• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಚಿತ್ರರಂಗವನ್ನೇ ಆಳಿದ್ದ ಆ ನಟಿ ಸತ್ತಾಗ ದೇಹ ಇತ್ತು.. ತಲೆಯೇ ಇರಲಿಲ್ಲ : ಆಘಾತಕಾರಿ ವಿಚಾರ ಬಿಚ್ಚಿಟ್ಟ ನಟಿ ಪ್ರೇಮಾ

ಚಿತ್ರರಂಗವನ್ನೇ ಆಳಿದ್ದ ಆ ನಟಿ ಸತ್ತಾಗ ದೇಹ ಇತ್ತು.. ತಲೆಯೇ ಇರಲಿಲ್ಲ : ಆಘಾತಕಾರಿ ವಿಚಾರ ಬಿಚ್ಚಿಟ್ಟ ನಟಿ ಪ್ರೇಮಾ

ಒಂದು ಕಾಲದಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ನಟಿ ಪ್ರೇಮಾ ಅವರು, ಬಹುಬೇಡಿಕೆಯ ನಾಯಕಿಯಾಗಿ ಮಿಂಚುತ್ತಿದ್ದರು. ಇಂದಿಗೂ ಅವರ ಸಿನಿಮಾಗಳು ಕನ್ನಡಿಗರು ಸೇರಿದಂತೆ ತೆಲುಗು, ತಮಿಳು ಪ್ರೇಕ್ಷಕರಿಗೆ ಬಲು ಅಚ್ಚುಮೆಚ್ಚು. ಸಾಕಷ್ಟು ಸಮಯದ ನಂತರ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಪ್ರೇಮಾ ಅವರು ಸ್ಟಾರ್‌ ಹೀರೋಯಿನ್‌ ಒಬ್ಬರ ಸಾವಿನ ದಿನದ ಬಗ್ಗೆ ಆಘಾತಕಾರಿ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ.. ಈ ಕುರಿತ ಇಂಟ್ರಸ್ಟಿಂಗ್‌ ವರದಿ ಇಲ್ಲಿದೆ..

Written ByKrishna NK
Published: Oct 22, 2026, 07:58 PM IST|Updated: Oct 22, 2026, 08:05 PM IST
joinshare
ಚಿತ್ರರಂಗವನ್ನೇ ಆಳಿದ್ದ ಆ ನಟಿ ಸತ್ತಾಗ ದೇಹ ಇತ್ತು.. ತಲೆಯೇ ಇರಲಿಲ್ಲ : ಆಘಾತಕಾರಿ ವಿಚಾರ ಬಿಚ್ಚಿಟ್ಟ ನಟಿ ಪ್ರೇಮಾ
Image Credit: Actress Prema on Soundarya

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ವಿಧಾನ ಪರಿಷತ್ ಚುನಾವಣೆ : ನಾಳೆ 4 ಕ್ಷೇತ್ರಗಳಿಗೆ ಹೈವೋಲ್ಟೇಜ್ ಕದನ, ಮತದಾನಕ್ಕೆ ಸಕಲ ಸಿದ್ಧತೆ

ವಿಧಾನ ಪರಿಷತ್ ಚುನಾವಣೆ : ನಾಳೆ 4 ಕ್ಷೇತ್ರಗಳಿಗೆ ಹೈವೋಲ್ಟೇಜ್ ಕದನ, ಮತದಾನಕ್ಕೆ ಸಕಲ ಸಿದ್ಧತೆ

2

ಚಿತ್ರರಂಗವನ್ನೇ ಆಳಿದ್ದ ಆ ನಟಿ ಸತ್ತಾಗ ದೇಹ ಇತ್ತು.. ತಲೆಯೇ ಇರಲಿಲ್ಲ : ಆಘಾತಕಾರಿ ವಿಚಾರ ಬಿಚ್ಚಿಟ್ಟ ನಟಿ ಪ್ರೇಮಾ

3

ಕ್ಷಣದ ಸಂಭ್ರಮಕ್ಕೆ 2 ಮಕ್ಕಳ ತಾಯಿ ಬ*ಲಿ : ಮಹಿಳೆಯ ಉಸಿರು ನಿಲ್ಲಿಸಿದ ಗಾಳಿಪಟ ದಾರ

4

ARAI ಪರೀಕ್ಷಾ ಕೇಂದ್ರ ಸ್ಥಾಪನೆಗೆ ರಾಜ್ಯ ಸರ್ಕಾರ ಅಡ್ಡಿಪಡಿಸುತ್ತಿದೆ-ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ

5

ರೋಗಿಗಳಿಗೆ ಗೂಡ್‌ ನ್ಯೂಸ್‌ : ಇನ್ಮುಂದೆ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ದರಪಟ್ಟಿ ಪ್ರದರ್ಶನ ಕಡ್ಡಾಯ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Actress Prema and Soundarya : ಸ್ಯಾಂಡಲ್‌ವುಡ್‌ ಹಿರಿಯ ನಟಿ ಪ್ರೇಮಾ ಅವರು ದಿವಂಗತ ನಟಿ ಸೌಂದರ್ಯ ಅವರ ಜೊತೆ ಹೊಂದಿದ್ದ ಆಳವಾದ ಸ್ನೇಹ ಮತ್ತು ಬಾಂಧವ್ಯದ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟ ಕೆಲವು ವಿಚಾರಗಳು ಸಂಚಲನ ಸೃಷ್ಟಿಸುತ್ತಿವೆ.. ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ವಿಶೇಷ ಛಾಪು ಮೂಡಿಸಿರುವ ಪ್ರೇಮಾ, ಬಹಳ ದಿನಗಳ ನಂತರ ಮಾಧ್ಯಮದ ಮುಂದೆ ಬಂದು ಸೌಂದರ್ಯ ಅವರೊಂದಿಗಿನ ತಮ್ಮ ಹಳೆಯ ನೆನಪುಗಳನ್ನು ಬಹಳ ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ.

ಆ ಕಾಲದಲ್ಲಿ ಸೌಂದರ್ಯ ಮತ್ತು ಪ್ರೇಮಾ ಏಕಕಾಲದಲ್ಲಿ ಕನ್ನಡ ಸಿನಿರಂಗದಲ್ಲಿ ಮಿಂಚುತ್ತಿದ್ದರು. ಬಹುಬೇಡಿಕೆಯ ನಟಿಯರಾಗಿದ್ದರೂ ಸಹ ಇಬ್ಬರ ಮಧ್ಯ ಯಾವುದೇ ನೆಗೆಟಿವಿಟಿ ಇರಲಿಲ್ಲ ಎಂದು ಪ್ರೇಮಾ ಅವರೇ ಸ್ಪಷ್ಟಪಡಿಸಿದ್ದಾರೆ. ಸೌಂದರ್ಯ ಅವರು ಚಿತ್ರರಂಗಕ್ಕೆ ಕಾಲಿಟ್ಟಾಗ ಈಗಾಗಲೇ ನಂಬರ್ ಒನ್ ನಾಯಕಿಯಾಗಿ ಭದ್ರವಾಗಿದ್ದರು. ನಾನು ಹೊಸಬಳಾಗಿ ಬಣ್ಣದ ಲೋಕ ಪ್ರವೇಶಿಸಿದಾಗ ಅವರು ನನಗೆ ನೀಡಿದ ಬೆಂಬಲವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಪ್ರೇಮಾ ಹೇಳಿದ್ದಾರೆ.

"ಮಾಸ್ಟರ್" ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಇಬ್ಬರ ನಡುವೆ ಸ್ನೇಹ ಬೆಳೆಯಿತು. ನಾವು ಒಂದೇ ಇಂಡಸ್ಟ್ರಿಯಲ್ಲಿದ್ದೇವೆ, ನಮ್ಮ ನಡುವೆ ವೃತ್ತಿಪರ ಸ್ಪರ್ಧೆ ಇರಬಹುದು ಆದರೆ ಯಾವುದೇ ದ್ವೇಷವಿರಬಾರದು ಎಂದು ಸೌಂದರ್ಯ ಆಗಾಗ್ಗೆ ಹೇಳುತ್ತಿದ್ದರು ಎಂದು ಪ್ರೇಮಾ ನೆನಪಿಸಿಕೊಂಡಿದ್ದಾರೆ. ಇಬ್ಬರ ನಡುವೆ ಅದೆಷ್ಟರ ಮಟ್ಟಿಗೆ ಪಾರದರ್ಶಕತೆ ಇತ್ತೆಂದರೆ, ಸೌಂದರ್ಯ ನೇರವಾಗಿ ಪ್ರೇಮಾ ಅವರ ಸಿನಿಮಾಗಳನ್ನು ನೋಡಿ ಅವು ಚೆನ್ನಾಗಿದೆಯೇ ಇಲ್ಲವೇ ಎಂದು ಮುಕ್ತವಾಗಿ ಅಭಿಪ್ರಾಯ ತಿಳಿಸುತ್ತಿದ್ದರಂತೆ.

ಕೇವಲ ವೃತ್ತಿಜೀವನಕ್ಕೆ ಮಾತ್ರ ಈ ಸ್ನೇಹ ಸೀಮಿತವಾಗಿರಲಿಲ್ಲ. ಇಬ್ಬರ ಕುಟುಂಬಗಳೂ ಕೂಡ ಬಹಳ ಹತ್ತಿರವಾಗಿದ್ದವು. ಮನೆಗಳಲ್ಲಿ ಯಾವುದೇ ಶುಭ ಸಮಾರಂಭಗಳಿದ್ದರೂ ಪರಸ್ಪರ ಆಹ್ವಾನಿಸುತ್ತಿದ್ದರಂತೆ, ಒಂದು ಕುಟುಂಬದಂತೆ ಕಾಲ ಕಳೆದಿದ್ದಾಗಿ ಪ್ರೇಮಾ ಭಾವುಕರಾಗಿ ಸ್ಮರಿಸಿದ್ದಾರೆ. ಸೌಂದರ್ಯ ಅವರ ಮೊದಲ ಚಿತ್ರ 'ಅಮ್ಮೋರು' ಆಗಿದ್ದರೆ, ಪ್ರೇಮಾ ಅವರದ್ದು "ಸವ್ಯಸಾಚಿ" ಸಿನಿಮಾ. ಸಂಭಾವನೆಯ ವಿಚಾರದಲ್ಲೂ ಸೌಂದರ್ಯ ಈಗಾಗಲೇ ದೊಡ್ಡ ಸ್ಟಾರ್ ಆಗಿದ್ದರಿಂದ ಅವರಿಗೆ ಹೆಚ್ಚಿನ ಪೇಮೆಂಟ್ ಇತ್ತು ಎಂಬುದನ್ನು ಪ್ರೇಮಾ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಆದರೂ ತಮ್ಮಿಬ್ಬರ ನಡುವೆ ಎಂದಿಗೂ ಯಾವುದೇ ಭಿನ್ನಾಭಿಪ್ರಾಯಗಳು ಬರಲಿಲ್ಲ ಎಂದಿದ್ದಾರೆ.

ಸೌಂದರ್ಯಾ ಅವರ ಅಕಾಲಿಕ ಮರಣದ ಬಗೆಗಿನ ಕಹಿ ನೆನಪನ್ನು ಹಂಚಿಕೊಳ್ಳುವಾಗ ಪ್ರೇಮಾ ಅವರ ಕಣ್ಣುಗಳು ತೇವಗೊಂಡವು... ಸೌಂದರ್ಯ ಅವರ ಅಂತಿಮ ದರ್ಶನ ಪಡೆದ ಕ್ಷಣಗಳು ನನ್ನ ಜೀವನದಲ್ಲೇ ಅತ್ಯಂತ ಆಘಾತಕಾರಿ ಮತ್ತು ಆಳವಾದ ನೋವುಂಟು ಮಾಡಿದ ಘಟನೆ. ಅವರ ಭೌತಿಕ ದೇಹವನ್ನು ಕೊನೆಯ ಬಾರಿಗೆ ನೋಡಲು ಹೋದಾಗ, ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ ಎಂಬ ಸತ್ಯ ನನಗೆ ಅರಿವಾಯಿತು.. ಅಂದು ಅವರ ದೇಹಕ್ಕೆ ತಲೆಯೇ ಇರಲಿಲ್ಲ, ಅದನ್ನು ನೋಡಿ, ಜೀವನ ಅರ್ಥಹೀನ.. ಎಂಬುದು ತಿಳಿಯಿತು ಅಂತ ಪ್ರೇಮಾ ಹೇಳಿಕೊಂಡರು..

ಒಟ್ಟಾರೆಯಾಗಿ, ಇಂದಿನ ಸಿನಿಮಾ ಲೋಕದಲ್ಲಿ ಅಪರೂಪ ಎನಿಸುವಂತಹ ಒಂದು ನಿರ್ಮಲ, ಅಸೂಯೆ ರಹಿತ ಮತ್ತು ಗಟ್ಟಿ ಸ್ನೇಹಕ್ಕೆ ಪ್ರೇಮಾ ಮತ್ತು ಸೌಂದರ್ಯ ಅವರ ಬಾಂಧವ್ಯ ಅತ್ಯುತ್ತಮ ಉದಾಹರಣೆಯಾಗಿದೆ. ಪ್ರೇಮಾ ಅವರು ಹಂಚಿಕೊಂಡಿರುವ ಈ ಅಪರೂಪದ ನೆನಪುಗಳು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ದಿವಂಗತ ಸೌಂದರ್ಯ ಅವರನ್ನು ನೆನಪಿಸಿಕೊಳ್ಳುವಂತೆ ಮಾಡಿವೆ..

Add Zee News as a Preferred Source
TAGS:
Cinema