• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕ್ರೀಡೆ
  • /ಸರಣಿ ಕೈತಪ್ಪಲು ಇವರೇ‌ ಮುಖ್ಯ ಕಾರಣ! ಪಂದ್ಯದ ಬಳಿಕ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಹೇಳಿದ್ದೇನು?

ಸರಣಿ ಕೈತಪ್ಪಲು ಇವರೇ‌ ಮುಖ್ಯ ಕಾರಣ! ಪಂದ್ಯದ ಬಳಿಕ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಹೇಳಿದ್ದೇನು?

ಸರಣಿಯಲ್ಲಿ ಭಾರತಕ್ಕೆ ಕೆಲವು ನಿರಾಸಾದಾಯಕ ಕ್ಷಣಗಳು ಎದುರಾದರೂ, ಸೋಲಿನ ಬಳಿಕ ತಂಡ ಮತ್ತೆ ಪುಟಿದೆದ್ದು ಗೆಲುವು ಸಾಧಿಸಿದ ರೀತಿ ಗಮನ ಸೆಳೆಯಿತು. ಬ್ಯಾಟಿಂಗ್ ವಿಭಾಗದ ಆಕ್ರಮಣಕಾರಿ ಮನೋಭಾವ ತಂಡದ ಪ್ರಮುಖ ಸಕಾರಾತ್ಮಕ ಅಂಶವಾಗಿತ್ತು. ಆದರೆ ಐದು ಪಂದ್ಯಗಳ ಸರಣಿಯುದ್ದಕ್ಕೂ ಒಂದೇ ರೀತಿಯ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ.

Written ByPuttaraj K Alur
Published: Oct 18, 2026, 10:14 AM IST|Updated: Oct 18, 2026, 11:02 AM IST
joinshare
ಸರಣಿ ಕೈತಪ್ಪಲು ಇವರೇ‌ ಮುಖ್ಯ ಕಾರಣ! ಪಂದ್ಯದ ಬಳಿಕ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಹೇಳಿದ್ದೇನು?
Image Credit: Shreyas Iyer

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಕಲಬುರಗಿಯಲ್ಲಿ ಉಗ್ರರ ನಂಟಿನ ಶಂಕೆ! ಲಷ್ಕರ್‌-ಎ-ತೊಯ್ಬಾ ಸಂಪರ್ಕ ಆರೋಪದಡಿ ವ್ಯಕ್ತಿ ವಶಕ್ಕೆ

ಕಲಬುರಗಿಯಲ್ಲಿ ಉಗ್ರರ ನಂಟಿನ ಶಂಕೆ! ಲಷ್ಕರ್‌-ಎ-ತೊಯ್ಬಾ ಸಂಪರ್ಕ ಆರೋಪದಡಿ ವ್ಯಕ್ತಿ ವಶಕ್ಕೆ

2

ಸರಣಿ ಕೈತಪ್ಪಲು ಇವರೇ‌ ಮುಖ್ಯ ಕಾರಣ! ಪಂದ್ಯದ ಬಳಿಕ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಹೇಳಿದ್ದೇನು?

3

ಗೃಹ ಜ್ಯೋತಿ ಫಲಾನುಭವಿಗಳಿಗೆ ಬಿಗ್ ಶಾಕ್‌! 16 ಲಕ್ಷ ಮಂದಿಗೆ ಉಚಿತ ವಿದ್ಯುತ್‌ ಭಾಗ್ಯ ಕೈತಪ್ಪುವ ಭೀತಿ!

4

ರಾಯಲ್ ಎನ್‌ಫೀಲ್ಡ್‌ನ ಹೊಸ ಬೈಕ್‌ ಲಾಂಚ್‌! ಬಣ್ಣ ಬದಲಿಸುವ ಲುಕ್‌; ಕೇವಲ 125 ಬೈಕ್‌ಗಳಷ್ಟೇ ಲಭ್ಯ!

5

ಮಧ್ಯಪ್ರದೇಶದಲ್ಲಿ ಭೀಕರ ದುರಂತ: ದೇವಸ್ಥಾನಕ್ಕೆ ತೆರಳುತ್ತಿದ್ದ ಭಕ್ತರ ಮೇಲೆ ಹರಿದ ಟ್ರಕ್‌, 12 ಮಂದಿ ಸಾ*ವು!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

India vs West Indies T20 Series: ಭಾರತ ಮತ್ತು ವೆಸ್ಟ್‌ಇಂಡೀಸ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯು 2-2 ಅಂತರದಲ್ಲಿ ಸಮಬಲದೊಂದಿಗೆ ಅಂತ್ಯಗೊಂಡಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ನಿರ್ಣಾಯಕ ಐದನೇ ಪಂದ್ಯಕ್ಕೆ ಮಳೆ ಅಡ್ಡಿಯಾದ ಕಾರಣ, ಸರಣಿಯ ವಿಜೇತರನ್ನ ನಿರ್ಧರಿಸಲು ಸಾಧ್ಯವಾಗಲಿಲ್ಲ. ಸರಣಿಯ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್, ಬ್ಯಾಟಿಂಗ್ ವಿಭಾಗ ಉತ್ತಮ ಪ್ರದರ್ಶನ ನೀಡಿದರೂ ಬೌಲಿಂಗ್‌ನಲ್ಲಿ ತೋರಿದ ಅಸ್ಥಿರತೆಯೇ ಸರಣಿ ಗೆಲ್ಲಲು ಹಿನ್ನಡೆಯಾಯಿತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೌಲಿಂಗ್ ವೈಫಲ್ಯವೇ ಹಿನ್ನಡೆ!

ಐದು ಪಂದ್ಯಗಳ ಸರಣಿಯಲ್ಲಿ ಭಾರತ ಮತ್ತು ವೆಸ್ಟ್‌ಇಂಡೀಸ್ ತಂಡಗಳು ತಲಾ ಎರಡು ಪಂದ್ಯಗಳನ್ನ ಗೆದ್ದುಕೊಂಡಿದ್ದವು. ಮೊದಲ ಪಂದ್ಯದಲ್ಲಿ ಭಾರತ ಗೆಲುವಿನೊಂದಿಗೆ ಶುಭಾರಂಭ ಮಾಡಿತ್ತು. ಆದರೆ ಎರಡನೇ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ತಿರುಗೇಟು ನೀಡಿತು. ಮೂರನೇ ಪಂದ್ಯದಲ್ಲಿ ಭಾರತ ಮತ್ತೆ ಗೆಲುವಿನ ಹಾದಿಗೆ ಮರಳಿದರೂ, ನಾಲ್ಕನೇ ಪಂದ್ಯದಲ್ಲಿ ವಿಂಡೀಸ್ ಪಡೆ ಪ್ರಬಲ ಪ್ರದರ್ಶನ ನೀಡಿ ಸರಣಿಯನ್ನ 2-2ರಿಂದ ಸಮಬಲಗೊಳಿಸಿತು.

ಎರಡನೇ ಮತ್ತು ನಾಲ್ಕನೇ ಪಂದ್ಯಗಳಲ್ಲಿ ಭಾರತೀಯ ಬೌಲರ್‌ಗಳು ಇನ್ನಷ್ಟು ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಿದ್ದರೆ ಸರಣಿಯ ಫಲಿತಾಂಶ ಬೇರೆಯಾಗುವ ಸಾಧ್ಯತೆಯಿತ್ತು ಎಂಬುದು ಶ್ರೇಯಸ್ ಅಯ್ಯರ್ ಅವರ ಅಭಿಪ್ರಾಯ. ಎದುರಾಳಿ ಬ್ಯಾಟರ್‌ಗಳನ್ನ ನಿಯಂತ್ರಿಸುವಲ್ಲಿ ಹಾಗೂ ನಿರ್ಣಾಯಕ ಹಂತಗಳಲ್ಲಿ ಯೋಜನೆಗಳನ್ನ ಸಮರ್ಪಕವಾಗಿ ಕಾರ್ಯಗತಗೊಳಿಸುವಲ್ಲಿ ಭಾರತ ಹಿಂದೆ ಬಿದ್ದಿದ್ದು ತಂಡದ ಪಾಲಿಗೆ ಪ್ರಮುಖ ಪಾಠವಾಗಿದೆ.

ಶಾಯ್ ಹೋಪ್ ಬ್ಯಾಟಿಂಗ್‌ಗೆ ಮೆಚ್ಚುಗೆ

ವೆಸ್ಟ್‌ಇಂಡೀಸ್ ತಂಡದ ನಾಯಕ ಶಾಯ್ ಹೋಪ್ ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಭಾರತೀಯ ಬೌಲರ್‌ಗಳ ವಿರುದ್ಧ ಆಕ್ರಮಣಕಾರಿ ಆಟವಾಡಿದ ಅವರು, ತಂಡಕ್ಕೆ ಪ್ರಮುಖ ರನ್‌ಗಳನ್ನ ತಂದುಕೊಟ್ಟರು. ಸರಣಿಯಲ್ಲಿ ಒಟ್ಟು 261 ರನ್ ಗಳಿಸಿದ ಹೋಪ್, ಎರಡು ಶತಕಗಳನ್ನೂ ದಾಖಲಿಸಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅವರ ಬ್ಯಾಟಿಂಗ್ ಪ್ರದರ್ಶನವು ವಿಂಡೀಸ್ ತಂಡದ ಆತ್ಮವಿಶ್ವಾಸವನ್ನ ಹೆಚ್ಚಿಸಿತು.

ಭಾರತದ ಬೌಲರ್‌ಗಳು ಎದುರಾಳಿ ತಂಡದ ಪ್ರಮುಖ ಬ್ಯಾಟರ್‌ಗಳ ವಿರುದ್ಧ ಹೆಚ್ಚು ಶಿಸ್ತುಬದ್ಧವಾಗಿ ಬೌಲಿಂಗ್ ಮಾಡಬೇಕಿತ್ತು ಎಂಬ ಚರ್ಚೆಗೆ ಈ ಸರಣಿ ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಿದೆ. ಟಿ20 ಕ್ರಿಕೆಟ್‌ನಲ್ಲಿ ಕೆಲವೇ ಓವರ್‌ಗಳಲ್ಲಿ ಪಂದ್ಯದ ಗತಿಯೇ ಬದಲಾಗಬಹುದಾದ್ದರಿಂದ, ರನ್‌ಗಳನ್ನ ನಿಯಂತ್ರಿಸುವುದು ಮತ್ತು ವಿಕೆಟ್‌ಗಳನ್ನ ಪಡೆಯುವುದು ಎರಡೂ ಅತ್ಯಂತ ಮುಖ್ಯವಾಗಿವೆ.

ಆಕ್ರಮಣಕಾರಿ ಆಟವೇ ತಂಡದ ಸಕಾರಾತ್ಮಕ ಅಂಶ

ಸರಣಿಯಲ್ಲಿ ಭಾರತಕ್ಕೆ ಕೆಲವು ನಿರಾಸಾದಾಯಕ ಕ್ಷಣಗಳು ಎದುರಾದರೂ, ಸೋಲಿನ ಬಳಿಕ ತಂಡ ಮತ್ತೆ ಪುಟಿದೆದ್ದು ಗೆಲುವು ಸಾಧಿಸಿದ ರೀತಿ ಗಮನ ಸೆಳೆಯಿತು. ಬ್ಯಾಟಿಂಗ್ ವಿಭಾಗದ ಆಕ್ರಮಣಕಾರಿ ಮನೋಭಾವ ತಂಡದ ಪ್ರಮುಖ ಸಕಾರಾತ್ಮಕ ಅಂಶವಾಗಿತ್ತು. ಆದರೆ ಐದು ಪಂದ್ಯಗಳ ಸರಣಿಯುದ್ದಕ್ಕೂ ಒಂದೇ ರೀತಿಯ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ.

ಮುಂದಿನ ಪಂದ್ಯಗಳಲ್ಲಿ ಈ ಕೊರತೆಗಳನ್ನ ಸರಿಪಡಿಸಿಕೊಳ್ಳುವುದು ತಂಡದ ಪ್ರಮುಖ ಗುರಿಯಾಗಿರಲಿದೆ. ಬ್ಯಾಟಿಂಗ್‌ನಲ್ಲಿ ಉತ್ತಮ ಆರಂಭ ದೊರೆತಾಗ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವುದರ ಜೊತೆಗೆ, ಬೌಲಿಂಗ್ ವಿಭಾಗವೂ ಒತ್ತಡದ ಸಂದರ್ಭಗಳಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕಿದೆ.

ವೈಭವ್ ಸೂರ್ಯವಂಶಿಗೆ ತಾಳ್ಮೆಯ ಸಲಹೆ

ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗದಿರುವ ವಿಚಾರವೂ ಚರ್ಚೆಯಲ್ಲಿದೆ. ತಂಡದಲ್ಲಿ ಈಗಾಗಲೇ ಅನುಭವ ಹೊಂದಿರುವ ಆರಂಭಿಕ ಬ್ಯಾಟರ್‌ಗಳು ಇರುವುದರಿಂದ, ಯುವ ಆಟಗಾರರು ತಮ್ಮ ಅವಕಾಶಕ್ಕಾಗಿ ತಾಳ್ಮೆಯಿಂದ ಕಾಯಬೇಕಾಗುತ್ತದೆ ಎಂಬ ಸಂದೇಶವನ್ನ ನಾಯಕ ನೀಡಿದ್ದಾರೆ.

ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗದಿದ್ದರೂ ಅಭ್ಯಾಸ, ಫಿಟ್‌ನೆಸ್ ಮತ್ತು ತಮ್ಮ ಆಟದ ಪ್ರಕ್ರಿಯೆಯ ಮೇಲೆ ಗಮನ ಕೇಂದ್ರೀಕರಿಸುವುದು ಯುವ ಆಟಗಾರರಿಗೆ ಮುಖ್ಯವಾಗಿದೆ. ಅವಕಾಶ ದೊರೆತಾಗ ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಿದ್ಧರಾಗಿರುವುದೇ ಯಶಸ್ಸಿನ ಪ್ರಮುಖ ಹಾದಿಯಾಗಿದೆ.

ನ್ಯೂಜಿಲೆಂಡ್ ಸರಣಿಯತ್ತ ಟೀಮ್ ಇಂಡಿಯಾ ಚಿತ್ತ

ವೆಸ್ಟ್‌ಇಂಡೀಸ್ ವಿರುದ್ಧದ ಸರಣಿ ಮುಗಿದ ಬೆನ್ನಲ್ಲೇ ಭಾರತದ ಗಮನ ಮುಂದಿನ ಅಂತಾರಾಷ್ಟ್ರೀಯ ಸವಾಲುಗಳತ್ತ ಹರಿದಿದೆ. ನ್ಯೂಜಿಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ವಿವಿಧ ಮಾದರಿಗಳ ಪಂದ್ಯಗಳನ್ನ ಆಡಲಿದ್ದು, ಅಲ್ಲಿನ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವುದು ತಂಡಕ್ಕೆ ಪ್ರಮುಖ ಸವಾಲಾಗಲಿದೆ.

ವಿದೇಶಿ ಪಿಚ್‌ಗಳಲ್ಲಿ ವೇಗ ಮತ್ತು ಬೌನ್ಸ್‌ಗೆ ಹೊಂದಿಕೊಳ್ಳುವುದರ ಜೊತೆಗೆ, ಬೌಲಿಂಗ್ ಯೋಜನೆಗಳನ್ನ ಪರಿಣಾಮಕಾರಿಯಾಗಿ ಜಾರಿಗೆ ತರುವುದು ಭಾರತದ ಯಶಸ್ಸಿಗೆ ನಿರ್ಣಾಯಕವಾಗಲಿದೆ. ವೆಸ್ಟ್‌ಇಂಡೀಸ್ ವಿರುದ್ಧದ ಸರಣಿಯಲ್ಲಿ ಕಂಡುಬಂದ ತಪ್ಪುಗಳನ್ನ ಸರಿಪಡಿಸಿಕೊಂಡು ಮುಂದಿನ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುವುದು ತಂಡದ ಗುರಿಯಾಗಿರಲಿದೆ.

ಒಟ್ನಲ್ಲಿ ಭಾರತ ಮತ್ತು ವೆಸ್ಟ್‌ಇಂಡೀಸ್ ನಡುವಿನ ಟಿ20 ಸರಣಿಯು 2-2ರಿಂದ ಅಂತ್ಯಗೊಂಡಿದ್ದು, ಮಳೆ ನಿರ್ಣಾಯಕ ಪಂದ್ಯದ ಫಲಿತಾಂಶಕ್ಕೆ ಅಡ್ಡಿಯಾಯಿತು. ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತಕ್ಕೆ ಬೌಲಿಂಗ್‌ನಲ್ಲಿನ ಅಸ್ಥಿರತೆ ಸರಣಿ ಗೆಲ್ಲುವ ಅವಕಾಶವನ್ನ ಕಸಿದುಕೊಂಡಿತು. ಮುಂದಿನ ಸರಣಿಗಳಲ್ಲಿ ಈ ಕೊರತೆಗಳನ್ನ ಸರಿಪಡಿಸಿಕೊಳ್ಳಲು ಟೀಮ್ ಇಂಡಿಯಾ ಯಾವ ರೀತಿಯ ಬದಲಾವಣೆಗಳನ್ನ ಮಾಡಲಿದೆ ಎಂಬುದರ ಮೇಲೆ ಕ್ರಿಕೆಟ್ ಅಭಿಮಾನಿಗಳ ಗಮನ ನೆಟ್ಟಿದೆ.

Add Zee News as a Preferred Source
TAGS:
Cricket
Kannada News