• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಹುಬ್ಬಳ್ಳಿ ಧಾರವಾಡ
  • /146 ವರ್ಷಗಳಲ್ಲೇ ಕಾಣದ ಭೀಕರ ಬರ.. ಧಾರವಾಡ ತತ್ತರ, ಸರ್ಕಾರದ 2,500 ರೂ. ಪರಿಹಾರಕ್ಕೆ ರೈತರ ಆಕ್ರೋಶ

146 ವರ್ಷಗಳಲ್ಲೇ ಕಾಣದ ಭೀಕರ ಬರ.. ಧಾರವಾಡ ತತ್ತರ, ಸರ್ಕಾರದ 2,500 ರೂ. ಪರಿಹಾರಕ್ಕೆ ರೈತರ ಆಕ್ರೋಶ

ಐದು ಸ್ಥಳೀಯ ಸಂಸ್ಥೆಗಳಲ್ಲಿ 100 ವಾರ್ಡ್‌ಗಳಿದ್ದು, ನೀರು ಸರಬರಾಜು ಮಾಡಲಾಗುತ್ತದೆ. ಹುಬ್ಬಳ್ಳಿ-ಧಾರವಾಡ ಮಹಾನಗರದ 82 ವಾರ್ಡ್‌ಗಳ ಪೈಕಿ 13 ವಾರ್ಡ್‌ಗಳಿಗೆ ನಿರಂತರ ನೀರು ಪೂರೈಕೆ ವ್ಯವಸ್ಥೆ ಇದೆ.

Written ByBhimappa
Published: Oct 06, 2026, 12:28 PM IST|Updated: Oct 06, 2026, 01:14 PM IST
joinshare
146 ವರ್ಷಗಳಲ್ಲೇ ಕಾಣದ ಭೀಕರ ಬರ.. ಧಾರವಾಡ ತತ್ತರ, ಸರ್ಕಾರದ 2,500 ರೂ. ಪರಿಹಾರಕ್ಕೆ ರೈತರ ಆಕ್ರೋಶ
Image Credit: farmers_drought

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬೆಳ್ತಂಗಡಿಯಲ್ಲಿ ಚಿರತೆ ಓಡಾಟ.. ನಾಯಿ ಮೇಲೆ ದಾಳಿ.. ಗ್ರಾಮಸ್ಥರಲ್ಲಿ ಆತಂಕ

ಬೆಳ್ತಂಗಡಿಯಲ್ಲಿ ಚಿರತೆ ಓಡಾಟ.. ನಾಯಿ ಮೇಲೆ ದಾಳಿ.. ಗ್ರಾಮಸ್ಥರಲ್ಲಿ ಆತಂಕ

2

ಕ್ಯಾಪ್ಟನ್ಸಿಗೆ ದಿಢೀರ್‌ ರಾಜೀನಾಮೆ.. ಟೀಮ್‌ ಇಂಡಿಯಾದ T20, ODI, ಟೆಸ್ಟ್‌ಗೆ ಮುಂದಿನ ನಾಯಕಿ?

3

146 ವರ್ಷಗಳಲ್ಲೇ ಕಾಣದ ಭೀಕರ ಬರ.. ಧಾರವಾಡ ತತ್ತರ, ಸರ್ಕಾರದ 2,500 ರೂ. ಪರಿಹಾರಕ್ಕೆ ರೈತರ ಆಕ್ರೋಶ

4

ಭಾರತ ಮಹಿಳಾ ತಂಡದ ಕ್ಯಾಪ್ಟನ್‌ ಹುದ್ದೆಗೆ ಹರ್ಮನ್‌ ಪ್ರೀತ್‌ ಕೌರ್‌ ರಾಜೀನಾಮೆ

5

ಇಂದೇ ಕ್ಯಾಬಿನೆಟ್‌ ಸಭೆ: ನಂದಿನಿ ಹಾಲಿನ ದರ ಏರಿಕೆ ಫಿಕ್ಸ್!‌

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Farmers outraged over government: ರಾಜ್ಯದಲ್ಲಿ ಎಂದು ಕಂಡ ಅರಿಯದ ಬರಗಾಲ ಬಿದ್ದಿದ್ದು ಅದರಲ್ಲೂ ಧಾರವಾಡ ಜಿಲ್ಲೆಯನ್ನ ಸಂಪೂರ್ಣ ಬರಗಾಲ ಆವರಿಸಿದೆ. ಜಿಲ್ಲೆಯ ಎಂಟೂ ತಾಲ್ಲೂಕುಗಳನ್ನು ಈಗಾಗಲೇ ಬರ ಪೀಡಿತ ಎಂದು ಘೋಷಿಸಿದ್ದು ಇನ್ನು ಸರ್ಕಾರ ಪರಿಹಾರ ಕೊಡುವತ್ತ ಮುಂದಾಗುತ್ತಿಲ್ಲ. ಇದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಈಗಾಗಲೇ ಬರ ಪರಿಹಾರ ಘೋಷಣೆಗೆ ರೈತ ಸಮುದಾಯ ಕಿಡಿ ಕಾರಿದೆ. ಈ ಕುರಿತು ಒಂದು ವರದಿ.

146 ವರ್ಷಗಳಲ್ಲಿಯೇ ದೊಡ್ಡ ಪ್ರಮಾಣದ ಬರಗಾಲ ಎದುರಾಗಿದ್ದು ಧಾರವಾಡ ಜಿಲ್ಲೆಯ ಎಂಟು ತಾಲೂಕುಗಳು ಬರ ಪೀಡಿತವಾಗಿವೆ ಎಂದು ರಾಜ್ಯ ಸರ್ಕಾರ ಈಗಾಗಲೇ ಅಧಿಕೃತವಾಗಿ ಘೋಷಣೆ ಮಾಡಿದೆ. ಬರ ಕಾಮಗಾರಿ ಮಾತ್ರ ಏನು ನಡೆದಿಲ್ಲ. ರಾಜ್ಯ ಸರ್ಕಾರ ಬರ‌ ಪರಿಹಾರಕ್ಕಾಗಿ 2500 ರೂಪಾಯಿ ಘೋಷಣೆ ಮಾಡಿದೆ. ಇದರಿಂದ ರಾಜ್ಯ ಸರ್ಕಾರದ ವಿರುದ್ಧ ರೈತರು ಕೆಂಡಾಮಂಡಲವಾಗಿದ್ದಾರೆ. ರೈತರ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸು‌ತ್ತಿದ್ದಾರೆ. ರಾಜ್ಯದಲ್ಲಿ ರೈತರು ಇಂದು ಅತ್ಯಂತ ಗಂಭೀರವಾದ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಈ ರೀತಿಯಾಗಿ ಎಂದು ಕೂಡ ಆಗಿರಲಿಲ್ಲ.

ಒಂದು ಕಡೆ ಎಂದೂ ಕೇಳರಿಯದ ಬರಗಾಲ ಇನ್ನೊಂದು ಕಡೆ ರಾಜ್ಯ ಸರ್ಕಾರ ಕೇವಲ ಒಂದು ಹೇಕ್ಟರ್ ಜಮೀನಿಗೆ 2,500 ರೂಪಾಯಿ ಬರ ಪರಿಹಾರ ಘೋಷಣೆ. ಇನ್ನೊಂದು ಕಡೆ ರಾಜ್ಯ ಹಾಗೂ ಕೇಂದ್ರ ಸರಕಾರ ಆರೋಪ ಪ್ರತ್ಯಾರೋಪದಲ್ಲಿಯೇ ಕಾಲಹರಣ ಹಾಕತಾ ಇವೆ. ‌ಆದ್ದರಿಂದ  ತಮಗೆ ಸರಕಾರ ಯೋಗ್ಯ ಪರಿಹಾರ ಕೊಡಬೇಕು ಜನ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವು ಕೊಡಬೇಕು ಎಂದು ರೈತರು ಹಾಗೂ ರೈತ ನಾಯಕರು ಒತ್ತಾಯ ಮಾಡುತ್ತಿದ್ದಾರೆ.

ಧಾರವಾಡ 58,527, ಅಳ್ಳಾವರ ತಾಲ್ಲೂಕಿನಲ್ಲಿ 5,128, 35,868, 30,111, 2,55,778, 58,428, 37,817, ನಗರ 6,417 ಹೆಕ್ಟೇ‌ರ್ ಬೆಳೆ ಹಾನಿಯಾಗಿದೆ. ಮೂರು ತಾಲ್ಲೂಕಿನ 17 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, 19 ಖಾಸಗಿ ಕೊಳವೆಬಾವಿ ಮೂಲಕ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. 1.84 ಲಕ್ಷ ದೊಡ್ಡ ಜಾನುವಾರು ಹಾಗೂ 1.83 ಲಕ್ಷ ಸಣ್ಣ ಜಾನುವಾರುಗಳು ಇವೆ. 2.91 ಲಕ್ಷ ಟನ್‌ ಮೇವು ಲಭ್ಯ ಇದೆ. 35 ವಾರಗಳಿಗೆ ಸಾಕಾಗುವಷ್ಟು ಮೇವು ಇದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಏಳು ಮೇವು ಬ್ಯಾಂಕ್ ತೆರೆಯಲು ಸ್ಥಳ ಗುರುತಿಸಲಾಗಿದೆ ಎಂದು 2,71,417 ಹೆಕ್ಟೇ‌ರ್ ಕೃಷಿ ಬೆಳೆ 8 16,659 2,88,077 ಹೆಕ್ಟೇ‌ರ್ ಬೆಳೆ ಹಾನಿಯಾಗಿದೆ. ಸರ್ಕಾರಕ್ಕೆ ಸರಿಯಾದ ವರದಿ ಕೊಡಬೇಕು ಅಂತಾ ಯುವ ರೈತ ರಾಜು ಒತ್ತಾಯ ಮಾಡಿದರು.

ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ಕುಡಿಯುವ ನೀರಿನ ಸಮಸ್ಯೆ ಇದೆ. ನೀರು ಪೂರೈಕೆಗೆ ವ್ಯವಸ್ಥೆ ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ಹಾಗೂ ಕುಂದಗೋಳ ತಾಲ್ಲೂಕುಗಳಲ್ಲಿ ಮಲಪ್ರಭಾ ಜಲಾಶಯದಿಂದ ಕಾಲುವೆಗಳ ಮೂಲಕ 55 ಕೆರೆಗಳಿಗೆ ನೀರು ಹರಿಸಿದ್ದು ನವೆಂಬರ್ ಅಂತ್ಯದವರೆಗೆ ನಿರ್ವಹಣೆ ಮಾಡಬಹುದಾಗಿದೆ.

ಐದು ಸ್ಥಳೀಯ ಸಂಸ್ಥೆಗಳಲ್ಲಿ 100 ವಾರ್ಡ್‌ಗಳಿದ್ದು, ನೀರು ಸರಬರಾಜು ಮಾಡಲಾಗುತ್ತದೆ. ಹುಬ್ಬಳ್ಳಿ-ಧಾರವಾಡ ಮಹಾನಗರದ 82 ವಾರ್ಡ್‌ಗಳ ಪೈಕಿ 13 ವಾರ್ಡ್‌ಗಳಿಗೆ ನಿರಂತರ ನೀರು ಪೂರೈಕೆ ವ್ಯವಸ್ಥೆ ಇದೆ. ಉಳಿದ ವಾರ್ಡ್‌ಗಳಿಗೆ 2 ರಿಂದ 6 ದಿನಗಳಿಗೊಮ್ಮೆ ನೀರು ಸರಬರಾಜು ಪೂರೈಸಲಾಗುತ್ತದೆ. ಕುಡಿಯುವ ನೀರಿನ ಸಮಸ್ಯೆ ಕುರಿತು ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದೆ.‌ ಆದರೆ ಇದು ಸಹ ಕಾಟಾಚಾರಕ್ಕೆ ಸರಿಯಾದ ರೀತಿಯಲ್ಲಿ ಆಗತಾ ಇಲ್ಲ. ‌ಆದರೆ ಇದೇ ರೀತಿ ಜಿಲ್ಲೆಯ ಪರಿಸ್ಥಿತಿ ಮುಂದುವರಿದರೆ‌ ಜನರು ಬೀದಿಗಳಿಯುವ ಕಾಲ ದೂರವಿಲ್ಲ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರಗಾಲ ತಾಂಡವಾಡಿದೆ. ಈ ಸಲ ಸರಿಯಾಗಿ ಮುಂಗಾರು ಮಳೆ ಆಗದ ಕಾರಣ ರಾಜ್ಯದ ಎಲ್ಲ ರೈತರು ಕಣ್ಣೀರಲ್ಲಿ ಕೈ ತೊಳೆಯುವಂತೆ ಆಗಿದೆ. ಕೆಲವೊಬ್ಬರ ರೈತರು ಬಿತ್ತನೆ ಮಾಡಿದ್ದು ಬೀಜಗಳೆಲ್ಲ ಮಣ್ಣಲ್ಲಿಯೇ ಉಳಿದು ಹೋಗಿವೆ. ಇನ್ನು ಕೆಲವು ರೈತರ ಬೆಳೆ ಬಂದಿದ್ದು ಫಲ ಕೊಟ್ಟಿಲ್ಲ. ಇದಕ್ಕೆ ಗೊಬ್ಬರ, ಔಷಧ ಹಾಕಿದ್ದರ ಹಣ ಕೂಡ ನಷ್ಟವಾಗಿದೆ. ರಾಜ್ಯ ಸರ್ಕಾರ ಕೂಡ ಬರ ಪರಿಶೀಲನೆ ಮಾಡಿದೆ. 
 

Add Zee News as a Preferred Source
TAGS:
Kannada News