• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ದೆಹಲಿಯನ್ನೇ ಹಿಂದಿಕ್ಕಿದ ಬೆಂಗಳೂರು: ದೇಶದಲ್ಲೇ ನಂ.1 ಪ್ರವಾಸಿ ತಾಣವಾಗಿ ಹೊರಹೊಮ್ಮಿದ ಸಿಲಿಕಾನ್ ಸಿಟಿ!

ದೆಹಲಿಯನ್ನೇ ಹಿಂದಿಕ್ಕಿದ ಬೆಂಗಳೂರು: ದೇಶದಲ್ಲೇ ನಂ.1 ಪ್ರವಾಸಿ ತಾಣವಾಗಿ ಹೊರಹೊಮ್ಮಿದ ಸಿಲಿಕಾನ್ ಸಿಟಿ!

ವರ್ಷಾಂತ್ಯದ ರಜೆ ಕಳೆಯಲು ದೇಶೀಯ ಪ್ರಯಾಣಿಕರು ಹೆಚ್ಚು ಆಯ್ಕೆ ಮಾಡುತ್ತಿರುವ ತಾಣಗಳ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನಕ್ಕೇರಿದೆ. ಕ್ಲಿಯರ್‌ಟ್ರಿಪ್ ವರದಿಯ ಪ್ರಕಾರ, ಮುಂಗಡ ವಿಮಾನ ಟಿಕೆಟ್ ಬುಕಿಂಗ್‌ನಲ್ಲಿ ಬೆಂಗಳೂರು ಶೇ.6.2ರಷ್ಟು ವಾರ್ಷಿಕ ಬೆಳವಣಿಗೆ ದಾಖಲಿಸಿ, ದೆಹಲಿಯನ್ನ ಹಿಂದಿಕ್ಕಿದೆ. ಬೆಂಗಳೂರಿನ ಆಹ್ಲಾದಕರ ಹವಾಮಾನ, ಆಹಾರ ವೈವಿಧ್ಯ, ಸಂಸ್ಕೃತಿ ಹಾಗೂ ಮೈಸೂರು, ಕೊಡಗು, ಚಿಕ್ಕಮಗಳೂರು ಮತ್ತು ಊಟಿಯಂತಹ ಪ್ರವಾಸಿ ತಾಣಗಳಿಗೆ ಇರುವ ಸಂಪರ್ಕ ಪ್ರವಾಸಿಗರನ್ನ ಆಕರ್ಷಿಸುತ್ತಿವೆ. ಅಂತಾರಾಷ್ಟ್ರೀಯ ಪ್ರವಾಸದಲ್ಲಿ ಥೈಲ್ಯಾಂಡ್ ಮೊದಲ ಸ್ಥಾನದಲ್ಲಿದ್ದರೆ, ಕೊಲಂಬೊ ಎರಡನೇ ಸ್ಥಾನದಲ್ಲಿದೆ. ವಿಯೆಟ್ನಾಂ ಮತ್ತು ಜಪಾನ್‌ಗೂ ಬೇಡಿಕೆ ಹೆಚ್ಚಿದೆ.

Written ByPuttaraj K Alur
Published: Nov 26, 2026, 16:06 IST|Updated: Nov 26, 2026, 16:18 IST
joinshare
ದೆಹಲಿಯನ್ನೇ ಹಿಂದಿಕ್ಕಿದ ಬೆಂಗಳೂರು: ದೇಶದಲ್ಲೇ ನಂ.1 ಪ್ರವಾಸಿ ತಾಣವಾಗಿ ಹೊರಹೊಮ್ಮಿದ ಸಿಲಿಕಾನ್ ಸಿಟಿ!
Image Credit: Bengaluru

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ದೆಹಲಿಯನ್ನೇ ಹಿಂದಿಕ್ಕಿದ ಬೆಂಗಳೂರು: ದೇಶದಲ್ಲೇ ನಂ.1 ಪ್ರವಾಸಿ ತಾಣವಾಗಿ ಹೊರಹೊಮ್ಮಿದ ಸಿಲಿಕಾನ್ ಸಿಟಿ!

ದೆಹಲಿಯನ್ನೇ ಹಿಂದಿಕ್ಕಿದ ಬೆಂಗಳೂರು: ದೇಶದಲ್ಲೇ ನಂ.1 ಪ್ರವಾಸಿ ತಾಣವಾಗಿ ಹೊರಹೊಮ್ಮಿದ ಸಿಲಿಕಾನ್ ಸಿಟಿ!

2

ಗೆಳೆಯನ ಸಾ*ವು, 500 ರೂ. ನೋಟಿನಲ್ಲಿ ಡೆ*ತ್‌ ರಹಸ್ಯ..! ಗಗನ್‌ ಕಥೆ ಕೇಳಿ ಸ್ಪರ್ಧಿಗಳು ಭಾವುಕ

3

IPL 2027: ಗರಿಷ್ಠ ಮೂಲ ಬೆಲೆ ಘೋಷಿಸಿದ ಇಬ್ಬರು ಭಾರತೀಯರು; ಈ ಆಟಗಾರರ ಮೇಲೆ ಫ್ರಾಂಚೈಸಿಗಳ ಕಣ್ಣು!

4

Kannada News Today Live : "ಆಶಾ" ಬೇಡಿಕೆಗೆ ನೋ ಎಂದ ಆರೋಗ್ಯ ಸಚಿವ ಖಾದರ್‌ : ಸಿಎಂ, ಆರ್ಥಿಕ ಇಲಾಖೆ ಜೊತೆ ಚರ್ಚಿಸಿ ನಿರ್ಧಾರ

5

ಟೀಮ್ ಇಂಡಿಯಾಗೆ ʼಮಾಡು ಇಲ್ಲವೇ ಮಡಿ ಸ್ಥಿತಿʼ: ಇಲ್ಲಿದೆ WTC ಫೈನಲ್ ತಲುಪುವ ಲೆಕ್ಕಾಚಾರ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Bengaluru Tourism: ಮಾಹಿತಿ ತಂತ್ರಜ್ಞಾನ ಮತ್ತು ಸ್ಟಾರ್ಟ್‌ಅಪ್‌ಗಳ ರಾಜಧಾನಿಯಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು, ಇದೀಗ ದೇಶದ ಪ್ರವಾಸೋದ್ಯಮ ಕ್ಷೇತ್ರದಲ್ಲೂ ಗಮನಾರ್ಹ ಸಾಧನೆ ಮಾಡಿದೆ. ವರ್ಷಾಂತ್ಯದ ರಜೆಗಳನ್ನ ಕಳೆಯಲು ದೇಶೀಯ ಪ್ರಯಾಣಿಕರು ಹೆಚ್ಚು ಆಯ್ಕೆ ಮಾಡುತ್ತಿರುವ ತಾಣಗಳ ಪಟ್ಟಿಯಲ್ಲಿ ಉದ್ಯಾನ ನಗರಿ ಬೆಂಗಳೂರು ಮೊದಲ ಸ್ಥಾನಕ್ಕೇರಿದೆ. ಈ ಮೂಲಕ ಹಲವು ವರ್ಷಗಳಿಂದ ಅಗ್ರಸ್ಥಾನದಲ್ಲಿದ್ದ ರಾಷ್ಟ್ರ ರಾಜಧಾನಿ ದೆಹಲಿಯನ್ನ ಹಿಂದಿಕ್ಕಿ ಬೆಂಗಳೂರು ನಂಬರ್ ಒನ್ ಪಟ್ಟವನ್ನ ತನ್ನದಾಗಿಸಿಕೊಂಡಿದೆ.

ಪ್ರಮುಖ ಆನ್‌ಲೈನ್ ಟ್ರಾವೆಲ್ ಪ್ಲಾಟ್‌ಫಾರ್ಮ್ ಕ್ಲಿಯರ್‌ಟ್ರಿಪ್ ಬಿಡುಗಡೆ ಮಾಡಿರುವ ಇತ್ತೀಚಿನ ಪ್ರಯಾಣ ಕುರಿತ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ವರದಿಯ ಪ್ರಕಾರ, ದೇಶೀಯ ವಿಮಾನ ಪ್ರಯಾಣಿಕರು ಅತಿಹೆಚ್ಚು ಬುಕಿಂಗ್ ಮಾಡುತ್ತಿರುವ ತಾಣವಾಗಿ ಕರ್ನಾಟಕದ ರಾಜಧಾನಿ ಹೊರಹೊಮ್ಮಿದೆ. ಮುಂಬರುವ ವರ್ಷಾಂತ್ಯದ ರಜೆಗಳಿಗಾಗಿ ನಡೆಯುತ್ತಿರುವ ಮುಂಗಡ ವಿಮಾನ ಟಿಕೆಟ್ ಬುಕಿಂಗ್‌ನಲ್ಲಿ ಬೆಂಗಳೂರು ಶೇ.6.2ರಷ್ಟು ವಾರ್ಷಿಕ ಬೆಳವಣಿಗೆ ದಾಖಲಿಸಿದೆ. ಈ ಏರಿಕೆಯೊಂದಿಗೆ ದೆಹಲಿಯಂತಹ ಬೃಹತ್ ಮಹಾನಗರವನ್ನ ಹಿಂದಿಕ್ಕಿರುವುದು ಬೆಂಗಳೂರಿನ ಪ್ರವಾಸೋದ್ಯಮ ಆಕರ್ಷಣೆಯನ್ನ ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

ಬೆಂಗಳೂರಿನತ್ತ ಪ್ರವಾಸಿಗರ ಒಲವು ಹೆಚ್ಚಳ

ವರ್ಷಾಂತ್ಯದ ರಜೆಗಳ ಸಂದರ್ಭದಲ್ಲಿ ಬೆಂಗಳೂರಿನ ಆಹ್ಲಾದಕರ ಹವಾಮಾನ, ಐತಿಹಾಸಿಕ ಮತ್ತು ಆಧುನಿಕ ಸಂಸ್ಕೃತಿಯ ಸಮ್ಮಿಲನ, ವೈವಿಧ್ಯಮಯ ಆಹಾರ ಪದ್ಧತಿ ಹಾಗೂ ವಾರಾಂತ್ಯದ ಪ್ರವಾಸಿ ತಾಣಗಳಿಗೆ ಇರುವ ಸುಲಭ ಸಂಪರ್ಕ ಪ್ರವಾಸಿಗರನ್ನ ಆಕರ್ಷಿಸುತ್ತಿವೆ. ಈ ಹಿಂದೆ ವ್ಯಾಪಾರ, ಉದ್ಯೋಗ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚು ಪ್ರಸಿದ್ಧವಾಗಿದ್ದ ಬೆಂಗಳೂರು, ಇದೀಗ ಕುಟುಂಬ ಮತ್ತು ಸ್ನೇಹಿತರೊಂದಿಗೆ ರಜೆಯನ್ನ ಸಂತೋಷದಿಂದ ಕಳೆಯಲು ಸೂಕ್ತ ತಾಣವಾಗಿಯೂ ಗುರುತಿಸಿಕೊಳ್ಳುತ್ತಿದೆ. ಇದಲ್ಲದೆ ಬೆಂಗಳೂರಿನಿಂದ ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ತಾಣಗಳಿಗೆ ಸುಲಭವಾಗಿ ಪ್ರಯಾಣಿಸಬಹುದಾದ ಅವಕಾಶವೂ ಪ್ರವಾಸಿಗರ ಆಯ್ಕೆಗೆ ಪೂರಕವಾಗಿದೆ. ಮೈಸೂರು, ಕೊಡಗು, ಚಿಕ್ಕಮಗಳೂರು ಮತ್ತು ಊಟಿಯಂತಹ ಪ್ರವಾಸಿ ತಾಣಗಳಿಗೆ ವಾರಾಂತ್ಯದಲ್ಲಿ ತೆರಳುವವರ ಸಂಖ್ಯೆಯೂ ಹೆಚ್ಚಾಗಿದೆ. ಈ ಅಂಶಗಳು ಬೆಂಗಳೂರಿನತ್ತ ಪ್ರಯಾಣಿಕರ ಆಸಕ್ತಿ ಹೆಚ್ಚಲು ಮತ್ತು ವಿಮಾನ ಟಿಕೆಟ್ ಬುಕಿಂಗ್‌ನಲ್ಲಿ ಏರಿಕೆ ದಾಖಲಾಗಲು ಕಾರಣವಾಗಿವೆ.

ಅಂತಾರಾಷ್ಟ್ರೀಯ ಪ್ರವಾಸದಲ್ಲೂ ಏಷ್ಯನ್ ದೇಶಗಳದ್ದೇ ಹವಾ

ದೇಶೀಯ ಪ್ರವಾಸೋದ್ಯಮದಲ್ಲಿ ಬೆಂಗಳೂರು ಮುಂಚೂಣಿಗೆ ಬಂದಿದ್ದರೆ, ಅಂತಾರಾಷ್ಟ್ರೀಯ ಪ್ರವಾಸದ ವಿಚಾರದಲ್ಲಿ ಏಷ್ಯನ್ ದೇಶಗಳು ಭಾರತೀಯ ಪ್ರಯಾಣಿಕರ ನೆಚ್ಚಿನ ಆಯ್ಕೆಗಳಾಗಿ ಹೊರಹೊಮ್ಮಿವೆ. ಜಾಗತಿಕ ರಜಾ ಪ್ರವಾಸದ ಪಟ್ಟಿಯಲ್ಲಿ ಥೈಲ್ಯಾಂಡ್ ತನ್ನ ಅಗ್ರಸ್ಥಾನವನ್ನ ಕಾಯ್ದುಕೊಂಡಿದೆ. ಈ ಬಾರಿಯ ವಿಶೇಷ ಬೆಳವಣಿಗೆಯೆಂದರೆ, ಪ್ರವಾಸಿಗರ ನೆಚ್ಚಿನ ತಾಣಗಳಾಗಿದ್ದ ದುಬೈ ಮತ್ತು ಫುಕೆಟ್ ನಗರಗಳನ್ನ ಹಿಂದಿಕ್ಕಿ ಶ್ರೀಲಂಕಾದ ರಾಜಧಾನಿ ಕೊಲಂಬೊ ಎರಡನೇ ಸ್ಥಾನವನ್ನ ಪಡೆದುಕೊಂಡಿದೆ. ಕಡಿಮೆ ಪ್ರಯಾಣದ ಅವಧಿ ಹಾಗೂ ಕೈಗೆಟಕುವ ದರದ ಪ್ರವಾಸ ಪ್ಯಾಕೇಜ್‌ಗಳು ಕೊಲಂಬೊದ ಜನಪ್ರಿಯತೆ ಹೆಚ್ಚಲು ಪೂರಕವಾಗಿವೆ. ಇದರೊಂದಿಗೆ ವಿಯೆಟ್ನಾಂ ಮತ್ತು ಜಪಾನ್ ದೇಶಗಳಿಗೂ ಭಾರತೀಯ ಪ್ರವಾಸಿಗರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ.

ಹೋಟೆಲ್, ರೆಸಾರ್ಟ್ ಉದ್ಯಮಕ್ಕೆ ಹೊಸ ಚೈತನ್ಯ

ವರ್ಷಾಂತ್ಯದ ಸಂಭ್ರಮ, ಕ್ರಿಸ್‌ಮಸ್ ಮತ್ತು ಹೊಸ ವರ್ಷದ ರಜೆಗಳನ್ನ ಕಳೆಯಲು ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರು ಬೆಂಗಳೂರಿನತ್ತ ಮುಖ ಮಾಡುತ್ತಿದ್ದಾರೆ. ಇದರಿಂದ ನಗರದ ಹೋಟೆಲ್ ಉದ್ಯಮ, ರೆಸಾರ್ಟ್‌ಗಳು, ಸಾರಿಗೆ ವ್ಯವಸ್ಥೆ ಹಾಗೂ ಸ್ಥಳೀಯ ವ್ಯಾಪಾರ ವಹಿವಾಟುಗಳಿಗೆ ಹೊಸ ಚೈತನ್ಯ ದೊರೆಯುವ ನಿರೀಕ್ಷೆಯಿದೆ. 

ಒಟ್ನಲ್ಲಿ ದೇಶೀಯ ಪ್ರಯಾಣಿಕರ ನೆಚ್ಚಿನ ವರ್ಷಾಂತ್ಯದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನ ಪಡೆದಿರುವುದು ನಗರದ ಪ್ರವಾಸೋದ್ಯಮ ಆಕರ್ಷಣೆಯನ್ನ ಎತ್ತಿ ತೋರಿಸಿದೆ. ಮಾಹಿತಿ ತಂತ್ರಜ್ಞಾನ ಮತ್ತು ಸ್ಟಾರ್ಟ್‌ಅಪ್‌ಗಳ ಕೇಂದ್ರವಾಗಿ ಮಾತ್ರವಲ್ಲದೆ, ಪ್ರವಾಸಿಗರ ನೆಚ್ಚಿನ ತಾಣವಾಗಿಯೂ ಬೆಂಗಳೂರು ತನ್ನ ಸ್ಥಾನವನ್ನ ಬಲಪಡಿಸಿಕೊಂಡಿದೆ.

Add Zee News as a Preferred Source
TAGS:
Kannada News