• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ತಪ್ಪಿದ ಭಾರಿ ಅನಾಹುತ; ಡಿಪೋ ಗೇಟ್‌ಗೆ ಡಿಕ್ಕಿ ಹೊಡೆದ KSRTC ಬಸ್

ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ತಪ್ಪಿದ ಭಾರಿ ಅನಾಹುತ; ಡಿಪೋ ಗೇಟ್‌ಗೆ ಡಿಕ್ಕಿ ಹೊಡೆದ KSRTC ಬಸ್

ಲಭ್ಯವಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಂದ ತುಂಬಿದ್ದ ಸಾರಿಗೆ ಬಸ್ ನಿಂತಿತ್ತು. ಈ ವೇಳೆ ಬಸ್‌ನ ಚಾಲಕ ವಾಹನವನ್ನು ನಿಲ್ಲಿಸಿ ಸ್ವಲ್ಪ ದೂರ ತೆರಳಿದ್ದರು.

Reported ByManjunath NaragundEdited ByManjunath Naragund
Published: Oct 26, 2026, 12:01 PM IST|Updated: Oct 26, 2026, 12:08 PM IST
joinshare
ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ತಪ್ಪಿದ ಭಾರಿ ಅನಾಹುತ; ಡಿಪೋ ಗೇಟ್‌ಗೆ ಡಿಕ್ಕಿ ಹೊಡೆದ KSRTC ಬಸ್
Image Credit: Bus Accident

About the Author

Manjunath Naragund

Manjunath Naragund

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.
Read More

Trending

  • News
  • Photos
  • Videos
"ಸಿದ್ದರಾಮಯ್ಯ ಪರಿಚಯವೇ ನನಗಿಲ್ಲ" : ವಿಡಿಯೋದಲ್ಲಿದ್ದ ಮಹಿಳೆ ಸಿಸಿಬಿ ಮುಂದೆ ಹೇಳಿದ್ದೇನು?

"ಸಿದ್ದರಾಮಯ್ಯ ಪರಿಚಯವೇ ನನಗಿಲ್ಲ" : ವಿಡಿಯೋದಲ್ಲಿದ್ದ ಮಹಿಳೆ ಸಿಸಿಬಿ ಮುಂದೆ ಹೇಳಿದ್ದೇನು?

2

ಭೂಮಿ ಹುಣ್ಣಿಮೆ ಹಬ್ಬದ ಮಹತ್ವವೇನು? ಮಲೆನಾಡಿನ ರೈತರು ಭೂಮಿ ತಾಯಿಯನ್ನು ಪೂಜಿಸುವುದೇಕೆ?

3

ಮೈಸೂರು ದಸರಾ ವ್ಯವಸ್ಥೆ ಬಗ್ಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ತೀವ್ರ ಅಸಮಾಧಾನ

4

Airtel recharge plan: 56 ದಿನ ವ್ಯಾಲಿಡಿಟಿ, ಪ್ರತಿದಿನ 3GB ಡೇಟಾ, ಉಚಿತ ಅಮೆಜಾನ್ ಪ್ರೈಮ್... ಎಲ್ಲವೂ ಒಂದೇ ಪ್ಯಾಕ್‌ನಲ್ಲಿ!

5

ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ತಪ್ಪಿದ ಭಾರಿ ಅನಾಹುತ; ಡಿಪೋ ಗೇಟ್‌ಗೆ ಡಿಕ್ಕಿ ಹೊಡೆದ KSRTC ಬಸ್

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್ ಒಂದೇ ಏಕಾಏಕಿ ಹಿಮ್ಮುಖವಾಗಿ ಚಲಿಸಿ ಡಿಪೋದ ಗೇಟ್‌ಗೆ ಡಿಕ್ಕಿ ಹೊಡೆದ ಘಟನೆ ಸೋಮವಾರ ನಡೆದಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ದೊಡ್ಡ ಮಟ್ಟದ ಅನಾಹುತ ಸಂಭವಿಸದೆ, ಪ್ರಯಾಣಿಕರು ಮತ್ತು ಸಾರ್ವಜನಿಕರು ದೊಡ್ಡ ಗಂಡದಿಂದ ಪಾರಾಗಿದ್ದಾರೆ.

ಲಭ್ಯವಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಂದ ತುಂಬಿದ್ದ ಸಾರಿಗೆ ಬಸ್ ನಿಂತಿತ್ತು. ಈ ವೇಳೆ ಬಸ್‌ನ ಚಾಲಕ ವಾಹನವನ್ನು ನಿಲ್ಲಿಸಿ ಸ್ವಲ್ಪ ದೂರ ತೆರಳಿದ್ದರು. ಹಾಗೂ ನಿರ್ವಾಹಕರು ಬಸ್‌ನ ಡ್ಯೂಟಿ ಎಂಟ್ರಿ (ಕರ್ತವ್ಯದ ನೊಂದಣಿ) ಮಾಡಿಸಲು ಹೋಗಿದ್ದರು. ಬಸ್‌ನಲ್ಲಿ ಯಾವುದೇ ಸಿಬ್ಬಂದಿ ಇಲ್ಲದ ಸಂದರ್ಭದಲ್ಲಿ, ಪ್ರಯಾಣಿಕರೊಬ್ಬರು ಬಸ್ ಹತ್ತುವ ಯತ್ನ ನಡೆಸಿದ್ದಾರೆ.

ಘಟನೆಗೆ ಮಹಿಳಾ ಪ್ರಯಾಣಿಕರೊರ್ವರ ಎಡವಟ್ಟು ಕಾರಣ ಎಂಬ ಮಾಹಿತಿ ಲಭ್ಯವಾಗಿದೆ. ಬಸ್‌ನ ಚಾಲಕನ ಬಾಗಿಲಿನ (ಡೋರ್) ಮೂಲಕ ಒಳಗೆ ಏರಿದ ಆ ಮಹಿಳೆ, ಆಕಸ್ಮಿಕವಾಗಿ ಕ್ಲಚ್ ಮೇಲೆ ಕಾಲಿಟ್ಟಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ನಿಂತಿದ್ದ ಬಸ್ ಏಕಾಏಕಿ ಹಿಮ್ಮುಖವಾಗಿ (ರಿವರ್ಸ್) ಚಲಿಸಲು ಪ್ರಾರಂಭಿಸಿದೆ. ಬಸ್ ದಿಢೀರ್ ಚಲಿಸುವುದನ್ನು ಕಂಡ ಪ್ರಯಾಣಿಕರು ಮತ್ತು ಸುತ್ತಮುತ್ತಲಿನ ಜನರು ಜೀವಭಯದಿಂದ ಗಾಬರಿಗೊಂಡು ದಿಕ್ಕಾಪಾಲಾಗಿ ಓಡಿ ಸರಿದಿದ್ದಾರೆ.

ಚಾಲಕ ಹಾಗೂ ನಿರ್ವಾಹಕರಹಿತ ಬಸ್ ಸುಮಾರು ದೂರ ಹಿಮ್ಮುಖವಾಗಿ ಸಾಗಿ, ಕೊನೆಗೆ ಬಸ್ ನಿಲ್ದಾಣದ ಬಳಿಯಿದ್ದ ಡಿಪೋ ಗೇಟ್‌ಗೆ ಜೋರಾಗಿ ಡಿಕ್ಕಿ ಹೊಡೆದು ನಿಂತಿದೆ. ಬಸ್‌ನಲ್ಲಿದ್ದ ಇತರ ಪ್ರಯಾಣಿಕರು ಮತ್ತು ನಿಲ್ದಾಣದಲ್ಲಿದ್ದ ಸಾರ್ವಜನಿಕರು ಈ ಅನಿರೀಕ್ಷಿತ ಘಟನೆಯಿಂದ ತೀವ್ರ ಭಯಭೀತರಾದರು.

ಬಸ್ ಗೇಟ್‌ಗೆ ಡಿಕ್ಕಿ ಹೊಡೆದು ನಿಲ್ಲುತ್ತಿದ್ದಂತೆ, ಗಾಬರಿಗೊಂಡ ಆ ಮಹಿಳಾ ಪ್ರಯಾಣಿಕರು ತಕ್ಷಣವೇ ಬಸ್‌ನಿಂದ ಕೆಳಗೆ ಇಳಿದು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಈ ಘಟನೆಯಿಂದಾಗಿ ಬಸ್ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಸ್ಥಳೀಯ ಪೊಲೀಸರು ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸದಿರುವುದು ಎಲ್ಲರೂ ನಿಟ್ಟುಸಿರುಬಿಡುವಂತೆ ಮಾಡಿದೆ.
 

Add Zee News as a Preferred Source
TAGS:
Kannada News