• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಕೇತು ಗುರು ಸಂಯೋಗ: 5 ರಾಶಿಯವರಿಗೆ ಹಠಾತ್‌ ಧನ ಪ್ರಾಪ್ತಿ, ಬ್ಯಾಂಕ್‌ ಬ್ಯಾಲೆನ್ಸ್‌ ಹೆಚ್ಚಳ

ಕೇತು ಗುರು ಸಂಯೋಗ: 5 ರಾಶಿಯವರಿಗೆ ಹಠಾತ್‌ ಧನ ಪ್ರಾಪ್ತಿ, ಬ್ಯಾಂಕ್‌ ಬ್ಯಾಲೆನ್ಸ್‌ ಹೆಚ್ಚಳ

Written ByYashaswini V
Published: Oct 30, 2026, 08:59 AM IST|Updated: Oct 30, 2026, 09:02 AM IST
joinshare

ಜ್ಯೋತಿಷ್ಯದಲ್ಲಿ ಶುಭ ಗ್ರಹ ಎನ್ನಲಾಗುವ ಗುರು, ಪಾಪ ಗ್ರಹ ಎನ್ನಲಾಗುವ ಕೇತು ಶೀಘ್ರದಲ್ಲೇ ಸಂಯೋಗ ಹೊಂದಲಿದ್ದಾರೆ. 

Jupiter Ketu Conjunction Effect1/6

ಕೇತು ಗುರು ಸಂಯೋಗ

ವೈದಿಕ ಜ್ಯೋತಿಷ್ಯದ ಪ್ರಕಾರ, ಅಕ್ಟೋಬರ್‌ 31, 2026ರಂದು ಪಾಪ ಗ್ರಹ ಕೇತು ಸಿಂಹ ರಾಶಿಯಲ್ಲಿ ಗುರುವಿನೊಂದಿಗೆ ಸಂಯೋಗ ಹೊಂದಲಿದ್ದಾನೆ. ಕೇತು ಗುರು ಯುತಿಯ ಪ್ರಭಾವ ಎಲ್ಲಾ ರಾಶಿಯವರ ಮೇಲೂ ಕಂಡು ಬರಲಿದೆ. ಆದರೂ, ಈ ಅವಧಿಯಲ್ಲಿ ಐದು ರಾಶಿಯವರಿಗೆ ಹಠಾತ್‌ ಧನ ಪ್ರಾಪ್ತಿ ಆಗಲಿದೆ. ಆರ್ಥಿಕ ಸಂಕಷ್ಟದಿಂದ ಪರಿಹಾರ ಸಿಗಲಿದೆ ಎನ್ನಲಾಗುತ್ತಿದೆ.
Jupiter Ketu Conjunction Effect2/6

ಮಿಥುನ ರಾಶಿ

ಮಿಥುನ ರಾಶಿಯವರ ಮೂರನೇ ಮನೆಯಲ್ಲಿ ಗುರು ಕೇತು ಸಂಯೋಗವು ಇವರಿಗೆ ಬಂಪರ್‌ ಆರ್ಥಿಕ ಲಾಭವನ್ನು ತರಲಿದೆ. ಈ ಅವಧಿಯಲ್ಲಿ ಆದಾಯದಲ್ಲಿ ಭಾರೀ ಹೆಚ್ಚಳವಾಗಲಿದ್ದು ಹಣಕಾಸಿನ ಮುಗ್ಗಟ್ಟಿನಿಂದ ಹೊರಬರುವಲ್ಲಿ ಸಹಕಾರಿ ಆಗಲಿದೆ. ಕೆಲಸದಲ್ಲಿ ದಕ್ಷತೆ ಹೆಚ್ಚಾಗಲಿದ್ದು, ಬಡ್ತಿ ಸೂಚನೆಗಳಿವೆ. ದೀರ್ಘಾವಧಿಯ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆಯುವಿರಿ.
Jupiter Ketu Conjunction Effect3/6

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರಿಗೆ ಗುರು ಕೇತು ಯುತಿಯಿಂದ ಬಂಪರ್‌ ಆದಾಯ ಕಂಡು ಬರಲಿದೆ. ಹಠಾತ್‌ ಧನಲಾಭವು ಈ ರಾಶಿಯವರಿಗೆ ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಪರಿಣಾಮಕಾರಿ ಆಗಿದೆ. ಯಾವುದೇ ಅಡೆತಡೆ ಇಲ್ಲದೆ ಕೆಲಸಗಳು ನಿರ್ವಿಘ್ನವಾಗಿ ನೆರವೇರಲಿವೆ. ವೃತ್ತಿ, ವ್ಯವಹಾರದಲ್ಲಿ ಆದಾಯದ ಕೊರತೆ ಕಡಿಮೆ ಆಗಲಿದೆ. ಆಸ್ತಿ ಖರೀದಿ ಬಗ್ಗೆ ಯೋಚಿಸುತ್ತಿರುವವರಿಗೆ ಅನುಕೂಲಕರ ಸಮಯ.
Jupiter Ketu Conjunction Effect4/6

ಸಿಂಹ ರಾಶಿ

ಸ್ವ ರಾಶಿಯಲ್ಲಿ ಗುರು ಕೇತು ಯುತಿ ಪ್ರಭಾವದಿಂದ ಸಿಂಹ ರಾಶಿಯವರು ಜೀವನದಲ್ಲಿ ಅನಿರೀಕ್ಷಿತ ಶುಭ ಸಮಾಚಾರವನ್ನು ಕೇಳುವ ನಿರೀಕ್ಷೆ ಇದೆ. ಆದಾಯದ ಹೊಸ ಮೂಲಗಳು ಸೃಷ್ಟಿ ಆಗಲಿದ್ದು, ಹಿಂದೆ ಮಾಡಿರುವ ಹೂಡಿಕೆಗಳಿಂದ ಉತ್ತಮ ಲಾಭವನ್ನು ನಿರೀಕ್ಷಿಸಬಹುದಾಗಿದೆ. ವೃತ್ತಿಪರರಿಗೆ ಬಡ್ತಿ ಸೂಚನೆಗಳಿವೆ. ವ್ಯವಹಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಿರಿ.
Jupiter Ketu Conjunction Effect5/6

ತುಲಾ ರಾಶಿ

ಗುರು ಕೇತು ಯುತಿಯಿಂದ ತುಲಾ ರಾಶಿಯ ಜನರಿಗೆ ಮುಟ್ಟಿದ್ದೆಲ್ಲಾ ಬಂಗಾರವಾಗುವ ಸುವರ್ಣ ಯುಗ ಎಂದು ಸಾಬೀತುಪಡಿಸಲಿದೆ. ಹಠಾತ್‌ ಧನ ಲಾಭದಿಂದ ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಆದಾಯದ ಮೂಲಗಳು ಹೆಚ್ಚಾಗಲಿದ್ದು, ಷೇರು ವ್ಯವಹಾರಗಳಲ್ಲಿ ಲಾಭಾಂಶಗಳು ಹೆಚ್ಚಾಗಲಿವೆ. ಆಸ್ತಿ ಮೂಲಗಳು ಹೆಚ್ಚಾಗಲಿವೆ. ಪೂರ್ವಿಕರ ಆಸ್ತಿಯಿಂದ ಅನಿರೀಕ್ಷಿತ ಲಾಭ ನಿರೀಕ್ಷೆ ಇದೆ.
Jupiter Ketu Conjunction Effect6/6

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ ಜನರಿಗೆ ಅದೃಷ್ಟದ ಮನೆಯಲ್ಲಿ ಗುರು ಕೇತು ಸಂಯೋಗವು ಉದ್ಯೋಗದಲ್ಲಿ ಹಠಾತ್‌ ಶುಭ ಸುದ್ದಿಗಳನ್ನು ನೀಡಲಿದೆ. ಹಿಂದೆ ಮಾಡಿರುವ ಹೂಡಿಕೆಗಳಿಂದ ಭರ್ಜರಿ ಲಾಭವಾಗಲಿದೆ. ಧನ ಯೋಗದ ಪ್ರಭಾವದಿಂದ ಕುಬೇರನ ಸಂಪತ್ತೇ ನಿಮ್ಮ ಕೈ ಸೇರಲಿದ್ದು, ಹಣಕಾಸಿನ ಸುರಿಮಳೆಯೇ ಸುರಿಯಲಿದೆ. ಈ ಅವಧಿಯಲ್ಲಿ ಬ್ಯಾಂಕ್‌ ಬ್ಯಾಲೆನ್ಸ್‌ ಹೆಚ್ಚಾಗುವುದರ ಜೊತೆಗೆ ನಿಮ್ಮ ಆಸ್ತಿಗಳ ಮೌಲ್ಯವೂ ಹೆಚ್ಚಾಗಲಿದೆ. ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
TAGS:
Grah Gochar

Trending

  • News
  • Photos
  • Videos
ರೇಣುಕಾಸ್ವಾಮಿ ಪ್ರಕರಣ: ಮಾಫಿ ಸಾಕ್ಷಿ ಪ್ರದೋಷ್‌‌ಗೆ ಸಿಗುತ್ತಾ ಮಧ್ಯಂತರ ಜಾಮೀನು?

ರೇಣುಕಾಸ್ವಾಮಿ ಪ್ರಕರಣ: ಮಾಫಿ ಸಾಕ್ಷಿ ಪ್ರದೋಷ್‌‌ಗೆ ಸಿಗುತ್ತಾ ಮಧ್ಯಂತರ ಜಾಮೀನು?

2

Arecanut Price: ಶಿವಮೊಗ್ಗ, ಸಾಗರ, ಚನ್ನಗಿರಿ ಸೇರಿ ವಿವಿಧ ಮಾರುಕಟ್ಟೆಗಳಲ್ಲಿ ಎಷ್ಟಿದೆ ಬೆಲೆ? ಇಲ್ಲಿದೆ ಸಂಪೂರ್ಣ ಮಾಹಿತಿ!

3

ಪಿಎಂ ಕಿಸಾನ್ 24ನೇ ಕಂತು: ರೈತರ ಖಾತೆಗೆ ₹2,000 ಜಮೆ? ಮೊಬೈಲ್‌ನಲ್ಲೇ ಚೆಕ್‌ ಮಾಡಿ!

4

ಸ್ಟಿಂಗ್‌ ಕೇಸ್‌ ಕಿಡಿ ದೆಹಲಿಗೆ: ಡಿ.ಕೆ.ಶಿವಕುಮಾರ್‌, ಪ್ರಿಯಾಂಕ್ ಖರ್ಗೆ ವಿರುದ್ಧ ಹೈಕಮಾಂಡ್‌ಗೆ ಸಿದ್ದರಾಮಯ್ಯ ದೂರು?

5

Today's Horoscope for October 30: ಈ 3 ರಾಶಿಗಳಿಗೆ ಸಮಸ್ಯೆಗಳಿಂದ ಮುಕ್ತಿ, ಉದ್ಯೋಗ–ವ್ಯವಹಾರದಲ್ಲಿ ಯಶಸ್ಸಿನ ಯೋಗ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.