• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಶಿವಮೊಗ್ಗ
  • /ಭೂಮಿ ಹುಣ್ಣಿಮೆ ಹಬ್ಬದ ಮಹತ್ವವೇನು? ಮಲೆನಾಡಿನ ರೈತರು ಭೂಮಿ ತಾಯಿಯನ್ನು ಪೂಜಿಸುವುದೇಕೆ?

ಭೂಮಿ ಹುಣ್ಣಿಮೆ ಹಬ್ಬದ ಮಹತ್ವವೇನು? ಮಲೆನಾಡಿನ ರೈತರು ಭೂಮಿ ತಾಯಿಯನ್ನು ಪೂಜಿಸುವುದೇಕೆ?

Bhumi Hunnime festival: ಇಂದು ಮಲೆನಾಡಿನಲ್ಲಿ ಭೂಮಿ ಹುಣ್ಣಿಮೆ ಹಬ್ಬ ಸಂಭ್ರಮ ಕಳೆಗಟ್ಟಿದೆ ಹಾಗಾದ್ರೆ ಈ ಮಲೆನಾಡಿನಲ್ಲಿ ರೈತರೆಲ್ಲರೂ ಒಗ್ಗೂಡಿ ಆಚರಿಸುವ ಭೂಮಿ ಹುಣ್ಣಿಮೆ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಭೂಮಿ ತಾಯಿಗೆ ಪೂಜೆ ಸಲ್ಲಿಸಿ, ಭೂಮಿಯ ಒಡಲಿನಲ್ಲಿ ಬೆಳೆದ ಬೆಳೆಗಳಿಗೆ ಕೃತಜ್ಞತೆ ಅರ್ಪಿಸುವ ಈ ಹಬ್ಬದ ವಿಶೇಷತೆ ಏನು ಎಂದು ಇಲ್ಲಿ ವಿವರಿಸಲಾಗಿದೆ.

Written ByRamya. R. Gowda
Published: Oct 26, 2026, 01:06 PM IST|Updated: Oct 26, 2026, 01:19 PM IST
joinshare
ಭೂಮಿ ಹುಣ್ಣಿಮೆ ಹಬ್ಬದ ಮಹತ್ವವೇನು? ಮಲೆನಾಡಿನ ರೈತರು ಭೂಮಿ ತಾಯಿಯನ್ನು ಪೂಜಿಸುವುದೇಕೆ?

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ಈ ಕಾಯಿಯ ರಸ ಮಧುಮೇಹಕ್ಕೆ ಸಂಜೀವನಿ... ಸಕ್ಕರೆ ಕಾಯಿಲೆಯನ್ನು ಬುಡದಿಂದಲೇ ಗುಣಪಡಿಸುತ್ತೆ!

ಈ ಕಾಯಿಯ ರಸ ಮಧುಮೇಹಕ್ಕೆ ಸಂಜೀವನಿ... ಸಕ್ಕರೆ ಕಾಯಿಲೆಯನ್ನು ಬುಡದಿಂದಲೇ ಗುಣಪಡಿಸುತ್ತೆ!

2

ಕನ್ನಡ ಶಾಲೆಗಳ ಸಮಸ್ಯೆ ಪರಿಹಾರಕ್ಕೆ ನವೆಂಬರ್ 1ರೊಳಗೆ ನಿರ್ಧಾರ; ಸಚಿವ ಮಧು ಬಂಗಾರಪ್ಪ ಮಹತ್ವದ ಘೋಷಣೆ!

3

"ಸಿದ್ದರಾಮಯ್ಯ ಪರಿಚಯವೇ ನನಗಿಲ್ಲ" : ವಿಡಿಯೋದಲ್ಲಿದ್ದ ಮಹಿಳೆ ಸಿಸಿಬಿ ಮುಂದೆ ಹೇಳಿದ್ದೇನು?

4

ಭೂಮಿ ಹುಣ್ಣಿಮೆ ಹಬ್ಬದ ಮಹತ್ವವೇನು? ಮಲೆನಾಡಿನ ರೈತರು ಭೂಮಿ ತಾಯಿಯನ್ನು ಪೂಜಿಸುವುದೇಕೆ?

5

ಮೈಸೂರು ದಸರಾ ವ್ಯವಸ್ಥೆ ಬಗ್ಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ತೀವ್ರ ಅಸಮಾಧಾನ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

 Bhumi Hunnime festival: ಭೂಮಿ ಹಣ್ಣಿಮೆಯು ಕರ್ನಾಟಕದ ರೈತಾಪಿ ಸಮುದಾಯವು ಆಚರಿಸುವ ಒಂದು ಪವಿತ್ರವಾದ ಹಬ್ಬವಾಗಿದೆ
 

ನಮ್ಮ ದೇಶ ಕೃಷಿ ಪ್ರಧಾನ ದೇಶ.. ರೈತನೇ ದೇಶದ ಬೆನ್ನೆಲುಬು.. ಅನ್ನ ನೀಡುವ ಭೂಮಿ ತಾಯಿಯನ್ನು ಪೂಜಿಸುವ ಸಂಪ್ರದಾಯ ನಮ್ಮ ನಾಡಿನಲ್ಲಿದೆ. ಅದರಲ್ಲೂ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಭೂಮಿ ಹುಣ್ಣಿಮೆ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಭೂಮಿ ತಾಯಿಗೆ ಪೂಜೆ ಸಲ್ಲಿಸಿ, ಭೂಮಿಯ ಒಡಲಿನಲ್ಲಿ ಬೆಳೆದ ಬೆಳೆಗಳಿಗೆ ಕೃತಜ್ಞತೆ ಅರ್ಪಿಸುವ ಈ ಹಬ್ಬದ ವಿಶೇಷತೆ ಏನು? ಆಚರಣೆ ಹೇಗಿರುತ್ತೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

ಭೂಮಿ ಹುಣ್ಣಿಮೆ ವಿಶೇಷತೆ
ಭೂಮಿ ತಾಯಿ.. ನಮ್ಮೆಲ್ಲರ ಬದುಕಿಗೆ ಆಧಾರ. ರೈತನಿಗೆ ಭೂಮಿಯೇ ದೇವರು.. ಅದೇ ಭೂಮಿಯಲ್ಲಿ ಬೆಳೆ ಬೆಳೆದು ಜನರಿಗೆ ಅನ್ನ ನೀಡುವ ರೈತರು, ಭೂಮಿಯ ಋಣ ತೀರಿಸಲು ಸಾಧ್ಯವಿಲ್ಲ ಎಂಬ ಭಾವನೆಯೊಂದಿಗೆ ಪೂಜೆ ಸಲ್ಲಿಸುತ್ತಾರೆ. ಭೂಮಿ ಹುಣ್ಣಿಮೆಯಂದು ಹೊಲ, ಗದ್ದೆಗಳಿಗೆ ತೆರಳಿ ಭೂಮಿ ತಾಯಿಯನ್ನು ಪೂಜಿಸುವುದು ಈ ಹಬ್ಬದ ವಿಶೇಷತೆ.ಭೂಮಿ ಹುಣ್ಣಿಮೆಯಂದು ರೈತ ಕುಟುಂಬಗಳು ಬೆಳಗ್ಗೆಯೇ ಸಿದ್ಧತೆ ಮಾಡಿಕೊಳ್ಳುತ್ತವೆ. ಭೂಮಿಗೆ ಪೂಜೆ ಸಲ್ಲಿಸಿ, ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ. ಕೆಲವು ಪ್ರದೇಶಗಳಲ್ಲಿ ಹೊಲದಲ್ಲೇ ವಿಶೇಷ ಅಡುಗೆ ತಯಾರಿಸಿ, ಭೂಮಿ ತಾಯಿಗೆ ಸಮರ್ಪಿಸುವ ಸಂಪ್ರದಾಯವಿದೆ. ಕುಟುಂಬದ ಸದಸ್ಯರು ಒಟ್ಟಾಗಿ ಸೇರಿ ಪೂಜೆ ಸಲ್ಲಿಸಿ, ಉತ್ತಮ ಫಸಲು ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ.

ರೈತರಿಂದ ಪ್ರಕೃತಿಗೆ ಧನ್ಯವಾದ
ಕೃಷಿ ಅಂದರೆ ಕೇವಲ ಬೆಳೆ ಬೆಳೆಯುವುದಲ್ಲ.. ಅದು ಮಣ್ಣು, ನೀರು, ಗಾಳಿ ಮತ್ತು ಪ್ರಕೃತಿಯೊಂದಿಗಿನ ಅವಿನಾಭಾವ ಸಂಬಂಧ. ಭೂಮಿ ಹುಣ್ಣಿಮೆ ಹಬ್ಬವು ಭೂಮಿಯ ಮಹತ್ವವನ್ನು ಸಾರುವುದರ ಜೊತೆಗೆ, ಪ್ರಕೃತಿಯನ್ನು ಗೌರವಿಸುವ ಸಂದೇಶವನ್ನೂ ನೀಡುತ್ತದೆ. ರೈತರು ತಮ್ಮ ಶ್ರಮಕ್ಕೆ ಫಲ ಸಿಗಲಿ, ಬೆಳೆಗಳು ಸಮೃದ್ಧವಾಗಿ ಬರಲಿ, ನಾಡಿನಲ್ಲಿ ಸುಖ-ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸುತ್ತಾರೆ.

ಮಲೆನಾಡಿನ ಕೃಷಿ ಸಂಪ್ರದಾಯದ ಹಿಂದಿನ ಸಂದೇಶ
ಇಂದಿನ ಆಧುನಿಕ ಯುಗದಲ್ಲಿ ಕೃಷಿ ಪದ್ಧತಿಗಳು ಬದಲಾಗುತ್ತಿವೆ. ಆದರೂ ಭೂಮಿ ಹುಣ್ಣಿಮೆಯಂತಹ ಹಬ್ಬಗಳು ನಮ್ಮ ಮಣ್ಣಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಜೀವಂತವಾಗಿರಿಸಿವೆ. ಭೂಮಿಯನ್ನು ಕೇವಲ ಆಸ್ತಿಯೆಂದು ನೋಡದೆ, ಬದುಕು ನೀಡುವ ತಾಯಿಯೆಂದು ಗೌರವಿಸಬೇಕು ಎಂಬ ಸಂದೇಶವನ್ನು ಈ ಹಬ್ಬ ಸಾರುತ್ತದೆ.ಒಟ್ಟಿನಲ್ಲಿ, ಭೂಮಿ ಹುಣ್ಣಿಮೆ ಅನ್ನದಾತನ ಭಕ್ತಿ, ಪ್ರಕೃತಿಯ ಮೇಲಿನ ಗೌರವ ಮತ್ತು ಕೃಷಿ ಸಂಸ್ಕೃತಿಯ ಪ್ರತೀಕ. ಭೂಮಿ ತಾಯಿಗೆ ಪೂಜೆ ಸಲ್ಲಿಸುವ ಮೂಲಕ ಸಮೃದ್ಧಿಯ ಬದುಕಿಗಾಗಿ ಪ್ರಾರ್ಥಿಸುವ ಈ ಹಬ್ಬ, ನಮ್ಮ ಮಣ್ಣಿನ ಸೊಗಡನ್ನು ಮುಂದಿನ ಪೀಳಿಗೆಗೂ ಪರಿಚಯಿಸುತ್ತದೆ.

ಮಲೆನಾಡಿನ ಭೂಮಿ ಹುಣ್ಣಿಮೆಯ ಮಹತ್ವವೇನು? 
ಸಾಮಾನ್ಯವಾಗಿ ಮಲೆನಾಡು ಭಾಗದಲ್ಲಿ ಭೂ ತಾಯಿಗೆ ಬೆಳ್ಳಂಬೆಳಗ್ಗೆ ಸೀಮಂತದ ಸಂಪ್ರದಾಯದ ಪ್ರಕಾರ ಆಶ್ವಯುಜ ಮಾಸದ ಹುಣ್ಣಿಮೆಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ರೈತರು ಮುಂಜಾನೆಯೇ ಎಂದು ವಿವಿಧ ಬಗ್ಗೆಯ ಸಿಹಿ ತಿಂಡಿ, ತಿಸಿಸುಗಳನ್ನು ತಯಾರಿಸಿ ಸೂರ್ಯದಯದ ಒಳಗೆ ಭೂಮಿಗೆ ಒಣಬಡಿಸುತ್ತಾರೆ. 

ಸೀಮಂತದ ಸಂಪ್ರದಾಯ: ಆಶ್ವಯುಜ ಮಾಸದ ಹುಣ್ಣಿಮೆಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಸಮಯದಲ್ಲಿ ಬೆಳೆಗಳು ತೆನೆತುಂಬಿ ನಿಂತಿರುತ್ತವೆ. ರೈತರು ಭೂಮಿತಾಯಿಯನ್ನು ಗರ್ಭಿಣಿ ಎಂದು ಭಾವಿಸಿ, ಅವಳಿಗೆ 'ಸೀಮಂತ' (ಬಯಕೆ ಹಬ್ಬ) ಮಾಡುವ ರೀತಿಯಲ್ಲಿ ವಿಶೇಷವಾಗಿ ಪೂಜಿಸುತ್ತಾರೆ. ಭೂಮಣಿ ಬುಟ್ಟಿ ಈ ದಿನದಂದು ರೈತ ಮಹಿಳೆಯರು ಹಾಗೂ ಕುಟುಂಬದವರು ವಿಶೇಷವಾಗಿ ತಯಾರಿಸಿದ ಚಿತ್ತಾರ ಬಿಡಿಸಿದ ಬಿದಿರಿನ 'ಭೂಮಣಿ ಬುಟ್ಟಿ'ಯಲ್ಲಿ ನೈವೇದ್ಯ ಕೊಂಡೊಯ್ದು ಭೂಮಿಗೆ ಪೂಜೆ ಸಲ್ಲಿಸುತ್ತಾರೆ.ಮಾತ್ರವಲ್ಲದೇ ಚರಗ ಚೆಲ್ಲುವ ವಾಡಿಗೆ ಇದೆ ರೈತರೆಲ್ಲರೂ ಭೂಮಿಯ ತಾಯ್ತನಕ್ಕೆ ಕೃತಜ್ಞತೆ ಸಲ್ಲಿಸುತ್ತಾ ಹೊಲಗಳಲ್ಲಿ ಚರಗ ಚೆಲ್ಲುವ ಸಂಪ್ರದಾಯವಿದೆ.
 

Add Zee News as a Preferred Source
TAGS:
Kannada News