• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಸ್ಟಿಂಗ್ ಆಪರೇಷನ್‌ಗೆ ಮತ್ತೊಂದು ಟ್ವಿಸ್ಟ್... ಆದರೆ.. ಪ್ರಕರಣದ ತನಿಖೆಗೆ ಇದೇ ದೊಡ್ಡ ತೊಡಕು..!

ಸ್ಟಿಂಗ್ ಆಪರೇಷನ್‌ಗೆ ಮತ್ತೊಂದು ಟ್ವಿಸ್ಟ್... ಆದರೆ.. ಪ್ರಕರಣದ ತನಿಖೆಗೆ ಇದೇ ದೊಡ್ಡ ತೊಡಕು..!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದು, ಇದು ಪ್ರಕಣದ ಹಿಂದೆ ಯಾರಿದ್ದಾರೆ ಎಂದು ತಿಳಿಯಲು ಸಹಕಾರಿ ಆಗಲಿದೆ ಎನ್ನಲಾಗುತ್ತಿದೆ.

Written ByYashaswini V
Published: Oct 27, 2026, 10:01 AM IST|Updated: Oct 27, 2026, 10:02 AM IST
joinshare
ಸ್ಟಿಂಗ್ ಆಪರೇಷನ್‌ಗೆ ಮತ್ತೊಂದು ಟ್ವಿಸ್ಟ್... ಆದರೆ.. ಪ್ರಕರಣದ ತನಿಖೆಗೆ ಇದೇ ದೊಡ್ಡ ತೊಡಕು..!

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ಸ್ಟಿಂಗ್ ಆಪರೇಷನ್‌ಗೆ ಮತ್ತೊಂದು ಟ್ವಿಸ್ಟ್... ಆದರೆ.. ಪ್ರಕರಣದ ತನಿಖೆಗೆ ಇದೇ ದೊಡ್ಡ ತೊಡಕು..!

ಸ್ಟಿಂಗ್ ಆಪರೇಷನ್‌ಗೆ ಮತ್ತೊಂದು ಟ್ವಿಸ್ಟ್... ಆದರೆ.. ಪ್ರಕರಣದ ತನಿಖೆಗೆ ಇದೇ ದೊಡ್ಡ ತೊಡಕು..!

2

ಇಂದಿನ ಹವಾಮಾನ ವರದಿ : ರಾಜ್ಯದ ಈ ಭಾಗದಲ್ಲಿ ಮಳೆ ಮುಂದುವರಿಕೆ, ಉಳಿದಲ್ಲಿ ಒಣ ಹವೆ

3

ಕನ್ನಡ ಚಿತ್ರರಂಗಕ್ಕೆ ಶಾಕ್‌.. ‘ಎ’ ಸಿನಿಮಾ ನಿರ್ಮಾಪಕ ಸಿಲ್ಕ್ ಮಂಜು ನಿಧನ!

4

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ: ಐಟಿ ಕಂಪನಿಗಳಿಗೆ ಸರ್ಕಾರದ ಖಡಕ್ ವಾರ್ನಿಂಗ್!

5

ಸೀರೆ ಉಟ್ಟು ಬರಿಗಾಲಲ್ಲಿ ಓಡಿದ್ದ ಬಡ ಮಹಿಳೆ ಕನಸು ಭಗ್ನ! ಕೊನೆಗೂ ಕೆಲಸ ಸಿಗಲೇ ಇಲ್ಲ.. ಕಾಣವೇನು ಗೊತ್ತೆ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ʼಸ್ಟಿಂಗ್‌ ಆಪರೇಷನ್‌ʼ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಬಿಗ್‌ ತಿರುವು ಸಿಕ್ಕಿದ್ದು, ಇದು ಪ್ರಕರಣದ ಹಿಂದೆ ಯಾರ ಕೈವಾಡವಿದೆ ಎಂದು ತಿಳಿಯಲು ಸಹಕಾರಿ ಆಗುವ ನಿರೀಕ್ಷೆ ಇದೆ. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ʼಮದರ್ ಡಿವೈಸ್ʼ ಪತ್ತೆ ಆಗದಿರುವುದು ತನಿಖೆಗೆ ತೊಡಕುಂಟಾಗಲಿದೆ ಎನ್ನಲಾಗುತ್ತಿದೆ. ಈ ಕುರಿತ ವರದಿ ಇಲ್ಲಿದೆ.

ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್‌ಗೆ ಮತ್ತೊಂದು ಟ್ವಿಸ್ಟ್:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಪ್ರಕರಣದಲ್ಲಿ ಮಾಜಿ ಪತ್ರಕರ್ತನ ಕೈವಾಡದ ಶಂಕೆ ವ್ಯಕ್ತವಾಗಿದೆ. ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್‌ ಪ್ರಮುಖ ಆರೋಪಿ ರಿತೇಶ್ ಪಾಂಡೆಗೆ ಮಾಜಿ ಪತ್ರಕರ್ತರೊಬ್ಬರು ನಿರ್ದೇಶನ ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನಲೆಯಲ್ಲಿ
ಮಾಜಿ ಪತ್ರಕರ್ತನ ಪಾತ್ರದ ಬಗ್ಗೆ ಸಿಸಿಬಿ ಪೊಲೀಸರಿಂದ ತನಿಖೆ ಚುರುಕುಗೊಂಡಿದೆ.

ಸ್ಟಿಂಗ್ ಆಪರೇಷನ್‌ ಪ್ರಮುಖ ಆರೋಪಿ ರಿತೇಶ್ ಪಾಂಡೆ ರಾಷ್ಟ್ರ ರಾಜಧಾನಿ ನವದೆಹಲಿ ಅಲ್ಲಿ ಸ್ಟಿಂಗ್‌ ಆಪರೇಷನ್‌ ನಡೆಸಲೆಂದೇ ಹೊಸ ಮೊಬೈಲ್‌ ಖರೀದಿಸಿದ್ದು, ಈ ಸಂದರ್ಭದಲ್ಲಿ ಮಾಜಿ ಪತ್ರಕರ್ತನ ಜೊತೆಗೆ ಆತ ಸಂಪರ್ಕದಲ್ಲಿ ಇದ್ದ ಎನ್ನಲಾಗುತ್ತಿದೆ. ಅಲ್ಲದೆ, ಸ್ಟಿಂಗ್‌ ವಿಡಿಯೋ ಅಪ್‌ಲೋಡ್‌ ಮಾಡುವ ಸಂದರ್ಭದಲ್ಲೂ ಕೂಡ ಆರೋಪಿ ರಿತೇಶ್ ಪಾಂಡೆ ಮಾಜಿ ಪತ್ರಕರ್ತನೊಂದಿಗೆ ಸಂಪರ್ಕ ಹೊಂದಿದ್ದ ಎಂತಲೂ ಹೇಳಲಾಗುತ್ತಿದೆ.  

ಮೊಬೈಲ್‌ ಖರೀದಿ ವೇಳೆ ಆರೋಪಿ ರಿತೇಶ್ ಪಾಂಡೆ, ಮಾಜಿ ಪತ್ರಕರ್ತನ ಜೊತೆಗೆ ಇತರ ಕೆಲವರೂ ಕೂಡ ಇದ್ದರು ಎಂದು ಹೇಳಲಾಗುತ್ತಿದ್ದು, ಇವೆರೆಲ್ಲರೂ ದೆಹಲಿಯ ಕೋಲ್‌ ಬಜಾರ್‌ ಮಾರ್ಕೆಟ್‌ನಲ್ಲಿ ಸರಿಸುಮಾರು ಮೂರು ತಾಸುಗಳ ಕಾಲ ಒಟ್ಟಿಗಿದ್ದರು ಎಂಬ ಸುಳಿವು ಲಭ್ಯವಾಗಿದೆ.

ಮೊಬೈಲ್ ಸಿಡಿಆರ್ ಆಧರಿಸಿ ತನಿಖೆ ಮುಂದುವರಿಸಿರುವ ಸಿಸಿಬಿ, ಮಾಜಿ ಪತ್ರಕರ್ತನ ಪಾತ್ರದ ಬಗ್ಗೆ ತಾಂತ್ರಿಕ ಸಾಕ್ಷ್ಯಗಳ ಪರಿಶೀಲನೆಗೆ ಮುಂದಾಗಿದೆ. ಒಂದೊಮ್ಮೆ ಈ ಪ್ರಕರಣದಲ್ಲಿ ಮಾಜಿ ಪತ್ರಕರ್ತ ನಿರ್ದೇಶನ ನೀಡಿರುವುದು ದೃಢಪಟ್ಟರೆ ಆತನಿಗೂ ಸಹ ಸಿಸಿಬಿ ನೋಟಿಸ್ ನೀಡುವ ಸಾಧ್ಯತೆ ಇದೆ. 

ಇನ್ನೂ ಪತ್ತೆ ಆಗದ ʼಮದರ್‌ ಡಿವೈಸ್‌ʼ!
ಮಾಜಿ ಸಿಎಂ ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್‌ಗೆ ಸಂಬಂಧಿಸಿದಂತೆ, ಸಂತ್ರಸ್ಥೆಯ ವಿಡಿಯೋ ಸೆರೆ ಹಿಡಿದ ಮೊಬೈಲ್‌ ಪತ್ತೆಗಾಗಿ ಖಾಕಿ ಹುಡುಕಾಟ ಮುಂದುವರೆಸಿದ್ದಾರೆ. ಸ್ಟಿಂಗ್‌ ಆಪರೇಷನ್‌ನಲ್ಲಿ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಪ್ರಶಾಂತ್ ಮೊಬೈಲ್‌ನಲ್ಲೇ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್‌ ಆಪರೇಷನ್‌ಗೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಸಿಗುವ ನಿರೀಕ್ಷೆ ಇದ್ದು, ಆತನ ಮೊಬೈಲ್ ವಶಕ್ಕೆ ಪಡೆಯಲು ಪೊಲೀಸರು ಕಸರತ್ತು ನಡೆಸಿದ್ದಾರೆ.

ಈಗಾಗಲೇ ನಾಲ್ಕು ಬಾರಿ ಆರೋಪಿ ಪ್ರಶಾಂತ್‌ನನ್ನು ಸಿಸಿಬಿ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ, ಆರೋಪಿ ಪ್ರಶಾಂತ್‌ ಈ ಸಂದರ್ಭದಲ್ಲಿ ತನಗೆ ಸ್ಟಿಂಗ್‌ ಆಪರೇಷನ್‌ ಬಗ್ಗೆ ಏನೂ ಗೊತ್ತಿಲ್ಲ, ನಾನು ಯಾರ ವಿರುದ್ಧವೂ ಯಾವುದೇ ಸ್ಟಿಂಗ್‌ ಮಾಡಿಲ್ಲ ಎನ್ನುತ್ತಿದ್ದಾನೆ ಎಂದು ತಿಳಿದುಬಂದಿದೆ.

ಮದರ್ ಡಿವೈಸ್ ಸಿಗದಿರುವುದು ತನಿಖೆಗೆ ದೊಡ್ಡ ಹಿನ್ನಡೆ..!
ಸಿದ್ದರಾಮಯ್ಯ ಹೆಸರಿಗೆ ಮಸಿ ಬಳಿಯಲು ಸ್ಟಿಂಗ್‌ ಆಪರೇಷನ್‌ ನಡೆಸಲಾಗಿದೆ ಎನ್ನಲಾಗುತ್ತಿರುವ ಪ್ರಕರಣದ ಸತ್ಯಾಸತ್ಯತೆ ಬಯಲಿಗೆಳೆಯಲು ಪೊಲೀಸರಿಂದ ತನಿಖೆ ತೀವ್ರಗೊಂಡಿದೆ. ಆದರೆ, ಸ್ಟಿಂಗ್‌ ಆಪರೇಷನ್‌ಗೆ ಸಂಬಂಧಿಸಿದ ಮದರ್ ಡಿವೈಸ್ ಸಿಗದೇ ಇರುವುದು ಈ ತನಿಖೆಯಲ್ಲಿ ದೊಡ್ಡ ಹಿನ್ನಡೆ ಆದಂತಾಗಿದೆ.

ಮದರ್ ಡಿವೈಸ್ ಸಿಕ್ಕರೆ ಸಿದ್ದರಾಮಯ್ಯ ವಿರುದ್ಧದ ಈ ಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಸುಳಿವು ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರಿಂದ ತನಿಖೆ ಚುರುಕುಗೊಂಡಿದೆ. ಸ್ಟಿಂಗ್ ಪ್ರಕರಣದ ತನಿಖೆಯಲ್ಲಿ ಮತ್ತಷ್ಟು ಮಾಹಿತಿ ಕಲೆಹಾಕುತ್ತಿರುವ ಪೊಲೀಸರು ಈ ಪ್ರಕರಣದ ಸತ್ಯಾಸತ್ಯತೆಯನ್ನು ಹೊರತರಲು ಪ್ರಯತ್ನಿಸುತ್ತಿದ್ದಾರೆ. 
 

Add Zee News as a Preferred Source
TAGS:
Siddaramaiah
Karnataka Politics