• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಅಂಬಾರಿ, ಸಿಂಹಾಸನ ನಮ್ಮದೇ, ಅರಮನೆ ಖಾಸಗಿ ಸ್ವತ್ತು : ಸರ್ಕಾರದ ವಿರುದ್ಧ ಗುಡುಗಿದ ರಾಜಮಾತೆ

ಅಂಬಾರಿ, ಸಿಂಹಾಸನ ನಮ್ಮದೇ, ಅರಮನೆ ಖಾಸಗಿ ಸ್ವತ್ತು : ಸರ್ಕಾರದ ವಿರುದ್ಧ ಗುಡುಗಿದ ರಾಜಮಾತೆ

ರಾಜ್ಯ ಸರ್ಕಾರದ ವಿರುದ್ದ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ಸುದ್ದಿಗೋಷ್ಠಿ ನಡೆಸಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಅಂಬಾರಿ ಮೆರವಣಿಗೆಯ ವಾಣಿಜ್ಯೀಕರಣ, ಧಾರ್ಮಿಕ ಆಚರಣೆಗಳಿಗೆ ಅಡ್ಡಿ ಹಾಗೂ ಅರಮನೆ ಆಸ್ತಿ ಹಕ್ಕುಗಳ ಕುರಿತು ಸರ್ಕಾರಕ್ಕೆ ಗಂಭೀರ ಪ್ರಶ್ನೆಗಳನ್ನು ಎತ್ತಿರುವ ರಾಜಮಾತೆ, ಈ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Written ByKrishna NK
Published: Nov 04, 2026, 02:53 PM IST|Updated: Nov 04, 2026, 02:56 PM IST
joinshare
ಅಂಬಾರಿ, ಸಿಂಹಾಸನ ನಮ್ಮದೇ, ಅರಮನೆ ಖಾಸಗಿ ಸ್ವತ್ತು : ಸರ್ಕಾರದ ವಿರುದ್ಧ ಗುಡುಗಿದ ರಾಜಮಾತೆ
Image Credit: rajmata pramoda devi

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ದೀಪಾವಳಿಯ ಹಿಂದಿನ ರೋಚಕ ಕಥೆಯೇನು ಗೊತ್ತಾ? ಇಲ್ಲಿದೆ ಮಾಹಿತಿ..

ದೀಪಾವಳಿಯ ಹಿಂದಿನ ರೋಚಕ ಕಥೆಯೇನು ಗೊತ್ತಾ? ಇಲ್ಲಿದೆ ಮಾಹಿತಿ..

2

ಬೆಟ್ಟದ ನೆಲ್ಲಿಕಾಯಿಯ ರಸವನ್ನು ಇದರಲ್ಲಿ ಬೆರೆಸಿ ತಲೆಗೆ ಹಚ್ಚಿದ್ರೆ ಕಡು ಕಪ್ಪಾಗುತ್ತೆ ಬಿಳಿಕೂದಲು!

3

ಬೀದಿ ಬದಿ ವ್ಯಾಪಾರಿಗಳ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನದ ಭರವಸೆ

4

AC, ಸ್ಲೀಪರ್‌, ಐರಾವತ ಬಸ್‌ ಟಿಕೆಟ್‌ ದರ ಕುರಿತು ಸರ್ಕಾರ ಮಹತ್ವದ ನಿರ್ಧಾರ..!

5

ಚುನಾವಣೆಯಲ್ಲಿ ಸೋತ ಕಾಂಗ್ರೆಸ್ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದೆ: ಕೆ.ಎಸ್. ಈಶ್ವರಪ್ಪ ಗಂಭೀರ ಆರೋಪ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಮೈಸೂರು : ದಸರಾ ಮಹೋತ್ಸವ ಮುಗಿದರೂ ಕೂಡ, ಅರಮನೆ ಮತ್ತು ಸರ್ಕಾರದ ನಡುವಿನ ಮುನಿಸು ಮಾತ್ರ ಇನ್ನೂ ಕಡಿಮೆ ಆಗಿಲ್ಲ. ಅಂಬಾರಿ ಮೆರವಣಿಗೆ, ದಸರಾ ಆಚರಣೆ ಹಾಗೂ ಅರಮನೆ ಆಸ್ತಿ ವಿಚಾರವಾಗಿ ಸರ್ಕಾರದ ವಿರುದ್ಧ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ತೀವ್ರ ಅಸಮಾಧಾನ ಹೊರಹಾಕಿದ್ದು, ಸುದ್ದಿಗೋಷ್ಠಿ ನಡೆಸಿ ಹಲವು ಸ್ಪಷ್ಟನೆಗಳನ್ನು ನೀಡಿದ್ದಾರೆ.

ಹೌದು.. ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ಪ್ರಮುಖರು ಈ ಬಗ್ಗೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದು ಹೇಳಿದ್ದರಾದರೂ, ಇಲ್ಲಿಯವರೆಗೂ ಸರ್ಕಾರದಿಂದ ಯಾರೂ ಅಧಿಕೃತವಾಗಿ ತಮ್ಮನ್ನು ಸಂಪರ್ಕಿಸಿಲ್ಲ. ಹೀಗಾಗಿ ಸರ್ಕಾರದ ಕೆಲ ನಾಯಕರು ನೀಡಿರುವ ಗೊಂದಲದ ಹೇಳಿಕೆಗಳಿಗೆ ತೆರೆ ಎಳೆಯಲು ಮತ್ತು ಸತ್ಯಾಂಶ ಏನೆಂಬುದನ್ನು ಜನರಿಗೆ ತಿಳಿಸಲು ತಾವೇ ಸ್ವತಃ ಮಾಧ್ಯಮಗಳ ಮುಂದೆ ಬರಬೇಕಾಯಿತು ಎಂದು ತಿಳಿಸಿದ್ದಾರೆ.

ಧಾರ್ಮಿಕ ಆಚರಣೆಗೆ ತೊಂದರೆ ಹಾಗೂ ಜಟ್ಟಿ ಕಾಳಗದ ಗೊಂದಲ
ಕಳೆದ ತಿಂಗಳು 25 ರಂದೇ ತಾವು ಒಂದು ಪತ್ರಿಕಾ ಪ್ರಕಟಣೆ ಹೊರಡಿಸಿರುವುದಾಗಿ ತಿಳಿಸಿದ ರಾಜಮಾತೆ, ದಸರಾ ಸಂದರ್ಭದಲ್ಲಿ ಜಟ್ಟಿ ಕಾಳಗ ನಿಲ್ಲಲು ಸರ್ಕಾರದ ವಿವಿಧ ಇಲಾಖೆಗಳ ನಡುವಿನ ಸಮನ್ವಯತೆಯ ಕೊರತೆಯೇ ಮುಖ್ಯ ಕಾರಣ ಎಂದು ದೂರಿದ್ದಾರೆ. ಅಷ್ಟೇ ಅಲ್ಲದೆ, ಆಯುಧ ಪೂಜೆಯ ದಿನದಂದು ದೇವರುಗಳನ್ನು ದೇವಸ್ಥಾನಕ್ಕೆ ತರುವ ಸಂದರ್ಭದಲ್ಲೂ ಅನಗತ್ಯ ಅಡಚಣೆಗಳು ಉಂಟಾಗುತ್ತಿವೆ. ಈ ಬಗ್ಗೆ ಪ್ರತಿ ವರ್ಷವೂ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದರು. ತಾವೇನು ಇಡೀ 7 ದಿನಗಳ ಕಾಲ ದಸರಾ ಮಾಡಿ ಎಂದು ಹೇಳಿಲ್ಲ ಬದಲಿಗೆ ಆಯುಧ ಪೂಜೆ ಮತ್ತು ವಿಜಯದಶಮಿಯ ದಿನಗಳಲ್ಲಿ ಸಂಪ್ರದಾಯದಂತೆ ನಮ್ಮ ಧಾರ್ಮಿಕ ಆಚರಣೆಗಳನ್ನು ಮುಂದುವರಿಸಲು ಮಾತ್ರ ಅನುವು ಮಾಡಿಕೊಡಿ ಎಂದು ಕೇಳಿದ್ದೇವೆ ಎಂದು ತಿಳಿಸಿದರು.

ಅಂಬಾರಿ ಹಾಗೂ ಸಿಂಹಾಸನದ ಮೇಲಿನ ಹಕ್ಕು
ದಸರಾದಲ್ಲಿ ಬಳಸುವ ಅಂಬಾರಿ ಹಾಗೂ ಸಿಂಹಾಸನದ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರ ಅಂಬಾರಿಗೆ ನೀಡುವ ಹಣವನ್ನು 'ಬಾಡಿಗೆ' ಎಂದು ಬಿಂಬಿಸುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. "ಅದು ಬಾಡಿಗೆಯಲ್ಲ, ಬದಲಿಗೆ ನಮಗೆ ಕೊಡುವ ಗೌರವ ಧನ. ಅಂಬಾರಿಯನ್ನು ದಸರಾ ಹೆಸರಿನಲ್ಲಿ ವಾಣಿಜ್ಯೀಕರಣ ಮಾಡಲಾಗುತ್ತಿದೆ. ಟಿಕೆಟ್ ಮಾರಾಟ ಮಾಡಿ, ಇದರ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಅಂಬಾರಿ ಮತ್ತು ಸಿಂಹಾಸನ ಸಂಪೂರ್ಣವಾಗಿ ನಮ್ಮ ಸುಪರ್ದಿಯಲ್ಲೇ ಇದೆ, ಮುಂದೆಯೂ ನಮ್ಮದೇ ಆಗಿರುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.

ಅರಮನೆ ಖಾಸಗಿ ಸ್ವತ್ತು
ಬೆಂಗಳೂರು ಹಾಗೂ ಮೈಸೂರು ಅರಮನೆಗಳ ಕುರಿತು ಮಾತನಾಡುತ್ತಾ, ನಮಗೆ ಯಾವುದೇ ಅರಮನೆಯನ್ನು ಸರ್ಕಾರ ಕಟ್ಟಿ ಕೊಟ್ಟಿಲ್ಲ. 1947ರಲ್ಲೇ ಖಾಸಗಿ ಸ್ವತ್ತುಗಳ ಅಧಿಕೃತ ಪಟ್ಟಿಯನ್ನು ಅಂದಿನ ಕೇಂದ್ರ ಸರ್ಕಾರಕ್ಕೆ ಒಪ್ಪಿಸಲಾಗಿದ್ದು, 1951ರಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿ ವಿ.ಪಿ. ಮೆನನ್ ಅವರು ಇದಕ್ಕೆ ಸಹಿ ಹಾಕಿದ್ದಾರೆ. ಇವೆಲ್ಲವೂ ನಮ್ಮದೇ ಖಾಸಗಿ ಆಸ್ತಿಗಳಾಗಿವೆ ಎಂದು ಐತಿಹಾಸಿಕ ದಾಖಲೆಗಳನ್ನು ನೆನಪಿಸಿದರು. ಜಯಚಾಮರಾಜ ಒಡೆಯರ್ ಅವರ ನಿಧನದ ಬಳಿಕ ಸುಮಾರು 8 ಕೋಟಿ ರೂಪಾಯಿಗೂ ಅಧಿಕ ತೆರಿಗೆ ಕಟ್ಟಬೇಕಾದ ಪರಿಸ್ಥಿತಿ ಬಂದಾಗ, ಅರಮನೆಯ ನಿರ್ವಹಣೆಯನ್ನು ಸರ್ಕಾರದ ವಶಕ್ಕೆ ತಾತ್ಕಾಲಿಕವಾಗಿ ನೀಡಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಸರ್ಕಾರ ಅದನ್ನು ವಾಪಸ್ ನೀಡದ ಕಾರಣ ನ್ಯಾಯಾಲಯದ ಮೊರೆ ಹೋಗಬೇಕಾಯಿತು ಎಂದರು.

ಸರ್ಕಾರದೊಂದಿಗೆ ಚರ್ಚೆಗೆ ಸಿದ್ಧ
ಅರಮನೆಯಲ್ಲಿ ವಾಸಿಸಲು ನಮಗೆ ಸರ್ಕಾರವೇ ಜಾಗ ಕೊಟ್ಟಿದೆ ಎಂಬ ಮಾತಿನಲ್ಲಿ ಯಾವುದೇ ಸತ್ಯವಿಲ್ಲ. ನಾವು ನಮ್ಮದೇ ಆದ ಸ್ವಂತ ವಾಸಸ್ಥಳದಲ್ಲಿದ್ದೇವೆ ಮತ್ತು ಅರಮನೆಯ ಸಂಪೂರ್ಣ ಜಾಗವನ್ನೂ ಸರ್ಕಾರಕ್ಕೆ ಬರೆದುಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು. ಒಟ್ಟಿನಲ್ಲಿ, ಸಿಎಂ ಅಥವಾ ಸರ್ಕಾರದ ಸಚಿವರು ಯಾರೇ ಆಗಲಿ ಈ ಬಗ್ಗೆ ಮಾತನಾಡಲು ಮುಂದಾದರೆ, ತಾವೂ ಕೂಡ ಸರ್ಕಾರದ ಜೊತೆ ಕುಳಿತು ಮುಕ್ತವಾಗಿ ಚರ್ಚೆ ಮಾಡಲು ಸಿದ್ಧವಿರುವುದಾಗಿ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ತಿಳಿಸಿದರು. ಮೈಸೂರು ದಸರಾ ಮತ್ತು ಅರಮನೆ ವಿವಾದ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

Add Zee News as a Preferred Source
TAGS:
Kannada News