• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಯುಟಿಲಿಟಿ
  • /ಅಪ್ಪನ ಆಸ್ತಿಯನ್ನ ಮಗಳಿಗೆ ಗೊತ್ತಿಲ್ಲದಂತೆ ಮಾರಬಹುದೇ..? ಹೆಣ್ಣುಮಕ್ಕಳೇ ಸಹೋದರರಿಂದ ಮೋಸ ಹೋಗಬೇಡಿ

ಅಪ್ಪನ ಆಸ್ತಿಯನ್ನ ಮಗಳಿಗೆ ಗೊತ್ತಿಲ್ಲದಂತೆ ಮಾರಬಹುದೇ..? ಹೆಣ್ಣುಮಕ್ಕಳೇ ಸಹೋದರರಿಂದ ಮೋಸ ಹೋಗಬೇಡಿ

ಕುಟುಂಬದ ಆಸ್ತಿ ಹಂಚಿಕೆ ಹಾಗೂ ಪಿತ್ರಾರ್ಜಿತ ಜಮೀನು ಮಾರಾಟದ ಸಂದರ್ಭದಲ್ಲಿ ಹೆಣ್ಣುಮಕ್ಕಳನ್ನು ಕಡೆಗಣಿಸುವ ಧೋರಣೆ ಇಂದಿಗೂ ಅನೇಕ ಕಡೆಗಳಲ್ಲಿ ಮುಂದುವರಿದಿದೆ. ಹೆಣ್ಣುಮಕ್ಕಳ ಅರಿವಿಗೇ ಬಾರದೆ ಕೇವಲ ಗಂಡುಮಕ್ಕಳ ಸಹಿಯೊಂದಿಗೆ ಆಸ್ತಿ ವ್ಯವಹಾರ ಪೂರ್ಣಗೊಳಿಸಿದರೆ ಅದು ಕಾನೂನುಬದ್ಧವಾಗುತ್ತದೆಯೇ? ಈ ಕುರಿತು ಭಾರತೀಯ ಕಾನೂನು ಹಾಗೂ ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪುಗಳು ನೀಡಿರುವ ಸ್ಪಷ್ಟನೆಗಳ ಸಂಪೂರ್ಣ ವಿವರ ಇಲ್ಲಿದೆ..

Written ByKrishna NK
Published: Oct 22, 2026, 09:46 PM IST|Updated: Oct 22, 2026, 09:53 PM IST
joinshare
ಅಪ್ಪನ ಆಸ್ತಿಯನ್ನ ಮಗಳಿಗೆ ಗೊತ್ತಿಲ್ಲದಂತೆ ಮಾರಬಹುದೇ..? ಹೆಣ್ಣುಮಕ್ಕಳೇ ಸಹೋದರರಿಂದ ಮೋಸ ಹೋಗಬೇಡಿ
Image Credit: Daughter Right

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಅಪ್ಪನ ಆಸ್ತಿಯನ್ನ ಮಗಳಿಗೆ ಗೊತ್ತಿಲ್ಲದಂತೆ ಮಾರಬಹುದೇ..? ಹೆಣ್ಣುಮಕ್ಕಳೇ ಸಹೋದರರಿಂದ ಮೋಸ ಹೋಗಬೇಡಿ

ಅಪ್ಪನ ಆಸ್ತಿಯನ್ನ ಮಗಳಿಗೆ ಗೊತ್ತಿಲ್ಲದಂತೆ ಮಾರಬಹುದೇ..? ಹೆಣ್ಣುಮಕ್ಕಳೇ ಸಹೋದರರಿಂದ ಮೋಸ ಹೋಗಬೇಡಿ

2

ದೀಪಾವಳಿಗೂ ಮುನ್ನ ಬಂಗಾರ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿ : ಕುಸಿದ ಚಿನ್ನ ಹಾಗೂ ಬೆಳ್ಳಿ ಬೆಲೆ.. ಎಷ್ಟು ಗೊತ್ತೆ?

3

ತಾಯಿ ತನ್ನ ಕೈ ಮುರಿದುಕೊಂಡು ಊರನ್ನು ರಕ್ಷಿಸಿದ್ದಾಳೆ : ಶಾಸಕ ಚೆನ್ನಬಸಪ್ಪ

4

ವಿಧಾನ ಪರಿಷತ್ ಚುನಾವಣೆ : ನಾಳೆ 4 ಕ್ಷೇತ್ರಗಳಿಗೆ ಹೈವೋಲ್ಟೇಜ್ ಕದನ, ಮತದಾನಕ್ಕೆ ಸಕಲ ಸಿದ್ಧತೆ

5

ಚಿತ್ರರಂಗವನ್ನೇ ಆಳಿದ್ದ ಆ ನಟಿ ಸತ್ತಾಗ ದೇಹ ಇತ್ತು.. ತಲೆಯೇ ಇರಲಿಲ್ಲ : ಆಘಾತಕಾರಿ ವಿಚಾರ ಬಿಚ್ಚಿಟ್ಟ ನಟಿ ಪ್ರೇಮಾ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Daughter's property rights : ಕುಟುಂಬದ ಆಸ್ತಿ ಅಥವಾ ಪಿತ್ರಾರ್ಜಿತ ಜಮೀನು ಮಾರಾಟ ಮಾಡುವಾಗ ಇಂದಿಗೂ ಹಲವು ಕುಟುಂಬಗಳಲ್ಲಿ ಹೆಣ್ಣುಮಕ್ಕಳನ್ನು ಕಡೆಗಣಿಸುವ, ಕೇವಲ ಗಂಡುಮಕ್ಕಳ ಸಹಿ ಪಡೆದು ವ್ಯವಹಾರ ಮುಗಿಸಿಬಿಡುವ ಕೆಟ್ಟ ಪದ್ಧತಿ ಮುಂದುವರಿದಿದೆ.. ಹೆಣ್ಣುಮಗಳು ಮದುವೆ ಯಾಗಿ ಬೇರೆ ಮನೆಗೆ ಹೋಗಿದ್ದಾಳೆ, ಆಕೆಗೆ ಈ ಆಸ್ತಿಯಲ್ಲಿ ಯಾವ ಹಕ್ಕಿದೆ? ಎಂದು ಭಾವಿಸಿ, ಆಕೆಯ ಅರಿವಿಗೇ ಬಾರದಂತೆ ಜಮೀನು ಮಾರಾಟ ಮಾಡಿದರೆ ಆ ವ್ಯವಹಾರ ಕಾನೂನುಬದ್ಧವಾಗುತ್ತಾ?.. ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪುಗಳು ಮತ್ತು ಭಾರತೀಯ ಕಾನೂನು ಈ ಬಗ್ಗೆ ಏನು ಹೇಳುತ್ತವೆ?.. ಮಗಳ ಸಹಿ ಇಲ್ಲದೆ ಪಿತ್ರಾರ್ಜಿತ ಜಮೀನು ಮಾರಿದರೆ ಆ ಮಾರಾಟ ಪತ್ರ ರದ್ದಾಗುತ್ತಾ?.. ಮೋಸ ಹೋದ ಹೆಣ್ಣುಮಕ್ಕಳು ನ್ಯಾಯಾಲಯದ ಮೂಲಕ ತಮ್ಮ ಪಾಲನ್ನು ಹೇಗೆ ಮರಳಿ ಪಡೆಯಬಹುದು?.. ಅಷ್ಟೇ ಅಲ್ಲ, ಇಂತಹ ವಿವಾದಿತ ಆಸ್ತಿಯನ್ನು ಕೊಂಡುಕೊ ಳ್ಳುವ ಖರೀದಿದಾರರಿಗೆ ಎದುರಾಗುವ ಸಂಕಷ್ಟಗಳೇನು?.. ಪ್ರತಿಯೊಬ್ಬ ಹೆಣ್ಣುಮಕ್ಕಳು ಹಾಗೂ ಆಸ್ತಿ ಮಾರುವ-ಕೊಳ್ಳುವ ಪ್ರತಿಯೊಬ್ಬ ನಾಗರಿಕನೂ ತಿಳಿದುಕೊಳ್ಳಲೇಬೇಕಾದ ಆಸ್ತಿ ಹಕ್ಕುಗಳ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ..

ಭಾರತೀಯ ಕಾನೂನಿನಲ್ಲಿ ಹೆಣ್ಣುಮಕ್ಕಳ ಆಸ್ತಿ ಹಕ್ಕಿಗೆ ಅತ್ಯುನ್ನತ ರಕ್ಷಣೆ ನೀಡಲಾಗಿದೆ. 2005ರ ಹಿಂದೂ ಉತ್ತರಾಧಿಕಾರ ತಿದ್ದುಪಡಿ ಕಾಯ್ದೆ ಮತ್ತು ಸುಪ್ರೀಂ ಕೋರ್ಟ್‌ನ ವಿನೀತಾ ಶರ್ಮಾ ಪ್ರಕರಣದ ಐತಿಹಾಸಿಕ ತೀರ್ಪಿನ ಪ್ರಕಾರ, ಮಗನಿಗೆ ಇರುವಷ್ಟೇ ಸಮಾನ ಪಾಲು ಮಗಳಿಗೂ ಹುಟ್ಟಿನಿಂದಲೇ ಪ್ರಾಪ್ತವಾಗುತ್ತದೆ. ಮಗಳಿಗೆ ಮದುವೆಯಾಗಿರಲಿ ಅಥವಾ ಆಸ್ತಿ ಹಂಚಿಕೆ ವೇಳೆ ತಂದೆ ಜೀವಂತವಾಗಿರಲಿ-ಇಲ್ಲದಿರಲಿ, ಆಕೆಯ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ, ಮಗಳ ಲಿಖಿತ ಒಪ್ಪಿಗೆ ಅಥವಾ ಸಹಿ ಇಲ್ಲದೆ ಕುಟುಂಬದ ಇತರರು ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡಿದರೆ, ಆ ಮಾರಾಟ ಪತ್ರವು ಮಗಳ ಪಾಲಿನ ಮಟ್ಟಿಗೆ ಕಾನೂನುಬಾಹಿರವಾಗುತ್ತದೆ.

ಆಸ್ತಿ ವಿವಾದಕ್ಕೆ ಹೋಗುವ ಮುನ್ನ ಆ ಆಸ್ತಿ ಯಾವ ವರ್ಗಕ್ಕೆ ಸೇರಿದ್ದು ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ತಲೆಮಾರುಗಳಿಂದ ಬಂದ ಪಿತ್ರಾರ್ಜಿತ ಆಸ್ತಿಯಾಗಿದ್ದರೆ, ಅಲ್ಲಿ ಕುಟುಂಬದ ಎಲ್ಲ ಹೆಣ್ಣುಮಕ್ಕಳ ಒಪ್ಪಿಗೆ ಕಡ್ಡಾಯ. ಆದರೆ, ಆ ಆಸ್ತಿಯು ತಂದೆಯು ಸ್ವಂತ ದುಡಿಮೆಯಿಂದ ಖರೀದಿಸಿದ 'ಸ್ವಯಾರ್ಜಿತ ಆಸ್ತಿ'ಯಾಗಿದ್ದರೆ, ಅದನ್ನು ತನ್ನ ಜೀವಿತಾವಧಿಯಲ್ಲಿ ಯಾರಿಗೆ ಬೇಕಾದರೂ ಮಾರುವ ಅಥವಾ ಉಡುಗೊರೆಯಾಗಿ ನೀಡುವ ಅಧಿಕಾರ ತಂದೆಗೆ ಇರುತ್ತದೆ. ಆದರೆ, ತಂದೆಯು ಯಾವುದೇ ವಿಲ್ (ಉಯಿಲು) ಬರೆಯದೆ ತೀರಿಕೊಂಡರೆ, ಅವರ ಸ್ವಯಾರ್ಜಿತ ಆಸ್ತಿಯಲ್ಲೂ ಮಗನಷ್ಟೇ ಸಮಾನ ಹಕ್ಕು ಮಗಳಿಗೂ ಕಾನೂನುಬದ್ಧವಾಗಿ ಸಿಗುತ್ತದೆ.

ಮಗಳ ಗಮನಕ್ಕೆ ಬಾರದೆ ಕುಟುಂಬದವರು ಪಿತ್ರಾರ್ಜಿತ ಜಮೀನು ಮಾರಾಟ ಮಾಡಿದ್ದರೆ ಹೆದರುವ ಅಗತ್ಯವಿಲ್ಲ. ಮೊದಲು ಪಹಣಿ, ರಿಜಿಸ್ಟರ್ಡ್ ಸೇಲ್ ಡೀಡ್ ಮತ್ತು ವಂಶವೃಕ್ಷದ ದಾಖಲೆಗಳನ್ನು ಸಂಗ್ರಹಿಸಿ, ನುರಿತ ವಕೀಲರ ಮೂಲಕ ಖರೀದಿದಾರರಿಗೆ ಹಾಗೂ ಮಾರಾಟ ಮಾಡಿದ ಕುಟುಂಬಸ್ಥರಿಗೆ ತಕ್ಷಣ ಲೀಗಲ್ ನೋಟಿಸ್ ಜಾರಿ ಮಾಡಬೇಕು. ನಂತರ ಸಿವಿಲ್ ನ್ಯಾಯಾಲಯದಲ್ಲಿ ವಿಭಜನಾ ಮೊಕದ್ದಮೆ ಹೂಡಿ, ಜಮೀನಿನ ಮೇಲೆ ತಡೆಯಾಜ್ಞೆ ಪಡೆಯಬಹುದು. ಇದರಿಂದ ಖರೀದಿದಾರರು ಆ ಜಮೀನಿನ ಮೇಲೆ ಸಾಲ ಪಡೆಯುವುದು ಅಥವಾ ಮರುಮಾರಾಟ ಮಾಡುವುದನ್ನು ತಡೆಯಬಹುದು.

ಪಿತ್ರಾರ್ಜಿತ ಜಮೀನು ಖರೀದಿಸುವ ಮುಗ್ಧ ಖರೀದಿದಾರರಿಗೆ ಇದು ಬಹುದೊಡ್ಡ ಎಚ್ಚರಿಕೆಯ ಗಂಟೆ. ಕುಟುಂಬದ ಹೆಣ್ಣುಮಕ್ಕಳ ಸಹಿ ಇಲ್ಲದೆ ಆಸ್ತಿ ಖರೀದಿಸಿದರೆ, ಮುಂದೊಂದು ದಿನ ಮಗಳು ನ್ಯಾಯಾಲಯದ ಮೆಟ್ಟಿಲೇರಿದಾಗ ಖರೀದಿದಾರನ ಹಕ್ಕು ಸಂಪೂರ್ಣವಾಗಿ ಅತಂತ್ರವಾಗುತ್ತದೆ. ನ್ಯಾಯಾಲಯವು ಆ ಮಾರಾಟ ಪತ್ರವನ್ನು ರದ್ದುಪಡಿಸಬಹುದು ಅಥವಾ ಮಗಳಿಗೆ ಆಕೆಯ ಪಾಲು ಬಿಟ್ಟುಕೊಡುವಂತೆ ಆದೇಶಿಸಬಹುದು. ಆಗ ಖರೀದಿದಾರ ಜಮೀನನ್ನೂ ಕಳೆದುಕೊಂಡು, ಕೊಟ್ಟ ಹಣವನ್ನೂ ವಾಪಸ್ ಪಡೆಯಲಾಗದೆ ಮಾರಾಟಗಾರರ ವಿರುದ್ಧ ದಶಕಗಳ ಕಾಲ ಕೇಸ್ ನಡೆಸಬೇಕಾದ ದಯನೀಯ ಸ್ಥಿತಿ ಎದುರಾಗುತ್ತದೆ.

ಕಾನೂನಿನಲ್ಲಿ ಕುಟುಂಬದ ಯಜಮಾನನಿಗೆ 'ಲೀಗಲ್ ನೆಸೆಸಿಟಿ' ಅಥವಾ ಕಾನೂನುಬದ್ಧ ತುರ್ತು ಪರಿಸ್ಥಿತಿಯಲ್ಲಿ ಆಸ್ತಿ ಮಾರಲು ಸಣ್ಣ ವಿನಾಯಿತಿ ಇದೆ. ಅಂದರೆ ಕುಟುಂಬದ ಜೀವನ್ಮರಣ ವೈದ್ಯಕೀಯ ವೆಚ್ಚ, ತೀವ್ರ ಆರ್ಥಿಕ ದಿವಾಳಿತನ ಅಥವಾ ಅಪ್ರಾಪ್ತ ಮಕ್ಕಳ ಶಿಕ್ಷಣಕ್ಕಾಗಿ ಮಾರಾಟ ಮಾಡಿದ್ದರೆ ಅದನ್ನು ಸಾಬೀತುಪಡಿಸಬೇಕಾಗುತ್ತದೆ. ಕೇವಲ ಗಂಡುಮಕ್ಕಳ ಸ್ವಾರ್ಥಕ್ಕಾಗಿ ಅಥವಾ ದುಶ್ಚಟಕ್ಕಾಗಿ ಮಾರಿದ್ದರೆ ಅದು ಊರ್ಜಿತವಾಗುವುದಿಲ್ಲ. ಇದೇ ವೇಳೆ ಹೆಣ್ಣುಮಕ್ಕಳು ನೆನಪಿನಲ್ಲಿಡಬೇಕಾದ ಅಂಶವೆಂದರೆ, ಭಾವನಾತ್ಮಕವಾಗಿ ಅಥವಾ ಒತ್ತಡಕ್ಕೆ ಮಣಿದು ಒಮ್ಮೆ ನೋಂದಾಯಿತ ತ್ಯಾಗಪತ್ರಕ್ಕೆ ಸಹಿ ಹಾಕಿದರೆ, ಮುಂದೆಂದೂ ಆ ಆಸ್ತಿಯಲ್ಲಿ ಪಾಲು ಕೇಳಲು ಸಾಧ್ಯವಿಲ್ಲ.

ಒಟ್ಟಿನಲ್ಲಿ, ಹೆಣ್ಣುಮಕ್ಕಳೆಂದರೆ ಕೇವಲ ಮದುವೆ ಮಾಡಿ ಕಳುಹಿಸುವ ಪರಕೀಯರಲ್ಲ, ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡುಮಕ್ಕಳಷ್ಟೇ ಸಮಾನ ಪಾಲುದಾರರು ಎಂಬುದನ್ನು ಸಂವಿಧಾನ ಮತ್ತು ದೇಶದ ಅತ್ಯುನ್ನತ ನ್ಯಾಯಾಲಯ ಪದೇ ಪದೇ ಸ್ಪಷ್ಟಪಡಿಸಿವೆ. ಕುಟುಂಬದ ಹೆಣ್ಣುಮಕ್ಕಳನ್ನು ಕತ್ತಲಲ್ಲಿಟ್ಟು ಮಾಡುವ ಯಾವುದೇ ಪಿತ್ರಾರ್ಜಿತ ಆಸ್ತಿ ವ್ಯವಹಾರವು ಕೊನೆಗೆ ಕೋರ್ಟ್-ಕಚೇರಿ, ಪೊಲೀಸ್ ಠಾಣೆಗಳ ಜಂಜಾಟದಲ್ಲೇ ಅಂತ್ಯವಾಗುತ್ತದೆ. ಹೀಗಾಗಿ, ಜಮೀನು ಮಾರುವ ಕುಟುಂಬಸ್ಥರಾಗಲಿ ಅಥವಾ ಕೊಳ್ಳುವ ಸಾರ್ವಜನಿಕರಾಗಲಿ, ಕುಟುಂಬದ ಪ್ರತಿಯೊಬ್ಬ ಹೆಣ್ಣುಮಗಳ ಕಾನೂನುಬದ್ಧ ಒಪ್ಪಿಗೆ ಮತ್ತು ಸಹಿ ಪಡೆದು ವ್ಯವಹಾರ ನಡೆಸುವುದು ಕಾನೂನಿನ ದೃಷ್ಟಿಯಿಂದಲೂ ಸುರಕ್ಷಿತ, ನೈತಿಕತೆಯ ದೃಷ್ಟಿಯಿಂದಲೂ ಅತ್ಯಂತ ನ್ಯಾಯಸಮ್ಮತ.

Add Zee News as a Preferred Source
TAGS:
Kannada News