• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಜನರೇ ಮಳೆ ನಿಂತಿಲ್ಲ.. ಮತ್ತೆ ಅಬ್ಬರಿಸಲಿದ್ದಾನೆ ವರಣ : ನವೆಂಬರ್ 7 ರವರೆಗೆ ರಾಜ್ಯದ ಈ ಭಾಗಕ್ಕೆ ಅಲರ್ಟ್‌ ಘೋಷಣೆ

ಜನರೇ ಮಳೆ ನಿಂತಿಲ್ಲ.. ಮತ್ತೆ ಅಬ್ಬರಿಸಲಿದ್ದಾನೆ ವರಣ : ನವೆಂಬರ್ 7 ರವರೆಗೆ ರಾಜ್ಯದ ಈ ಭಾಗಕ್ಕೆ ಅಲರ್ಟ್‌ ಘೋಷಣೆ

ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಕೊಂಚ ಬಿಡುವು ಕೊಟ್ಟಿದ್ದ ಮಳೆರಾಯ, ಈಗ ಮತ್ತೆ ಅಬ್ಬರಿಸಲು ವೇದಿಕೆ ಸಜ್ಜಾಗಿದೆ.. ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಏಕಕಾಲಕ್ಕೆ ಉಂಟಾಗಿರುವ ಹವಾಮಾನ ವೈಪರೀತ್ಯದ ಪರಿಣಾಮವಾಗಿ ಕರ್ನಾಟಕದಲ್ಲಿ ನವೆಂಬರ್ ಮೊದಲ ವಾರ ವರುಣನ ಅಬ್ಬರ ಜೋರಾಗಿರಲಿದೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Written ByKrishna NK
Published: Oct 31, 2026, 08:10 PM IST|Updated: Oct 31, 2026, 08:38 PM IST
joinshare
ಜನರೇ ಮಳೆ ನಿಂತಿಲ್ಲ.. ಮತ್ತೆ ಅಬ್ಬರಿಸಲಿದ್ದಾನೆ ವರಣ : ನವೆಂಬರ್ 7 ರವರೆಗೆ ರಾಜ್ಯದ ಈ ಭಾಗಕ್ಕೆ ಅಲರ್ಟ್‌ ಘೋಷಣೆ
Image Credit: Rain News

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಜನರೇ ಮಳೆ ನಿಂತಿಲ್ಲ.. ಮತ್ತೆ ಅಬ್ಬರಿಸಲಿದ್ದಾನೆ ವರಣ : ನವೆಂಬರ್ 7 ರವರೆಗೆ ರಾಜ್ಯದ ಈ ಭಾಗಕ್ಕೆ ಅಲರ್ಟ್‌ ಘೋಷಣೆ

ಜನರೇ ಮಳೆ ನಿಂತಿಲ್ಲ.. ಮತ್ತೆ ಅಬ್ಬರಿಸಲಿದ್ದಾನೆ ವರಣ : ನವೆಂಬರ್ 7 ರವರೆಗೆ ರಾಜ್ಯದ ಈ ಭಾಗಕ್ಕೆ ಅಲರ್ಟ್‌ ಘೋಷಣೆ

2

SBI FD: 444 ದಿನಗಳ ಎಫ್‌ಡಿಯಲ್ಲಿ ₹2.50 ಲಕ್ಷ ಹೂಡಿಕೆ ಮಾಡಿದ್ರೆ ಎಷ್ಟು ಬಡ್ಡಿ ಸಿಗುತ್ತೆ?

3

ಟಿವಿ, ಮೊಬೈಲ್ ನೋಡುತ್ತಾ ಊಟ ಮಾಡ್ತೀರಾ? ಹಾಗಿದ್ರೆ ಇಂದಿನಿಂದಲೇ ಈ ಟಿಪ್ಸ್‌ ಫಾಲೋ ಮಾಡಿ

4

ರೈತರ ಕಲ್ಯಾಣಕ್ಕಾಗಿ ಹಾಲಿನ ದರ ಹೆಚ್ಚಳ ಮಾಡಲಾಗಿದೆ : ಸಚಿವ ರಘುಮೂರ್ತಿ ಸಮರ್ಥನೆ

5

Viral Video: ಐಫೋನ್ ಬದಲು ಮಗಳಿಗೆ ಕೀಪ್ಯಾಡ್ ಫೋನ್ ಕೊಡಿಸಿದ ಅಪ್ಪ! ಪುಟ್ಟ ಕಂದನ ಖುಷಿಗೆ ಮನಸೋತ ನೆಟ್ಟಿಗರು

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Karnataka Rains : ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತವು ಆಂಧ್ರ ಕರಾವಳಿಯತ್ತ ಚಲಿಸುತ್ತಿದ್ದು, ಇನ್ನೊಂದೆಡೆ ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳಿಯ ಎಫೆಕ್ಟ್‌ ಕೂಡ ರಾಜ್ಯದ ಮೇಲಾಗುತ್ತಿದೆ.. ಪರಿಣಾಮವಾಗಿ ನವೆಂಬರ್ 1 ರಿಂದ ನವೆಂಬರ್ 7 ರವರೆಗೆ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವೆಡೆ ಗುಡುಗು, ಮಿಂಚು ಮತ್ತು ಗಂಟೆಗೆ 40 ಕಿಲೋಮೀಟರ್ ವೇಗದ ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ..  

ಹೌದು.. ರಾಜ್ಯದಲ್ಲಿ ಹಿಂಗಾರು ಮಾರುತಗಳ ಚಲನೆಗೆ ಪೂರಕ ವಾತಾವರಣ ಸೃಷ್ಟಿಯಾಗಿದ್ದು, ಸಮುದ್ರದಲ್ಲಿ ಉಂಟಾಗಿರುವ ಎರಡು ಪ್ರಮುಖ ಹವಾಮಾನ ವಿದ್ಯಮಾನಗಳು ರಾಜ್ಯವನ್ನು ಪ್ರವೇಶಿಸಲಿವೆ. ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಆಗ್ನೇಯ ಬಂಗಾಳಕೊಲ್ಲಿಯಲ್ಲಿ ತೀವ್ರಗೊಂಡು ಆಂಧ್ರ ಕರಾವಳಿಯತ್ತ ಸಾಗುತ್ತಿದೆ. ಅದೇ ವೇಳೆ ಅರಬ್ಬಿ ಸಮುದ್ರದ ಕಡೆಯಿಂದ ಬೀಸುತ್ತಿರುವ ಗಾಳಿಯು ಈ ತೇವಾಂಶವನ್ನು ರಾಜ್ಯದ ಕಡೆಗೆ ಸೆಳೆಯುತ್ತಿದ್ದು, ನವೆಂಬರ್ ಮೊದಲ ವಾರ ರಾಜ್ಯಾದ್ಯಂತ ಮಳೆ ಆರ್ಭಟಕ್ಕೆ ಕಾರಣವಾಗಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.

ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಈಗಾಗಲೇ ಮೋಡ ಕವಿದ ವಾತಾವರಣವಿದ್ದು, ನವೆಂಬರ್ 2 ರಿಂದ ಮಳೆಯ ತೀವ್ರತೆ ಹೆಚ್ಚಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ಗಂಟೆಗಟ್ಟಲೆ ಧಾರಾಕಾರ ಮಳೆ ಸುರಿಯುವ ಸಾಧ್ಯತೆಯಿದೆ. ಇದರ ಜೊತೆಗೆ ಮೈದಾನ ಹಾಗೂ ಒಳನಾಡು ಜಿಲ್ಲೆಗಳಲ್ಲಿ ಗುಡುಗು-ಮಿಂಚಿನೊಂದಿಗೆ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಕಟಾವಿಗೆ ಬಂದಿರುವ ಬೆಳೆಗಳನ್ನು ಸಂರಕ್ಷಿಸಿಕೊಳ್ಳಲು ಅನ್ನದಾತರು ಜಾಗರೂಕರಾಗಿರಬೇಕೆಂದು ಎಚ್ಚರಿಸಲಾಗಿದೆ.

ಉತ್ತರ ಒಳನಾಡಿನ ಕಲಬುರಗಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲೂ ನವೆಂಬರ್ 2ರ ಮಧ್ಯಾಹ್ನದ ಬಳಿಕ ಮಳೆಯ ವಾತಾವರಣ ನಿರ್ಮಾಣವಾಗಲಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ 48 ಗಂಟೆಗಳ ಕಾಲ ಮುಂಜಾನೆ ಮಂಜು ಹಾಗೂ ಒಣ ಹವೆ ಇರಲಿದ್ದು, ನವೆಂಬರ್ 2 ರಿಂದ ದಟ್ಟ ಮೋಡ ಕವಿದು ಸಂಜೆ ಅಥವಾ ರಾತ್ರಿ ವೇಳೆ ಸಾಧಾರಣದಿಂದ ಉತ್ತಮ ಮಳೆಯಾಗುವ ಸಾಧ್ಯತೆಯಿದೆ. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಮತ್ತು ಮಂಡ್ಯ ಭಾಗದಲ್ಲೂ ನವೆಂಬರ್ 2 ಮತ್ತು 3 ರಂದು ಬಿರುಗಾಳಿ ಸಹಿತ ಮಳೆಯಾಗಲಿದೆ.

ಒಟ್ಟಿನಲ್ಲಿ, ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದ 'ಡಬಲ್ ಎಫೆಕ್ಟ್' ನಿಂದಾಗಿ ರಾಜ್ಯದಲ್ಲಿ ಹಿಂಗಾರು ಮಳೆಯ ಅಬ್ಬರ ನವೆಂಬರ್ 7ರವರೆಗೂ ಮುಂದುವರಿಯುವ ಲಕ್ಷಣಗಳಿವೆ. ಮಳೆ ಬಿಡುವು ಕೊಟ್ಟಿದ್ದರಿಂದ ನಿಟ್ಟುಸಿರು ಬಿಟ್ಟಿದ್ದ ರೈತರಿಗೆ ಈ ಅಕಾಲಿಕ ಮಳೆ ಆತಂಕ ತಂದಿರುವುದು ಸುಳ್ಳಲ್ಲ. ಕಟಾವು ಮಾಡಿದ ಬೆಳೆಗಳನ್ನು ಒಣಗಿಸಲು ಮತ್ತು ಸಂರಕ್ಷಿಸಲು ರೈತರು ಹವಾಮಾನ ಮುನ್ಸೂಚನೆ ಗಮನಿಸಿ ಮುಂಜಾಗ್ರತೆ ವಹಿಸುವುದು ಒಳಿತು. ಜೊತೆಗೆ ಗುಡುಗು-ಮಿಂಚಿನ ವೇಳೆ ಮರಗಳ ಕೆಳಗೆ ನಿಲ್ಲದೆ ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವುದು ಅಗತ್ಯ.

Add Zee News as a Preferred Source
TAGS:
Weather Update