• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕ್ರೀಡೆ
  • /ಭಾರತ ಮಹಿಳಾ ತಂಡದ ಕ್ಯಾಪ್ಟನ್‌ ಹುದ್ದೆಗೆ ಹರ್ಮನ್‌ ಪ್ರೀತ್‌ ಕೌರ್‌ ರಾಜೀನಾಮೆ

ಭಾರತ ಮಹಿಳಾ ತಂಡದ ಕ್ಯಾಪ್ಟನ್‌ ಹುದ್ದೆಗೆ ಹರ್ಮನ್‌ ಪ್ರೀತ್‌ ಕೌರ್‌ ರಾಜೀನಾಮೆ

ಭಾರತದ ಮಹಿಳಾ ತಂಡದ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ ಮೂರೂ ಮಾದರಿಯ ನಾಯಕತ್ವಕ್ಕೆ ರಾಜೀನಾಮೆ ಘೋಷಿಸಿದ್ದಾರೆ.

Written ByYashaswini V
Published: Oct 06, 2026, 12:11 PM IST|Updated: Oct 06, 2026, 12:14 PM IST
joinshare
ಭಾರತ ಮಹಿಳಾ ತಂಡದ ಕ್ಯಾಪ್ಟನ್‌ ಹುದ್ದೆಗೆ ಹರ್ಮನ್‌ ಪ್ರೀತ್‌ ಕೌರ್‌ ರಾಜೀನಾಮೆ

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ಬೆಳ್ತಂಗಡಿಯಲ್ಲಿ ಚಿರತೆ ಓಡಾಟ.. ನಾಯಿ ಮೇಲೆ ದಾಳಿ.. ಗ್ರಾಮಸ್ಥರಲ್ಲಿ ಆತಂಕ

ಬೆಳ್ತಂಗಡಿಯಲ್ಲಿ ಚಿರತೆ ಓಡಾಟ.. ನಾಯಿ ಮೇಲೆ ದಾಳಿ.. ಗ್ರಾಮಸ್ಥರಲ್ಲಿ ಆತಂಕ

2

ಕ್ಯಾಪ್ಟನ್ಸಿಗೆ ದಿಢೀರ್‌ ರಾಜೀನಾಮೆ.. ಟೀಮ್‌ ಇಂಡಿಯಾದ T20, ODI, ಟೆಸ್ಟ್‌ಗೆ ಮುಂದಿನ ನಾಯಕಿ?

3

146 ವರ್ಷಗಳಲ್ಲೇ ಕಾಣದ ಭೀಕರ ಬರ.. ಧಾರವಾಡ ತತ್ತರ, ಸರ್ಕಾರದ 2,500 ರೂ. ಪರಿಹಾರಕ್ಕೆ ರೈತರ ಆಕ್ರೋಶ

4

ಭಾರತ ಮಹಿಳಾ ತಂಡದ ಕ್ಯಾಪ್ಟನ್‌ ಹುದ್ದೆಗೆ ಹರ್ಮನ್‌ ಪ್ರೀತ್‌ ಕೌರ್‌ ರಾಜೀನಾಮೆ

5

ಇಂದೇ ಕ್ಯಾಬಿನೆಟ್‌ ಸಭೆ: ನಂದಿನಿ ಹಾಲಿನ ದರ ಏರಿಕೆ ಫಿಕ್ಸ್!‌

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Harman Preet Kaur resign: ಭಾರತದ ಮಹಿಳಾ ಕ್ರಿಕೆಟ್‌ ತಂಡದ ನಾಯಕಿಯರಲ್ಲಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಹರ್ಮನ್‌ಪ್ರೀತ್ ಕೌರ್ ಮಂಗಳವಾರ (ಅ. 6) ಎಲ್ಲಾ ಸ್ವರೂಪದ ನಾಯಕಿ ಹುದ್ದೆಗೆ ರಾಜೀನಾಮೆ ಘೋಷಿಸಿದ್ದು, ʼತಂಡ ಉತ್ತಮ ಸ್ಥಾನದಲ್ಲಿದೆ; ನಾನು ನನ್ನ ಕರ್ತವ್ಯ ಮಾಡಿದ್ದೇನೆ, ಆಟದ ಪ್ರೀತಿಗಾಗಿ ಮತ್ತೆ ಕ್ರೀಡೆಗೆ ಮರಳಬಹುದು ಎಂದಿದ್ದಾರೆ. ಗುವಾಹಟಿಯಲ್ಲಿ ನಡೆದ ಬಿಸಿಸಿಐ ಪರಿಶೀಲನಾ ಸಭೆಯ ಬಳಿಕ ಹರ್ಮನ್‌ಪ್ರೀತ್ ಕೌರ್ ಅವರ ಈ ಘೋಷಣೆ ಹೊರಬಿದ್ದಿದೆ.

ಇನ್ಸ್ಟಾ ಖಾತೆಯಲ್ಲಿ ಹರ್ಮನ್‌ಪ್ರೀತ್ ಕೌರ್ ಪೋಸ್ಟ್:‌
ತಮ್ಮ ರಾಜೀನಾಮೆ ಬಗ್ಗೆ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಬರೆದುಕೊಂಡಿರುವ ಹರ್ಮನ್‌ಪ್ರೀತ್ ಕೌರ್, "ಇಂದು, ನಾನು ಎಲ್ಲಾ ಸ್ವರೂಪದ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿಯುತ್ತಿದ್ದೇನೆ" ಎಂದಿದ್ದಾರೆ.

"ಇದು ಸುಲಭದ ನಿರ್ಧಾರವಲ್ಲ. ಇದು ವರ್ಷಗಳ ನೆನಪುಗಳು, ಭಾವನೆಗಳು, ತ್ಯಾಗಗಳು ಮತ್ತು ನನ್ನ ಜೀವನದುದ್ದಕ್ಕೂ ನನ್ನೊಂದಿಗೆ ಉಳಿಯುವ ಕ್ಷಣಗಳನ್ನು ಹೊಂದಿದೆ" ಎಂದು ಹರ್ಮನ್‌ಪ್ರೀತ್ ಸುದೀರ್ಘ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ತಂಡ ಮತ್ತು ಭಾರತೀಯ ಮಹಿಳಾ ಕ್ರಿಕೆಟ್‌ಗಾಗಿ ನಾನು ನನ್ನ ಸರ್ವಸ್ವವನ್ನೂ ಮುಡಿಪಾಗಿಟ್ಟಿದ್ದೇನೆ — ನನ್ನ ರಕ್ತ, ಬೆವರು, ಸಮಯ ಮತ್ತು ಅನೇಕ ಬಾರಿ ನನ್ನ ಸ್ವಂತ ಆಟ ಹಾಗೂ ವೈಯಕ್ತಿಕ ಆಕಾಂಕ್ಷೆಗಳನ್ನೂ ಸಹ. ತಂಡದ ಹಿತವೇ ಮುಖ್ಯ ಎಂದು ನಂಬಿದ್ದರಿಂದ, ನನ್ನ ವೈಯಕ್ತಿಕ ಪ್ರದರ್ಶನ, ಸ್ವಂತ ಬೆಳವಣಿಗೆ ಮತ್ತು ನನ್ನ ವೈಯಕ್ತಿಕ ಆಸೆಗಳನ್ನು ಬದಿಗಿರಿಸಬೇಕಾದ ಸಂದರ್ಭಗಳೂ ಬಂದಿದ್ದವು.

ನಾಯಕಿಯಾಗಿ, ನಾನು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಯಿತು.
ಆ ನಿರ್ಧಾರಗಳು ಯಾವಾಗಲೂ ಎಲ್ಲರಿಗೂ ಅರ್ಥವಾಗುತ್ತಿರಲಿಲ್ಲ, ಸುಲಭವಾಗಿರುತ್ತಿರಲಿಲ್ಲ ಮತ್ತು ಕೆಲವೊಮ್ಮೆ ಅದಕ್ಕಾಗಿ ನಾನು ವೈಯಕ್ತಿಕವಾಗಿ ಬೆಲೆ ತೆರಬೇಕಾಗುತ್ತಿತ್ತು. ಆದರೆ ನಾನು ತೆಗೆದುಕೊಂಡ ಪ್ರತಿಯೊಂದು ನಿರ್ಧಾರದ ಹಿಂದೆಯೂ ಒಂದೇ ಉದ್ದೇಶವಿತ್ತು - ಈ ತಂಡವನ್ನು ಇನ್ನಷ್ಟು ಉತ್ತಮಗೊಳಿಸುವುದು ಮತ್ತು ಇತರ ಆಟಗಾರ್ತಿಯರಿಗೆ ಬೆಳೆಯಲು, ತಮ್ಮಲ್ಲಿ ತಾವು ನಂಬಿಕೆ ಇರಿಸಿಕೊಳ್ಳಲು ಹಾಗೂ ತಮ್ಮ ಅತ್ಯುತ್ತಮ ಸಾಮರ್ಥ್ಯವನ್ನು ಹೊರತರುವ ಅವಕಾಶವನ್ನು ಕಲ್ಪಿಸಿಕೊಡುವುದು.

ನಾನು ಎಲ್ಲವನ್ನೂ ಕಂಡಿದ್ದೇನೆ.
ಅತ್ಯಂತ ಕಠಿಣ ಕ್ಷಣಗಳು, ನೋವು, ಟೀಕೆಗಳು, ಸಂದೇಹಗಳು ಮತ್ತು ಯಾವುದೂ ನಮ್ಮ ಪರವಾಗಿ ನಡೆಯದ ದಿನಗಳನ್ನು ನಾನು ನೋಡಿದ್ದೇನೆ. ಹಾಗೆಯೇ, ಅತ್ಯಂತ ಸಂತೋಷದ ಕ್ಷಣಗಳನ್ನೂ ಅನುಭವಿಸಿದ್ದೇನೆ - ಗೆಲುವುಗಳು, ಸಂಭ್ರಮಾಚರಣೆಗಳು, ದೇಶವನ್ನು ಪ್ರತಿನಿಧಿಸುವ ಹೆಮ್ಮೆ ಮತ್ತು ಮಾಡಿದ ಪ್ರತಿಯೊಂದು ತ್ಯಾಗಕ್ಕೂ ಸಾರ್ಥಕತೆ ತಂದುಕೊಟ್ಟ ಕ್ಷಣಗಳು.

ಇಂದು ನಾನು ಭಾವಪೂರ್ಣ ಹೃದಯದಿಂದ, ಆದರೆ ಸಂಪೂರ್ಣ ನೆಮ್ಮದಿಯೊಂದಿಗೆ ನಾಯಕತ್ವದಿಂದ ಕೆಳಗಿಳಿಯುತ್ತಿದ್ದೇನೆ. ಏಕೆಂದರೆ, ನನ್ನ ತಂಡವು ಈಗ ಉತ್ತಮ ಸ್ಥಿತಿಯಲ್ಲಿದೆ ಎಂದು ನಾನು ಬಲವಾಗಿ ನಂಬುತ್ತೇನೆ. ಪ್ರತಿಭೆ, ವ್ಯಕ್ತಿತ್ವ ಮತ್ತು ದೃಢ ನಂಬಿಕೆ ಇರುವ ತಂಡವಿದು; ಇದರ ಭವಿಷ್ಯವನ್ನು ವೀಕ್ಷಿಸಲು ಮತ್ತು ಅದರ ಭಾಗವಾಗಲು ನಾನು ಅತ್ಯಂತ ಉತ್ಸುಕಳಾಗಿದ್ದೇನೆ. ನನ್ನ ಕರ್ತವ್ಯವನ್ನು ನಾನು ಪೂರೈಸಿದ್ದೇನೆ ಎಂಬ ಭಾವನೆ ನನಗಿದೆ.

ಈ ತಂಡಕ್ಕಾಗಿ ನಾನು ನನ್ನೆಲ್ಲವನ್ನೂ ನೀಡಿದ್ದೇನೆ. ಹೆಮ್ಮೆಯಿಂದ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ ಮತ್ತು ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿದ್ದಕ್ಕಾಗಿ ನಾನು ಸದಾ ಕೃತಜ್ಞಳಾಗಿರುತ್ತೇನೆ.

ಈಗ, ನನ್ನ ಜೀವನದ ಮುಂದಿನ ಅಧ್ಯಾಯದತ್ತ ಸಾಗುವ ಸಮಯ ಬಂದಿದೆ. ನಾಯಕತ್ವದ ಅವಧಿ ಇಂದು ಮುಗಿಯಬಹುದು, ಆದರೆ ಭಾರತೀಯ ಕ್ರಿಕೆಟ್ ಮೇಲಿರುವ ನನ್ನ ಪ್ರೀತಿ ಎಂದಿಗೂ ಕಡಿಮೆಯಾಗುವುದಿಲ್ಲ.

ನನ್ನೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತ ಪ್ರತಿಯೊಬ್ಬ ಸಹ ಆಟಗಾರ್ತಿ, ತರಬೇತುದಾರರು, ಸಹಾಯಕ ಸಿಬ್ಬಂದಿ, ಆಡಳಿತ ಮಂಡಳಿ, ಬಿಸಿಸಿಐ (BCCI), ಕುಟುಂಬದ ಸದಸ್ಯರು ಮತ್ತು ಪ್ರತಿಯೊಬ್ಬ ಅಭಿಮಾನಿಗೂ ಧನ್ಯವಾದಗಳು ಎಂದು ಹರ್ಮನ್‌ಪ್ರೀತ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸುದೀರ್ಘ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಇದೇ ಸಂದರ್ಭದಲ್ಲಿ ಭಾರತದ ಮಹಿಳಾ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರೆಸುವುದಾಗಿ ಸ್ಪಷ್ಟಪಡಿಸಿರುವ ಹರ್ಮನ್‌ಪ್ರೀತ್ ಕೌರ್, "ಈಗ, ನಾನು ಆಟದ ಪ್ರೀತಿಗಾಗಿ ಮತ್ತೆ ಆಡಲು ಸಿದ್ಧಳಿದ್ದೇನೆ. ಆದರೆ ನಾಯಕತ್ವ ಮಾತ್ರ ಕೊನೆಗೊಳ್ಳುತ್ತದೆ. ಪ್ರಯಾಣ ಮುಂದುವರಿಯುತ್ತದೆ" ಎಂದು ಬರೆದುಕೊಂಡಿದ್ದಾರೆ.

 

 

 

 

 

View this post on Instagram

 

 

 

 

 

 

 

 

 

 

 

A post shared by Harmann (@imharmanpreet_kaur)

2012ರಲ್ಲಿ ಮೊದಲ ಬಾರಿಗೆ ಭಾರತ ತಂಡವನ್ನು ಮುನ್ನಡೆಸಿದ್ದ ಹರ್ಮನ್‌ಪ್ರೀತ್ ಕೌರ್:
ಹರ್ಮನ್‌ಪ್ರೀತ್ ಕೌರ್ 2012 ರಲ್ಲಿ ಗುವಾಂಗ್‌ಝೌನಲ್ಲಿ ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಪಂದ್ಯದಲ್ಲಿ ಮೊದಲ ಬಾರಿಗೆ ಭಾರತ ತಂಡವನ್ನು ಟಿ20 ಸ್ವರೂಪದಲ್ಲಿ ಮುನ್ನಡೆಸಿದ್ದರು. ಬಳಿಕ 2016 ರಲ್ಲಿ ಅಧಿಕೃತವಾಗಿ ಈ ಸ್ವರೂಪದಲ್ಲಿ ನಾಯಕತ್ವ ವಹಿಸಿಕೊಂಡರು ಮತ್ತು 2022 ರಲ್ಲಿ ಮಿಥಾಲಿ ರಾಜ್ ನಿವೃತ್ತಿಯ ನಂತರ ಪೂರ್ಣ ಸಮಯದ ಏಕದಿನ ಪಂದ್ಯಗಳ ನಾಯಕತ್ವ ವಹಿಸಿದ್ದರು. ನಂತರ 2023 ರಲ್ಲಿ ಎಲ್ಲಾ ಮೂರು ಸ್ವರೂಪದ ಪಂದ್ಯಗಳಿಗೂ ಕ್ಯಾಪ್ಟನ್‌ ಆಗಿ ನೇಮಕಗೊಂಡಿದ್ದರು. 
 

 

Add Zee News as a Preferred Source
TAGS:
Cricket
Team India