ಇಪಿಎಫ್‌ಒದ ಲಕ್ಷಾಂತರ ಮಂದಿ ಪಿಂಚಣಿದಾರರು ಇಪಿಎಸ್ ಕನಿಷ್ಠ ಪಿಂಚಣಿ ಹೆಚ್ಚಿಸುವ ಬಗ್ಗೆ ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದಾರೆ.
1/6
ಇಪಿಎಸ್ ಪಿಂಚಣಿ ಹೆಚ್ಚಳ
ನೌಕರರ ಭವಿಷ್ಯ ನಿಧಿ ಸಂಸ್ಥೆಯ ಲಕ್ಷಾಂತರ ಪಿಂಚಣಿದಾರರು ಇಪಿಎಸ್ ಕನಿಷ್ಠ ಪಿಂಚಣಿಯನ್ನು ತಿಂಗಳಿಗೆ ₹ 1,000 ರಿಂದ ₹ 7,500 ಕ್ಕೆ ಹೆಚ್ಷಿಸುವಂತೆ ಹಲವು ವರ್ಷಗಳಿಂದ ಮನವಿ ಮಾಡುತ್ತಾ ಬಂದಿದ್ದಾರೆ. ಇದೀಗ, ದೀಪಾವಳಿ ಬಳಿಕ ನವೆಂಬರ್ 19 ರಂದು ಗುಜರಾತ್‌ನಲ್ಲಿ ಕೇಂದ್ರೀಯ ಟ್ರಸ್ಟಿಗಳ ಮಂಡಳಿ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಇಪಿಎಸ್ ಕನಿಷ್ಠ ಮಾಸಿಕ ಪಿಂಚಣಿ ಏರಿಕೆ ಕುರಿತು ಚರ್ಚಿಸಬಹುದು ಎನ್ನಲಾಗುತ್ತಿದೆ.
2/6
ಸಿಬಿಟಿ 240 ನೇ ಸಭೆ
ಕೇಂದ್ರೀಯ ಟ್ರಸ್ಟಿಗಳ ಮಂಡಳಿ (ಸಿಬಿಟಿ) ತನ್ನ 240 ನೇ ಸಭೆಯನ್ನು ನವೆಂಬರ್ 19 ಗುಜರಾತ್‌ನಲ್ಲಿ ನಡೆಸಲಿದ್ದು, ಈ ಸಭೆಯಲ್ಲಿ ಪಿಂಚಣಿದಾರರು ಮತ್ತು ಕಾರ್ಮಿಕ ಸಂಘಗಳ ಬಹುಕಾಲದಿಂದ ಬಾಕಿ ಇರುವ ಬೇಡಿಕೆಯಾದ, ಇಪಿಎಸ್ ಅಡಿಯಲ್ಲಿ ಕನಿಷ್ಠ ಮಾಸಿಕ ಪಿಂಚಣಿ ಪರಿಷ್ಕರಿಸುವ ವಿಷಯ ಕಾರ್ಯಸೂಚಿಯಲ್ಲಿರಲಿದೆ ಎಂದು ಮೂಲಗಳು ಉಲ್ಲೇಖಿಸಿವೆ.
3/6
ಇಪಿಎಸ್ ಪಿಂಚಣಿ ಹೆಚ್ಚಳ
ಸೆಪ್ಟೆಂಬರ್ 2014 ರಿಂದ, ಕೇಂದ್ರ ಸರ್ಕಾರವು ತಿಂಗಳಿಗೆ ಕನಿಷ್ಠ ಪಿಂಚಣಿಯನ್ನು ₹ 1,000 ಎಂದು ನಿಗದಿಪಡಿಸಿದೆ. ಆದರೆ ಕಾರ್ಮಿಕ ಮತ್ತು ಪಿಂಚಣಿದಾರರ ಸಂಘಗಳು ಜೀವನ ವೆಚ್ಚ ಮತ್ತು ಹಣದುಬ್ಬರವನ್ನು ನಿಭಾಯಿಸಲು ಇದು ಸಾಕಾಗುವುದಿಲ್ಲ, ಹಾಗಾಗಿ, ಮಾಸಿಕ ಪಿಂಚಣಿಯನ್ನು ಹೆಚ್ಚಿಸಬೇಕು ಎಂದು ವಾದಿಸಿವೆ.
4/6
ಪಿಂಚಣಿ ಜೊತೆಗೆ ಡಿಎ ವಿಲೀನ
ಮಾಸಿಕ ಕನಿಷ್ಠ ಪಿಂಚಣಿಯನ್ನು ₹ 7,500/ ತಿಂಗಳಿಗೆ ಹೆಚ್ಚಿಸುವುದರ ಜೊತೆಗೆ ಅದರೊಂದಿಗೆ ತುಟ್ಟಿ ಭತ್ಯೆ (ಡಿಎ) ಅನ್ನು ಸಹ ವಿಲೀನಗೊಳಿಸಬೇಕು ಎಂದು ಕಾರ್ಮಿಕ ಮತ್ತು ಪಿಂಚಣಿದಾರರ ಸಂಘಗಳು ಮನವಿ ಸಲ್ಲಿಸಿವೆ.
5/6
ಪಿಂಚಣಿ ಡಿಎ ವಿಲೀನ
ಕನಿಷ್ಠ ಪಿಂಚಣಿಯನ್ನು ಡಿಎ ಜೊತೆಗೆ ವಿಲೀನಗೊಳಿಸಿದರೆ ಪ್ರತಿ ತಿಂಗಳು ಕೈ ಸೇರುವ ಮಾಸಿಕ ಪಿಂಚಣಿ ಹೆಚ್ಚಾಗುತ್ತದೆ. ಇದರಿಂದ ಪಿಂಚಣಿದಾರರ ಜೀವನ ಮಟ್ಟ ಸುಧಾರಿಸಲಿದೆ ಎಂಬುದು ಪಿಂಚಣಿದಾರರ ಸಂಘಗಳ ವಾದವಾಗಿದೆ.
6/6
ಮುಂದಿನ ಸಿಬಿಟಿ ಸಭೆ
ಕೇಂದ್ರ ಕಾರ್ಮಿಕ ಸಚಿವಾಲಯವು ಕಳೆದ ವಾರ ಪತ್ರವೊಂದರಲ್ಲಿ ಮುಂದಿನ ಸಿಬಿಟಿ ಸಭೆಯ ದಿನಾಂಕ ಮತ್ತು ಸ್ಥಳವನ್ನು ಪ್ರಕಟಿಸಿದೆ ಎಂದು ವರದಿ ತಿಳಿಸಿದೆ. ಆದಾಗ್ಯೂ, ಪೂರ್ಣ ಕಾರ್ಯಸೂಚಿಯನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.