• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕ್ರೀಡೆ
  • /IPL 2027: ಗರಿಷ್ಠ ಮೂಲ ಬೆಲೆ ಘೋಷಿಸಿದ ಇಬ್ಬರು ಭಾರತೀಯರು; ಈ ಆಟಗಾರರ ಮೇಲೆ ಫ್ರಾಂಚೈಸಿಗಳ ಕಣ್ಣು!

IPL 2027: ಗರಿಷ್ಠ ಮೂಲ ಬೆಲೆ ಘೋಷಿಸಿದ ಇಬ್ಬರು ಭಾರತೀಯರು; ಈ ಆಟಗಾರರ ಮೇಲೆ ಫ್ರಾಂಚೈಸಿಗಳ ಕಣ್ಣು!

IPL 2027ರ ಮಿನಿ ಹರಾಜಿಗೂ ಮುನ್ನ ಭಾರತೀಯ ಆಟಗಾರರಾದ ಅವೇಶ್ ಖಾನ್ ಮತ್ತು ದೀಪಕ್ ಚಹರ್ ತಲಾ ₹2 ಕೋಟಿ ಮೂಲ ಬೆಲೆಯ ಪಟ್ಟಿಯಲ್ಲಿದ್ದಾರೆ. ಈ ಹಿಂದೆ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆದಿದ್ದ ಈ ಇಬ್ಬರು ವೇಗದ ಬೌಲರ್‌ಗಳ ಮೇಲೆ ಹರಾಜಿನಲ್ಲಿ ಫ್ರಾಂಚೈಸಿಗಳು ಆಸಕ್ತಿ ತೋರುತ್ತವೆಯೇ ಎಂಬ ಕುತೂಹಲ ಮೂಡಿದೆ.

Written ByPuttaraj K Alur
Published: Nov 26, 2026, 15:11 IST|Updated: Nov 26, 2026, 15:52 IST
joinshare
IPL 2027: ಗರಿಷ್ಠ ಮೂಲ ಬೆಲೆ ಘೋಷಿಸಿದ ಇಬ್ಬರು ಭಾರತೀಯರು; ಈ ಆಟಗಾರರ ಮೇಲೆ ಫ್ರಾಂಚೈಸಿಗಳ ಕಣ್ಣು!
Image Credit: IPL 2027 Mini Auction

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ದೆಹಲಿಯನ್ನೇ ಹಿಂದಿಕ್ಕಿದ ಬೆಂಗಳೂರು: ದೇಶದಲ್ಲೇ ನಂ.1 ಪ್ರವಾಸಿ ತಾಣವಾಗಿ ಹೊರಹೊಮ್ಮಿದ ಸಿಲಿಕಾನ್ ಸಿಟಿ!

ದೆಹಲಿಯನ್ನೇ ಹಿಂದಿಕ್ಕಿದ ಬೆಂಗಳೂರು: ದೇಶದಲ್ಲೇ ನಂ.1 ಪ್ರವಾಸಿ ತಾಣವಾಗಿ ಹೊರಹೊಮ್ಮಿದ ಸಿಲಿಕಾನ್ ಸಿಟಿ!

2

ಗೆಳೆಯನ ಸಾವು, 500 ರೂ. ನೋಟಿನಲ್ಲಿ ಡೆತ್‌ ರಹಸ್ಯ..! ಗಗನ್‌ ಕಥೆ ಕೇಳಿ ಸ್ಪರ್ಧಿಗಳು ಭಾವುಕ

3

IPL 2027: ಗರಿಷ್ಠ ಮೂಲ ಬೆಲೆ ಘೋಷಿಸಿದ ಇಬ್ಬರು ಭಾರತೀಯರು; ಈ ಆಟಗಾರರ ಮೇಲೆ ಫ್ರಾಂಚೈಸಿಗಳ ಕಣ್ಣು!

4

Kannada News Today Live : "ಆಶಾ" ಬೇಡಿಕೆಗೆ ನೋ ಎಂದ ಆರೋಗ್ಯ ಸಚಿವ ಖಾದರ್‌ : ಸಿಎಂ, ಆರ್ಥಿಕ ಇಲಾಖೆ ಜೊತೆ ಚರ್ಚಿಸಿ ನಿರ್ಧಾರ

5

ಟೀಮ್ ಇಂಡಿಯಾಗೆ ʼಮಾಡು ಇಲ್ಲವೇ ಮಡಿ ಸ್ಥಿತಿʼ: ಇಲ್ಲಿದೆ WTC ಫೈನಲ್ ತಲುಪುವ ಲೆಕ್ಕಾಚಾರ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

IPL 2027 Mini Auction: ಬಹುನಿರೀಕ್ಷಿತ ಐಪಿಎಲ್ 2027ರ ಮಿನಿ ಹರಾಜಿಗೆ ಸಿದ್ಧತೆಗಳು ಜೋರಾಗಿವೆ. ಮುಂಬರುವ ಹರಾಜಿನಲ್ಲಿ ಯಾವ ಆಟಗಾರರಿಗೆ ಅದೃಷ್ಟ ಒಲಿಯಲಿದೆ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಇದರ ನಡುವೆ ಆಟಗಾರರ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಒಟ್ಟು 1,220 ಕ್ರಿಕೆಟಿಗರು ಹರಾಜಿಗಾಗಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ವಿಶೇಷವೆಂದರೆ ಈ ಬಾರಿ ಗರಿಷ್ಠ ₹2 ಕೋಟಿ ಮೂಲ ಬೆಲೆ ನಿಗದಿಪಡಿಸಿಕೊಂಡಿರುವ ಭಾರತೀಯ ಆಟಗಾರರು ಕೇವಲ ಇಬ್ಬರು ಮಾತ್ರ. ಟೀಮ್ ಇಂಡಿಯಾವನ್ನ ಪ್ರತಿನಿಧಿಸಿರುವ ವೇಗಿಗಳಾದ ಅವೇಶ್ ಖಾನ್ ಮತ್ತು ದೀಪಕ್ ಚಹರ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

1,220 ಆಟಗಾರರಿಂದ ನೋಂದಣಿ!

ಐಪಿಎಲ್ 2027ರ ಮಿನಿ ಹರಾಜು ಡಿಸೆಂಬರ್ 16ರಂದು ಗೋವಾದಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ ಪಾಲ್ಗೊಳ್ಳಲು ಒಟ್ಟು 1,220 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 939 ಭಾರತೀಯ ಆಟಗಾರರಿದ್ದರೆ, 281 ವಿದೇಶಿ ಕ್ರಿಕೆಟಿಗರು ಸೇರಿದ್ದಾರೆ. ಈ ಬಾರಿ ಹಲವು ಪ್ರಮುಖ ಆಟಗಾರರು ಹರಾಜಿನ ಮೂಲಕ ಹೊಸ ತಂಡವನ್ನ ಸೇರಿಕೊಳ್ಳುವ ನಿರೀಕ್ಷೆಯಿದೆ. ಭಾರತೀಯ ಆಟಗಾರರ ಪೈಕಿ ಹಲವರು ವಿವಿಧ ಮೂಲ ಬೆಲೆಗಳ ವಿಭಾಗದಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ ಗರಿಷ್ಠ ₹2 ಕೋಟಿ ಮೂಲ ಬೆಲೆಯ ವಿಭಾಗದಲ್ಲಿ ಸ್ಥಾನ ಪಡೆದಿರುವುದು ಇಬ್ಬರು ಮಾತ್ರವೆಂಬುದು ಈ ಬಾರಿಯ ಹರಾಜಿನ ಪ್ರಮುಖ ವಿಶೇಷತೆಯಾಗಿದೆ.

ದೀಪಕ್ ಚಹರ್‌ಗೆ ₹2 ಕೋಟಿ ಮೂಲ ಬೆಲೆ

ಮುಂಬೈ ಇಂಡಿಯನ್ಸ್ ತಂಡದ ಪರ ಕಳೆದ ಐಪಿಎಲ್ ಆವೃತ್ತಿಯಲ್ಲಿ ಆಡಿದ್ದ ವೇಗಿ ದೀಪಕ್ ಚಹರ್ ಈ ಬಾರಿ ₹2 ಕೋಟಿ ಮೂಲ ಬೆಲೆಯೊಂದಿಗೆ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಕಳೆದ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದಿಂದ ಅವರು ₹9.25 ಕೋಟಿ ಸಂಭಾವನೆ ಪಡೆದಿದ್ದರು. ಆದರೆ ಮುಂಬರುವ ಐಪಿಎಲ್ ಆವೃತ್ತಿಗೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ದೀಪಕ್ ಚಹರ್‌ರನ್ನ ತಂಡದಿಂದ ಬಿಡುಗಡೆ ಮಾಡಿದೆ. ಹೀಗಾಗಿ ಇದೀಗ ಅವರು ಮಿನಿ ಹರಾಜಿನ ಮೂಲಕ ಮತ್ತೊಂದು ತಂಡವನ್ನ ಸೇರುವ ಅವಕಾಶ ಎದುರು ನೋಡುತ್ತಿದ್ದಾರೆ. ತಮ್ಮ ಮೂಲ ಬೆಲೆಯನ್ನ ₹2 ಕೋಟಿಗೆ ನಿಗದಿಪಡಿಸಿಕೊಂಡಿರುವ ದೀಪಕ್ ಚಹರ್, ಈ ಬಾರಿಯ ಹರಾಜಿನ ಪ್ರಮುಖ ಭಾರತೀಯ ಆಟಗಾರರಲ್ಲಿ ಒಬ್ಬರಾಗಿದ್ದಾರೆ.

ಅವೇಶ್ ಖಾನ್ ಕೂಡ ₹2 ಕೋಟಿ ಬ್ರಾಕೆಟ್‌ನಲ್ಲಿ!

ದೀಪಕ್ ಚಹರ್ ಜೊತೆಗೆ ವೇಗಿ ಅವೇಶ್ ಖಾನ್ ಕೂಡ ಗರಿಷ್ಠ ಮೂಲ ಬೆಲೆ ಘೋಷಿಸಿರುವ ಮತ್ತೊಬ್ಬ ಭಾರತೀಯ ಆಟಗಾರ. ಕಳೆದ ಐಪಿಎಲ್ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನ ಪ್ರತಿನಿಧಿಸಿದ್ದ ಅವೇಶ್ ಖಾನ್ ₹9.75 ಕೋಟಿ ಸಂಭಾವನೆ ಪಡೆದಿದ್ದರು. ಆದರೆ ಲಕ್ನೋ ಫ್ರಾಂಚೈಸಿ ಈ ಬಾರಿ ಅವರನ್ನ ತಂಡದಲ್ಲಿ ಉಳಿಸಿಕೊಳ್ಳದೆ ಬಿಡುಗಡೆ ಮಾಡಿದೆ. ಇದೀಗ ಅವೇಶ್ ಖಾನ್ ₹2 ಕೋಟಿ ಮೂಲ ಬೆಲೆಯೊಂದಿಗೆ ಮಿನಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಮುಂಬರುವ ಹರಾಜಿನಲ್ಲಿ ಅವರಿಗಾಗಿ ಯಾವ ಫ್ರಾಂಚೈಸಿ ಬಿಡ್ ಮಾಡಲಿದೆ ಎಂಬ ಕುತೂಹಲ ಮೂಡಿದೆ.

ಉಳಿದ ಭಾರತೀಯ ಆಟಗಾರರ ಮೂಲ ಬೆಲೆ ಎಷ್ಟು?

ಅವೇಶ್ ಖಾನ್ ಮತ್ತು ದೀಪಕ್ ಚಹರ್ ಹೊರತುಪಡಿಸಿ, ಭಾರತ ತಂಡವನ್ನ ಪ್ರತಿನಿಧಿಸಿರುವ ಹಲವು ಆಟಗಾರರು ಕೂಡ ಐಪಿಎಲ್ 2027ರ ಮಿನಿ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಉಮೇಶ್ ಯಾದವ್, ಜಯದೇವ್ ಉನಾದ್ಕತ್, ತುಷಾರ್ ದೇಶಪಾಂಡೆ, ಆಕಾಶ್ ದೀಪ್, ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ರಾಹುಲ್ ತ್ರಿಪಾಠಿ, ದೀಪಕ್ ಹೂಡಾ ಮತ್ತು ಉಮ್ರಾನ್ ಮಲಿಕ್ ಸೇರಿದಂತೆ ಹಲವು ಆಟಗಾರರು ಈ ಪಟ್ಟಿಯಲ್ಲಿದ್ದಾರೆ. ಇವರಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಮೂಲ ಬೆಲೆಯ ವಿಭಾಗದಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ ಗರಿಷ್ಠ ₹2 ಕೋಟಿ ಮೂಲ ಬೆಲೆ ಘೋಷಿಸಿಕೊಂಡಿರುವ ಭಾರತೀಯ ಆಟಗಾರರ ಪಟ್ಟಿಯಲ್ಲಿ ಅವೇಶ್ ಖಾನ್ ಮತ್ತು ದೀಪಕ್ ಚಹರ್ ಮಾತ್ರ ಕಾಣಿಸಿಕೊಂಡಿದ್ದಾರೆ.

ಡಿಸೆಂಬರ್ 16ರಂದು ಗೋವಾದಲ್ಲಿ ಮಿನಿ ಹರಾಜು

ಐಪಿಎಲ್ 2027ರ ಮಿನಿ ಹರಾಜು ಡಿಸೆಂಬರ್ 16ರಂದು ಗೋವಾದಲ್ಲಿ ನಡೆಯಲಿದ್ದು, ಈಗಾಗಲೇ ಆಟಗಾರರ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ. 1,220 ಆಟಗಾರರ ಪೈಕಿ ಯಾವ ಆಟಗಾರರಿಗೆ ಯಾವ ತಂಡದಲ್ಲಿ ಅವಕಾಶ ಸಿಗಲಿದೆ ಎಂಬುದನ್ನ ಕಾದು ನೋಡಬೇಕಿದೆ. ಒಟ್ನಲ್ಲಿ ಕಳೆದ ಆವೃತ್ತಿಯಲ್ಲಿ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆದಿದ್ದ ಅವೇಶ್ ಖಾನ್ ಮತ್ತು ದೀಪಕ್ ಚಹರ್ ಇದೀಗ ತಮ್ಮ ತಂಡಗಳಿಂದ ಬಿಡುಗಡೆಯಾಗಿ ₹2 ಕೋಟಿ ಮೂಲ ಬೆಲೆಯೊಂದಿಗೆ ಹರಾಜಿನ ಅಖಾಡಕ್ಕೆ ಇಳಿಯುತ್ತಿದ್ದಾರೆ. ಈ ಇಬ್ಬರು ಭಾರತೀಯ ವೇಗಿಗಳ ಮೇಲೆ ಫ್ರಾಂಚೈಸಿಗಳು ಎಷ್ಟು ಆಸಕ್ತಿ ತೋರಿಸಲಿವೆ ಎಂಬುದು ಡಿಸೆಂಬರ್ 16ರ ಹರಾಜಿನಲ್ಲಿ ತಿಳಿಯಲಿದೆ.

Add Zee News as a Preferred Source
TAGS:
Cricket
Sports
Kannada News