• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕ್ರೀಡೆ
  • /ಟೀಮ್ ಇಂಡಿಯಾಗೆ ʼಮಾಡು ಇಲ್ಲವೇ ಮಡಿ ಸ್ಥಿತಿʼ: ಇಲ್ಲಿದೆ WTC ಫೈನಲ್ ತಲುಪುವ ಲೆಕ್ಕಾಚಾರ!

ಟೀಮ್ ಇಂಡಿಯಾಗೆ ʼಮಾಡು ಇಲ್ಲವೇ ಮಡಿ ಸ್ಥಿತಿʼ: ಇಲ್ಲಿದೆ WTC ಫೈನಲ್ ತಲುಪುವ ಲೆಕ್ಕಾಚಾರ!

ಉಳಿದ ಆರು ಪಂದ್ಯಗಳಲ್ಲಿ ಐದು ಗೆಲುವು ಹಾಗೂ ಒಂದು ಡ್ರಾ ಸಾಧಿಸಿದರೂ ಭಾರತಕ್ಕೆ ಫೈನಲ್ ಪ್ರವೇಶಿಸುವ ಉತ್ತಮ ಅವಕಾಶವಿದೆ. ಈ ಫಲಿತಾಂಶದೊಂದಿಗೆ ಭಾರತ ಒಟ್ಟು 136 ಅಂಕಗಳನ್ನ ಪಡೆದು 62.96 ಶೇಕಡಾವಾರು ಅಂಕ ತಲುಪಲಿದೆ. ಆದರೆ ಈ ಲೆಕ್ಕಾಚಾರದಲ್ಲಿ ಇತರ ತಂಡಗಳ ಫಲಿತಾಂಶವೂ ಮುಖ್ಯವಾಗುತ್ತದೆ.

Written ByPuttaraj K Alur
Published: Nov 26, 2026, 14:37 IST|Updated: Nov 26, 2026, 14:52 IST
joinshare
ಟೀಮ್ ಇಂಡಿಯಾಗೆ ʼಮಾಡು ಇಲ್ಲವೇ ಮಡಿ ಸ್ಥಿತಿʼ: ಇಲ್ಲಿದೆ WTC ಫೈನಲ್ ತಲುಪುವ ಲೆಕ್ಕಾಚಾರ!
Image Credit: WTC 2027 Final

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
Kannada News Today Live : "ಆಶಾ" ಬೇಡಿಕೆಗೆ ನೋ ಎಂದ ಆರೋಗ್ಯ ಸಚಿವ ಖಾದರ್‌ : ಸಿಎಂ, ಆರ್ಥಿಕ ಇಲಾಖೆ ಜೊತೆ ಚರ್ಚಿಸಿ ನಿರ್ಧಾರ

Kannada News Today Live : "ಆಶಾ" ಬೇಡಿಕೆಗೆ ನೋ ಎಂದ ಆರೋಗ್ಯ ಸಚಿವ ಖಾದರ್‌ : ಸಿಎಂ, ಆರ್ಥಿಕ ಇಲಾಖೆ ಜೊತೆ ಚರ್ಚಿಸಿ ನಿರ್ಧಾರ

2

ಟೀಮ್ ಇಂಡಿಯಾಗೆ ʼಮಾಡು ಇಲ್ಲವೇ ಮಡಿ ಸ್ಥಿತಿʼ: ಇಲ್ಲಿದೆ WTC ಫೈನಲ್ ತಲುಪುವ ಲೆಕ್ಕಾಚಾರ!

3

ಶಿಕ್ಷಕರ ನೇಮಕಾತಿ ನಿಗದಿತ ವೇಳೆಗೆ ಪೂರ್ಣಗೊಳಿಸಲು ಸಚಿವ ಮಧು ಬಂಗಾರಪ್ಪ ಸೂಚನೆ

4

ರಸ್ತೆ ಬದಿಯ ಬ್ಯಾರಿಕೇಡ್‌ಗೆ ಗೂಡ್ಸ್ ವಾಹನ ಡಿ*ಕ್ಕಿ! ಸ್ಕೂಟರ್‌ನಲ್ಲಿದ್ದ ಇಬ್ಬರು ಮಹಿಳೆಯರು ರಸ್ತೆಗೆ ಪಲ್ಟಿ; CCTV ದೃಶ್ಯ ವೈರಲ್!

5

₹15 ಸಾವಿರ ಗೌರವಧನಕ್ಕೆ ನೋ ಎಂದ ಆರೋಗ್ಯ ಸಚಿವ ಯುಟಿ ಖಾದರ್! ಆಶಾ ಕಾರ್ಯಕರ್ತೆಯರಿಗೆ ಖಡಕ್ ಸೂಚನೆ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

WTC 2027 Final: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) 2025–27ರ ಫೈನಲ್ ಪ್ರವೇಶಿಸುವ ಭಾರತದ ಕನಸಿಗೆ ದೊಡ್ಡ ಸವಾಲು ಎದುರಾಗಿದೆ. ನ್ಯೂಜಿಲೆಂಡ್ ವಿರುದ್ಧ ವೆಲ್ಲಿಂಗ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿರುವುದು ಟೀಮ್ ಇಂಡಿಯಾದ ಫೈನಲ್ ಹಾದಿಯನ್ನ ಮತ್ತಷ್ಟು ಕಠಿಣಗೊಳಿಸಿದೆ. ಈಗಾಗಲೇ ಆಡಿರುವ 12 ಪಂದ್ಯಗಳಲ್ಲಿ ಐದು ಗೆಲುವು, ನಾಲ್ಕು ಸೋಲು ಹಾಗೂ ಮೂರು ಡ್ರಾ ದಾಖಲಿಸಿರುವ ಭಾರತ, 50.00 ಶೇಕಡಾವಾರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಹೀಗಾಗಿ ಉಳಿದಿರುವ ಆರು ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವುದು ಶುಭ್‌ಮನ್ ಗಿಲ್ ಪಡೆಗೆ ಅನಿವಾರ್ಯವಾಗಿದೆ.

ಡ್ರಾದಿಂದ ಭಾರತದ ಫೈನಲ್ ಲೆಕ್ಕಾಚಾರಕ್ಕೆ ಹಿನ್ನಡೆ

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡ ಪರಿಣಾಮ ಎರಡೂ ತಂಡಗಳು ತಲಾ ನಾಲ್ಕು ಅಂಕಗಳನ್ನ ಪಡೆದುಕೊಂಡಿವೆ. ಇದರಿಂದ ಭಾರತದ ಪಾಯಿಂಟ್ಸ್ ಪರ್ಸೆಂಟೇಜ್ (PCT) 51.52ರಿಂದ 50.00ಕ್ಕೆ ಇಳಿದಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ 75.00 ಶೇಕಡಾವಾರು ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 69.23ರೊಂದಿಗೆ ಎರಡನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ 66.67 ಶೇಕಡಾವಾರು ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಭಾರತ ನಾಲ್ಕನೇ ಸ್ಥಾನದಲ್ಲಿದ್ದು, ಫೈನಲ್ ಪ್ರವೇಶಿಸಲು ಅಗ್ರ ಎರಡು ಸ್ಥಾನಗಳಲ್ಲಿ ಒಂದನ್ನ ಪಡೆದುಕೊಳ್ಳಬೇಕಿದೆ.

ಉಳಿದ ಆರು ಪಂದ್ಯಗಳಲ್ಲಿ ಆರು ಗೆಲುವು ಸಾಧಿಸಿದರೆ?

ಭಾರತಕ್ಕೆ ಫೈನಲ್ ತಲುಪಲು ಅತ್ಯುತ್ತಮ ಅವಕಾಶವೆಂದರೆ ಉಳಿದ ಆರು ಪಂದ್ಯಗಳಲ್ಲೂ ಗೆಲುವು ದಾಖಲಿಸುವುದು. ಕ್ರೈಸ್ಟ್‌ಚರ್ಚ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಎರಡನೇ ಟೆಸ್ಟ್ ಗೆದ್ದು, ಬಳಿಕ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಸರಣಿಯನ್ನ 5-0 ಅಂತರದಲ್ಲಿ ಗೆದ್ದರೆ ಭಾರತದ ಪಾಯಿಂಟ್ಸ್ ಪರ್ಸೆಂಟೇಜ್ 66.67ಕ್ಕೆ ಏರಲಿದೆ. ಈ ಸಾಧನೆ ಮಾಡಿದರೆ ಆಸ್ಟ್ರೇಲಿಯಾವನ್ನ ಹಿಂದಿಕ್ಕುವ ಅವಕಾಶ ಭಾರತದ ಪಾಲಿಗೆ ಇರಲಿದೆ. ಆದರೆ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಎರಡೂ ತಂಡಗಳು 66.67ಕ್ಕಿಂತ ಹೆಚ್ಚಿನ ಶೇಕಡಾವಾರು ಅಂಕಗಳನ್ನ ಗಳಿಸಿದರೆ ಭಾರತದ ಫೈನಲ್ ಸ್ಥಾನಕ್ಕೆ ಅಡ್ಡಿಯಾಗಬಹುದು.

ಐದು ಗೆಲುವು, ಒಂದು ಡ್ರಾ ಬಂದರೆ ಏನಾಗುತ್ತದೆ?

ಉಳಿದ ಆರು ಪಂದ್ಯಗಳಲ್ಲಿ ಐದು ಗೆಲುವು ಹಾಗೂ ಒಂದು ಡ್ರಾ ಸಾಧಿಸಿದರೂ ಭಾರತಕ್ಕೆ ಫೈನಲ್ ಪ್ರವೇಶಿಸುವ ಉತ್ತಮ ಅವಕಾಶವಿದೆ. ಈ ಫಲಿತಾಂಶದೊಂದಿಗೆ ಭಾರತ ಒಟ್ಟು 136 ಅಂಕಗಳನ್ನ ಪಡೆದು 62.96 ಶೇಕಡಾವಾರು ಅಂಕ ತಲುಪಲಿದೆ. ಆದರೆ ಈ ಲೆಕ್ಕಾಚಾರದಲ್ಲಿ ಇತರ ತಂಡಗಳ ಫಲಿತಾಂಶವೂ ಮುಖ್ಯವಾಗುತ್ತದೆ. ವಿಶೇಷವಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯ ಮೇಲೆ ಭಾರತದ ಭವಿಷ್ಯ ಅವಲಂಬಿತವಾಗಿದೆ. ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್ ವಿರುದ್ಧ 3-0 ಅಥವಾ 3-1 ಅಂತರದಲ್ಲಿ ಗೆದ್ದರೆ, ನ್ಯೂಜಿಲೆಂಡ್‌ನ ಪಾಯಿಂಟ್ಸ್ ಪರ್ಸೆಂಟೇಜ್ ಇಳಿಕೆಯಾಗಲಿದ್ದು, ಭಾರತಕ್ಕೆ ಅನುಕೂಲವಾಗಬಹುದು.

ಐದು ಗೆಲುವು, ಒಂದು ಸೋಲು ಕಂಡರೆ?

ಭಾರತ ಉಳಿದ ಆರು ಪಂದ್ಯಗಳಲ್ಲಿ ಐದು ಗೆದ್ದು ಒಂದು ಪಂದ್ಯದಲ್ಲಿ ಸೋಲು ಕಂಡರೆ ಒಟ್ಟು 132 ಅಂಕಗಳೊಂದಿಗೆ 61.11 ಶೇಕಡಾವಾರು ಅಂಕಗಳನ್ನ ತಲುಪಲಿದೆ. ಈ ಫಲಿತಾಂಶದೊಂದಿಗೆ ಫೈನಲ್ ರೇಸ್‌ನಲ್ಲಿ ಉಳಿಯಬಹುದಾದರೂ, ಅರ್ಹತೆ ಪಡೆಯುವುದು ಸುಲಭವಲ್ಲ. ನ್ಯೂಜಿಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಸೋಲು ಅನುಭವಿಸುವುದರ ಜೊತೆಗೆ ಶ್ರೀಲಂಕಾ ಅಥವಾ ಪಾಕಿಸ್ತಾನ ವಿರುದ್ಧದ ಪಂದ್ಯಗಳಲ್ಲೂ ಅಂಕಗಳನ್ನ ಕಳೆದುಕೊಳ್ಳಬೇಕಾಗುತ್ತದೆ. ಆಸ್ಟ್ರೇಲಿಯಾ ತಂಡವೂ ತನ್ನ ಉಳಿದ ಪಂದ್ಯಗಳಲ್ಲಿ ಹಿನ್ನಡೆ ಅನುಭವಿಸಿದರೆ ಮಾತ್ರ ಭಾರತಕ್ಕೆ ಹೆಚ್ಚಿನ ಅನುಕೂಲವಾಗಲಿದೆ.

ನಾಲ್ಕು ಗೆಲುವು, ಎರಡು ಡ್ರಾ ಸಾಕಾಗುತ್ತಾ?

ಉಳಿದ ಆರು ಪಂದ್ಯಗಳಲ್ಲಿ ನಾಲ್ಕು ಗೆಲುವು ಹಾಗೂ ಎರಡು ಡ್ರಾ ದಾಖಲಿಸಿದರೆ ಭಾರತದ ಪಾಯಿಂಟ್ಸ್ ಪರ್ಸೆಂಟೇಜ್ 59.26ಕ್ಕೆ ತಲುಪಲಿದೆ. ಈ ಪ್ರಮಾಣದೊಂದಿಗೆ ಫೈನಲ್ ಪ್ರವೇಶಿಸುವ ಸಾಧ್ಯತೆ ಬಹಳ ಕಡಿಮೆಯಾಗಲಿದೆ. ಇತರ ತಂಡಗಳ ಫಲಿತಾಂಶಗಳು ಭಾರತಕ್ಕೆ ಪೂರಕವಾಗಿದ್ದರೂ ಫೈನಲ್ ಸ್ಥಾನ ಪಡೆಯುವುದು ಕಠಿಣ ಸವಾಲಾಗಲಿದೆ.

ಭಾರತದ ಮುಂದಿನ ಟೆಸ್ಟ್ ಪಂದ್ಯಗಳ ವೇಳಾಪಟ್ಟಿ

ಭಾರತದ ಮುಂದಿನ ಪಂದ್ಯ ನವೆಂಬರ್ 27ರಿಂದ ಡಿಸೆಂಬರ್ 1ರವರೆಗೆ ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿದೆ. ಬಳಿಕ 2027ರ ಜನವರಿಯಿಂದ ಮಾರ್ಚ್‌ವರೆಗೆ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಐದು ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ.

- ನವೆಂಬರ್ 27–ಡಿಸೆಂಬರ್ 1: ನ್ಯೂಜಿಲೆಂಡ್ ವಿರುದ್ಧ 2ನೇ ಟೆಸ್ಟ್, ಕ್ರೈಸ್ಟ್‌ಚರ್ಚ್.
- ಜನವರಿ 21–25: ಆಸ್ಟ್ರೇಲಿಯಾ ವಿರುದ್ಧ 1ನೇ ಟೆಸ್ಟ್, ನಾಗ್ಪುರ.
- ಜನವರಿ 29–ಫೆಬ್ರವರಿ 2: 2ನೇ ಟೆಸ್ಟ್, ಚೆನ್ನೈ.
- ಫೆಬ್ರವರಿ 11–15: 3ನೇ ಟೆಸ್ಟ್, ಗುವಾಹಟಿ.
- ಫೆಬ್ರವರಿ 19–23: 4ನೇ ಟೆಸ್ಟ್, ರಾಂಚಿ.
- ಫೆಬ್ರವರಿ 27–ಮಾರ್ಚ್ 3: 5ನೇ ಟೆಸ್ಟ್, ಅಹಮದಾಬಾದ್.

2027ರ ಜೂನ್ 9ರಿಂದ 13ರವರೆಗೆ ಲಂಡನ್‌ನ ದಿ ಓವಲ್ ಮೈದಾನದಲ್ಲಿ WTC ಫೈನಲ್ ನಡೆಯಲಿದೆ. ಸತತ ಮೂರನೇ ಬಾರಿಗೆ ಫೈನಲ್ ಪ್ರವೇಶಿಸುವ ಗುರಿ ಹೊಂದಿರುವ ಭಾರತಕ್ಕೆ ಇನ್ನುಳಿದ ಆರು ಪಂದ್ಯಗಳು ನಿರ್ಣಾಯಕವಾಗಿವೆ. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಗಳಲ್ಲಿನ ಫಲಿತಾಂಶವೇ ಭಾರತದ ಫೈನಲ್ ಭವಿಷ್ಯವನ್ನ ನಿರ್ಧರಿಸಲಿದೆ.

Add Zee News as a Preferred Source
TAGS:
Cricket
Sports
Kannada News