• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಏನಿದು ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆ? ಟ್ರ್ಯಾಕ್ಟರ್‌ ಬುಕ್ಕಿಂಗ್‌ನಲ್ಲಿ 50% ಡಿಸ್ಕೌಂಟ್..‌ ಇಲ್ಲಿದೆ ಮಹತ್ವದ ಮಾಹಿತಿ

ಏನಿದು ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆ? ಟ್ರ್ಯಾಕ್ಟರ್‌ ಬುಕ್ಕಿಂಗ್‌ನಲ್ಲಿ 50% ಡಿಸ್ಕೌಂಟ್..‌ ಇಲ್ಲಿದೆ ಮಹತ್ವದ ಮಾಹಿತಿ

ಅಕ್ಟೋಬರ್ ಅಂತ್ಯಕ್ಕೆ 'ನೇಗಿಲ ಯೋಗಿ ಯೋಜನೆ'ಯನ್ನು ಅನುಷ್ಠಾನಗೊಳಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಏನಿದು ನೇಗಿಲ ಯೋಗಿ ಯೋಜನೆ? ಇದರಿಂದ ರೈತರಿಗೆ ಯಾವ ರೀತಿಯಲ್ಲಿ ಪ್ರಯೋಜನವಾಗಲಿದೆ ಎಂಬ ಪ್ರಮುಖ ಮಾಹಿತಿ ಇಲ್ಲಿದೆ.

Written ByYashaswini V
Published: Oct 06, 2026, 07:12 AM IST|Updated: Oct 06, 2026, 07:33 AM IST
joinshare
ಏನಿದು ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆ? ಟ್ರ್ಯಾಕ್ಟರ್‌ ಬುಕ್ಕಿಂಗ್‌ನಲ್ಲಿ 50% ಡಿಸ್ಕೌಂಟ್..‌ ಇಲ್ಲಿದೆ ಮಹತ್ವದ ಮಾಹಿತಿ

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ದಿನ ಭವಿಷ್ಯ 06-10-2026: ಮಂಗಳವಾರದಂದು ಸಿದ್ಧ ಯೋಗ.. ಈ ರಾಶಿಯವರಿಗೆ ಕಂಡ ಕನಸೆಲ್ಲಾ ನನಸಾಗುವ ದಿನ

ದಿನ ಭವಿಷ್ಯ 06-10-2026: ಮಂಗಳವಾರದಂದು ಸಿದ್ಧ ಯೋಗ.. ಈ ರಾಶಿಯವರಿಗೆ ಕಂಡ ಕನಸೆಲ್ಲಾ ನನಸಾಗುವ ದಿನ

2

ಏನಿದು ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆ? ಟ್ರ್ಯಾಕ್ಟರ್‌ ಬುಕ್ಕಿಂಗ್‌ನಲ್ಲಿ 50% ಡಿಸ್ಕೌಂಟ್..‌ ಇಲ್ಲಿದೆ ಮಹತ್ವದ ಮಾಹಿತಿ

3

ನನ್ನ ಒಳ್ಳೆಯತನ ದೌರ್ಬಲ್ಯವಲ್ಲ..! ನೇರವಾಗಿ ರಶ್ಮಿಕಾ ಮಂದಣ್ಣ ಎಚ್ಚರಿಕೆ ಕೊಟ್ಟಿದ್ಯಾರಿಗೆ ಗೊತ್ತೆ?

4

ಹಾರಾಟದ ವೇಳೆ ದಿಢೀರ್‌ 9,000 ಅಡಿ ಕೆಳಗೆ ಇಳಿದ ವಿಮಾನ : ತಪ್ಪಿತು ಭೀಕರ ದುರಂತ.. ಅಸಲಿಗೆ ಆಗಸದಲ್ಲಿ ಆಗಿದ್ದೇನು?

5

ಜಗಳ ಬಿಡಿಸಲು ಬಂದ ಪೊಲೀಸರ ಮೇಲೆಯೇ ಹಲ್ಲೆ..! ಫರ್ಹಾನ್ - ಬಸೀರ್ ಬಂಧನ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: ಸಣ್ಣ ಮತ್ತು ಅತಿಸಣ್ಣ ರೈತರ ನೆರವಿಗೆ ಧಾವಿಸಲು ರಾಜ್ಯ ಸರ್ಕಾರ ಆರಂಭಿಸಿರುವ ಮಹತ್ವಾಕಾಂಕ್ಷೆಯ 'ಮುಖ್ಯಮಂತ್ರಿ ನೇಗಿಲ ಯೋಗಿ' ಯೋಜನೆಯನ್ನು ಅಕ್ಟೋಬರ್ ಅಂತ್ಯದೊಳಗೆ ಅನುಷ್ಠಾನಗೊಳಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ (ಅ.05) ನಡೆದ ಮುಖ್ಯಮಂತ್ರಿಗಳ 100 ದಿ ನಗಳ ಕಾರ್ಯ, ನೇಮಕಾತಿಗಳು ಹಾಗೂ ಆದ್ಯತೆ ಯೋಜನೆಗಳ ಪರಿಶೀಲನ ಸಭೆ'ಯಲ್ಲಿ ಕೃಷಿ ಇಲಾಖೆಯ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆಯನ್ನು ಪ್ರಾಯೋಗಿಕವಾಗಿ ಪ್ರತಿ ಜಿಲ್ಲೆಯ ಒಂದು ತಾಲೂಕಿನಲ್ಲಿ ಅನುಷ್ಠಾನಗೊಳಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ, ಈಗ ಯೋಜನೆಯನ್ನು ಎರಡು ತಾಲೂಕುಗಳಿಗೆ ವಿಸ್ತರಿಸಿ, ಇದೇ ತಿಂಗಳಾಂತ್ಯಕ್ಕೆ ಯೋಜನೆ ಅನುಷ್ಠಾನಗೊಳಿಸಬೇಕು. ಪ್ರಸ್ತುತ, 11 ಜಿಲ್ಲಾ ಉಸ್ತುವಾರಿ ಸಚಿವರಿಂದ ಮಾಹಿತಿ ಬಂದಿದೆ. ಇನ್ನೊಂದು ವಾರದಲ್ಲಿ ಎಲ್ಲಾ ಜಿಲ್ಲೆಗಳ ಮಾಹಿತಿ ತಲುಪಿಸಬೇಕು ಎಂದು ಸಿಎಂ ಸೂಚನೆ ನೀಡಿದರು.

ಯೋಜನೆ ಅನುಷ್ಠಾನಕ್ಕೆ ಪ್ರತ್ಯೇಕ ಆ್ಯಪ್ ಅಭಿವೃದ್ಧಿ: 
ಪ್ರಸ್ತುತ, ರೈತರ ಬಳಿ ಲಭ್ಯವಿರುವ ಟ್ರ್ಯಾಕ್ಟರ್ ಹಾಗೂ ಇತರೆ ಯಂತ್ರೋಪಕರಣಗಳ ಮಾಹಿತಿ ಪಡೆಯ ಲು ಪ್ರತ್ಯೇಕ ಆ್ಯಪ್ ಅಭಿವೃದ್ಧಿಪಡಿಸಲು ಸೂಚಿಸಲಾಗಿದೆ. ಸರ್ಕಾರಿ ಏಜೆನ್ಸಿಯಿಂದಲೇ ಆ್ಯಪ್ ತಯಾರಿಸಿ, ಅದಕ್ಕೆ ಕೃಷಿ ಹಾಗೂ ತೋಟಗಾರಿಕಾ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿರುವ ಫೂಟ್ ಐಡಿಯನ್ನು ಸಂಯೋಜಿಸಲಾಗುವುದು. ಆಗ ರೈತರು ತಾವಿ ರುವಲ್ಲೇ ಆ್ಯಪ್ ಮೂಲಕ ಟ್ರ್ಯಾಕ್ಟರ್ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಟ್ರಾಕ್ಟರ್ ವೆಚ್ಚದ ಶೇ 50 ರಷ್ಟು ಹಣವನ್ನು ಸರ್ಕಾರ ಪಾವತಿಸುವುದರಿಂದ ಸಣ್ಣ ರೈತರಿಗೆ ಅನುಕೂಲವಾಗಲಿದೆ. ಹಾಗಾಗಿ ಅಕ್ ಟೋಬರ್ ತಿಂಗಳೊಳಗೆ ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆಯನ್ನು ಅನುಷ್ಠಾನ ಮಾಡಬೇಕು ಎಂದು ಅಧಿಕಾರಿಗಳು ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಏನಿದು 'ನೇಗಿಲ ಯೋಗಿ'ಯೋಜನೆ?
ಮೂರು ಎಕರೆ ಹಾಗೂ ಅದಕ್ಕಿಂತ ಕಡಿಮೆ ಭೂಮಿ ಹೊಂದಿರುವ ಬಡ ಮತ್ತು ಸಣ್ಣ ರೈತರ ಜಮೀನುಗಳ ಉಳುಮೆಗೆ ನೆರವಾಗುವ ಸಲುವಾಗಿ ರಾಜ್ಯ ಸರ್ಕಾರ ಓಲಾ, ಉಬರ್ ಮಾದರಿಯಲ್ಲಿ 'ಮುಖ್ಯಮಂತ್ರಿ ನೇಗಿಲ ಯೋಗಿ' ಅನುಷ್ಠಾನಗೊಳಿಸಲು ಮುಂದಾಗಿದೆ.

ಸರ್ಕಾರ ಅಭಿವೃದ್ಧಿಪಡಿಸುವ ಆ್ಯಪ್ ಮೂಲಕವೇ ಅಗತ್ಯವಿರುವ ರೈತರು ಉಳುಮೆಗೆ ಟ್ರ್ಯಾಕ್ಟರ್ ಬುಕ್ಕಿಂಗ್ ಮಾಡಬಹುದಾಗಿದೆ. ಈ ರೀತಿ ಬುಕ್ಕಿಂಗ್ ಮಾಡಲಾದ ಟ್ರ್ಯಾಕ್ಟರ್ ಗೆ ಶೇ 50 ರಷ್ಟು ಬಾಡಿಗೆ ಹಣವನ್ನು ರೈತರು ಪಾವರಿಸಿದರೆ, ಉಳಿದ ಶೇ 50 ರಷ್ಟು ಹಣವನ್ನು ಸರ್ಕಾರ ಟ್ರ್ಯಾಕ್ಟರ್ ಮಾಲೀಕರಿಗೆ ಪಾವತಿಸಲಿದೆ.
ಈ ಯೋಜನೆಯಿಂದ ರಾಜ್ಯದ ಸುಮಾರು 59 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಅನುಕೂಲವಾಗಲಿದೆ. ಪ್ರಸ್ ತುತ, ಈ ಯೋಜನೆಯನ್ನು ಪ್ರಾಯೋಗಿಕವಾಗಿ ಪ್ರತಿ ಜಿಲ್ಲೆಯ ಎರಡೆರಡು ತಾಲೂಕುಗಳಲ್ಲಿ ಅನುಷ್ಟಾನಗೊಳಿ ಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ಕೃಷಿಯಿಂದ ವಿಮುಖರಾಗುತ್ತಿರುವ ಸಣ್ಣ ರೈತರಿಗೆ ಕೃಷಿ ವೆಚ್ಚ ತಗ್ಗಿಸಲು ಹಾಗೂ ಭೂಮಿಯನ್ನು ಹದಗೊಳಿಸಲು ನೆರವಾಗುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.

ಜಿಕೆವಿಕೆಯಲ್ಲಿ ಬೃಹತ್ ಹೂವಿನ ಮಾರುಕಟ್ಟೆ ನಿರ್ಮಾಣಕ್ಕೆ ನಿರ್ದೇಶನ:
ಕೃಷಿ ಸಚಿವರಾದ ಪಿ.ಎಂ.ನರೇಂದ್ರ ಸ್ವಾಮಿ ಅವರು ಮಾತನಾಡಿ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ ನಿಯಮಿತವನ್ನು (KAPPEC) ಇನ್ನಷ್ಟು ಬಲಪಡಿಸಬೇಕು. ಕೃಷಿ, ತೋಟಗಾರಿಕೆ, ಮೀನು ಗಾರಿಕೆ, ರೇಷ್ಮೆ ಕೃಷಿ ಸೇರಿದಂತೆ ಸಂಬಂಧಿತ ಕ್ಷೇತ್ರಗಳಿಗೆ ಬೆಂಬಲ ಹಾಗೂ ನೆರವು ನೀಡಬೇಕು.
ಪ್ರಸ್ತುತ ಹೆಬ್ಬಾಳದ ಅಂತಾರಾಷ್ಟ್ರೀಯ ಪುಷ್ಪ ಹರಾಜಿ ಕೇಂದ್ರ ಚಿಕ್ಕದಾಗಿದ್ದು, ಹೂವುಗಳ ರಫಿಗೆ ಹೆಚ್ಚಿನ ಅವ ಕಾಶ ಕಲ್ಪಿಸಲು ಜಿ.ಕೆ.ವಿ.ಕೆ ಯಲ್ಲಿ 5 ಎಕರೆ ಗುರುತಿಸಲು ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಯಿತು. ಕೃಷಿ ಉತ್ಪನ್ನಗಳ ರಫ್ತು, ಉತ್ತೇಜಿಸಲು ಮತ್ತು ಪ್ರಮಾಣ ಹೆಚ್ಚಿಸಲು ರೈತರಿಗೆ ಶೈತ್ಯಾಗಾರ (ಕೋಲ್ಡ್ ಸ್ಟೋರೇಜ್)
ಹಾಗೂ ಬೃಹತ್ ಸಂಸ್ಕರಣಾ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮನವಿ ಮಾಡಿದರು.

ಮುಖ್ಯಮಂತ್ರಿ ರೈತ ಚೈತನ್ಯ ಯೋಜನೆ: 
ಉಪಗ್ರಹ ಆಧಾರಿತ ಹಾಗೂ ಡೋನ್ ತಂತ್ರಜ್ಞಾನ ಆಧಾರಿತ ಬೆಳೆ ಮೌಲ್ಯಮಾಪನ ಮತ್ತು ಇಳುವರಿ ಅಂದಾ ಜು ಮಾಡಲು ಹಾಗೂ ಡಿಜಿಟಲ್ ಬೆಳೆ ಸಮೀಕ್ಷೆ ನಡೆಸಲು ಮುಖ್ಯಮಂತ್ರಿಗಳ ರೈತ ಚೈತನ್ಯ ಯೋಜನೆ ಜಾರಿಗೆ ತರಲಾಗಿದೆ.

ಯೋಜನೆಗೆ ಸಂಬಂಧಿಸಿದ ಪ್ರಾಯೋಗಿಕ ಕಾರ್ಯಕ್ರಮಗಳು ಸಿದ್ಧತೆ ಹಂತದಲ್ಲಿವೆ. ರಾಜ್ಯ ಸರ್ಕಾರವು ರೈತ ಚೈ ತನ್ಯ ಯೋಜನೆಯಡಿ ಸಂದೇಶಗಳನ್ನು ಅನುಮೋದಿಸಲು ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ.ಅ.3 ರವ ರೆಗೆ ಈ ವ್ಯವಸ್ಥೆಯಡಿ 25 ಲಕ್ಷ ಸಂದೇಶಗಳನ್ನು ಕಳುಹಿಸಲಾಗಿದೆ. ಇನ್ನು ಚಾಟ್ ಬಾಟ್ ಹಾಗೂ ಕರೆಗಳ ಮೂಲಕ ಮಾಹಿತಿ ನೀಡುವ ವ್ಯವಸ್ಥೆ ಅಭಿವೃದ್ಧಿ ಹಂತದಲ್ಲಿದೆ. ರೈತ ಚೈತನ್ಯ ಯೋಜನೆಯಡಿ SMS ಸಂದೇಶಗ ಳೊಂದಿಗೆ ವೀಡಿಯೋ ಸಂದೇಶ ಕಳುಹಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಲಹೆ ನೀಡಿದರು. ಈ ಸಭೆಯಲ್ಲಿ ಕೃಷಿ, ಸಹಕಾರ, ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

 

Add Zee News as a Preferred Source
TAGS:
D K Shivakumar
Govt Schemes