• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕ್ರೀಡೆ
  • /ಆಫ್-ಸ್ಪಿನ್‌ ಬೌಲರ್‌ ಆಗಿದ್ದ ನಾನಾ ಪಾಟೇಕರ್.. ಈ ಸ್ಟಾರ್‌ ಕ್ರಿಕೆಟರ್‌ ಔಟ್‌ ಆದ್ರೆ ಊಟನೇ ಮಾಡ್ತಿರಲಿಲ್ಲ

ಆಫ್-ಸ್ಪಿನ್‌ ಬೌಲರ್‌ ಆಗಿದ್ದ ನಾನಾ ಪಾಟೇಕರ್.. ಈ ಸ್ಟಾರ್‌ ಕ್ರಿಕೆಟರ್‌ ಔಟ್‌ ಆದ್ರೆ ಊಟನೇ ಮಾಡ್ತಿರಲಿಲ್ಲ

ನಾನಾ ಪಾಟೇಕರ್ ಭಾರತದ ಪ್ರಸಿದ್ಧ ನಟನಾದರು ಕ್ರಿಕೆಟ್‌ ಎಂದರೆ ಸಣ್ಣವರಿದ್ದಗಿನಿಂದ ಬಹಳಷ್ಟು ಹುಚ್ಚು ಬೆಳೆಸಿಕೊಂಡಿದ್ದರು. ಚಿನ್ನಕವರಿದ್ದಾಗಲೇ ಕ್ರಿಕೆಟ್‌ನ ದೊಡ್ಡ ಅಭಿಮಾನಿಯಾಗಿದ್ದರು.

Written ByBhimappa
Published: Oct 08, 2026, 11:31 AM IST|Updated: Oct 08, 2026, 11:41 AM IST
joinshare
ಆಫ್-ಸ್ಪಿನ್‌ ಬೌಲರ್‌ ಆಗಿದ್ದ ನಾನಾ ಪಾಟೇಕರ್.. ಈ ಸ್ಟಾರ್‌ ಕ್ರಿಕೆಟರ್‌ ಔಟ್‌ ಆದ್ರೆ ಊಟನೇ ಮಾಡ್ತಿರಲಿಲ್ಲ
Image Credit: Nana Patekar

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ನಾನಾ ಪಾಟೇಕರ್ ಅವರ ಕೊನೆಯ ಆಸೆ ಏನಿತ್ತು ಗೊತ್ತಾ? ನನ್ನ ಫೋಟೋಗೆ ಹಾರ ಹಾಕಬೇಡಿ ಎಂದಿದ್ಯಾಕೆ

ನಾನಾ ಪಾಟೇಕರ್ ಅವರ ಕೊನೆಯ ಆಸೆ ಏನಿತ್ತು ಗೊತ್ತಾ? ನನ್ನ ಫೋಟೋಗೆ ಹಾರ ಹಾಕಬೇಡಿ ಎಂದಿದ್ಯಾಕೆ

2

‎‎ಹೆತ್ತ ತಾಯಿಯನ್ನೇ ಹೊಡೆದು ಕೊಂ*ದ ಮಗ.. ಪೊಲೀಸರ ಮುಂದೆ ಆರೋಪಿ ಹೇಳಿದ 3 ಸತ್ಯಗಳು

3

ಕೇವಲ ₹35 ಸಂಬಳಕ್ಕೆ ಸಿನಿಮಾ ಪೋಸ್ಟರ್ ಬಿಡಿಸುತ್ತಿದ್ದ ಹುಡುಗನೇ ಮುಂದೆ ಚಿತ್ರರಂಗದಲ್ಲಿ ಇತಿಹಾಸ ಬರೆದ!

4

ಮೊಹಮ್ಮದ್ ಶಮಿ ಬಿಗ್‌ ಕಮ್‌ಬ್ಯಾಕ್‌ ಫಿಕ್ಸ್‌.. ಟೀಕೆಗಳಿಗೆ ಟಕ್ಕರ್‌ ಕೊಡಲಿರೋ ಟೀಮ್‌ ಇಂಡಿಯಾದ ಪೇಸರ್

5

ಪುಟ್ಟಪ್ಪನ ಕ್ಯಾಂಪ್ ಬಳಿ ದುರಂತ!.. ತುಂಗಾ ನದಿಯಲ್ಲಿ ಯುವಕ ನಾಪತ್ತೆ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Actor Nana Patekar Dies At 75: ಭಾರತ ಚಿತ್ರರಂಗದ ಬಹುಮುಖ ಪ್ರತಿಭೆ, ಹಿರಿಯ ನಟ ನಾನಾ ಪಾಟೇಕರ್‌ ಅವರು ಕಾರ್ಡಿಯಾಕ್ ಅರೆಸ್ಟ್‌ನಿಂದ ನಿಧನರಾಗಿದ್ದಾರೆ. ನಾನಾ ಪಾಟೇಕರ್‌ ಅವರು ಗೋವಾದ ಡೊನಾ ಪೌಲಾದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾಗ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ವೈದ್ಯರು ಸುಮಾರು 45 ನಿಮಿಷಗಳ ಕಾಲ ಸಿಪಿಆರ್ ಮಾಡಲು ಪ್ರಯತ್ನಿಸಿದರೂ ಬದುಕಿಸಿಕೊಳ್ಳಲು ಆಗಲಿಲ್ಲ. ಅಕ್ಟೋಬರ್‌ 8 ರಂದು ಬೆಳಗಿನ ಜಾವ 5 ಗಂಟೆ 10 ನಿಮಿಷಕ್ಕೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ. ಹಿರಿಯ ನಟ ನಾನಾ ಪಾಟೇಕರ್ ಅವರು 75ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ನಾನಾ ಪಾಟೇಕರ್ ಅವರು ಪ್ರಸಿದ್ಧ ನಟರಾಗಿದ್ದರು ಕ್ರಿಕೆಟ್‌ ಎಂದರೆ ಜಾಸ್ತಿ ಹುಚ್ಚು ಇತ್ತು. ಆಫ್‌ಸ್ಪಿನ್ನರ್‌ ಕೂಡ ಆಗಿದ್ದ ಅವರು, ಈ ಸ್ಟಾರ್‌ ಕ್ರಿಕೆಟರ್ ಔಟ್‌ ಆಗಿದ್ರೆ ಊಟನೇ ಬಿಟ್ಟು ಬಿಡುತ್ತಿದ್ದರು.     

ನಾನಾ ಪಾಟೇಕರ್‌ಗೆ ಕ್ರಿಕೆಟ್ ಅಂದ್ರೆ ಬಹಳ ಪ್ರೀತಿ..

ನಾನಾ ಪಾಟೇಕರ್ ಭಾರತದ ಪ್ರಸಿದ್ಧ ನಟನಾದರು ಕ್ರಿಕೆಟ್‌ ಎಂದರೆ ಸಣ್ಣವರಿದ್ದಗಿನಿಂದ ಬಹಳಷ್ಟು ಹುಚ್ಚು ಬೆಳೆಸಿಕೊಂಡಿದ್ದರು. ಚಿನ್ನಕವರಿದ್ದಾಗಲೇ ಕ್ರಿಕೆಟ್‌ನ ದೊಡ್ಡ ಅಭಿಮಾನಿಯಾಗಿದ್ದರು. 2015ರಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಾನಾ ಪಾಟೇಕರ್‌ ಅವರು, ಕ್ರಿಕೆಟ್‌ನ ಮೇಲೆ ನನಗೆ ಅಪಾರವಾದ ಪ್ರೀತಿ, ಹುಚ್ಚು ಇದೆ. ಬಾಲ್ಯದಿಂದಲೂ ನನಗೆ ಕ್ರಿಕೆಟ್‌ ಎಂದರೆ ಎಲ್ಲಿಲ್ಲದ ಪ್ರೀತಿ ಇದೆ. ಅದು ನನಗೆ ಗೊತ್ತಿಲ್ಲದಂತೆ ನನ್ನೊಳಗೆ ಬೆಳೆದು ಬಿಟ್ಟಿದೆ. ಬಾಲ್ಯದಿಂದಲೇ ಉತ್ತಮ ಕ್ರಿಕೆಟಿಗನಾಗಿದ್ದೆ. ಆಫ್-ಸ್ಪಿನ್ ಬೌಲಿಂಗ್ ಕೂಡ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದರು.

ವಯಸ್ಸಿನಲ್ಲಿ ಕ್ರಿಕೆಟ್ ಬಗ್ಗೆ ಬಹಳ ಮಾತನಾಡುತ್ತಿದ್ದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯುವಾಗಲೆಲ್ಲಾ ಟಿವಿ ಮುಂದೆ ಕುಳಿತುಕೊಳ್ಳುತ್ತಿದ್ದೆ. ಪಂದ್ಯ ಸಂಪೂರ್ಣವಾಗಿ ಮುಗಿಯುವವರೆಗೂ ಎದ್ದೇಳುತ್ತಿರಲಿಲ್ಲ. ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾ, ಬಾಲ್ಯದಲ್ಲಿ ಆಫ್-ಸ್ಪಿನ್ನರ್ ಆಗಿದ್ದೆ. ಒಳ್ಳೆಯ ಬೌಲಿಂಗ್‌ ಮಾಡುತ್ತಿದ್ದೆ. ಜೇಬಲ್ಲಿ ಹಣ ಇಲ್ಲದಿದ್ದರೂ ಕ್ರಿಕೆಟ್‌ ನನ್ನ ಜೊತೆಯೇ ಬಂದಿತ್ತು. ಅದನ್ನು ಸಂಪೂರ್ಣವಾಗಿ ಮೈಗೂಡಿಸಿಕೊಂಡಿದ್ದೆ. ದುಡ್ಡು ಕೊಟ್ಟು ಕ್ರಿಕೆಟ್ ಆಡುವಷ್ಟು ಹಣ ನಮ್ಮ ಬಳಿ ಇರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನಾನು ಮುಂಬೈನ ಶಿವಾಜಿ ಪಾರ್ಕ್‌ಗೆ ನಡೆದುಕೊಂಡು ಹೋಗಿ ಅಲ್ಲಿ ನೆಟ್ ಅಭ್ಯಾಸ ಮಾಡುತ್ತಿದ್ದೆ. ಬೇರೆ ಬೇರೆ ಜನರಿಗೆ ಬೌಲಿಂಗ್ ಮಾಡುತ್ತಿದ್ದೇ ಎಂದು ಹೇಳಿಕೊಂಡಿದ್ದರು.

ಸಂದರ್ಶನದಲ್ಲಿ ಮಾತನಾಡುತ್ತ ನಾನಾ ಪಾಟೇಕರ್‌ ಅವರು ನಾನು ಈಗಲೂ ಕೇವಲ 10 ದಿನ ಬೌಲಿಂಗ್‌ ಅಭ್ಯಾಸ ಮಾಡಿದರೆ, ಉತ್ತಮವಾದ ವಿಕೆಟ್‌ಗಳನ್ನು ಉರುಳಿಸಬಲ್ಲೇ ಎನ್ನುವ ಆತ್ಮವಿಶ್ವಾಸ ನನ್ನಲ್ಲಿದೆ. ಕ್ರಿಕೆಟ್‌ ಮೇಲೆ ಇದ್ದ ಪ್ರೀತಿ ಯಾವಾತ್ತೂ ಕಡಿಮೆ ಆಗಲ್ಲ. ಅದು ನನ್ನ ದೊಡ್ಡ ಕನಸು ಆಗಿತ್ತು. ಬಾಲ್ಯದಲ್ಲಿ ನಾನು ಆಡಿದ ಕ್ರಿಕೆಟ್‌ ಪಂದ್ಯಗಳು, ಕೆಲ ಟೂರ್ನಮೆಂಟ್‌ಗಳು, ಪಂದ್ಯಗಳಲ್ಲಿ ನನ್ನ ಪ್ರದರ್ಶನ ಈಗಲೂ ನನ್ನ ಕಣ್ಣು ಮುಂದೆ ಆಗಾಗ ಬರುತ್ತಿರುತ್ತವೆ ಎಂದು ನಾನಾ ಪಾಟೇಕರ್‌ ಅವರು ಸಂದರ್ಶನದಲ್ಲಿ ಹೇಳಿದ್ದರು.

ವಯಸ್ಸಾದರೂ ನಾನಾ ಪಾಟೇಕರ್ ಅವರಿಗೆ ಕ್ರಿಕೆಟ್ ಮೇಲಿನ ಉತ್ಸಾಹ ಕಡಿಮೆಯಾಗಿರಲಿಲ್ಲ. ವಿರಾಟ್‌ ಕೊಹ್ಲಿಯ ದೊಡ್ಡ ಅಭಿಮಾನಿ ಅಗಿದ್ದ ನಾನಾ ಪಾಟೇಕರ್‌, ಅವರ ಬ್ಯಾಟಿಂಗ್‌ ಅನ್ನು ಮೆಚ್ಚಿಕೊಂಡಿದ್ದರು. ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ಬಂತು ಎಂದರೆ ಟಿವಿ ಸ್ಕ್ರೀನ್‌ ಬಿಟ್ಟು ಹೋಗುತ್ತಿರಲಿಲ್ಲ. ವಿರಾಟ್ ಕೊಹ್ಲಿ ಕ್ರೀಸ್‌ಗೆ ಬಂದ ಕೂಡಲೇ ಅಥವಾ ಸೆಂಚುರಿ ಸಮೀಪವಿದ್ದಾಗ ಔಟ್ ಆದಲ್ಲಿ ನಾನಾ ಪಾಟೇಕರ್‌ ಅವರು ಊಟನೇ ಬಿಡುತ್ತಿದ್ದರು. ವಿರಾಟ್‌ ಕೊಹ್ಲಿ ಔಟ್‌ ಆಗುತ್ತಿದ್ದಂತೆ ಮುಂದಿನ ಪಂದ್ಯ ವೀಕ್ಷಣೆಗೆ ಮನಸ್ಸೇ ಬರುವುದಿಲ್ಲ ಎಂದು ಸಂದರ್ಶನವೊಂದರಲ್ಲಿ ಸ್ವತಹ ಅವರೇ ಹೇಳಿದ್ದರು.

ನಾನಾ ಪಾಟೇಕರ್ ಅವರು ಹೇಳಿದ ಈ ಹೇಳಿಕೆಗಳು 2025 ರ ಜನವರಿ ಬಹಳ ಜನಪ್ರಿಯವಾಯಿತು. ಎಲ್ಲೆಡೆ ವೈರಲ್‌ ಆಗಿದ್ದವು. ಆ ಸಮಯದಲ್ಲಿ ವಿರಾಟ್ ಕೊಹ್ಲಿ ಬೇಗ ಔಟ್ ಆದ ನಂತರ, ಜನರು ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಮೀಮ್ಸ್ ಹಂಚಿಕೊಂಡಿದ್ದರು. ಕ್ರಿಕೆಟ್ ಮತ್ತು ಸಿನಿಮಾ ಎರಡನ್ನೂ ಹೋಲಿಸುತ್ತಾ, ಎರಡರಲ್ಲೂ ಅಗ್ನಿಪರೀಕ್ಷೆಯಂತಹ ಪರಿಸ್ಥಿತಿ ಇದೆ. ಕ್ರಿಕೆಟ್ ಆಟ ಒಂದಿನದಿಂದ ನಾಲ್ಕು ದಿನಗಳವರೆಗೆ ಇರುತ್ತದೆ. ಆದರೆ ಕಲಾವಿದರ ಕೆಲಸ ಒಂದೂವರೆ ರಿಂದ ಎರಡು ವರ್ಷಗಳವರೆಗೆ ಇರುತ್ತದೆ. ಕ್ರಿಕೆಟ್‌ ಮತ್ತು ಸಿನಿಮಾದ ಅಂತಿಮ ಫಲಿತಾಂಶ ಏನೆಂಬುದು ಸಾರ್ವಜನಿಕರೇ ನಿರ್ಧಾರ ಮಾಡುತ್ತಾರೆ ಎಂದು ಮನ ತುಂಬಿ ನಾನಾ ಪಾಟೇಕರ್‌ ಅವರು ಮಾತನಾಡಿದ್ದರು.

ನಾನಾ ಪಾಟೇಕರ್ ಸಾವು ಬಾಲಿವುಡ್‌ನಲ್ಲಿ ಆಘಾತ ತರಿಸಿದೆ. ನಟ, ನಟಿಯರು ಸೇರಿದಂತೆ ಸಾಕಷ್ಟು ಜನರು ಕಂಬನಿ ಮಿಡಿಯುತ್ತಿದ್ದಾರೆ. ಇಂದು ಮೃತದೇಹದ ಮರಣೋತ್ತರ ಮಾಡಿದ ಬಳಿಕ ಕುಟುಂಬಕ್ಕೆ ಹಸ್ತಾಂತರ ಮಾಡಲಾಗುತ್ತದೆ. ನಾನಾ ಪಾಟೇಕರ್ ಅವರ ಮಗ ಮಲ್ಹಾರ್ ಪಾಟೇಕರ್ ಕೂಡ ಅವರು ತೀವ್ರ ದುಃಖದಲ್ಲಿದ್ದಾರೆ. ತಂದೆ ಮೃತಪಟ್ಟ ಸಮಯದಲ್ಲಿ ಮಲ್ಹಾರ್ ಪಾಟೇಕರ್‌ ಅವರು ಪುಣೆಯಲ್ಲಿದ್ದರು. ಸುದ್ದಿ ತಿಳಿದ ಕೂಡಲೇ ಗೋವಾಕ್ಕೆ ತೆರಳಿದ್ದರು.

Add Zee News as a Preferred Source
TAGS:
Cricket