ಆಶ್ಲೇಷಾ ನಕ್ಷತ್ರದಲ್ಲಿ ಮಂಗಳ ಪ್ರವೇಶಿಸುತ್ತಿದ್ದಂತೆ ಕೆಲವು ರಾಶಿಯವರ ಅದೃಷ್ಟದ ಬಾಗಿಲುಗಳು ತೆರೆಯಲಿವೆ ಎನ್ನಲಾಗುತ್ತಿದೆ.
ಜ್ಯೋತಿಷ್ಯದಲ್ಲಿ ಮಂಗಳನನ್ನು ಕಮಾಂಡರ್ ಗ್ರಹ ಎನ್ನಲಾಗುತ್ತದೆ. ಮಂಗಳನು ಯಾವುದೇ ವ್ಯಕ್ತಿಯ ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದಾಗ ಅವರ ಜೀವನದಲ್ಲಿ ಭಾಗ್ಯ ಉದಯವಾಗಲಿದೆ ಎನ್ನಲಾಗುತ್ತದೆ.
1/6
ಮಂಗಳ ನಕ್ಷತ್ರ ಪರಿವರ್ತನೆ
ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಸೇನಾಧಿಪತಿ ಮಂಗಳ ಅಕ್ಟೋಬರ್ 17, 2026ರಂದು ಮಧ್ಯಾಹ್ನ 12:56ಕ್ಕೆ ಬುಧನ ಆಳ್ವಿಕೆಯ ಆಶ್ಲೇಷ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಆಶ್ಲೇಷ ನಕ್ಷತ್ರದಲ್ಲಿ ಮಂಗಳ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೆ, ಈ ಅವಧಿಯಲ್ಲಿ 5 ರಾಶಿಯ ಜನರಿಗೆ ಅದೃಷ್ಟ ಖುಲಾಯಿಸಲಿದೆ ಎನ್ನಲಾಗುತ್ತಿದೆ. ಆ ಲಕ್ಕಿ ರಾಶಿಗಳೆಂದರೆ...
2/6
ವೃಷಭ ರಾಶಿ
ಮಂಗಳ ನಕ್ಷತ್ರ ಪರಿವರ್ತನೆಯು ವೃಷಭ ರಾಶಿಯ ಜನರಿಗೆ ಎಲ್ಲಾ ಆಯಾಮಗಳಲ್ಲೂ ಉತ್ತಮ ಫಲವನ್ನು ನೀಡಲಿದೆ. ಈ ಅವಧಿಯಲ್ಲಿ ಉದ್ಯೋಗ ರಂಗದಲ್ಲಿ ಗಮನಾರ್ಹ ಬದಲಾವಣೆಗಳನ್ನು ಕಾಣುವ ನಿರೀಕ್ಷೆ ಇದೆ. ವ್ಯವಹಾರಸ್ಥರು ಶುಭ ಸಮಾಚಾರವನ್ನು ಕೇಳುವ ನಿರೀಕ್ಷೆ ಇದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ.
3/6
ಸಿಂಹ ರಾಶಿ
ಆಶ್ಲೇಷ ನಕ್ಷತ್ರದಲ್ಲಿ ಮಂಗಳ ಸಂಚಾರವು ಸಿಂಹ ರಾಶಿಯ ಜನರಿಗೆ ಹಲವು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪರಿಣಾಮಕಾರಿ ಆಗಿದೆ. ಉದ್ಯೋಗಸ್ಥರಿಗೆ ಕಚೇರಿಯಲ್ಲಿ ಬಡ್ತಿ ಸಾಧ್ಯತೆ ಇದೆ. ಕೆಲಸದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದ್ದು ಪ್ರಮುಖ ಕೆಲಸಗಳಲ್ಲಿ ಯಶಸ್ಸು ಸಾಧಿಸುವಿರಿ. ವ್ಯವಹಾರದಲ್ಲಿ ಭಾರೀ ಲಾಭವನ್ನು ನಿರೀಕ್ಷಿಸಬಹುದಾದ ಸಮಯ ಇದಾಗಿರಲಿದೆ.
4/6
ಕನ್ಯಾ ರಾಶಿ
ಆಶ್ಲೇಷ ನಕ್ಷತ್ರದಲ್ಲಿ ಮಂಗಳ ಸಂಚಾರವು ಕನ್ಯಾ ರಾಶಿಯವರಿಗೆ ಎಲ್ಲಾ ಆಯಾಮಗಳಲ್ಲೂ ಸಕಾರಾತ್ಮಕತೆ ಹೆಚ್ಚಾಗಲಿದೆ. ಈ ಅವಧಿಯಲ್ಲಿ ವೃತ್ತಿ ಬದುಕಿನಲ್ಲಿ ಪ್ರಗತಿಯ ಅವಕಾಶಗಳಿವೆ. ವ್ಯವಹಾರಸ್ಥರಿಗೆ ಕೈಗೊಳ್ಳುವ ಪ್ರತಿ ಕೆಲಸದಲ್ಲೂ ಅದೃಷ್ಟ ಖುಲಾಯಿಸಲಿದ್ದು ಮಣ್ಣು ಹಿಡಿದರೂ ಹೊನ್ನಾಗುವ ಬಂಗಾರದ ಸಮಯ ಎಂದು ಸಾಬೀತುಪಡಿಸಲಿದೆ.
5/6
ತುಲಾ ರಾಶಿ
ಮಂಗಳ ನಕ್ಷತ್ರ ಪರಿವರ್ತನೆಯು ತುಲಾ ರಾಶಿಯ ಜನರಿಗೆ ಆಹ್ಲಾದಕರವಾಗಿದ್ದು ಹಣಕಾಸಿನ ಮೂಲಗಳು ಹೆಚ್ಚಾಗಲಿವೆ. ಉದ್ಯೋಗದಲ್ಲಿ ವರ್ಗಾವಣೆ ನಿರೀಕ್ಷೆ ಇದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಕುಟುಂಬ ಜೀವನದಲ್ಲಿ ಸಂತೋಷದ ವಾತಾವರಣ ಇರಲಿದೆ. ಮದುವೆಯಂತಹ ಮಾತುಕತೆಗಳಲ್ಲಿ ಪ್ರಗತಿಯನ್ನು ಕಾಣಬಹುದು.
6/6
ಮಕರ ರಾಶಿ
ಆಶ್ಲೇಷ ನಕ್ಷತ್ರದಲ್ಲಿ ಮಂಗಳ ಸಂಚಾರವು ಮಕರ ರಾಶಿಯ ಜನರಿಗೆ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ನೀಡಲಿದೆ. ದೀರ್ಘ ಸಮಯದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಯೋಜಿತ ಕೆಲಸಗಳಲ್ಲಿ ನಿರೀಕ್ಷಿತ ಜಯ ಸಾಧಿಸುವಿರಿ. ಹಣಕಾಸಿನ ಹರಿವು ಉತ್ತಮವಾಗಿರಲಿದ್ದು, ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಲಾಭವಾಗಲಿದೆ. ಮನೆಯಲ್ಲೂ ಉತ್ತಮ ವಾತಾವರಣ ಇರಲಿದೆ.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.