೆದ ಅತಿಯಾದ ತಣ್ಣನೆಯ ಆಹಾರದ ಬದಲಿಗೆ, ಸಾಮಾನ್ಯ ತಾಪಮಾನದಲ್ಲಿರುವ ಅಥವಾ ಸ್ವಲ್ಪ ಬೆಚ್ಚಗಿರುವ ಆಹಾರವನ್ನ ಆಯ್ಕೆ ಮಾಡಿಕೊಳ್ಳುವಂತೆ ಆಯುರ್ವೇದ ಪದ್ಧತಿ ಸೂಚಿಸುತ್ತದೆ.

ಊಟದಲ್ಲಿ ಆರು ರುಚಿಗಳಿಗೆ ಆದ್ಯತೆ ನೀಡಿ

ಆಯುರ್ವೇದದಲ್ಲಿ ಸಿಹಿ, ಹುಳಿ, ಉಪ್ಪು, ಖಾರ, ಕಹಿ ಮತ್ತು ಒಗರು ಎಂಬ ಆರು ರುಚಿಗಳನ್ನ ಉಲ್ಲೇಖಿಸಲಾಗಿದೆ. ಊಟದಲ್ಲಿ ವಿವಿಧ ರುಚಿಗಳನ್ನ ಒಳಗೊಂಡ ಆಹಾರ ಪದಾರ್ಥಗಳನ್ನ ಸೇರಿಸಿಕೊಳ್ಳುವುದಕ್ಕೆ ಮಹತ್ವ ನೀಡಲಾಗಿದೆ. ಹಣ್ಣುಗಳು, ಬೇಳೆಕಾಳುಗಳು, ತರಕಾರಿಗಳು ಮತ್ತು ಸಲಾಡ್‌ಗಳನ್ನ ಆಹಾರದಲ್ಲಿ ಸೇರಿಸುವ ಮೂಲಕ ಊಟದಲ್ಲಿ ವೈವಿಧ್ಯತೆ ಕಾಪಾಡಿಕೊಳ್ಳಬಹುದು.

ಊಟದ ಸಮಯದಲ್ಲಿ ನೀರು ಕುಡಿಯುವ ಕ್ರಮ

ಊಟ ಮಾಡುವುದಕ್ಕಿಂತ ಸ್ವಲ್ಪ ಮೊದಲು ಅಥವಾ ಊಟ ಮುಗಿಸಿದ ತಕ್ಷಣ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದನ್ನ ತಪ್ಪಿಸುವಂತೆ ವೈದ್ಯರ ಸಲಹೆ ನೀಡುತ್ತಾರೆ. ಊಟದ ಸಮಯದಲ್ಲಿ ಬಾಯಾರಿಕೆಯಾದರೆ ಸ್ವಲ್ಪ ಸ್ವಲ್ಪವಾಗಿ ನೀರು ಕುಡಿಯುವುದು ಉತ್ತಮವೆಂದು ಹೇಳಲಾಗಿದೆ.

ರಾತ್ರಿ ಊಟ ಹೇಗಿರಬೇಕು?

ಹಗಲಿನ ಊಟಕ್ಕೆ ಹೋಲಿಸಿದರೆ ರಾತ್ರಿ ಊಟವನ್ನ ಹಗುರವಾಗಿ ಸೇವಿಸುವುದು ಉತ್ತಮವೆಂದು ತಿಳಿಸಲಾಗಿದೆ. ಮಲಗುವ ಸಮಯಕ್ಕೂ ಊಟಕ್ಕೂ ನಡುವೆ ಸಾಕಷ್ಟು ಅಂತರವಿರುವಂತೆ ನೋಡಿಕೊಳ್ಳಬೇಕು. ವಿಶೇಷವಾಗಿ ಮಲಗುವ ಕನಿಷ್ಠ ಎರಡರಿಂದ ಮೂರು ಗಂಟೆಗಳ ಮುಂಚಿತವಾಗಿ ರಾತ್ರಿ ಊಟ ಮಾಡುವ ಅಭ್ಯಾಸ ಬೆಳೆಸಿಕೊಳ್ಳುವಂತೆ ಸೂಚಿಸಲಾಗಿದೆ.

ಊಟದ ನಂತರ ಸ್ವಲ್ಪ ನಡೆಯಿರಿ

ಊಟ ಮಾಡಿದ ತಕ್ಷಣ ಮಲಗುವುದು ಅಥವಾ ನಿದ್ರೆಗೆ ಜಾರುವುದನ್ನ ತಪ್ಪಿಸುವಂತೆ ಆಯುರ್ವೇದದ ಆಹಾರ ಕ್ರಮದಲ್ಲಿ ಸಲಹೆ ನೀಡಲಾಗಿದೆ. ರಾತ್ರಿ ಊಟದ ಬಳಿಕ ಸ್ವಲ್ಪ ಸಮಯ ಆರಾಮವಾಗಿ ನಡೆಯಬಹುದು. ಸುಮಾರು 1000 ಹೆಜ್ಜೆ ನಡೆಯುವ ಅಭ್ಯಾಸವನ್ನ ರೂಡಿಸಿಕೊಳ್ಳುವುದು ಉತ್ತಮವೆಂದು ತಿಳಿಸಲಾಗಿದೆ.

ಊಟದ ತಕ್ಷಣ ಭಾರವಾದ ಕೆಲಸ ಬೇಡ

ಊಟ ಮುಗಿಸಿದ ತಕ್ಷಣ ಜಿಮ್‌ಗೆ ಹೋಗುವುದು, ಭಾರವಾದ ತೂಕ ಎತ್ತುವುದು ಅಥವಾ ಕಠಿಣ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದನ್ನ ತಪ್ಪಿಸುವಂತೆ ತಿಳಿಸಲಾಗಿದೆ. ಆಹಾರ ಸೇವಿಸಿದ ಬಳಿಕ ದೇಹಕ್ಕೆ ಸ್ವಲ್ಪ ವಿಶ್ರಾಂತಿ ನೀಡುವುದು ಉತ್ತಮವೆಂದು ಹೇಳಲಾಗಿದೆ.  

ಒಟ್ನಲ್ಲಿ ಊಟದ ಸಮಯದಲ್ಲಿ ಟಿವಿ ಮತ್ತು ಮೊಬೈಲ್‌ನಿಂದ ದೂರವಿದ್ದು, ಆಹಾರದ ಮೇಲೆ ಗಮನ ಹರಿಸುವುದು, ಚೆನ್ನಾಗಿ ಅಗಿಯುವುದು, ಸಮತೋಲಿತ ಆಹಾರಕ್ಕೆ ಆದ್ಯತೆ ನೀಡುವುದು ಹಾಗೂ ಊಟದ ನಂತರದ ಅಭ್ಯಾಸಗಳನ್ನ ಸರಿಯಾಗಿ ಪಾಲಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ತಜ್ಞ ಮೂಲಗಳ ಮಾಹಿತಿಯನ್ನ ಆಧರಿಸಿದೆ. ಇದನ್ನ Zee Kannada News ದೃಢಪಡಿಸುವುದಿಲ್ಲ. ಇಲ್ಲಿನ ಸಲಹೆಗಳನ್ನ ಪಾಲಿಸುವ ಮುನ್ನ ತಜ್ಞರ ಸಲಹೆ ಪಡೆಯುವುದು ಉತ್ತಮ.)

Add Zee News as a Preferred Source
TAGS:
Health Tips
Kannada News