• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ನವೆಂಬರ್‌ನಲ್ಲಿ 5 ರಾಶಿಯವರಿಗೆ ಸಾಕ್ಷಾತ್‌ ಲಕ್ಷ್ಮಿ ಕೃಪೆ..! ಹಿಡಿದ ಕೆಲಸಗಳಲ್ಲಿ ಯಶಸ್ಸು, ಕೈ ತುಂಬಾ ಹಣ

ನವೆಂಬರ್‌ನಲ್ಲಿ 5 ರಾಶಿಯವರಿಗೆ ಸಾಕ್ಷಾತ್‌ ಲಕ್ಷ್ಮಿ ಕೃಪೆ..! ಹಿಡಿದ ಕೆಲಸಗಳಲ್ಲಿ ಯಶಸ್ಸು, ಕೈ ತುಂಬಾ ಹಣ

Written ByYashaswini V
Published: Oct 27, 2026, 09:11 AM IST|Updated: Oct 27, 2026, 09:13 AM IST
joinshare

ಹಿಂದೂ ಪಂಚಾಂಗದ ಪ್ರಕಾರ, ನವೆಂಬರ್‌ ಮೊದಲ ದಿನವೇ ದೇವಗುರು ಬೃಹಸ್ಪತಿ ಕಟಕ ರಾಶಿಯನ್ನು ತೊರೆದು ಸಿಂಹ ರಾಶಿಗೆ ಪ್ರವೇಶಿಸಲಿದ್ದಾನೆ.

Guru Gochar effect1/6

ಗುರು ಗೋಚಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವೆಂಬರ್‌ 01, 2026ರಂದು ಜ್ಞಾನ, ಅದೃಷ್ಟದ ಅಂಶನಾದ ಗುರು ಸೂರ್ಯನ ಸಿಂಹ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಇದರೊಂದಿಗೆ ಕೆಲವು ರಾಶಿಯವರ ಅದೃಷ್ಟ ಖುಲಾಯಿಸಲಿದ್ದು, ಅವರ ಬಾಳಲ್ಲಿ ಸಾಕ್ಷಾತ್‌ ಲಕ್ಷ್ಮಿಯ ಅನುಗ್ರಹದಿಂದ ಹಿಡಿದ ಪ್ರತಿ ಕೆಲಸದಲ್ಲೂ ಜಯ, ಸಂಪತ್ತಿನ ಸುರಿಮಳೆಯೇ ಸುರಿಯಲಿದೆ ಎನ್ನಲಾಗುತ್ತಿದೆ.
Guru Gochar effect2/6

ಮೇಷ ರಾಶಿ

ನವೆಂಬರ್‌ನಲ್ಲಿ ಲಕ್ಷ್ಮಿ ಅನುಗ್ರಹದಿಂದ ಮೇಷ ರಾಶಿಯ ಜನರಿಗೆ ತಿಂಗಳಿಡೀ ಹಣಕಾಸಿಗೆ ಕೊರತೆಯೇ ಇರುವುದಿಲ್ಲ. ಮಾಡುವ ಪ್ರತಿ ಕೆಲಸದಲ್ಲೂ ವಿಜಯಲಕ್ಷ್ಮಿ ಕೈ ಹಿಡಿಯಲಿದ್ದಾಳೆ. ಆದಾಯದ ಹೊಸ ಮೂಲಗಳು ಸೃಷ್ಟಿ ಆಗಲಿದ್ದು, ಆರೋಗ್ಯದಲ್ಲೂ ಸುಧಾರಣೆಯನ್ನು ಕಾಣುವಿರಿ. ನಿರುದ್ಯೋಗಿಗಳಿಗೆ ಒಳ್ಳೆಯ ಕೆಲಸದ ಆಫರ್‌ ಸಿಗಬಹುದು.
Guru Gochar effect3/6

ವೃಷಭ ರಾಶಿ

ನವೆಂಬರ್‌ ಆರಂಭವಾಗುತ್ತಿದ್ದಂತೆ ಗುರು ಸಂಚಾರವು ವೃಷಭ ರಾಶಿಯ ಜನರ ಬಾಳಲ್ಲಿ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದೆ. ಈ ಅವಧಿಯಲ್ಲಿ ಉದ್ಯೋಗಸ್ಥರಿಗೆ ಬಡ್ತಿಯ ಅವಕಾಶಗಳಿದ್ದು, ವೇತನ ಹೆಚ್ಚಳ ನಿರೀಕ್ಷೆಯೂ ಇದೆ. ವ್ಯವಹಾರದಲ್ಲಿ ಧನಾತ್ಮಕ ಬದಲಾವಣೆಗಳು ನಿಮ್ಮ ಬ್ಯಾಂಕ್‌ ಬ್ಯಾಲೆನ್ಸ್‌ ಹೆಚ್ಚಿಸುವಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸಲಿವೆ.
Guru Gochar effect4/6

ಕಟಕ ರಾಶಿ

ಕಟಕ ರಾಶಿಯನ್ನು ತೊರೆದು ಸಿಂಹ ರಾಶಿಗೆ ಪ್ರವೇಶಿಸಲಿರುವ ಗುರು ಈ ರಾಶಿಯವರಿಗೆ ಶುಭ ಫಲಗಳನ್ನೇ ನೀಡಲಿದ್ದಾನೆ. ಈ ಸಮಯದಲ್ಲಿ ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಪಡೆಯುವಿರಿ. ಹಣಕಾಸಿನ ವ್ಯವಹಾರಗಳಲ್ಲಿ ನಿಮ್ಮ ಅದೃಷ್ಟ ಖುಲಾಯಿಸಲಿದೆ. ವೃತ್ತಿಪರರಿಗೆ ಅನುಕೂಲಕರ ಸಮಯ ಇದಾಗಿದ್ದು, ಕೈ ತುಂಬಾ ಹಣ ಸಂಪಾದಿಸುವ ಅವಕಾಶಗಳನ್ನು ಪಡೆಯುವಿರಿ.
Guru Gochar effect5/6

ಸಿಂಹ ರಾಶಿ

ಸ್ವ ರಾಶಿಯಲ್ಲಿ ಗುರು ಸಂಚಾರವು ಸಿಂಹ ರಾಶಿಯ ಜನರಿಗೆ ಭಾರೀ ಅದೃಷ್ಟ ಎಂತಲೇ ಹೇಳಬಹುದು. ಈ ಸಮಯದಲ್ಲಿ ಆದಾಯದ ಹೊಸ ಮೂಲಗಳು ಉತ್ಪತ್ತಿ ಆಗಲಿದ್ದು, ಹಣಕಾಸಿನ ಸಮಸ್ಯೆಗಳಿಂದ ಪರಿಹಾರ ಪಡೆಯುವಿರಿ. ವಿವಾಹ ಮಾತುಕತೆಗಳಲ್ಲಿ ಇದ್ದ ಅಡೆತಡೆಗಳು ನಿವಾರಣೆ ಆಗಲಿವೆ. ಸ್ವಂತ ಮನೆ ಖರೀದಿಸುವ ನಿಮ್ಮ ಕನಸು ನನಸಾಗಲಿದೆ.
Guru Gochar effect6/6

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಧನ-ಸಂಪತ್ತಿನ ಮನೆಯಲ್ಲಿ ಗುರು ಸಂಚಾರವು ತುಂಬಾ ಶುಭದಾಯಕವಾಗಿದ್ದು ಸಾಕ್ಷಾತ್‌ ಲಕ್ಷ್ಮಿ ಅನುಗ್ರಹದಿಂದ ಕುಬೇರನ ಖಜಾನೆಯೇ ನಿಮ್ಮ ಕೈ ಸೇರಲಿದೆ. ಆದಾಯ ಹೆಚ್ಚಿಸುವ ನಿಮ್ಮ ಪ್ರಯತ್ನಗಳು ಯಶಸ್ವಿ ಆಗಲಿದ್ದು, ಭವಿಷ್ಯಕ್ಕಾಗಿ ಉತ್ತಮ ಹಣವನ್ನು ಕೂಡಿಡುವಲ್ಲಿ ಯಶಸ್ವಿ ಆಗುವಿರಿ. ವೃತ್ತಿ-ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಆದಾಯ ಗಳಿಸುವಿರಿ. ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
TAGS:
Grah Gochar

Trending

  • News
  • Photos
  • Videos
ಸ್ಟಿಂಗ್ ಆಪರೇಷನ್‌ಗೆ ಮತ್ತೊಂದು ಟ್ವಿಸ್ಟ್... ಆದರೆ.. ಪ್ರಕರಣದ ತನಿಖೆಗೆ ಇದೇ ದೊಡ್ಡ ತೊಡಕು..!

ಸ್ಟಿಂಗ್ ಆಪರೇಷನ್‌ಗೆ ಮತ್ತೊಂದು ಟ್ವಿಸ್ಟ್... ಆದರೆ.. ಪ್ರಕರಣದ ತನಿಖೆಗೆ ಇದೇ ದೊಡ್ಡ ತೊಡಕು..!

2

ಇಂದಿನ ಹವಾಮಾನ ವರದಿ : ರಾಜ್ಯದ ಈ ಭಾಗದಲ್ಲಿ ಮಳೆ ಮುಂದುವರಿಕೆ, ಉಳಿದಲ್ಲಿ ಒಣ ಹವೆ

3

ಕನ್ನಡ ಚಿತ್ರರಂಗಕ್ಕೆ ಶಾಕ್‌.. ‘ಎ’ ಸಿನಿಮಾ ನಿರ್ಮಾಪಕ ಸಿಲ್ಕ್ ಮಂಜು ನಿಧನ!

4

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ: ಐಟಿ ಕಂಪನಿಗಳಿಗೆ ಸರ್ಕಾರದ ಖಡಕ್ ವಾರ್ನಿಂಗ್!

5

ಸೀರೆ ಉಟ್ಟು ಬರಿಗಾಲಲ್ಲಿ ಓಡಿದ್ದ ಬಡ ಮಹಿಳೆ ಕನಸು ಭಗ್ನ! ಕೊನೆಗೂ ಕೆಲಸ ಸಿಗಲೇ ಇಲ್ಲ.. ಕಾಣವೇನು ಗೊತ್ತೆ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.