ಜ್ಯೋತಿಷ್ಯದಲ್ಲಿ ಶುಕ್ರನನ್ನು ಪ್ರೀತಿ, ಸೌಂದರ್ಯ, ಸಂಪತ್ತಿನ ಅಂಶ ಎಂದು ಪರಿಗಣಿಸಲಾಗುತ್ತದೆ.
ವೈದಿಕ ಜ್ಯೋತಿಷ್ಯದ ಪ್ರಕಾರ, ಶುಕ್ರ ಗ್ರಹವು ಶುಭ ಸ್ಥಾನದಲ್ಲಿದ್ದಾಗ ವ್ಯಕ್ತಿಗೆ ಎಲ್ಲಾ ರೀತಿಯಲ್ಲೂ ಶುಭ ಫಲಗಳನ್ನು ನೀಡಲಿದ್ದಾನೆ ಎನ್ನಲಾಗುತ್ತದೆ.
1/6
ಶುಕ್ರ ಅಸ್ತ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಕ್ಟೋಬರ್ 14, 2026ರಂದು ಐಷಾರಾಮಿ ಜೀವನದ ಅಂಶ ಎನ್ನಲಾಗುವ ಶುಕ್ರ ತನ್ನ ತ್ರಿಕೋನ ರಾಶಿಯಾದ ತುಲಾ ರಾಶಿಯಲ್ಲಿ ಅಸ್ತಮನಾಗಲಿದ್ದಾನೆ. ಇದರ ಪ್ರಭಾವ ಎಲ್ಲಾ ರಾಶಿಯವರ ಮೇಲೂ ಕಂಡು ಬರಲಿದೆ. ಆದಾಗ್ಯೂ, ಐದು ರಾಶಿಯವರಿಗೆ ಇದು ಅತ್ಯುತ್ತಮವಾದ ಸಮಯ ಎಂದು ಸಾಬೀತುಪಡಿಸಲಿದೆ. ಆ ಅದೃಷ್ಟದ ರಾಶಿಗಳೆಂದರೆ...
2/6
ಮೇಷ ರಾಶಿ
ಶುಕ್ರ ಅಸ್ತವು ಮೇಷ ರಾಶಿಯವರಿಗೆ ವಿಶೇಷ ಆಶೀರ್ವಾದವನ್ನು ನೀಡಲಿದೆ. ನಿರುದ್ಯೋಗಿಗಳಿಗೆ ಉತ್ತಮ ಕೆಲಸದ ಆಫರ್ ಸಿಗಬಹುದು. ಉದ್ಯಮಿಗಳಿಗೆ ನಿರೀಕ್ಷೆಗೂ ಮೀರಿದ ಆದಾಯ ಸಿಗಬಹುದು. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳಲಿದೆ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುವ ನಿರೀಕ್ಷೆ ಇದೆ.
3/6
ಮಿಥುನ ರಾಶಿ
ಶುಕ್ರ ಅಸ್ತ ಪ್ರಭಾವದಿಂದ ಮಿಥುನ ರಾಶಿಯ ಜನರಿಗೆ ಎಲ್ಲಾ ಆಯಾಮಗಳಿಂದಲೂ ಉತ್ತಮ ಫಲಗಳು ಸಿಗುವ ಸೂಚನೆಗಳಿವೆ. ಕೆಲಸದಲ್ಲಿ ನಿಮ್ಮ ಶಕ್ತಿ ಸಾಮರ್ಥ್ಯಗಳು ಹೆಚ್ಚಾಗಲಿವೆ. ಉದ್ಯಮಿಗಳಿಗೆ ಹೊಸ ಸಂಪರ್ಕಗಳು ಬೆಳೆಯಬಹುದು. ಆದಾಯದ ಮೂಲಗಳು ಹೆಚ್ಚಾಗುವುದರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.
4/6
ಕರ್ಕಾಟಕ ರಾಶಿ
ಶುಕ್ರ ಅಸ್ತ ಪರಿಣಾಮವಾಗಿ ಕರ್ಕಾಟಕ ರಾಶಿಯ ಜನರಿಗೆ ಹಣಕಾಸಿ ವಿಷಯದಲ್ಲಿ ಅತ್ಯುತ್ತಮವಾದ ಸಮಯ. ವೃತ್ತಿ ಬದುಕಿನಲ್ಲಿ ಹೊಸ ಎತ್ತರಕ್ಕೆ ಏರುವಿರಿ. ವ್ಯವಹಾರ ವಿಸ್ತರಿಸಲು ಅನುಕೂಲಕರ ಸಮಯ ಇದಾಗಿರಲಿದ್ದು ಅಪಾರ ಧನ ಸಂಪತ್ತಿನ ಒಡೆಯರಾಗುವಿರಿ. ಕುಟುಂಬದಲ್ಲೂ ಗುಣಮಟ್ಟದ ಸಮಯವನ್ನು ಕಳೆಯುವಿರಿ.
5/6
ಕನ್ಯಾ ರಾಶಿ
ತ್ರಿಕೋನ ರಾಶಿಯಲ್ಲಿ ಶುಕ್ರ ಅಸ್ತ ಪರಿಣಾಮವಾಗಿ ಕನ್ಯಾ ರಾಶಿಯ ಜನರಿಗೆ ವ್ಯವಹಾರ ವಿಸ್ತರಣೆಯ ಅವಕಾಶಗಳು ಸಿಗಲಿವೆ. ಕೆಲಸದಲ್ಲಿ ಹೊಸ ಜವಾಬ್ದಾರಿಗಳು ಹೆಚ್ಚಾಗಬಹುದು. ಉದ್ಯಮಿಗಳು ಹೊಸ ಸಂಪರ್ಕಗಳಿಂದ ಹೆಚ್ಚಿನ ಲಾಭವನ್ನು ಪಡೆಯುವ ನಿರೀಕ್ಷೆ ಇದೆ. ದೀರ್ಘಾವಧಿಯ ಸಾಲದಿಂದ ಮುಕ್ತಿ ಪಡೆಯಬಹುದು. ಮನೆಯಲ್ಲಿ ಮದುವೆ ಮಾತುಕತೆಗಳು ಫಲಪ್ರದವಾಗಲಿವೆ.
6/6
ಕುಂಭ ರಾಶಿ
ಶುಕ್ರ ಅಸ್ತ ಪ್ರಭಾವದಿಂದ ಕುಂಭ ರಾಶಿಯ ಜನರು ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಪಡೆಯುವರು. ಕೆಲಸದಲ್ಲಿ ಹೊಸ ಹೊಸ ಅವಕಾಶಗಳನ್ನು ಪಡೆಯುವಿರಿ. ಉದ್ಯೊಗಸ್ಥರಿಗೆ ಬಡ್ತಿ ಸೂಚನೆಗಳಿವೆ. ಆದಾಯದ ಮೂಲಗಳು ಹೆಚ್ಚಾಗಲಿದ್ದು ಬ್ಯಾಂಕ್ ಬ್ಯಾಲೆನ್ಸ್ ವೃದ್ಧಿಯಾಗಲಿದೆ. ಹೊಸ ವಾಹನ ಖರೀದಿಸುವ ಅವಕಾಶಗಳಿವೆ.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.