• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕ್ರೀಡೆ
  • /ಕಿಂಗ್ ಕೊಹ್ಲಿಯ ಅದ್ಭುತ ಕ್ಯಾಚ್‌ಗೆ ಪ್ರೇಕ್ಷಕರು ಫಿದಾ; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್!

ಕಿಂಗ್ ಕೊಹ್ಲಿಯ ಅದ್ಭುತ ಕ್ಯಾಚ್‌ಗೆ ಪ್ರೇಕ್ಷಕರು ಫಿದಾ; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್!

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅದ್ಭುತ ಕ್ಯಾಚ್ ಹಿಡಿದು ಗಮನ ಸೆಳೆದಿದ್ದಾರೆ. ಅನ್ಶುಲ್ ಕಂಬೋಜ್ ಬೌಲಿಂಗ್‌ನಲ್ಲಿ ನಾಥನ್ ಸ್ಮಿತ್ ನೀಡಿದ ಕ್ಯಾಚ್ ಅನ್ನ ಗಾಳಿಯಲ್ಲಿ ಹಾರಿ ಒಂದೇ ಕೈಯಲ್ಲಿ ಹಿಡಿದ ಕೊಹ್ಲಿಯ ಚಾಕಚಕ್ಯತೆಗೆ ಪ್ರೇಕ್ಷಕರು ಬೆರಗಾಗಿದ್ದಾರೆ. ಸದ್ಯ ಈ ಫ್ಲೈಯಿಂಗ್ ಕ್ಯಾಚ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಕೊಹ್ಲಿಯನ್ನ 'ಫ್ಲೈಯಿಂಗ್ ಕಿಂಗ್' ಎಂದು ಕೊಂಡಾಡುತ್ತಿದ್ದಾರೆ.

Written ByPuttaraj K Alur
Published: Nov 04, 2026, 01:20 PM IST|Updated: Nov 04, 2026, 01:45 PM IST
joinshare
ಕಿಂಗ್ ಕೊಹ್ಲಿಯ ಅದ್ಭುತ ಕ್ಯಾಚ್‌ಗೆ ಪ್ರೇಕ್ಷಕರು ಫಿದಾ; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್!
Image Credit: Virat Kohli

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
AC, ಸ್ಲೀಪರ್‌, ಐರಾವತ ಬಸ್‌ ಟಿಕೆಟ್‌ ದರ ಕುರಿತು ಸರ್ಕಾರ ಮಹತ್ವದ ನಿರ್ಧಾರ..!

AC, ಸ್ಲೀಪರ್‌, ಐರಾವತ ಬಸ್‌ ಟಿಕೆಟ್‌ ದರ ಕುರಿತು ಸರ್ಕಾರ ಮಹತ್ವದ ನಿರ್ಧಾರ..!

2

ಚುನಾವಣೆಯಲ್ಲಿ ಸೋತ ಕಾಂಗ್ರೆಸ್ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದೆ: ಕೆ.ಎಸ್. ಈಶ್ವರಪ್ಪ ಗಂಭೀರ ಆರೋಪ

3

BBK 13 : ಮನೆಯವರಿಂದ ಬಂದ ಪತ್ರಕ್ಕಾಗಿ ರೇಸ್‌.. ಯಾರ ಕೈಗೆ ತಲುಪುತ್ತೆ ಲೆಟರ್‌

4

ಅಂಬಾರಿ, ಸಿಂಹಾಸನ ನಮ್ಮದೇ, ಅರಮನೆ ಖಾಸಗಿ ಸ್ವತ್ತು : ಸರ್ಕಾರದ ವಿರುದ್ಧ ಗುಡುಗಿದ ರಾಜಮಾತೆ

5

ಟ್ರಂಪ್‌ಗೆ ಅಮೆರಿಕ ಮಧ್ಯಂತರ ಚುನಾವಣೆ ಶಾಕ್; ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ! ಇಂದಿನ ದರ ತಿಳಿಯಿರಿ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Flying King Virat Kohli: ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತಮ್ಮ ಅದ್ಭುತ ಫೀಲ್ಡಿಂಗ್ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಗಾಳಿಯಲ್ಲಿ ಸಂಪೂರ್ಣವಾಗಿ ಜಿಗಿದು, ನೆಲಕ್ಕೆ ಬೀಳುವ ಮುನ್ನವೇ ಒಂದೇ ಕೈಯಲ್ಲಿ ಕ್ಯಾಚ್ ಹಿಡಿದ ಕೊಹ್ಲಿಯ ಕೌಶಲಕ್ಕೆ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ನಿಬ್ಬೆರಗಾಗಿದ್ದಾರೆ. ಸದ್ಯ ಈ ಅದ್ಭುತ ಕ್ಯಾಚ್‌ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾದ ಕ್ಯಾಪ್ಟನ್‌ ಶುಭಮನ್‌ ಗಿಲ್‌ ಫೀಲ್ಡಿಂಗ್‌ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡಕ್ಕೆ ಆರಂಭದಲ್ಲೇ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಟೀಮ್ ಇಂಡಿಯಾದ ಬೌಲರ್‌ಗಳು ಆರಂಭದಿಂದಲೇ ಕರಾರುವಾಕ್ ದಾಳಿ ನಡೆಸುವ ಮೂಲಕ ಕಿವೀಸ್ ಬ್ಯಾಟರ್‌ಗಳನ್ನ ಕಟ್ಟಿಹಾಕಿದರು. ಭಾರತೀಯ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್ ಎದುರು ರನ್ ಗಳಿಸಲು ನ್ಯೂಜಿಲೆಂಡ್ ಆಟಗಾರರು ಸಾಕಷ್ಟು ಪರದಾಡಿದರು.

ಭಾರತೀಯ ಬೌಲರ್‌ಗಳ ಸತತ ದಾಳಿಯಿಂದ ನ್ಯೂಜಿಲೆಂಡ್ ತಂಡದ ವಿಕೆಟ್‌ಗಳು ಒಂದರ ಹಿಂದೆ ಒಂದರಂತೆ ಪತನಗೊಂಡವು. ಪರಿಣಾಮ 27ನೇ ಓವರ್ ವೇಳೆಗೆ ಕಿವೀಸ್ ತಂಡ ತನ್ನ ಪ್ರಮುಖ ಆರು ವಿಕೆಟ್‌ಗಳನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಫೀಲ್ಡಿಂಗ್ ಕೂಡ ತಂಡದ ಬೌಲರ್‌ಗಳಿಗೆ ಉತ್ತಮ ಬೆಂಬಲ ನೀಡಿತು.

 

KOHLI WHATTA CATCH!! https://t.co/3OjINEdB3G

— Gaurav (@Melbourne__82) November 4, 2026

ಕೊಹ್ಲಿಯ ಅಸಾಧಾರಣ ಕ್ಯಾಚ್‌ಗೆ ಎಲ್ಲರೂ ಶಾಕ್!

 

ನ್ಯೂಜಿಲೆಂಡ್ ತಂಡದ ವಿಕೆಟ್ ಪತನದ ಸರಣಿ ಮುಂದುವರಿದಿದ್ದ ಸಂದರ್ಭದಲ್ಲಿ ಅನ್ಶುಲ್ ಕಂಬೋಜ್ ಬೌಲಿಂಗ್ ದಾಳಿಗಿಳಿದರು. ಈ ವೇಳೆ ಕ್ರೀಸ್‌ನಲ್ಲಿದ್ದ ನ್ಯೂಜಿಲೆಂಡ್ ಬ್ಯಾಟರ್ ನಾಥನ್ ಸ್ಮಿತ್, ಕಂಬೋಜ್ ಎಸೆದ ಚೆಂಡನ್ನ ರಕ್ಷಣಾತ್ಮಕವಾಗಿ ಆಡಲು ಪ್ರಯತ್ನಿಸಿದರು. ಆದರೆ ಬ್ಯಾಟ್‌ನ ಹೊರ ಅಂಚಿಗೆ ತಗುಲಿದ ಚೆಂಡು ವೇಗವಾಗಿ ಸ್ಲಿಪ್ ಪ್ರದೇಶದತ್ತ ಚಿಮ್ಮಿತು.

ಚೆಂಡು ಸ್ಲಿಪ್‌ನತ್ತ ಸಾಗುತ್ತಿದ್ದಂತೆ ಅಲ್ಲಿದ್ದ ವಿರಾಟ್ ಕೊಹ್ಲಿ ಕ್ಷಣಾರ್ಧದಲ್ಲೇ ಎಚ್ಚೆತ್ತುಕೊಂಡರು. ಬಲಭಾಗಕ್ಕೆ ಗಾಳಿಯಲ್ಲಿ ಸಂಪೂರ್ಣವಾಗಿ ಜಿಗಿದ ಕೊಹ್ಲಿ, ನೆಲಕ್ಕೆ ತಾಗುವ ಮುನ್ನವೇ ತಮ್ಮ ಒಂದೇ ಕೈಯಿಂದ ಚೆಂಡನ್ನ ಅದ್ಭುತವಾಗಿ ಹಿಡಿದುಕೊಂಡರು. ಕ್ಷಣಮಾತ್ರದಲ್ಲಿ ನಡೆದ ಈ ಘಟನೆ ಮೈದಾನದಲ್ಲಿದ್ದ ಆಟಗಾರರು ಹಾಗೂ ಅಭಿಮಾನಿಗಳನ್ನ ಅಚ್ಚರಿಗೊಳಿಸಿತು.

ವೇಗವಾಗಿ ಬಂದ ಚೆಂಡನ್ನ ಅಷ್ಟೊಂದು ಅದ್ಭುತವಾಗಿ ಹಿಡಿದ ಕೊಹ್ಲಿಯ ಫೀಲ್ಡಿಂಗ್ ಕೌಶಲಕ್ಕೆ ಸಹ ಆಟಗಾರರು ಕೂಡ ಬೆರಗಾದರು. ಸಾಮಾನ್ಯ ಕ್ಯಾಚ್‌ಗಿಂತಲೂ ಹೆಚ್ಚು ಚುರುಕು, ಸಮಯಪ್ರಜ್ಞೆ ಮತ್ತು ದೈಹಿಕ ಸಾಮರ್ಥ್ಯವನ್ನ ಬೇಡುವ ಈ ಕ್ಯಾಚ್ ಪಂದ್ಯದಲ್ಲಿ ವಿಶೇಷ ಗಮನ ಸೆಳೆಯಿತು.

ಕ್ಯಾಚ್ ಬಳಿಕ ಕೊಹ್ಲಿ ಸ್ಟೈಲಿಶ್ ಸಂಭ್ರಮ!

 

A One Handed Stunning Catch By King Kohli 😭🔥 https://t.co/zLvv0F9Qzw

— v. (@183innings2012) November 4, 2026

 ಕ್ಯಾಚ್ ಹಿಡಿದ ತಕ್ಷಣ ವಿರಾಟ್ ಕೊಹ್ಲಿ ತಮ್ಮ ಎಂದಿನ ಆಕ್ರಮಣಕಾರಿ ಶೈಲಿಯಲ್ಲಿ ಸಂಭ್ರಮಿಸಿದರು. ತಮ್ಮ ವಿಶಿಷ್ಟ ಹಾವಭಾವದ ಮೂಲಕ ಎದುರಾಳಿ ತಂಡಕ್ಕೆ ಸವಾಲು ಹಾಕುವ ರೀತಿಯಲ್ಲಿ ಸಂಭ್ರಮಿಸಿದ ಕೊಹ್ಲಿಯ ನಡೆ ಅಭಿಮಾನಿಗಳ ಗಮನ ಸೆಳೆಯಿತು. ಕೊಹ್ಲಿಯ ಈ ಸಂಭ್ರಮದ ಕ್ಷಣವೂ ಕ್ಯಾಚ್‌ನಷ್ಟೇ ಚರ್ಚೆಗೆ ಗ್ರಾಸವಾಗಿದೆ. ಮೈದಾನದಲ್ಲಿದ್ದ ಸಹ ಆಟಗಾರರು ಈ ಅದ್ಭುತ ಕ್ಷಣವನ್ನ ಸಂಭ್ರಮಿಸಿದರೆ, ಪ್ರೇಕ್ಷಕರು ಕೂಡ ಕೊಹ್ಲಿಯ ಫೀಲ್ಡಿಂಗ್ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

 

ಸಾಮಾಜಿಕ ಜಾಲತಾಣದಲ್ಲಿ 'ಫ್ಲೈಯಿಂಗ್ ಕಿಂಗ್' ಹವಾ!

ವಿರಾಟ್ ಕೊಹ್ಲಿ ಹಿಡಿದಿರುವ ಈ ಅದ್ಭುತ ಕ್ಯಾಚ್‌ನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡುತ್ತಿದೆ. ಒಂದೇ ಕೈಯಲ್ಲಿ ಗಾಳಿಯಲ್ಲಿ ಹಾರಿ ಹಿಡಿದ ಕ್ಯಾಚ್ ಕಂಡ ಅಭಿಮಾನಿಗಳು ಕೊಹ್ಲಿಯನ್ನ 'ಫ್ಲೈಯಿಂಗ್ ಕಿಂಗ್' ಎಂದು ಹೊಗಳುತ್ತಿದ್ದಾರೆ. ಈ ಕ್ಯಾಚ್ ಮೂಲಕ ವಿರಾಟ್ ಕೊಹ್ಲಿ ತಮ್ಮ ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬುದನ್ನ ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ಮೈದಾನದಲ್ಲಿ ಬ್ಯಾಟಿಂಗ್ ಮೂಲಕ ಮಾತ್ರವಲ್ಲದೆ, ತಮ್ಮ ಚುರುಕಿನ ಕ್ಷೇತ್ರರಕ್ಷಣೆಯ ಮೂಲಕವೂ ತಂಡಕ್ಕೆ ನೆರವಾಗಬಲ್ಲ ಆಟಗಾರ ಎಂಬುದನ್ನ ತೋರಿಸಿದ್ದಾರೆ.

ಪಂದ್ಯಕ್ಕೆ ಮಳೆ ಅಡ್ಡಿ, ಭಾರತಕ್ಕೆ 167 ರನ್‌ ಟಾರ್ಗೆಟ್!

ಟೀಂ ಇಂಡಿಯಾದ ಮಾರಕ ಬೌಲಿಂಗ್‌ ದಾಳಿಗೆ ಸಿಲುಕಿದ ನ್ಯೂಜಿಲೆಂಡ್ 40.2 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನ ಕಳೆದುಕೊಂಡು ಕೇವಲ 185 ರನ್‌ ಗಳಿಸಲಷ್ಟೇ ಶಕ್ತವಾಯಿತು. ನ್ಯೂಜಿಲೆಂಡ್ ಪರ ಟಿಮ್ ಸೈಫರ್ಟ್ (38),  ಗ್ಲೆನ್ ಫಿಲಿಪ್ಸ್ (30), ಬ್ಲೇರ್ ಟಿಕ್ನರ್ (34) ಮತ್ತು ಡ್ಯಾರಿಲ್ ಮಿಚೆಲ್ (28) ರನ್‌ ಗಳಿಸಿದರು. ಭಾರತದ ಪರ ಬೌಲಿಂಗ್‌ನಲ್ಲಿ ಅರ್ಷದೀಪ್‌ ಸಿಂಗ್‌ 4, ಗುರ್ನೂರ್ ಬ್ರಾರ್ 3 ಮತ್ತು ಅಂಶುಲ್ ಕಂಬೋಜ್ 2 ವಿಕೆಟ್‌ ಪಡೆದು ಮಿಂಚಿದರು. ಇನ್ನು ಈ ಮಳೆ ಅಡ್ಡಿಯಾಗಿದ್ದರಿಂದ ಪಂದ್ಯವನ್ನ 40 ಓವರ್‌ಗಳಿಗೆ ಇಳಿಸಿದ್ದು, 167 ರನ್‌ಗಳ ಟಾರ್ಗೆಟ್‌ ನೀಡಲಾಗಿದೆ. ಭಾರತ ರೋಹಿತ್‌ ಶರ್ಮಾ (0) ವಿಕೆಟ್‌ ಕಳೆದುಕೊಂಡಿದ್ದು, ನಾಯಕ ಶುಭಮನ್‌ ಗಿಲ್‌ (ಅಜೇಯ 27) ಮತ್ತು ವಿರಾಟ್‌ ಕೊಹ್ಲಿ (ಅಜೇಯ 29) ರನ್‌ ಗಳಿಸಿ ಆಡುತ್ತಿದ್ದಾರೆ.   

Add Zee News as a Preferred Source
TAGS:
Cricket
Sports
Kannada News