Budhvara 14th October 2026 Dina Bhavishya In Kannada: ಶ್ರೀ ಶಾಲಿವಾಹನ ಶಕೆ 1948, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಸೌರ ಶರದ ಋತು, ಅಶ್ವಯುಜ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ, ಬುಧವಾರದ ಈ ದಿನ ಅನುರಾಧ ನಕ್ಷತ್ರ, ಆಯುಷ್ಮಾನ್ ಯೋಗ, ವಣಿಜ ಕರಣ ಇರಲಿದೆ.
ಮೇಷ ರಾಶಿ:
ಆಯುಷ್ಮಾನ್ ಯೋಗವು ಮೇಷ ರಾಶಿಯ ಜನರಿಗೆ ಮಿಶ್ರ ಫಲಗಳನ್ನು ನೀಡಲಿದೆ. ಈ ದಿನ ನಿಮ್ಮ ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಆದಾಯವು ಗಮನಾರ್ಹವಾಗಿ ಹೆಚ್ಚಾಗಲಿದೆ. ಈ ದಿನ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲವನ್ನು ಪಡೆಯುವಿರಿ. ಸಂಗಾತಿಯೊಂದಿಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರಿ.
ವೃಷಭ ರಾಶಿ:
ಆಯುಷ್ಮಾನ್ ಯೋಗವು ವೃಷಭ ರಾಶಿಯ ಜನರಿಗೆ ಆಹ್ಲಾದಕರವಾಗಿರುತ್ತದೆ. ಇಂದು ಆದಾಯದ ಮೂಲಗಳು ಹೆಚ್ಚಾಗಲಿವೆ. ಈ ದಿನ ನಿಮ್ಮ ಬಹುದಿನಗಳ ಆಸೆ ಈಡೇರಲಿದೆ. ಕುಟುಂಬದಲ್ಲಿ ಸಾಮರಸ್ಯ ಹೆಚ್ಚಾಗಲಿದೆ. ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ.
ಮಿಥುನ ರಾಶಿ:
ಮಿಥುನ ರಾಶಿಯ ಜನರಿಗೆ ಇಂದು ಆಯುಷ್ಮಾನ್ ಯೋಗದ ಪರಿಣಾಮವಾಗಿ ಮಿಶ್ರ ಫಲಗಳು ಸಿಗಲಿವೆ. ವ್ಯವಹಾರಸ್ಥರು ನಿಮ್ಮ ವಿರೋಧಿಗಳ ಬಗ್ಗೆ ಜಾಗರೂಕರಾಗಿರಿ. ಕುಟುಂಬದಲ್ಲಿ ಒಡಕುಂಟಾಗುವ ಸನ್ನಿವೇಶಗಳು ನಿರ್ಮಾಣವಾಗಬಹುದು. ಈ ಸಮಯದಲ್ಲಿ ತಾಳ್ಮೆಯಿಂದ ವರ್ತಿಸುವುದು ಒಳ್ಳೆಯದು.
ಕರ್ಕಾಟಕ ರಾಶಿ:
ಆಯುಷ್ಮಾನ್ ಯೋಗವು ಕರ್ಕಾಟಕ ರಾಶಿಯ ಜನರಿಗೆ ಉತ್ತಮ ಫಲಿತಾಂಶಗಳನ್ನು ತರಲಿದೆ. ಉದ್ಯಮಿಗಳು ನಿರೀಕ್ಷೆಗೂ ಮೀರಿದ ಲಾಭವನ್ನು ಪಡೆಯಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ ಸಾಧಿಸುವಿರಿ. ಕೌಟುಂಬಿಕ ಜೀವನದಲ್ಲಿ ಸಂತೋಷದ ವಾತಾವರಣ ಇರಲಿದೆ. ಪ್ರೀತಿಯ ಜೀವನವು ಆನಂದದಾಯಕವಾಗಿರಲಿದೆ.
ಸಿಂಹ ರಾಶಿ:
ಸಿಂಹ ರಾಶಿಯ ಜನರಿಗೆ ಆಯುಷ್ಮಾನ್ ಯೋಗವು ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸಲಿದೆ. ಉದ್ಯೋಗದಲ್ಲಿ ಪ್ರಗತಿಯ ಅವಕಾಶಗಳು ಸಿಗಬಹುದು. ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳಿಂದ ಅಗತ್ಯ ಬೆಂಬಲ ಸಿಗಲಿದೆ. ಪ್ರಯಾಣವು ಆಹ್ಲಾದಕರವಾಗಿರಲಿದೆ. ವೈವಾಹಿಕ ಜೀವನವು ಸಂತೋಷದಾಯಕವಾಗಿರಲಿದೆ.
ಕನ್ಯಾ ರಾಶಿ:
ಕನ್ಯಾ ರಾಶಿಯ ಜನರಿಗೆ ಆಯುಷ್ಮಾನ್ ಯೋಗವು ಶುಭ ದಿನ ಎಂದು ಸಾಬೀತುಪಡಿಸಲಿದ.ೆ ಇಂದು ಕೆಲಸದಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಬೆಂಬಲ ಸಿಗಲಿದೆ. ಕುಟುಂಬದಲ್ಲಿ ವಾತಾವರಣವು ಸಂತೋಷದಾಯಕವಾಗಿರಲಿದೆ. ಆರೋಗದಲ್ಲೂ ಸುಧಾರಣೆಯನ್ನು ಕಾಣಬಹುದು.
ತುಲಾ ರಾಶಿ:
ಆಯುಷ್ಮಾನ್ ಯೋಗವು ತುಲಾ ರಾಶಿಯವರಿಗೆ ಸಮಾಜದಲ್ಲಿ ಕೀರ್ತಿ, ಗೌರವವನ್ನು ಹೆಚ್ಚಿಸಲಿದೆ. ಇಂದು ನಿಮ್ಮ ಬೆಲೆ ಬಾಳುವ ವಸ್ತುಗಳು ಕಳೆದು ಹೋಗುವ ಸಾಧ್ಯತೆ ಇರುವುದರಿಂದ ವಸ್ತುಗಳ ಬಗ್ಗೆ ಜಾಗರೂಕರಾಗಿರಿ. ಕುಟುಂಬ ಜೀವನದಲ್ಲಿ ಆಹ್ಲಾದಕರ ವಾತಾವರಣ ಇರಲಿದೆ.
ವೃಶ್ಚಿಕ ರಾಶಿ:
ಆಯುಷ್ಮಾನ್ ಯೋಗವು ವೃಶ್ಚಿಕ ರಾಶಿಯ ಜನರಿಗೆ ಸಕಾರಾತ್ಮಕ ಫಲಿತಾಂಶಗಳನ್ನು ನೀಡಲಿದೆ. ಮಾನಸಿಕವಾಗಿ ಇಂದು ಸಂತೋಷದಿಂದ ಇರಲಿದ್ದೀರಿ. ಕುಟುಂಬದಲ್ಲಿ ಆಹ್ಲಾದಕರ ವಾತಾವರಣ ಇರಲಿದೆ. ವೈವಾಹಿಕ ಜೀವನದಲ್ಲಿ ಸುಖ ಸಂತೋಷ ಹೆಚ್ಚಾಗಲಿದೆ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಯೋಚಿಸಿ ನಿರ್ಧರಿಸಿ.
ಧನು ರಾಶಿ:
ಧನು ರಾಶಿಯವರಿಗೆ ಆಯುಷ್ಮಾನ್ ಯೋಗವು ಮಿಶ್ರ ಫಲಗಳನ್ನು ನೀಡಲಿದೆ. ಇಂದು ಶುಭ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಈ ದಿನ ಆದಾಯಕ್ಕಿಂತ ಖರ್ಚುಗಳು ಹೆಚ್ಚಾಗಬಹುದು. ಕುಟುಂಬದಲ್ಲಿ ಕೆಲವು ವಿಚಾರಗಳು ನಿಮ್ಮ ಚಿಂತೆಯನ್ನು ಹೆಚ್ಚಿಸಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಮಕರ ರಾಶಿ:
ಮಕರ ರಾಶಿಯವರಿಗೆ ಆಯುಷ್ಮಾನ್ ಯೋಗವು ಶುಭದಾಯಕವಾಗಿರುತ್ತದೆ. ನಿಮ್ಮ ಕುಟುಂಬ ಜೀವನದಲ್ಲಿ ಸಂತೋಷ ಇಮ್ಮಡಿಗೊಳ್ಳಲಿದೆ. ಕೆಲಸದಲ್ಲಿ ನಿಮ್ಮ ಶಕ್ತಿ ಸಾಮರ್ಥ್ಯ ಹೆಚ್ಚಾಗಲಿದೆ. ಹಣಕಾಸಿನ ಪರಿಸ್ಥಿತಿ ಮೊದಲಿಗಿಂತ ಉತ್ತಮಗೊಳ್ಳಲಿದೆ. ವಿದೇಶ ವ್ಯವಹಾರಗಳಲ್ಲಿ ಲಾಭಾಂಶಗಳು ಅಧಿಕಗೊಳ್ಳಲಿವೆ.
ಕುಂಭ ರಾಶಿ:
ಆಯುಷ್ಮಾನ್ ಯೋಗವು ಕುಂಭ ರಾಶಿಯ ಜನರಿಗೆ ಹಲವು ರೀತಿಯಲ್ಲಿ ಲಾಭದಾಯಕವಾಗಿರಲಿದೆ. ಹಿಂದೆ ಮಾಡಿರುವ ಹೂಡಿಕೆಗಳು ಇಂದು ನಿಮಗೆ ಉತ್ತಮ ಲಾಭವನ್ನು ತರಬಹುದು. ಆದಾಯದ ಮೂಲಗಳು ಹೆಚ್ಚಾಗುವುದರ ಜೊತೆಗೆ ನೀವು ನಿಮ್ಮ ಕುಟುಂಬಕ್ಕಾಗಿ ಐಷಾರಾಮಿ ವಸ್ತುಗಳನ್ನು ಖರೀದಿಸಬಹುದು.
ಮೀನ ರಾಶಿ:
ಆಯುಷ್ಮಾನ್ ಯೋಗವು ಮೀನ ರಾಶಿಯ ಜನರಿಗೆ ಬಹುದಿನದ ಆಸೆಗಳನ್ನು ಈಡೇರಿಸಲಿದೆ. ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ ಸಮಾಚಾರ ಸಿಗುವ ನಿರೀಕ್ಷೆ ಇದೆ. ಕುಟುಂಬ ಜೀವನದಲ್ಲಿ ಪ್ರೀತಿ, ಸಾಮರಸ್ಯ ಹೆಚ್ಚಾಗಲಿದೆ. ಹಳೆಯ ನೆಟ್ವರ್ಕ್ನಿಂದ ಉತ್ತಮ ಲಾಭವನ್ನು ಗಳಿಸುವ ನಿರೀಕ್ಷಿಸಲಾಗಿದೆ.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.