• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕ್ರೀಡೆ
  • /Ind vs Wi; ವೈಭವ್‌ ಸೂರ್ಯವಂಶಿಗೆ ಚಾನ್ಸ್‌ ಯಾಕೆ ನೀಡಿಲ್ಲ.. ಯಂಗ್‌ ಬ್ಯಾಟ್ಸ್‌ಮನ್‌ ಕಥೆ ಇನ್ಮುಂದೆ ಅಷ್ಟೇನಾ?

Ind vs Wi; ವೈಭವ್‌ ಸೂರ್ಯವಂಶಿಗೆ ಚಾನ್ಸ್‌ ಯಾಕೆ ನೀಡಿಲ್ಲ.. ಯಂಗ್‌ ಬ್ಯಾಟ್ಸ್‌ಮನ್‌ ಕಥೆ ಇನ್ಮುಂದೆ ಅಷ್ಟೇನಾ?

ಆದರೆ ವೆಸ್ಟ್ ಇಂಡೀಸ್ ವಿರುದ್ಧದ ಈ ಹಿರಿಯರ ಮಟ್ಟದ ಸರಣಿ ಆಗಿದೆ. ತವರಿನಲ್ಲಿ ನಡೆಯುತ್ತಿರುವ T20 ಸರಣಿಯಲ್ಲಿ ತಂಡವು ತನ್ನ ಸಂಯೋಜನೆ ಅಥವಾ ಕಾಂಬಿನೇಷನ್‌ ಅನ್ನು ಬದಲಾವಣೆ ಮಾಡಿದೆ.

Written ByBhimappa
Published: Oct 06, 2026, 08:43 PM IST|Updated: Oct 06, 2026, 08:53 PM IST
joinshare
Ind vs Wi; ವೈಭವ್‌ ಸೂರ್ಯವಂಶಿಗೆ ಚಾನ್ಸ್‌ ಯಾಕೆ ನೀಡಿಲ್ಲ.. ಯಂಗ್‌ ಬ್ಯಾಟ್ಸ್‌ಮನ್‌ ಕಥೆ ಇನ್ಮುಂದೆ ಅಷ್ಟೇನಾ?
Image Credit: vaibhav_sooryavanshi_shreyas

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಕಲಬುರಗಿಯಲ್ಲಿ ವಿಮಾನ ತುರ್ತು ಭೂಸ್ಪರ್ಶ! ತಪ್ಪಿದ ಭಾರೀ ದುರಂತ

ಕಲಬುರಗಿಯಲ್ಲಿ ವಿಮಾನ ತುರ್ತು ಭೂಸ್ಪರ್ಶ! ತಪ್ಪಿದ ಭಾರೀ ದುರಂತ

2

EPS ಪಿಂಚಣಿದಾರರಿಗೆ ಗುಡ್‌ನ್ಯೂಸ್: ವೇತನ ಮಿತಿ ₹25,000ಕ್ಕೆ ಏರಿಕೆ; ಪಿಂಚಣಿ ಎಷ್ಟು ಹೆಚ್ಚಾಗಬಹುದು?

3

"ನನ್ನ ಕಿಡ್ನಿ ಫೇಲ್ ಆಗಿದೆ, ಮೆದುಳಲ್ಲ!": ಪಿತೃಪಕ್ಷದ ನಂತರ ರಾಜ್ಯಾದ್ಯಂತ ಹೆಚ್.ಡಿ.ಡಿ ಸಕ್ರಿಯ ಪ್ರವಾಸ

4

Ind vs Wi; ವೈಭವ್‌ ಸೂರ್ಯವಂಶಿಗೆ ಚಾನ್ಸ್‌ ಯಾಕೆ ನೀಡಿಲ್ಲ.. ಯಂಗ್‌ ಬ್ಯಾಟ್ಸ್‌ಮನ್‌ ಕಥೆ ಇನ್ಮುಂದೆ ಅಷ್ಟೇನಾ?

5

IPL 2027: ದೆಹಲಿ ಕ್ಯಾಪಿಟಲ್ಸ್‌ ತಂಡದ ಹೆಡ್‌ ಕೋಚ್‌ ಆಗಿ ಸೌರವ್ ಗಂಗೂಲಿ ನೇಮಕ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Vaibhav Suryavanshi dropped for first T20I between India vs West Indies: ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೀಮ್‌ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯಕ್ಕೆ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಅವರನ್ನು ಕೈಬಿಟ್ಟಿರುವುದು ಸದ್ಯ ಚರ್ಚೆಗೆ ಕಾರಣವಾಗಿದೆ. ಟೀಮ್‌ ಇಂಡಿಯಾದ ಆಡುವ ಹನ್ನೊಂದರಲ್ಲಿ ವೈಭವ್ ಸೂರ್ಯವಂಶಿಗೆ ಸ್ಥಾನ ನೀಡಲಾಗಿಲ್ಲ. ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯುತ್ತಿರುವ ಮೊದಲ ಪಂದ್ಯದಿಂದ ವೈಭವ್ ಸೂರ್ಯವಂಶಿನ ಕೈಬಿಟ್ಟಿರುವುದು ಏಕೆ, ಬಿಸಿಸಿಐನ ಮುಂದಿನ ಯೋಜನೆಗಳು ಏನು, ಬಲಿಷ್ಠ ಓಪನರ್‌ನನ್ನು ಕೈ ಬಿಟ್ಟಿರುವ ಹಿಂದಿನ ಬಲವಾದ ಕಾರಣವೇನು ಎಂಬುದಕ್ಕೆ ಇಲ್ಲಿ ಉತ್ತರ ಇದೆ.

ಜಪಾನ್‌ನಲ್ಲಿ ನಡೆದ 2026 ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಟೀಮ್‌ ಇಂಡಿಯಾದ ಭಾಗವಾಗಿದ್ದ 15 ವರ್ಷದ ಎಡಗೈ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಇತ್ತೀಚೆಗೆ ಅದ್ಭುತ ಪ್ರದರ್ಶನ ನೀಡಿದ್ದರು. ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೂ ವೈಭವ್ ಸೂರ್ಯವಂಶಿ ಅವರು ಪಾತ್ರರಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಆಡುವ ಹನ್ನೊಂದರಲ್ಲಿ ವೈಭವ್ ಸೂರ್ಯವಂಶಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಎರಡೂ ಪಂದ್ಯಗಳಲ್ಲಿ ವೈಭವ್ ಸೂರ್ಯವಂಶಿ ಇನ್ನಿಂಗ್ಸ್ ಆರಂಭಿಸಿದ್ದರು. ಶ್ರೀಲಂಕಾ ತಂಡದ ವಿರುದ್ಧ 38 ರನ್ ಗಳಿಸಿದರೆ, ಬದ್ಧವೈರಿ ಪಾಕಿಸ್ತಾನ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಕೇವಲ 15 ರನ್ ಗಳಿಸಿ ಕೀಪರ್‌ಗೆ ಕ್ಯಾಚ್‌ ಕೊಟ್ಟು ಔಟಾದರು. ಜಪಾನ್‌ನ ಸವಾಲಿನ ಪಿಚ್‌ಗಳಲ್ಲಿ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ಆಕ್ರಮಣಕಾರಿ ವಿಧಾನವು ಎಲ್ಲರ ಗಮನ ಸೆಳೆಯಿತು.

ಆದರೆ ಸದ್ಯ ನಡೆಯುತ್ತಿರುವ ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯದಿಂದ ಕೈಬಿಟ್ಟಿರುವುದಕ್ಕೆ ಕ್ರಿಕೆಟ್ ತಜ್ಞರ ಪ್ರಕಾರ, ಏಷ್ಯನ್ ಕ್ರೀಡಾಕೂಟದ ಸಮಯದಲ್ಲಿ, ಪರಿಸ್ಥಿತಿ ಮತ್ತು ಎದುರಾಳಿಗಳನ್ನು ಪರಿಗಣಿಸಿ ಒಬ್ಬ ಆಲ್‌ರೌಂಡರ್ ಅನ್ನು ಭಾರತ ತಂಡದಲ್ಲಿ ಕಡಿಮೆ ಮಾಡಲು ಬಿಸಿಸಿಐ ಆಡಳಿತ ಮಂಡಳಿ ನಿರ್ಧರಿಸಿತ್ತು. ಇದರಿಂದ ಜಪಾನ್‌ ಪ್ರವಾಸದ ಸಮಯದಲ್ಲಿ ವೈಭವ್‌ ಸೂರ್ಯವಂಶಿಗೆ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಆಡುವ ಅವಕಾಶವನ್ನು ನೀಡಲಾಗಿತ್ತು. ಆದರೆ ವೆಸ್ಟ್ ಇಂಡೀಸ್ ವಿರುದ್ಧದ ಈ ಹಿರಿಯರ ಮಟ್ಟದ ಸರಣಿ ಆಗಿದೆ. ತವರಿನಲ್ಲಿ ನಡೆಯುತ್ತಿರುವ T20 ಸರಣಿಯಲ್ಲಿ ತಂಡವು ತನ್ನ ಸಂಯೋಜನೆ ಅಥವಾ ಕಾಂಬಿನೇಷನ್‌ ಅನ್ನು ಬದಲಾವಣೆ ಮಾಡಿದೆ. ಅಂದರೆ ವೈಭವ್‌ ಸೂರ್ಯವಂಶಿ ಬದಲಿಗೆ ತಂಡದಲ್ಲಿ ಆಡುವ 11 ರಲ್ಲಿ ಆಲ್‌ರೌಂಡರ್ ಪ್ಲೇಯರ್‌ಗೆ ಆದ್ಯತೆ ನೀಡಲಾಗಿದೆ. ಇದರಿಂದ ವೈಭವ್‌ ಸೂರ್ಯವಂಶಿಗೆ ಅವಕಾಶ ಕೈ ತಪ್ಪಿದೆ ಎಂದು ಹೇಳಲಾಗುತ್ತಿದೆ.

ಟೀಮ್‌ ಇಂಡಿಯಾದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಸ್ಪಷ್ಟನೆ 
ವೆಸ್ಟ್‌ ಇಂಡೀಸ್‌ ವಿರುದ್ಧದ T20 ಪಂದ್ಯಕ್ಕೂ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತದ ಬೌಲಿಂಗ್ ಕೋಚ್ ಮೋರ್ನೆ ಮೋರ್ಕೆಲ್ ಅವರು ಮಾತನಾಡಿ, ವೈಭವ್ ಸೂರ್ಯವಂಶಿ ಅವರ ಭವಿಷ್ಯವು ಅತ್ಯುತ್ತಮವಾಗಿದೆ. ವೈಭವ್ ಸೂರ್ಯವಂಶಿ ಅವರ ಪ್ರತಿಭೆಯ ಬಗ್ಗೆ ಎಲ್ಲರಿಗೂ ಈಗಾಗಲೇ ತಿಳಿದಿದೆ. ಹಿರಿಯ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವುದು ಮತ್ತು ಅಂತಹ ವಾತಾವರಣದಲ್ಲಿ ಸಮಯ ಕಳೆಯುವುದು ಅವರ ವೃತ್ತಿಜೀವನಕ್ಕೆ ಅತ್ಯಂತ ಪ್ರಯೋಜನಕಾರಿ ಆಗಿದೆ. ವೈಭವ್‌ ಸೂರ್ಯವಂಶಿಗೆ ಮೈದಾನದಲ್ಲಿ ಆಡಲು ಅವಕಾಶ ಸಿಗದಿದ್ದರೂ, ತಂಡದ ಬಸ್‌ನಲ್ಲಿ, ಡಗೌಟ್‌ನಲ್ಲಿ ಮತ್ತು ಹೋಟೆಲ್‌ನಲ್ಲಿ ಅನುಭವಿ ಆಟಗಾರರೊಂದಿಗೆ ಸಮಯ ಕಳೆಯುವುದರಿಂದ ತಮ್ಮ ಆಟವನ್ನು ಇನ್ನಷ್ಟು ಸುಧಾರಿಸಲು, ಕಲಿಯಲು ಸಹಾಯವಾಗುತ್ತದೆ ಎಂದು ಮಾರ್ಕೆಲ್ ಹೇಳಿದ್ದಾರೆ.

ಟೀಮ್‌ ಇಂಡಿಯಾದ ಪ್ಲೇಯಿಂಗ್-‌ 11ನಲ್ಲಿ ಬದಲಾವಣೆ

ವೆಸ್ಟ್‌ ಇಂಡೀಸ್‌ ವಿರುದ್ಧದ ಇಂದಿನ ಪಂದ್ಯಕ್ಕೆ ಭಾರತ ತಂಡವು ವೈಭವ್ ಸೂರ್ಯವಂಶಿ ಬದಲಿಗೆ ಆಲ್‌ರೌಂಡರ್ ಆಗಿ ನಮನ್ ಧೀರ್ ಅವರಿಗೆ ಅವಕಾಶ ನೀಡಲಾಗಿದೆ. ಇದಲ್ಲದೆ, ಯಾರ್ಕರ್‌ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲಿ ತಂಡಕ್ಕೆ ಅರ್ಶದೀಪ್ ಸಿಂಗ್ ಅವರು ಕಮ್‌ಬ್ಯಾಕ್‌ ಮಾಡಿದ್ದಾರೆ. ಆಲ್‌ರೌಂಡರ್‌ ವಾಷಿಂಗ್ಟನ್ ಸುಂದರ್ ಬದಲಿಗೆ ಮಯಾಂಕ್ ಯಾದವ್ ಮತ್ತು ಸ್ಪಿನ್ನರ್ ರವಿ ಬಿಷ್ಣೋಯ್ ಬದಲಿಗೆ‌ ಸ್ಪಿನ್‌ ಮ್ಯಾಜಿಕ್‌ ಮಾಡುವ ಕುಲದೀಪ್ ಯಾದವ್ ಅವರನ್ನು ಆಡುವ XI ನಲ್ಲಿ ಸೇರಿಸಿಕೊಳ್ಳಲಾಗಿದೆ. ಒಟ್ಟಿನಲ್ಲಿ ತಂಡದಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ. ಹೀಗಾಗಿಯೇ ಕೆಲವು ಆಟಗಾರರಿಗೆ ಅವಕಾಶ ಒಲಿದು ಬಂದರೆ, ಇನ್ನು ಕೆಲ ಆಟಗಾರರಿಗೆ ಚಾನ್ಸ್‌ ಸಿಕ್ಕಿಲ್ಲ.

ಟೀಮ್‌ ಇಂಡಿಯಾದ ಪ್ಲೇಯಿಂಗ್ XI: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್), ಶ್ರೇಯಸ್ ಅಯ್ಯರ್ (ಕ್ಯಾಪ್ಟನ್‌), ಇಶಾನ್ ಕಿಶನ್, ತಿಲಕ್ ವರ್ಮಾ, ಶಿವಂ ದುಬೆ, ನಮನ್ ಧೀರ್, ಅಕ್ಷರ್ ಪಟೇಲ್, ಕುಲ್‌ದೀಪ್‌ ಯಾದವ್, ಅರ್ಶದೀಪ್ ಸಿಂಗ್ ಮತ್ತು ಮಯಾಂಕ್ ಯಾದವ್

Add Zee News as a Preferred Source
TAGS:
T20