• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಜಾಕಿ 42 ಸಿನಿಮಾ ರಿಲೀಸ್‌ ದಿನಾಂಕ ಫಿಕ್ಸ್‌.. 200ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಅಬ್ಬರಿಸಲಿರೋ ಕಿರಣ್ ರಾಜ್ ಮೂವಿ

ಜಾಕಿ 42 ಸಿನಿಮಾ ರಿಲೀಸ್‌ ದಿನಾಂಕ ಫಿಕ್ಸ್‌.. 200ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಅಬ್ಬರಿಸಲಿರೋ ಕಿರಣ್ ರಾಜ್ ಮೂವಿ

ಕಿರಣ್ ರಾಜ್ ನಾಯಕನಾಗಿ ನಟಿಸಿರುವ "ಜಾಕಿ 42" ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ನವೆಂಬರ್ 20 ರಂದು ರಾಜ್ಯಾದ್ಯಂತ ಈ ಸಿನಿಮಾ ಬಿಡುಗಡೆಯಾಗುತ್ತಿದೆ.

Written ByBhimappa
Published: Oct 06, 2026, 09:41 AM IST|Updated: Oct 06, 2026, 09:53 AM IST
joinshare
ಜಾಕಿ 42 ಸಿನಿಮಾ ರಿಲೀಸ್‌ ದಿನಾಂಕ ಫಿಕ್ಸ್‌.. 200ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಅಬ್ಬರಿಸಲಿರೋ ಕಿರಣ್ ರಾಜ್ ಮೂವಿ
Image Credit: Kiran_Raj_Jockey

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಕೈದಿ ಹೆಂಡತಿ ಅಂದ್ರೆ ಇಷ್ಟನಾ.. ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಪ್ರತಿ ಸೃಷ್ಟಿ.. DIG ಸೋಮಶೇಖರ್‌ ಪೊಲೀಸ್‌ ವಶಕ್ಕೆ

ಕೈದಿ ಹೆಂಡತಿ ಅಂದ್ರೆ ಇಷ್ಟನಾ.. ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಪ್ರತಿ ಸೃಷ್ಟಿ.. DIG ಸೋಮಶೇಖರ್‌ ಪೊಲೀಸ್‌ ವಶಕ್ಕೆ

2

ಜಾಕಿ 42 ಸಿನಿಮಾ ರಿಲೀಸ್‌ ದಿನಾಂಕ ಫಿಕ್ಸ್‌.. 200ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಅಬ್ಬರಿಸಲಿರೋ ಕಿರಣ್ ರಾಜ್ ಮೂವಿ

3

ದಿನ ಭವಿಷ್ಯ 06-10-2026: ಮಂಗಳವಾರದಂದು ಸಿದ್ಧ ಯೋಗ.. ಈ ರಾಶಿಯವರಿಗೆ ಕಂಡ ಕನಸೆಲ್ಲಾ ನನಸಾಗುವ ದಿನ

4

ಏನಿದು ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆ? ಟ್ರ್ಯಾಕ್ಟರ್‌ ಬುಕ್ಕಿಂಗ್‌ನಲ್ಲಿ 50% ಡಿಸ್ಕೌಂಟ್..‌ ಇಲ್ಲಿದೆ ಮಹತ್ವದ ಮಾಹಿತಿ

5

ನನ್ನ ಒಳ್ಳೆಯತನ ದೌರ್ಬಲ್ಯವಲ್ಲ..! ನೇರವಾಗಿ ರಶ್ಮಿಕಾ ಮಂದಣ್ಣ ಎಚ್ಚರಿಕೆ ಕೊಟ್ಟಿದ್ಯಾರಿಗೆ ಗೊತ್ತೆ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Kiran Raj Jockey 42 movie to be released November 20th: ಗುರತೇಜ್ ಶೆಟ್ಟಿ ನಿರ್ದೇಶನದ, ಕಿರಣ್ ರಾಜ್ ನಾಯಕನಾಗಿ ನಟಿಸಿರುವ "ಜಾಕಿ 42" ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ನವೆಂಬರ್ 20 ರಂದು ರಾಜ್ಯಾದ್ಯಂತ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಹೆಸರಾಂತ ಜಯಣ್ಣ ಫಿಲಂಸ್ ಈ ಸಿನಿಮಾವನ್ನು ವಿತರಣೆ ಮಾಡುತ್ತಿದೆ. ರಾಜ್ಯದ 200ಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ಜಾಕಿ 42 ಸಿನಿಮಾ ಬಿಡುಗಡೆಯಾಗಲಿದ್ದು ಇದರ ನಡುವೆ ಸಿನಿಮಾ ಕಥೆ ಮತ್ತಷ್ಟು ಕುತೂಹಲ ಮೂಡಿಸಿದೆ.        

ಗೋಲ್ಡನ್ ಗೇಟ್ ಬ್ಯಾನರ್ ನಡಿಯಲ್ಲಿ ಭಾರತಿ ಸತ್ಯ ನಾರಾಯಣ್ ನಿರ್ಮಾಣದ ಮೊದಲ ಸಿನಿಮಾ ಇದಾಗಿದ್ದು, ಕುದುರೆ ರೇಸ್ ಹಿನ್ನೆಲೆಯಲ್ಲಿ ನಡೆಯುವ ಕಥೆಯಾಗಿದೆ. ಕೌಟುಂಬಿಕ ಮೌಲ್ಯಗಳನ್ನೊಳಗೊಂಡ ಜಾಕಿ 42 ಸಿನಿಮಾದ ಎರಡು ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಎರಡು ಹಾಡುಗಳಿಗೆ ಪ್ರೇಕ್ಷಕರು ಉತ್ತಮ ರೀತಿಯಲ್ಲಿ ಸ್ಪಂದನೆ ವ್ಯಕ್ತಪಡಿಸಿದ್ದಾರೆ. ಹೀಗಾಗಿಯೇ ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ. ಇದರ ಬೆನ್ನಲ್ಲೇ ಇದೀಗ ಬಿಡುಗಡೆಯ ದಿನಾಂಕ ಕೂಡ ನಿಗದಿ ಆಗಿರೋದು ಚಿತ್ರತಂಡಕ್ಕೆ ಮತ್ತೊಂದು ಖುಷಿಯಾಗಿದೆ. ಕಿರಣ್ ರಾಜ್ ನಾಯಕನಾಗಿ ನಟಿಸಿರುವ ಜಾಕಿ 42 ಸಿನಿಮಾದ ಬಿಡುಗಡೆ ದಿನಾಂಕ ನವೆಂಬರ್ 20 ರಂದು ಆಗಿದೆ. ನವೆಂಬರ್ 20 ರಂದು ರಾಜ್ಯಾದ್ಯಂತ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ದಸರಾ ಹಬ್ಬಕ್ಕೆ ಸಿನಿಮಾದ ಮತ್ತೊಂದು ಹಾಡನ್ನು ಬಿಡುಗಡೆ ಮಾಡುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ.

ಸ್ಪೋರ್ಟ್ಸ್ ಜಾನರ್ ಸಿನಿಮಾ ಅದರೂ, ಫ್ಯಾಮಿಲಿ ಎಮೋಷನ್ಸ್ ಸನ್ನಿವೇಶಗಳು ಕೂಡ ಇದೆ. ಮೂರು ಹಾಡುಗಳು ಹಾಗೂ ಒಂದು ಸಾಹಸ ಸನ್ನಿವೇಶವಿದ್ದು, ಹಾಸ್ಯ ಸನ್ನಿವೇಶಗಳು ಸಹ ಜನರಿಗೆ ಮನರಂಜನೆ ನೀಡುತ್ತದೆ. ಉತ್ತಮ ಸಿನಿಮಾವಾಗಿದ್ದು ಸಿನಿಮಾ ಕುತೂಹಲ ಮೂಡಿಸಿದೆ. ಇದೊಂದು ಸಂಪೂರ್ಣ ಕಮರ್ಷಿಯಲ್ ಸಿನಿಮಾ ಎಂದು ತಿಳಿಸಿರುವ ನಿರ್ದೇಶಕರು, ಪೂರ್ಣ ಪ್ರಮಾಣದಲ್ಲಿ ಹಾರ್ಸ್ ರೇಸ್ ಹಿನ್ನಲೆಯಲ್ಲಿ ಬರುತ್ತಿರುವ ಮೊದಲ ಭಾರತೀಯ ಸಿನಿಮಾ ಇದಾಗಿದೆ ಎಂದು ಹೇಳುತ್ತಾರೆ.  

ಜಾಕಿ 42 ಸಿನಿಮಾವನ್ನು 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡುವುದಾಗಿ ವಿತರಕ ಜಯಣ್ಣ ಹಾಗೂ ನಿರ್ಮಾಪಕಿ ಭಾರತಿ ಸತ್ಯನಾರಾಯಣ್ ತಿಳಿಸಿದ್ದಾರೆ. ರಾಜ್ಯದ 200ಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ಸಿನಿಮಾ ರಿಲೀಸ್‌ ಆಗುವುದರಿಂದ ಬಹುದೊಡ್ಡ ಯಶಸ್ಸಿಗೆ ಕಾರಣವಾಗುತ್ತದೆ.  

ಹೃತಿಕ ಶ್ರೀನಿವಾಸ್ ನಾಯಕಿಯಾಗಿ ನಟಿಸಿರುವ ಈ ಸಿನಿಮಾದ ತಾರಾಬಳಗದಲ್ಲಿ ಯುಕ್ತ, ರಾಜೇಂದ್ರ ಕಾರಂತ್, ಬಲ ರಾಜ್ ವಾಡಿ, ಗಿರೀಶ್ ಹೆಗ್ಡೆ, ಅರುಣ್ ಆಚಾರ್, ಯಶ್ ಶೆಟ್ಟಿ, ದೀಪಕ್ ರೈ ಪಣಜೆ, ಶಾಂತಲಾ ಕಾಮತ್ ಹಾಗೂ ಹೆಸರಾಂತ ಕಲಾವಿದರು ಅಭಿನಯಿಸಿದ್ದಾರೆ. ವಿನೋದ್ ಯಜಮಾನ್ಯ ಸಂಗೀತ ನಿರ್ದೇಶನ, ರಾಘವೇಂದ್ರ ಬಿ ಕೋಲಾರ್ ಛಾಯಾಗ್ರಹಣ, ಭೂಷಣ್ ನೃತ್ಯ ನಿರ್ದೇಶನ ಹಾಗೂ ಉಮೇಶ್ ಆರ್ ಬಿ ಸಂಕಲನ ಜಾಕಿ 42 ಸಿನಿಮಾಕ್ಕಿದೆ.

ಕನ್ನಡ ಚಿತ್ರೋದ್ಯಮದಲ್ಲಿ ಸಾಲು ಸಾಲು ಯಶಸ್ವಿ ಚಲನಚಿತ್ರಗಳ ಸುಗ್ಗಿ ಸಂಭ್ರಮದಲ್ಲಿ ಮತ್ತೊಂದು ಯಶಸ್ಸಿಗೆ ಸಾಕ್ಷಿಯಾಗುವ ಸೂಚನೆ ಜಾಕಿ 42 ಕೊಟ್ಟಿದೆ. ಪ್ರೇಕ್ಷಕರ ಕಣ್ಣು ನವೆಂಬರ್ 20ರ ಮೇಲೆ ಬಿದ್ದಿದೆ. ಸಿನಿಮಾ ಬಿಡುಗಡೆಗಾಗಿ ಪ್ರೇಕ್ಷಕರು ಕಾತುರದಿಂದ ಇದ್ದಾರೆ. ಚಿತ್ರತಂಡ ಪಟ್ಟ ಪರಿಶ್ರಮಕ್ಕೆ ದೊಡ್ಡ ಯಶಸ್ಸು ಸಿಗುವುದು ಖಚಿತ ಎನ್ನಲಾಗುತ್ತಿದೆ. ಏಕೆಂದರೆ ಸಿನಿಮಾಕ್ಕಾಗಿ ನಿರ್ದೇಶಕ, ನಿರ್ಮಾಪಕರು, ಟೆಕ್ನಿಷಿಯನ್ಸ್‌, ಕ್ಯಾಮೆರಾಮ್ಯಾನ್‌ ತಂಡದವರು ದೊಡ್ಡ ಶ್ರಮ ವಹಿಸಿದ್ದಾರೆ. ಸಿನಿಮಾ ಯಶಸ್ಸು ಈ ಎಲ್ಲರಿಗೂ ದೊಡ್ಡ ಉಡುಗೊರೆಯಾಗಲಿದೆ. 
 

Add Zee News as a Preferred Source
TAGS:
Cinema