• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ದಸರಾ ಹಬ್ಬದಂದೇ ಶಕ್ತಿಶಾಲಿ ಮಾಳವ್ಯ ರಾಜಯೋಗ... ಈ ರಾಶಿಗಳಿಗೆ ಅದೃಷ್ಟದ ಪರ್ವಕಾಲ, ಪ್ರತಿ ಕೆಲಸದಲ್ಲೂ ಜಯ!

ದಸರಾ ಹಬ್ಬದಂದೇ ಶಕ್ತಿಶಾಲಿ ಮಾಳವ್ಯ ರಾಜಯೋಗ... ಈ ರಾಶಿಗಳಿಗೆ ಅದೃಷ್ಟದ ಪರ್ವಕಾಲ, ಪ್ರತಿ ಕೆಲಸದಲ್ಲೂ ಜಯ!

Written ByChetana Devarmani
Published: Oct 15, 2026, 07:06 AM IST|Updated: Oct 15, 2026, 07:10 AM IST
joinshare
Malavya Rajyog 2026: ದಸರಾ ದೇವಿಯ ಆರಾಧನೆಗೆ ವಿಶೇಷ ಹಬ್ಬ. ಈ ದಿನದಂದೇ ಶಕ್ತಿಶಾಲಿ ಮಾಳವ್ಯ ರಾಜಯೋಗ ನಿರ್ಮಾಣವಾಗಲಿದೆ. ಅಕ್ಟೋಬರ್ 20 ರಂದು ಶುಕ್ರನು ತುಲಾ ರಾಶಿಯನ್ನು ಪ್ರವೇಶಿಸಲಿದ್ದು, 'ಮಾಳವ್ಯ ರಾಜಯೋಗ'ವನ್ನು ಉಂಟುಮಾಡಲಿದ್ದಾನೆ. ಈ ಯೋಗದಿಂದ 4 ರಾಶಿಗಳ ಅದೃಷ್ಟದ ಬಾಗಿಲು ತೆರೆಯಲಿದೆ.

ಶುಕ್ರ ಗ್ರಹವು ತುಲಾ ರಾಶಿಯನ್ನು ಪ್ರವೇಶಿಸಲಿದೆ. ಶುಕ್ರ ಗ್ರಹದ ಈ ಚಲನೆ ದಸರಾ ಹಬ್ಬದ ದಿನವೇ ನಡೆಯಲಿದೆ. ಹೀಗಾಗಿ ಇದಕ್ಕೆ ಮತ್ತಷ್ಟು ವಿಶೇಷತೆ ಸಿಗಲಿದೆ. ತುಲಾ ರಾಶಿಗೆ ಶುಕ್ರನ ಪ್ರವೇಶದಿಂದ ಮಾಳವ್ಯ ರಾಜಯೋಗ ನಿರ್ಮಾಣವಾಗಲಿದೆ. ದಸರಾ ಹಬ್ಬದ ದಿನವೇ ಮಾಳವ್ಯ ರಾಜಯೋಗ ರೂಪಗೊಳ್ಳುವುದರಿಂದ ಇದಕ್ಕೆ ಮತ್ತಷ್ಟು ವಿಶೇಷತೆ ಸಿಗಲಿದೆ. 
 

Malavya Rajyog good effects 1/6

ಮಾಲವ್ಯ ರಾಜಯೋಗ ಪರಿಣಾಮ

ಮಾಲವ್ಯ ರಾಜಯೋಗವನ್ನು 'ಪಂಚ ಮಹಾಪುರುಷ ಯೋಗ'ಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ನಂಬಿಕೆಯ ಪ್ರಕಾರ, ಶುಕ್ರ ಗ್ರಹವು 'ಕೇಂದ್ರ' ಸ್ಥಾನಗಳಲ್ಲಿ ಅಂದರೆ ಮೊದಲನೇ, ನಾಲ್ಕನೇ, ಏಳನೇ ಅಥವಾ ಹತ್ತನೇ ಮನೆಯಲ್ಲಿ ನ್ನದೇ ಆದ ರಾಶಿಯಲ್ಲಿ ಅಥವಾ ಉಚ್ಚ ರಾಶಿಯಲ್ಲಿ ನೆಲೆಗೊಂಡಾಗ ಮಾಲವ್ಯ ರಾಜಯೋಗ ಉಂಟಾಗುತ್ತದೆ.
shukra gochar in tula rashi2/6

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯಲ್ಲಿ ಜನಿಸಿದವರಿಗೆ ಮಾಳವ್ಯ ರಾಜಯೋಗವು ವೃತ್ತಿಜೀವನದಲ್ಲಿ ಉನ್ನತ ಹಂತ ತಲುಪಲು ಸಹಾಯ ಮಾಡಲಿದೆ. ನಿಮ್ಮ ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಗಳನ್ನು ಪಡೆಯಬಹುದು. ಪ್ರೊಮೋಷನ್ ಸಿಗುವ ಅವಕಾಶಗಳು ಒದಗಿಬರಬಹುದು.ಇದರ ಜೊತೆ ಆರ್ಥಿಕ ಸ್ಥಿತಿಯೂ ಸುಧಾರಿಸುವ ಸಾಧ್ಯತೆಯಿದೆ.
Malavya Rajyog in tula rashi3/6

ಸಿಂಹ ರಾಶಿ

ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಮಾಳವ್ಯ ರಾಜಯೋಗ ಶುಭ ದಿನಗಳನ್ನು ತರಲಿದೆ. ಈ ಯೋಗದ ಪರಿಣಾಮವಾಗಿ ವ್ಯವಹಾರ ಮತ್ತು ಆರ್ಥಿಕ ವಿಷಯಗಳಿಗೆ ಸಂಬಂಧಿಸಿದಂತೆ ಉತ್ತಮ ಲಾಭ ದೊರೆಯಲಿದೆ. ಹಳೆಯ ಯೋಜನೆಯೊಂದನ್ನು ಮುಂದುವರಿಸಲು ಅವಕಾಶ ಸಿಗಬಹುದು.
Malavya Rajyog4/6

ತುಲಾ ರಾಶಿ

ತುಲಾ ರಾಶಿಯವರಿಗೆ ವ್ಯಾಪಾರದಲ್ಲಿ ಧನಲಾಭವಾಗುವ ಸಾಧ್ಯತೆಯಿದೆ. ಆಕಸ್ಮಿಕ ಹಣ ಬರುವುದರಿಂದ, ಸಾಲಬಾಧೆಗಳು ಬಗೆಹರಿಯಲಿವೆ. ಮಾಳವ್ಯ ರಾಜಯೋಗದಿಂದ ನಿಮ್ಮ ಬಹು ದಿನದ ಕನಸೊಂದು ನನಸಾಗಬಹುದು. ಇದು ವ್ಯಾಪಾರಸ್ಥರಿಗೆ ಉತ್ತಮ ಸಮಯವಾಗಿದ್ದು, ವ್ಯವಹಾರದಲ್ಲಿ ಭರಪೂರ ಲಾಭ ಕಾಣುವಿರಿ.
 shukra gochar effects 5/6

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯಲ್ಲಿ ಜನಿಸಿದವರಿಗೆ ಮಾಳವ್ಯ ರಾಜಯೋಗ ವು ಆರ್ಥಿಕ ವಿಷಯಗಳಲ್ಲಿ ಲಾಭವನ್ನು ಸೂಚಿಸುತ್ತದೆ. ಆದಾಯದ ಮೂಲಗಳು ಹೆಚ್ಚಾಗಲಿವೆ. ಇದರಿಂದ ಸಿರಿವಂತರಾಗುವ ಯೋಗ ಕೂಡ ಬರಲಿದೆ. ನಿಮ್ಮ ಕುಟುಂಬದಲ್ಲಿ ಸಂತೋಷ ನೆಲೆಸಲಿದೆ. ಸಮಾಜದಲ್ಲಿ ಕೀರ್ತಿ ಹೆಚ್ಚಾಗಲಿದೆ.
Malavya Rajyog in tula rashi6/6

ಮಾಲವ್ಯ ರಾಜಯೋಗ

ಸೂಚನೆ: ಮೇಲಿನ ರಾಶಿಭವಿಷ್ಯವೂ ಕೇವಲ ಜೋತಿಷ್ಯವನ್ನು ಆಧರಿಸಿ ಬರೆದ ಮಾಹಿತಿತಾಗಿದೆ. ಇದು ನಿಖರ ಸುದ್ದಿಯಲ್ಲ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಜನ್ಮಜಾತಕವನ್ನು ತಜ್ಞರಿಗೆ ತೋರಿಸಿ ಮಾಹಿತಿ ಪಡೆಯಿರಿ. ಜೀ ಕನ್ನಡ ನ್ಯೂಸ್‌ ಮೇಲಿನ ಸಂಗತಿಯನ್ನು ದೃಢೀಕರಿಸುವುದಿಲ್ಲ.
TAGS:
Grah Gochar
Astro Tips

Trending

  • News
  • Photos
  • Videos
ದಿನ ಭವಿಷ್ಯ 15-10-2026: ಗುರುವಾರದಂದು ಸೌಭಾಗ್ಯ ಯೋಗ.. ಈ ರಾಶಿಯವಿರಗೆ ಜಾಕ್‌ಪಾಟ್

ದಿನ ಭವಿಷ್ಯ 15-10-2026: ಗುರುವಾರದಂದು ಸೌಭಾಗ್ಯ ಯೋಗ.. ಈ ರಾಶಿಯವಿರಗೆ ಜಾಕ್‌ಪಾಟ್

2

ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ.. 3 ದಿನದಲ್ಲಿ ₹10,420 ರಷ್ಟು ಕುಸಿದ ಬಂಗಾರದ ದರ!

3

ಶ್ರೀರಂಗಪಟ್ಟಣ ದಸರಾ; ಇಂದು ಧನಂಜಯನ ಹೆಗಲೇರಲಿದೆ ಅಂಬಾರಿ

4

ಅಭಿಷೇಕ್ ಶರ್ಮಾ ವಿಶ್ವ ದಾಖಲೆ! ಟಿ20 ಕ್ರಿಕೆಟ್ ನಲ್ಲಿ ಈ ಸಾಧನೆ ಗೈದ ಜಗತ್ತಿನ ಮೊದಲ ಕ್ರಿಕೆಟರ್

5

ಶಾಯ್ ಹೋಪ್ ಭರ್ಜರಿ ಶತಕ, ಕೀಮೊ ಪೌಲ್ ಮಾರಕ ದಾಳಿ: ಭಾರತಕ್ಕೆ ವಿರೋಚಿತ ಸೋಲು!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.