• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ರೇಣುಕಾಸ್ವಾಮಿ ಪ್ರಕರಣ: ಮಾಫಿ ಸಾಕ್ಷಿ ಪ್ರದೋಷ್‌‌ಗೆ ಸಿಗುತ್ತಾ ಮಧ್ಯಂತರ ಜಾಮೀನು?

ರೇಣುಕಾಸ್ವಾಮಿ ಪ್ರಕರಣ: ಮಾಫಿ ಸಾಕ್ಷಿ ಪ್ರದೋಷ್‌‌ಗೆ ಸಿಗುತ್ತಾ ಮಧ್ಯಂತರ ಜಾಮೀನು?

ರೇಣುಕಾಸ್ವಾಮಿ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೋಷ್‌ ಮೂರು ವಾರಗಳ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಅವರಿಗೆ ಜಾಮೀನು ಸಿಗುತ್ತಾ ಎಂದು ಇಂದು ನಿರ್ಧಾರವಾಗಲಿದೆ.

Written ByYashaswini V
Published: Oct 30, 2026, 10:29 AM IST|Updated: Oct 30, 2026, 10:31 AM IST
joinshare
ರೇಣುಕಾಸ್ವಾಮಿ ಪ್ರಕರಣ: ಮಾಫಿ ಸಾಕ್ಷಿ ಪ್ರದೋಷ್‌‌ಗೆ ಸಿಗುತ್ತಾ ಮಧ್ಯಂತರ ಜಾಮೀನು?

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ರೇಣುಕಾಸ್ವಾಮಿ ಪ್ರಕರಣ: ಮಾಫಿ ಸಾಕ್ಷಿ ಪ್ರದೋಷ್‌‌ಗೆ ಸಿಗುತ್ತಾ ಮಧ್ಯಂತರ ಜಾಮೀನು?

ರೇಣುಕಾಸ್ವಾಮಿ ಪ್ರಕರಣ: ಮಾಫಿ ಸಾಕ್ಷಿ ಪ್ರದೋಷ್‌‌ಗೆ ಸಿಗುತ್ತಾ ಮಧ್ಯಂತರ ಜಾಮೀನು?

2

Arecanut Price: ಶಿವಮೊಗ್ಗ, ಸಾಗರ, ಚನ್ನಗಿರಿ ಸೇರಿ ವಿವಿಧ ಮಾರುಕಟ್ಟೆಗಳಲ್ಲಿ ಎಷ್ಟಿದೆ ಬೆಲೆ? ಇಲ್ಲಿದೆ ಸಂಪೂರ್ಣ ಮಾಹಿತಿ!

3

ಪಿಎಂ ಕಿಸಾನ್ 24ನೇ ಕಂತು: ರೈತರ ಖಾತೆಗೆ ₹2,000 ಜಮೆ? ಮೊಬೈಲ್‌ನಲ್ಲೇ ಚೆಕ್‌ ಮಾಡಿ!

4

ಸ್ಟಿಂಗ್‌ ಕೇಸ್‌ ಕಿಡಿ ದೆಹಲಿಗೆ: ಡಿ.ಕೆ.ಶಿವಕುಮಾರ್‌, ಪ್ರಿಯಾಂಕ್ ಖರ್ಗೆ ವಿರುದ್ಧ ಹೈಕಮಾಂಡ್‌ಗೆ ಸಿದ್ದರಾಮಯ್ಯ ದೂರು?

5

Today's Horoscope for October 30: ಈ 3 ರಾಶಿಗಳಿಗೆ ಸಮಸ್ಯೆಗಳಿಂದ ಮುಕ್ತಿ, ಉದ್ಯೋಗ–ವ್ಯವಹಾರದಲ್ಲಿ ಯಶಸ್ಸಿನ ಯೋಗ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಚಿತ್ರದುರ್ಗದ ರೇಣುಕಾಸ್ವಾಮಿ ಕೊ*ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲೆಂಜಿಂಗ್‌ ಸ್ಟಾರ್‌ ನಟ ದರ್ಶನ್‌ ಜೈಲು ಪಾಲಾಗಿದ್ದರೆ, ಇತ್ತ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಹಾಗೂ ನಟ ಧನ್ವೀರ್‌ ನಡುವಿನ ಜಟಾಪಟಿ ತಾರಕಕ್ಕೇರಿದೆ. ಡಿ ಬಾಸ್‌ ಆಪ್ತ ವಲಯದಲ್ಲೇ ಗುರುತಿಸಿಕೊಂಡಿದ್ದ ನಟ ಧನ್ವೀರ್‌ ಗೌಡ ಇದೀಗ ಅವರ ಕುಟುಂಬದ ಮೇಲೆಯೇ ಆರೋಪಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಬ್ರೇಕ್‌ ಹಾಕಲು ಜೈಲಿನಿಂದಲೇ ʼತಡೆಯಾಜ್ಞೆʼ ಅಸ್ತ್ರ ಪ್ರಯೋಗಿಸಿರುವ ದರ್ಶನ್‌, ತಮ್ಮ ಧರ್ಮ ಪತ್ನಿ, ಪುತ್ರ ಹಾಗೂ ಕುಟುಂಬದವರ ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ ನಟ ಧನ್ವೀರ್‌ ಗೌಡ ಯಾವುದೇ ಹೇಳಿಕೆಗಳನ್ನು ನೀಡಬಾರದು ಎಂದು ನಿರ್ಬಂಧ ವಿಧಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇನ್ನೊಂದೆಡೆ ರೇಣುಕಾಸ್ವಾಮಿ ಪ್ರಕರಣದಲ್ಲಿ ಮಾಫಿ ಸಾಕ್ಷಿ ಆಗಿರುವ ಆರೋಪಿ ಪ್ರದೋಷ್‌‌ಗೆ ಇಂದಾದರೂ ಮಧ್ಯಂತರ ಜಾಮೀನು ಸಿಗಲಿದ್ಯಾ? ಎಂಬ ಕುತೂಹಲವೂ ಹೆಚ್ಚಾಗಿದೆ.

ಹೌದು, ರೇಣುಕಾಸ್ವಾಮಿ ಕೇಸ್‌ನಲ್ಲಿ ಜೈಲು ಪಾಲಾಗಿರುವ ದರ್ಶನ್‌ ಆಪ್ತ ಮಾಫಿ ಸಾಕ್ಷಿ ಪ್ರದೋಷ್ ಅವರು ತಮ್ಮ ತಂದೆ ತಿಥಿ ಕಾರ್ಯದಲ್ಲಿ ಭಾಗಿಯಾಗಲು ಅನುಕೂಲವಾಗುವಂತೆ ತಮಗೆ 3 ವಾರಗಳ ಮಧ್ಯಂತರ ನೀಡುವಂತೆ ಕೋರಿ 59ನೇ ಸಿಸಿಹೆಚ್ ಕೋರ್ಟ್​ನಲ್ಲಿ ಮಧ್ಯಂತರ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಈ ಕುರಿತು ಇಂದು ಆದೇಶ ಹೊರಬೀಳುವ ನಿರೀಕ್ಷೆ ಇದೆ.

ಮಧ್ಯಂತರ ಜಾಮೀನು ನೀಡುವಂತೆ ಪ್ರದೋಷ್‌ ಪರ ವಕೀಲರ ವಾದ:
ಈ ಕುರಿತಂತೆ ಮಾಫಿ ಸಾಕ್ಷಿ ಪ್ರದೋಷ್‌ ತಮ್ಮ ತಂದೆಯ ತಿಥಿ ಕಾರ್ಯಗಳನ್ನು ತಾವೇ ಮಾಡಬೇಕಿದ್ದು, ಈ ಕಾರ್ಯದಲ್ಲಿ ಭಾಗಿಯಾಗಲು ಅನುಕೂಲವಾಗುವಂತೆ ಅವರಿಗೆ 3 ವಾರಗಳ ಜಾಮೀನು ನೀಡುವಂತೆ ಪ್ರದೋಷ್ ಪರ ವಕೀಲರು ವಾದ ಮಂಡಿಸಿದ್ದಾರೆ.

ದರ್ಶನ್ ಪರ ವಕೀಲರ ವಿರೋಧ:
ಇನ್ನೂ ಪ್ರದೋಷ್ ಜಾಮೀನು ಅರ್ಜಿಗೆ ದರ್ಶನ್ ಪರ ವಕೀಲರು ವಿರೋಧ ವ್ಯಕ್ತಪಡಿಸಿದ್ದು, ಪ್ರದೋಷ್ ಜಾಮೀನು ಅರ್ಜಿಗೆ ದರ್ಶನ್ ಪರ ವಕೀಲರ ವಿರೋಧ ಮಾಫಿ ಸಾಕ್ಷಿಯಾಗಿರುವ ವ್ಯಕ್ತಿಗೆ ಜಾಮೀನು ನೀಡಲು ಅವಕಾಶವಿಲ್ಲ. ಕ್ರಾಸ್ ಎಕ್ಸಾಮಿನೇಷನ್ ಮುಗಿಯುವವರೆಗೂ ಅವರು ಜೈಲಿನಲ್ಲಿಯೇ ಇರಬೇಕು. ಷರತ್ತು ವಿಧಿಸಿಯೇ ಕೋರ್ಟ್ ಆತನನ್ನು ಮಾಫಿ ಸಾಕ್ಷಿಯಾಗಿ ಒಪ್ಪಿಕೊಂಡಿದೆ. ಹೊರಗೆ ಬಿಟ್ಟರೆ ಕೋರ್ಟ್ ವಿಧಿಸಿರುವ ಷರತ್ತು ನಿಷ್ಪಲವಾಗುತ್ತವೆ. ಹಾಗಾಗಿ ಪ್ರದೋಷ್‌ಗೆ ಮಧ್ಯಂತರ ಜಾಮೀನು ಮಂಜೂರು ಮಾಡದಂತೆ ಪ್ರತಿ ವಾದ ಮಂಡಿಸಿದ್ದರು.

ದರ್ಶನ್ ಪರ ವಕೀಲರ ವಾದಕ್ಕೆ ಪ್ರದೋಷ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರದೋಷ್ ಜಾಮೀನು ಅರ್ಜಿ ವಿರೋಧಿಸುವ ಯಾವುದೇ ಹಕ್ಕು ದರ್ಶನ್‌ಗೆ ಇಲ್ಲ.  ಹಿಂದೂ ಧರ್ಮದ ಪ್ರಕಾರ, ಪುತ್ರನೇ ತಂದೆಯ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಬೇಕು ಎಂದು ಉಲ್ಲೇಖಿಸಿದ್ದರು.

ಈ ವಿಚಾರದಲ್ಲಿ ವಾದಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್, ಇಲ್ಲಿ ಪ್ರದೋಷ್‌ ಅರ್ಜಿಯನ್ನು ಸಮರ್ಥಿಸುತ್ತಿಲ್ಲ ಅಥವಾ ರೋಧಿಸುವುದೂ ಇಲ್ಲ. ಕೇವಲ ಕಾನೂನಿನ ಅಂಶಗಳನ್ನು ಮಾತ್ರ ಉಲ್ಲೇಖಿಸಲು ಇಚ್ಚಿಸುತ್ತೇನೆ. ಪ್ರದೋಷ್ ತಂದೆ ಸಾವನ್ನಪ್ಪಿದ್ದಾಗ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಈಗ ಪಿತೃಕಾರ್ಯಕ್ಕಾಗಿ ಮಧ್ಯಂತರ ಜಾಮೀನು ಕೇಳುತ್ತಿದ್ದಾರೆ. ಪ್ರದೋಷ್ ಈಗ ಆರೋಪಿ ಅಲ್ಲ, ಆದರೆ ಜೈಲುವಾಸಿ ಆಗಿದ್ದಾರೆ. ಸಿಆರ್‌ಪಿಸಿ ಸೆಕ್ಷನ್ 306 ಷರತ್ತಿನ ಅನ್ವಯ ಪ್ರದೋಷ್ ಜೈಲಿನಲ್ಲಿ ಇದ್ದಾರೆ. ಆರೋಪಿಗಳ ಜೊತೆಗೆ ಶಾಮೀಲಾಗಬಾರದು ಎಂದು ಜೈಲಿನಲ್ಲಿ ಇಡುವ ಷರತ್ತು ವಿಧಿಸಲಾಗಿದೆ ಎಂದು ವಾದ ಮಂಡಿಸಿದ್ದರು.

ರೇಣುಕಾಸ್ವಾಮಿ ಕೇಸ್‌ನ ಮಾಫಿ ಸಾಕ್ಷಿ ಪ್ರದೋಷ್‌ ಮಧ್ಯಂತರ ಜಾಮೀನಿಗೆ ಸಂಬಂಧಿಸಿದಂತೆ ವಾದ ಪ್ರತಿವಾದ ಆಲಿಸಿದ್ದ ನ್ಯಾಯಲಯ ಅ.30ಕ್ಕೆ ಜಾಮೀನು ಆದೇಶ ಕಾಯ್ದರಿಸಿತ್ತು. ಇಂದು ಪ್ರದೋಷ್‌ಗೆ ತಂದೆ ತಿಥಿ ಕಾರ್ಯದಲ್ಲಿ ಭಾಗಿಯಾಗಲು ಮಧ್ಯಂತರ ಜಾಮೀನು ಸಿಗುತ್ತಾ  ಎಂಬುದನ್ನು ಕಾದು ನೋಡಬೇಕಿದೆ. 
 

Add Zee News as a Preferred Source
TAGS:
Kannada News
Crime
Sandalwood