• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ರಾಷ್ಟ್ರೀಯ
  • /ಸೀರೆ ಉಟ್ಟು ಬರಿಗಾಲಲ್ಲಿ ಓಡಿದ್ದ ಬಡ ಮಹಿಳೆ ಕನಸು ಭಗ್ನ! ಕೊನೆಗೂ ಕೆಲಸ ಸಿಗಲೇ ಇಲ್ಲ.. ಕಾಣವೇನು ಗೊತ್ತೆ?

ಸೀರೆ ಉಟ್ಟು ಬರಿಗಾಲಲ್ಲಿ ಓಡಿದ್ದ ಬಡ ಮಹಿಳೆ ಕನಸು ಭಗ್ನ! ಕೊನೆಗೂ ಕೆಲಸ ಸಿಗಲೇ ಇಲ್ಲ.. ಕಾಣವೇನು ಗೊತ್ತೆ?

ಸೀರೆ ಉಟ್ಟು ಬರಿಗಾಲಲ್ಲಿ ಓಡಿ ದೇಶದ ಗಮನ ಸೆಳೆದಿದ್ದ ಜಾರ್ಖಂಡ್‌ನ ಕವಿತಾ ಮಹತೋ ಅವರ ಹೋಮ್‌ಗಾರ್ಡ್ ಆಗುವ ಕನಸು ಈ ಬಾರಿ ಭಗ್ನಗೊಂಡಿದೆ. ಓಟದ ಸ್ಪರ್ಧೆಯಲ್ಲಿ ಯಶಸ್ವಿಯಾದರೂ, ಅವರಿಗೆ ಕೆಲಸ ಸಿಕ್ಕಿಲ್ಲ.. ಹಾಗಿದ್ರೆ ಇದಕ್ಕೆ ಕಾರಣವೇನು.. ಈ ಮಹಿಳೆ ಮಾಡಿದ ತಪ್ಪೇನು..? ಇಲ್ಲಿದೆ ವಿವರ

Written ByKrishna NK
Published: Oct 27, 2026, 06:33 AM IST|Updated: Oct 27, 2026, 06:34 AM IST
joinshare
ಸೀರೆ ಉಟ್ಟು ಬರಿಗಾಲಲ್ಲಿ ಓಡಿದ್ದ ಬಡ ಮಹಿಳೆ ಕನಸು ಭಗ್ನ! ಕೊನೆಗೂ ಕೆಲಸ ಸಿಗಲೇ ಇಲ್ಲ.. ಕಾಣವೇನು ಗೊತ್ತೆ?
Image Credit: kavita mahato

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಇಂದಿನ ಹವಾಮಾನ ವರದಿ : ರಾಜ್ಯದ ಈ ಭಾಗದಲ್ಲಿ ಮಳೆ ಮುಂದುವರಿಕೆ, ಉಳಿದಲ್ಲಿ ಒಣ ಹವೆ

ಇಂದಿನ ಹವಾಮಾನ ವರದಿ : ರಾಜ್ಯದ ಈ ಭಾಗದಲ್ಲಿ ಮಳೆ ಮುಂದುವರಿಕೆ, ಉಳಿದಲ್ಲಿ ಒಣ ಹವೆ

2

ಕನ್ನಡ ಚಿತ್ರರಂಗಕ್ಕೆ ಶಾಕ್‌.. ‘ಎ’ ಸಿನಿಮಾ ನಿರ್ಮಾಪಕ ಸಿಲ್ಕ್ ಮಂಜು ನಿಧನ!

3

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ: ಐಟಿ ಕಂಪನಿಗಳಿಗೆ ಸರ್ಕಾರದ ಖಡಕ್ ವಾರ್ನಿಂಗ್!

4

ಸೀರೆ ಉಟ್ಟು ಬರಿಗಾಲಲ್ಲಿ ಓಡಿದ್ದ ಬಡ ಮಹಿಳೆ ಕನಸು ಭಗ್ನ! ಕೊನೆಗೂ ಕೆಲಸ ಸಿಗಲೇ ಇಲ್ಲ.. ಕಾಣವೇನು ಗೊತ್ತೆ?

5

ಅಕ್ಟೋಬರ್ 27ರ ರಾಶಿ ಭವಿಷ್ಯ: ಚಂದ್ರನ ಸಂಚಾರದಿಂದ ಈ ರಾಶಿಯವರಿಗೆ ಅದೃಷ್ಟ, ಕೆಲವರಿಗೆ ಜಾಗರೂಕತೆ ಅಗತ್ಯ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಜಾರ್ಖಂಡ್‌ : ರಾಮಗಢ ಜಿಲ್ಲೆಯ ಸೋಸೋ ಗ್ರಾಮದ ಯುವತಿ ಕವಿತಾ ಮಹತೋ ಹೆಸರು ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು. ಹೋಮ್‌ಗಾರ್ಡ್ ಹುದ್ದೆ ಪಡೆಯುವ ಗುರಿಯೊಂದಿಗೆ ಅವರು ಸೀರೆ ಉಟ್ಟುಕೊಂಡು, ಬರಿಗಾಲಿನಲ್ಲೇ ಮಣ್ಣಿನ ರಸ್ತೆಯಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದ ದೃಶ್ಯವೊಂದು ದೇಶದ್ಯಾಂತ ಲಕ್ಷಾಂತರ ಜನರ ಮನಸ್ಸನ್ನು ಗೆದ್ದಿತ್ತು. ಅವರ ಈ ಅಸಾಧಾರಣ ಛಲ ಹಾಗೂ ಪರಿಶ್ರಮವನ್ನು ಮೆಚ್ಚಿ ಅನೇಕರು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಆದರೆ, ಕಠಿಣ ಪರಿಶ್ರಮವಿದ್ದರೂ ವಿಧಿಯಾಟ ಬೇರೆಯೇ ಇತ್ತು ಎಂಬಂತೆ, ಕವಿತಾ ಅವರ ಹೋಮ್‌ಗಾರ್ಡ್ ಆಗುವ ಕನಸು ಈ ಬಾರಿ ಕೈಗೂಡಿಲ್ಲ.

ಓಟದಲ್ಲಿ ಜಯ, ಆದರೆ ಜಂಪ್‌ನಲ್ಲಿ ಎಡವಟ್ಟು
ರಾಮಗಢದ ಸಿಧು-ಕನ್ಹೂ ಜಿಲ್ಲಾ ಮೈದಾನದಲ್ಲಿ ಪ್ರಸ್ತುತ ಹೋಮ್‌ಗಾರ್ಡ್ ನೇಮಕಾತಿ ಪ್ರಕ್ರಿಯೆ ಅತ್ಯಂತ ಕಾವೇರಿದ ವಾತಾವರಣದಲ್ಲಿ ನಡೆಯುತ್ತಿದೆ. ತಮ್ಮ ಮೇಲೆ ಸಾಮಾಜಿಕ ಜಾಲತಾಣಗಳ ಮೂಲಕ ಹರಿದುಬಂದ ಜನಪ್ರಿಯತೆಯ ಪ್ರೀತಿ ಹಾಗೂ ಭರವಸೆಯೊಂದಿಗೆ ಕವಿತಾ ಈ ಮೈದಾನಕ್ಕಿಳಿದಿದ್ದರು. ತಾವು ಪ್ರತಿದಿನ ಅಭ್ಯಾಸ ಮಾಡುತ್ತಿದ್ದ ಶೈಲಿಯಲ್ಲೇ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಮುಂದಾದ ಅವರು, 1,600 ಮೀಟರ್ ದೂರದ ಓಟದ ಸ್ಪರ್ಧೆಯನ್ನು ಕೇವಲ 8 ನಿಮಿಷ 57 ಸೆಕೆಂಡುಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದರು.

ಆದರೆ, ಓಟದ ಯಶಸ್ಸಿನ ಖುಷಿ ಹೆಚ್ಚು ಕಾಲ ಉಳಿಯಲಿಲ್ಲ. ಇದರ ನಂತರ ನಡೆದ ಲಾಂಗ್ ಜಂಪ್ (ಉದ್ದ ಜಿಗಿತ) ಮತ್ತು ಹೈ ಜಂಪ್ (ಎತ್ತರ ಜಿಗಿತ) ಸುತ್ತುಗಳಲ್ಲಿ ಕವಿತಾ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು. ತಮಗೆ ಸಿಕ್ಕ ಮೂರೂ ಅವಕಾಶಗಳಲ್ಲಿ ಅಗತ್ಯವಿರುವ ಮಾನದಂಡಗಳನ್ನು ತಲುಪಲು ಸಾಧ್ಯವಾಗದೆ, ಅವರು ನೇಮಕಾತಿ ಪ್ರಕ್ರಿಯೆಯಿಂದ ಅಧಿಕೃತವಾಗಿ ಹೊರಬಳಬೇಕಾಯಿತು.

ಭಾರಿ ಪೈಪೋಟಿಯ ನಡುವೆ ಪಾರದರ್ಶಕ ಪರೀಕ್ಷೆ
ಈ ಬಾರಿಯ ರಾಮಗಢ ಜಿಲ್ಲೆಯ ಹೋಮ್‌ಗಾರ್ಡ್ ನೇಮಕಾತಿ ಪ್ರಕ್ರಿಯೆಯು ಅತ್ಯಂತ ಕಠಿಣ ಸ್ಪರ್ಧೆಗೆ ಸಾಕ್ಷಿಯಾಗಿದೆ. ಒಟ್ಟು 284 ಖಾಲಿ ಹುದ್ದೆಗಳಿಗೆ ಬರೋಬ್ಬರಿ 16,000ಕ್ಕೂ ಅಧಿಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಉದ್ಯೋಗಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಜಿಲ್ಲಾಧಿಕಾರಿ ರಿತುರಾಜ್ ಅವರ ನೇರ ಮೇಲ್ವಿಚಾರಣೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. ಯಾವುದೇ ಅಕ್ರಮ ಅಥವಾ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದಂತೆ ಇಡೀ ಕ್ರೀಡಾಂಗಣದಲ್ಲಿ ಸಿಸಿಟಿವಿ ಕ್ಯಾಮೆರಾಗಳು, ನಿರಂತರ ವೀಡಿಯೋಗ್ರಫಿ ಹಾಗೂ ಡ್ರೋನ್ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಓಟದ ಸ್ಪರ್ಧೆಯ ನಿಖರ ಸಮಯ ಅಳೆಯಲು ಅಭ್ಯರ್ಥಿಗಳ ಕಾಲಿಗೆ ಆರ್‌ಎಫ್‌ಐಡಿ (RFID) ಚಿಪ್‌ಗಳನ್ನು ಅಳವಡಿಸಿದ್ದು ವಿಶೇಷವಾಗಿತ್ತು. ನವೆಂಬರ್ 5ರವರೆಗೆ ಈ ನೇಮಕಾತಿ ಪ್ರಕ್ರಿಯೆ ಮುಂದುವರಿಯಲಿದೆ.

ಸೋಲೇ ಗೆಲುವಿನ ಸೋಪಾನ
ಕವಿತಾ ಮಹತೋ ಅವರಿಗೆ ಈ ಬಾರಿ ಹೋಮ್‌ಗಾರ್ಡ್ ಸಮವಸ್ತ್ರ ಧರಿಸುವ ಅವಕಾಶ ತಪ್ಪಿಹೋಗಿರಬಹುದು; ಆದರೆ ಅವರ ಧೃತಿಗೆಡದ ಮನೋಭಾವ ಮತ್ತು ಸೋಲನ್ನೇ ಸವಾಲಾಗಿ ಸ್ವೀಕರಿಸುವ ಗುಣ ಯುವಜನತೆಗೆ ದೊಡ್ಡ ಸ್ಪೂರ್ತಿಯಾಗಿದೆ. ಮಾಧ್ಯಮಗಳಲ್ಲಿ ಅವರ ಕಥೆ ಪ್ರಸಾರವಾದ ಬಳಿಕ ಸ್ಥಳೀಯ ಶಾಸಕ ಜಯರಾಮ್ ಮಹತೋ ಸೇರಿದಂತೆ ಹಲವು ಗಣ್ಯರು ಮತ್ತು ದಾನಿಗಳು ಅವರ ನೆರವಿಗೆ ಧಾವಿಸಿದ್ದರು. ಟ್ರ್ಯಾಕ್‌ಸೂಟ್, ಟಿ-ಶರ್ಟ್ ಮತ್ತು ಸ್ಪೋರ್ಟ್ಸ್ ಶೂಗಳನ್ನು ಉಡುಗೊರೆಯಾಗಿ ನೀಡಿ ಅವರನ್ನು ಹುರಿದುಂಬಿಸಿದ್ದರು.

ಸದ್ಯ ಸಿಕ್ಕಿರುವ ಆರ್ಥಿಕ ಸಹಾಯ ಮತ್ತು ಬೆಂಬಲದೊಂದಿಗೆ ಕವಿತಾ ಅವರು ತಮ್ಮ ಮುಂದಿನ ತರಬೇತಿಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ತಮ್ಮ ದೌರ್ಬಲ್ಯಗಳನ್ನು ತಿದ್ದಿಕೊಂಡು, ಸರಿಯಾದ ಮಾರ್ಗದರ್ಶನ ಹಾಗೂ ವೃತ್ತಿಪರ ತರಬೇತಿಯೊಂದಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡುವುದಾಗಿ ಕವಿತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕವಿತಾ ಅವರ ಈ ಛಲದ ಹಾದಿ ಮುಂದುವರಿದಿದ್ದು, ಅವರ ಮುಂಬರುವ ಪ್ರಯತ್ನಗಳು ಯಶಸ್ವಿಯಾಗಲಿ ಎಂದು ನಾಡಿನ ಜನರು ಹಾರೈಸುತ್ತಿದ್ದಾರೆ.

Add Zee News as a Preferred Source