• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ವಿಧಾನ ಪರಿಷತ್ ಚುನಾವಣೆ : ನಾಳೆ 4 ಕ್ಷೇತ್ರಗಳಿಗೆ ಹೈವೋಲ್ಟೇಜ್ ಕದನ, ಮತದಾನಕ್ಕೆ ಸಕಲ ಸಿದ್ಧತೆ

ವಿಧಾನ ಪರಿಷತ್ ಚುನಾವಣೆ : ನಾಳೆ 4 ಕ್ಷೇತ್ರಗಳಿಗೆ ಹೈವೋಲ್ಟೇಜ್ ಕದನ, ಮತದಾನಕ್ಕೆ ಸಕಲ ಸಿದ್ಧತೆ

ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಹಾಗೂ ಹೈವೋಲ್ಟೇಜ್ ಕದನವೆಂದೇ ಬಿಂಬಿತವಾಗಿರುವ ಕರ್ನಾಟಕ ವಿಧಾನ ಪರಿಷತ್ತಿನ 2 ಪದವೀಧರ ಹಾಗೂ 2 ಶಿಕ್ಷಕರ ಕ್ಷೇತ್ರಗಳ ಚುನಾವಣೆಗೆ ಮತದಾನ ನಾಳೆ ಬೆಳಗ್ಗೆ 8 ಗಂಟೆಗೆ ಅಧಿಕೃತವಾಗಿ ಆರಂಭವಾಗುತ್ತದೆ. ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಮೈತ್ರಿ ಕೂಟಕ್ಕೆ ಅತ್ಯಂತ ಪ್ರತಿಷ್ಠೆಯಾಗಿರುವ ಈ ಚುನಾವಣೆಯಲ್ಲಿ ಮೇಲುಗೈ ಸಾಧಿಸಲು ರಾಜಕೀಯ ಪಕ್ಷಗಳು ತೀವ್ರ ಕಸರತ್ತು ನಡೆಸಿವೆ.

Written ByKrishna NK
Published: Oct 22, 2026, 08:24 PM IST|Updated: Oct 22, 2026, 08:28 PM IST
joinshare
ವಿಧಾನ ಪರಿಷತ್ ಚುನಾವಣೆ : ನಾಳೆ 4 ಕ್ಷೇತ್ರಗಳಿಗೆ ಹೈವೋಲ್ಟೇಜ್ ಕದನ, ಮತದಾನಕ್ಕೆ ಸಕಲ ಸಿದ್ಧತೆ
Image Credit: Karnataka MLC Polls

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಅಪ್ಪನ ಆಸ್ತಿಯನ್ನ ಮಗಳಿಗೆ ಗೊತ್ತಿಲ್ಲದಂತೆ ಮಾರಬಹುದೇ..? ಹೆಣ್ಣುಮಕ್ಕಳೇ ಸಹೋದರರಿಂದ ಮೋಸ ಹೋಗಬೇಡಿ

ಅಪ್ಪನ ಆಸ್ತಿಯನ್ನ ಮಗಳಿಗೆ ಗೊತ್ತಿಲ್ಲದಂತೆ ಮಾರಬಹುದೇ..? ಹೆಣ್ಣುಮಕ್ಕಳೇ ಸಹೋದರರಿಂದ ಮೋಸ ಹೋಗಬೇಡಿ

2

ದೀಪಾವಳಿಗೂ ಮುನ್ನ ಬಂಗಾರ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿ : ಕುಸಿದ ಚಿನ್ನ ಹಾಗೂ ಬೆಳ್ಳಿ ಬೆಲೆ.. ಎಷ್ಟು ಗೊತ್ತೆ?

3

ತಾಯಿ ತನ್ನ ಕೈ ಮುರಿದುಕೊಂಡು ಊರನ್ನು ರಕ್ಷಿಸಿದ್ದಾಳೆ : ಶಾಸಕ ಚೆನ್ನಬಸಪ್ಪ

4

ವಿಧಾನ ಪರಿಷತ್ ಚುನಾವಣೆ : ನಾಳೆ 4 ಕ್ಷೇತ್ರಗಳಿಗೆ ಹೈವೋಲ್ಟೇಜ್ ಕದನ, ಮತದಾನಕ್ಕೆ ಸಕಲ ಸಿದ್ಧತೆ

5

ಚಿತ್ರರಂಗವನ್ನೇ ಆಳಿದ್ದ ಆ ನಟಿ ಸತ್ತಾಗ ದೇಹ ಇತ್ತು.. ತಲೆಯೇ ಇರಲಿಲ್ಲ : ಆಘಾತಕಾರಿ ವಿಚಾರ ಬಿಚ್ಚಿಟ್ಟ ನಟಿ ಪ್ರೇಮಾ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು : ರಾಜ್ಯದ ಈ ನಾಲ್ಕೂ ಪ್ರಮುಖ ಕ್ಷೇತ್ರಗಳಿಗೆ ನಾಳೆ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಚುನಾವಣಾ ಆಯೋಗವು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕಾಗಿ ರಾಜ್ಯಾದ್ಯಂತ ಒಟ್ಟು 549 ಮತಗಟ್ಟೆಗಳನ್ನು ಅತ್ಯಂತ ವ್ಯವಸ್ಥಿತವಾಗಿ ಸಿದ್ಧಪಡಿಸಿದೆ. ನೊಂದಾಯಿತ ಶಿಕ್ಷಕರು ಹಾಗೂ ಪದವೀಧರ ಮತದಾರರು ತಮ್ಮ ವಿಶೇಷ ಪ್ರಾಶಸ್ತ್ಯದ ಮತಗಳನ್ನು (Preferential Votes) ಚಲಾಯಿಸುವ ಮೂಲಕ ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು ಮತ್ತು ಕ್ಷೇತ್ರಗಳ ವಿವರ
ಪಶ್ಚಿಮ ಪದವೀಧರ ಕ್ಷೇತ್ರ: ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ಒಟ್ಟು 97,398 ಮತದಾರರಿದ್ದಾರೆ. ಇಲ್ಲಿ ಬಿಜೆಪಿಯಿಂದ ಎಸ್‌ವಿ ಸಂಕನೂರ ಹಾಗೂ ಕಾಂಗ್ರೆಸ್‌ನಿಂದ ಮೋಹನ್ ಲಿಂಬಿಕಾಯಿ ನಡುವೆ ತೀವ್ರ ಹೋರಾಟವಿದೆ.

ಆಗ್ನೇಯ ಪದವೀಧರ ಕ್ಷೇತ್ರ: ತುಮಕೂರು, ಕೋಲಾರ, ಚಿತ್ರದುರ್ಗ, ದಾವಣಗೆರೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ವ್ಯಾಪಿಸಿರುವ ಈ ಕ್ಷೇತ್ರವು ಅತ್ಯಧಿಕ ಅಂದರೆ 1,80,756 ಮತದಾರರನ್ನು ಹೊಂದಿದೆ. ಇಲ್ಲಿ ಕಾಂಗ್ರೆಸ್‌ನಿಂದ ಶಶಿ ಹುಲಿಕುಂಟೆಮಠ್ ಹಾಗೂ ಬಿಜೆಪಿಯಿಂದ ಕೆ.ಎಂ. ಸುರೇಶ್ ಕಣದಲ್ಲಿದ್ದಾರೆ.

ಈಶಾನ್ಯ ಶಿಕ್ಷಕರ ಕ್ಷೇತ್ರ: ಬೀದರ್, ಕಲಬುರಗಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಯಾದಗಿರಿ ಮತ್ತು ವಿಜಯನಗರ ಜಿಲ್ಲೆಗಳನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ 34,784 ಮತದಾರರಿದ್ದು, ಬಿಜೆಪಿಯ ಶಶೀಲ್ ನಮೋಶಿ ಹಾಗೂ ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ ನಡುವೆ ರೋಚಕ ಕದನ ಏರ್ಪಟ್ಟಿದೆ.

ಬೆಂಗಳೂರು ಶಿಕ್ಷಕರ ಕ್ಷೇತ್ರ: ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಹಾಗೂ ಜಿಬಿಎ ವ್ಯಾಪ್ತಿಯನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಒಟ್ಟು 27,456 ಮತದಾರರಿದ್ದಾರೆ. ಇಲ್ಲಿ ಕಾಂಗ್ರೆಸ್‌ನಿಂದ ಅನುಭವಿ ರಾಜಕಾರಣಿ ಪುಟ್ಟಣ್ಣ ಹಾಗೂ ಜೆಡಿಎಸ್‌ನಿಂದ ಎ.ಪಿ. ರಂಗನಾಥ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಮಸ್ಟರಿಂಗ್ ಕೇಂದ್ರಗಳಲ್ಲಿ ಸಕಲ ಸಿದ್ಧತೆ ಮತ್ತು ಸಿಬ್ಬಂದಿ ನಿಯೋಜನೆ
ಮತದಾನ ಪ್ರಕ್ರಿಯೆ ಸರಾಗವಾಗಿ ನಡೆಯಲು ಚುನಾವಣಾ ಆಯೋಗವು ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಬೆಂಗಳೂರು ನಗರದಲ್ಲಿ ಒಟ್ಟು 43 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಸೆಂಟ್ರಲ್ ಕಾಲೇಜಿನ ಮುಂಭಾಗದಲ್ಲಿರುವ ಸರ್ಕಾರಿ ಕಲಾ ಕಾಲೇಜಿನಲ್ಲಿ ಮಸ್ಟರಿಂಗ್ ಕೇಂದ್ರವನ್ನು ತೆರೆಯಲಾಗಿದೆ. ಇಲ್ಲಿಂದಲೇ ಚುನಾವಣಾ ಸಾಮಗ್ರಿಗಳು ಹಾಗೂ ಬ್ಯಾಲೆಟ್ ಪೇಪರ್‌ಗಳನ್ನು ಮತಗಟ್ಟೆ ಅಧಿಕಾರಿಗಳಿಗೆ ವಿತರಿಸಲಾಗಿದೆ.

ಈ ಬಾರಿ ಸಂಪೂರ್ಣವಾಗಿ ಬ್ಯಾಲೆಟ್ ಪೇಪರ್ (ಮತಪತ್ರ) ಮೂಲಕವೇ ಚುನಾವಣೆ ನಡೆಯುತ್ತಿರುವುದು ವಿಶೇಷ. ಪ್ರತಿ ಮತಗಟ್ಟೆಗೆ ಪಿಆರ್‌ಒ (PRO), ಎಪಿಆರ್‌ಒ (APRO), ಇಬ್ಬರು ಪೋಲಿಂಗ್ ಅಧಿಕಾರಿಗಳು (PO1, PO2), ಪೊಲೀಸ್ ಸಿಬ್ಬಂದಿ ಹಾಗೂ ಮೈಕ್ರೋ ಅಬ್ಸರ್ವರ್ ಸೇರಿದಂತೆ ಒಟ್ಟು 6 ಸಿಬ್ಬಂದಿಗಳನ್ನು ನಿಯೋಜಿಸಿ, ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಒಟ್ಟಾರೆಯಾಗಿ.. ಆಡಳಿತಾರೂಢ ಕಾಂಗ್ರೆಸ್‌ಗೆ ತಕ್ಕ ತಿರುಗೇಟು ನೀಡಲು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಒಂದೆಡೆ ಭರ್ಜರಿ ರಣತಂತ್ರ ರೂಪಿಸಿದ್ದರೆ, ಹಾಲಿ ಬಿಜೆಪಿ ವಶದಲ್ಲಿರುವ ಪ್ರಮುಖ ಕ್ಷೇತ್ರಗಳನ್ನು ಕಸಿದುಕೊಂಡು ತನ್ನ ಪ್ರಾಬಲ್ಯ ಮೆರೆಯಲು ಕಾಂಗ್ರೆಸ್ ನಾಯಕರು ಸರ್ವಯತ್ನ ನಡೆಸಿದ್ದಾರೆ. ರಾಜ್ಯ ರಾಜಕಾರಣದ ಮುಂದಿನ ದಿಕ್ಕನ್ನು ನಿರ್ಧರಿಸುವ ಈ ಚುನಾವಣೆಯ ಫಲಿತಾಂಶವು ಇದೇ ಬರುವ ಅಕ್ಟೋಬರ್ 27ರಂದು ಹೊರಬರಲಿದ್ದು, ಇಡೀ ರಾಜ್ಯದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Add Zee News as a Preferred Source
TAGS:
Congress
BJP
JDS
Karnataka Politics