• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಜ್ಯೋತಿಷ್ಯ
  • /Today's Horoscope for October 30: ಈ 3 ರಾಶಿಗಳಿಗೆ ಸಮಸ್ಯೆಗಳಿಂದ ಮುಕ್ತಿ, ಉದ್ಯೋಗ–ವ್ಯವಹಾರದಲ್ಲಿ ಯಶಸ್ಸಿನ ಯೋಗ!

Today's Horoscope for October 30: ಈ 3 ರಾಶಿಗಳಿಗೆ ಸಮಸ್ಯೆಗಳಿಂದ ಮುಕ್ತಿ, ಉದ್ಯೋಗ–ವ್ಯವಹಾರದಲ್ಲಿ ಯಶಸ್ಸಿನ ಯೋಗ!

ಇಂದು ಶುಕ್ರವಾರ, ಮೇಷದಿಂದ ಮೀನದವರೆಗಿನ 12 ರಾಶಿಗಳಿಗೂ ವಿಭಿನ್ನ ಫಲಗಳಿರಲಿವೆ. ಕೆಲವು ರಾಶಿಯವರಿಗೆ ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ದೊರೆಯುವ ಸಾಧ್ಯತೆಯಿದ್ದರೆ, ಇನ್ನು ಕೆಲವರಿಗೆ ಆರ್ಥಿಕ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆಯಿದೆ. ಹಾಗಾದರೆ ಇಂದು ನಿಮ್ಮ ರಾಶಿಗೆ ಯಾವ ಫಲವಿದೆ? ಉದ್ಯೋಗ, ವ್ಯಾಪಾರ, ಹಣಕಾಸು ಮತ್ತು ಕುಟುಂಬ ಜೀವನದಲ್ಲಿ ಯಾವ ಬದಲಾವಣೆಗಳಿರಬಹುದು ಎಂಬುದನ್ನ ಇಂದಿನ ರಾಶಿಭವಿಷ್ಯದಲ್ಲಿ ತಿಳಿಯಿರಿ.

Written ByPuttaraj K Alur
Published: Oct 30, 2026, 07:35 AM IST|Updated: Oct 30, 2026, 07:47 AM IST
joinshare
Today's Horoscope for October 30: ಈ 3 ರಾಶಿಗಳಿಗೆ ಸಮಸ್ಯೆಗಳಿಂದ ಮುಕ್ತಿ, ಉದ್ಯೋಗ–ವ್ಯವಹಾರದಲ್ಲಿ ಯಶಸ್ಸಿನ ಯೋಗ!
Image Credit: Horoscope Today October 30

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಸ್ಟಿಂಗ್‌ ಕೇಸ್‌ ಕಿಡಿ ದೆಹಲಿಗೆ: ಡಿ.ಕೆ.ಶಿವಕುಮಾರ್‌, ಪ್ರಿಯಾಂಕ್ ಖರ್ಗೆ ವಿರುದ್ಧ ಹೈಕಮಾಂಡ್‌ಗೆ ಸಿದ್ದರಾಮಯ್ಯ ದೂರು?

ಸ್ಟಿಂಗ್‌ ಕೇಸ್‌ ಕಿಡಿ ದೆಹಲಿಗೆ: ಡಿ.ಕೆ.ಶಿವಕುಮಾರ್‌, ಪ್ರಿಯಾಂಕ್ ಖರ್ಗೆ ವಿರುದ್ಧ ಹೈಕಮಾಂಡ್‌ಗೆ ಸಿದ್ದರಾಮಯ್ಯ ದೂರು?

2

Today's Horoscope for October 30: ಈ 3 ರಾಶಿಗಳಿಗೆ ಸಮಸ್ಯೆಗಳಿಂದ ಮುಕ್ತಿ, ಉದ್ಯೋಗ–ವ್ಯವಹಾರದಲ್ಲಿ ಯಶಸ್ಸಿನ ಯೋಗ!

3

ಮಾಜಿ ಶಾಸಕ ಸುರೇಶ್ ಬಾಬುಗೆ ಬಂಧನ ಭೀತಿ: ಬಳ್ಳಾರಿಗೆ ಬಂದ ಬಿಹಾರ ಪೊಲೀಸರು, ಜಾಮೀನು ರಹಿತ ವಾರಂಟ್ ಜಾರಿ!

4

SSLC ವಿದ್ಯಾರ್ಥಿಗಳಿಗೆ ಬಿಗ್ ಅಪ್‌ಡೇಟ್: ಪರೀಕ್ಷೆ-1ರ ಅಂತಿಮ ವೇಳಾಪಟ್ಟಿ ಪ್ರಕಟ; ಮಾರ್ಚ್ 22ರಿಂದ ಪರೀಕ್ಷೆ ಆರಂಭ!

5

ಸಹಕಾರಿ ಸಂಸ್ಥೆಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲಿ: ಸಿಎಂ ಡಿ ಕೆ ಶಿವಕುಮಾರ್

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Horoscope Today October 30th: ಶುಕ್ರವಾರದ ದಿನದ ರಾಶಿಭವಿಷ್ಯದಲ್ಲಿ ಕೆಲವು ರಾಶಿಯವರಿಗೆ ಉದ್ಯೋಗ, ವ್ಯಾಪಾರ ಮತ್ತು ಆರ್ಥಿಕ ವಿಚಾರಗಳಲ್ಲಿ ಅನುಕೂಲಕರ ಫಲಿತಾಂಶಗಳ ನಿರೀಕ್ಷೆಯಿದೆ. ಕನ್ಯಾ ರಾಶಿಯ ಉದ್ಯಮಿಗಳಿಗೆ ಉತ್ತಮ ಲಾಭ ದೊರೆಯುವ ಸಾಧ್ಯತೆಯಿದ್ದರೆ, ಧನು ರಾಶಿಯ ಉದ್ಯೋಗಾಕಾಂಕ್ಷಿಗಳಿಗೆ ಪ್ರತಿಷ್ಠಿತ ಕಂಪನಿಯಿಂದ ಉದ್ಯೋಗದ ಆಫರ್ ಸಿಗಬಹುದು ಎಂದು ಜ್ಯೋತಿಷ್ಯ ಭವಿಷ್ಯ ತಿಳಿಸುತ್ತದೆ. ಮತ್ತೊಂದೆಡೆ ಕುಂಭ ರಾಶಿಯವರು ಕೋಪವನ್ನ ನಿಯಂತ್ರಿಸಿಕೊಳ್ಳಬೇಕು. 

ಕರ್ಕಾಟಕ ರಾಶಿಯವರು ಅನಗತ್ಯ ಚಟುವಟಿಕೆಗಳಲ್ಲಿ ಸಮಯ ವ್ಯರ್ಥ ಮಾಡದಂತೆ ಎಚ್ಚರಿಕೆ ವಹಿಸಬೇಕು. ಕಾರ್ತಿಕ ಮಾಸದ ಕೃಷ್ಣ ಪಕ್ಷದ ಪಂಚಮಿ ತಿಥಿ ಇಂದು ಸಂಜೆ 7.26ರವರೆಗೆ ಇರಲಿದೆ. ಶಿವಯೋಗವು ರಾತ್ರಿ 8.42ರವರೆಗೆ ಮುಂದುವರಿಯಲಿದೆ. ಮೃಗಶಿರ ನಕ್ಷತ್ರವು ಬೆಳಗ್ಗೆ 9.05ರವರೆಗೆ ಇದ್ದು, ನಂತರ ಆರ್ದ್ರಾ ನಕ್ಷತ್ರ ಆರಂಭವಾಗಲಿದೆ ಎಂದು ನೀಡಿರುವ ಪಂಚಾಂಗದ ಮಾಹಿತಿಯಲ್ಲಿ ತಿಳಿಸಲಾಗಿದೆ.

ಮೇಷ ರಾಶಿ: ಮೇಷ ರಾಶಿಯವರು ಯಾವುದೇ ಕೆಲಸವನ್ನ ಆತುರದಲ್ಲಿ ಮುಗಿಸಲು ಪ್ರಯತ್ನಿಸುವುದನ್ನ ತಪ್ಪಿಸಬೇಕು. ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನ ಕಡಿಮೆ ಮಾಡಿ ಓದಿನತ್ತ ಗಮನ ಹರಿಸುವುದು ಅಗತ್ಯ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಬೇಕು. ಉದ್ಯೋಗದಲ್ಲಿರುವವರಿಗೆ ಕೆಲಸಕ್ಕೆ ಸಂಬಂಧಿಸಿದ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆಯಿದೆ. ಮಕ್ಕಳಿಂದ ಸಂತಸದ ವಿಚಾರ ತಿಳಿದುಬರಬಹುದು. ವೃತ್ತಿಯಲ್ಲಿ ಪ್ರಗತಿ ಸಾಧಿಸಲು ಹೊಸ ಆಲೋಚನೆಗಳು ಮೂಡಬಹುದು.
ಅದೃಷ್ಟ ಬಣ್ಣ: ಕೆನ್ನೇರಳೆ | ಅದೃಷ್ಟ ಸಂಖ್ಯೆ: 6

ವೃಷಭ ರಾಶಿ: ವೃಷಭ ರಾಶಿಯವರಿಗೆ ಈಗಾಗಲೇ ಮಾಡಿರುವ ಹೂಡಿಕೆಗಳಿಂದ ಲಾಭ ದೊರೆಯುವ ಸಾಧ್ಯತೆಯಿದೆ. ಸ್ನೇಹಿತರಿಗೆ ನೆರವಾಗುವ ಅವಕಾಶ ಸಿಗಬಹುದು. ವ್ಯವಹಾರದಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳಬಹುದು. ಕಠಿಣ ಪರಿಶ್ರಮದಿಂದ ಸವಾಲಿನ ಕೆಲಸಗಳನ್ನ ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಸಂಗಾತಿಯೊಂದಿಗೆ ಸಮಯ ಕಳೆಯುವುದರಿಂದ ಸಂತೋಷ ಹೆಚ್ಚಾಗಬಹುದು. ವೃತ್ತಿಯಲ್ಲಿ ಬದಲಾವಣೆ ಬಯಸುವವರು ಯೋಜನೆಯೊಂದಿಗೆ ಮುಂದುವರಿಯಬಹುದು.
ಅದೃಷ್ಟ ಬಣ್ಣ: ಹಸಿರು | ಅದೃಷ್ಟ ಸಂಖ್ಯೆ: 2

ಮಿಥುನ ರಾಶಿ: ಮಿಥುನ ರಾಶಿಯವರಿಗೆ ಸಂತೋಷದ ದಿನವಾಗಿರಬಹುದು. ಭವಿಷ್ಯದ ಯೋಜನೆಗಳಿಗೆ ಹೆಚ್ಚಿನ ಗಮನ ನೀಡುವ ಅವಕಾಶ ಸಿಗಲಿದೆ. ಹಿರಿಯರ ಬೆಂಬಲ ದೊರೆಯಬಹುದು. ಉದ್ಯೋಗದಲ್ಲಿ ಬೆಳವಣಿಗೆಗೆ ಹೊಸ ಅವಕಾಶಗಳು ಎದುರಾಗಬಹುದು. ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತದೆ. ಬರವಣಿಗೆ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗೆ ಶುಭಸುದ್ದಿ ಸಿಗುವ ನಿರೀಕ್ಷೆಯಿದೆ.
ಅದೃಷ್ಟ ಬಣ್ಣ: ನೇರಳೆ | ಅದೃಷ್ಟ ಸಂಖ್ಯೆ: 7

ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರುವ ಸಾಧ್ಯತೆಯಿದೆ. ಆದರೆ ಅಗತ್ಯಕ್ಕಾಗಿ ಉಳಿತಾಯದ ಹಣವನ್ನ ಬಳಸಬೇಕಾಗಬಹುದು. ಸಂಗಾತಿಯೊಂದಿಗಿನ ಸಂಬಂಧ ಸುಧಾರಿಸಬಹುದು. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಉತ್ತಮ ಅವಕಾಶಗಳು ದೊರೆಯಲಿವೆ. ಜ್ಞಾನ ಹೆಚ್ಚಿಸಿಕೊಳ್ಳಲು ಹೊಸ ವಿಷಯಗಳನ್ನ ಕಲಿಯಬಹುದು. ಅನಗತ್ಯ ಚಟುವಟಿಕೆಗಳಿಗೆ ಸಮಯ ನೀಡದೆ ಮುಖ್ಯ ಕೆಲಸಗಳತ್ತ ಗಮನಹರಿಸುವುದು ಉತ್ತಮ.
ಅದೃಷ್ಟ ಬಣ್ಣ: ಕಂದು | ಅದೃಷ್ಟ ಸಂಖ್ಯೆ: 6

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಅದೃಷ್ಟದ ಬೆಂಬಲ ದೊರೆಯಬಹುದು. ಕೈಗೆತ್ತಿಕೊಂಡ ಕೆಲಸಗಳನ್ನ ಪೂರ್ಣಗೊಳಿಸಲು ಅನುಕೂಲಕರ ವಾತಾವರಣ ಇರಲಿದೆ. ಸ್ನೇಹಿತರ ಭೇಟಿಯಿಂದ ಪ್ರಯೋಜನವಾಗಬಹುದು. ಕುಟುಂಬದಲ್ಲಿ ಸೌಹಾರ್ದತೆ ಹೆಚ್ಚಾಗಲಿದೆ. ಗುರಿ ಸಾಧಿಸಲು ಹೆಚ್ಚಿನ ಪ್ರಯತ್ನ ಅಗತ್ಯವಾಗಬಹುದು. ತಂದೆಯ ಬೆಂಬಲ ದೊರೆಯುವ ಸಾಧ್ಯತೆಯಿದ್ದು, ಸಂಗಾತಿಯೊಂದಿಗಿನ ಬಾಂಧವ್ಯ ಬಲಗೊಳ್ಳಬಹುದು.
ಅದೃಷ್ಟ ಬಣ್ಣ: ನೇರಳೆ | ಅದೃಷ್ಟ ಸಂಖ್ಯೆ: 8

ಕನ್ಯಾ ರಾಶಿ: ಕನ್ಯಾ ರಾಶಿಯ ಉದ್ಯಮಿಗಳಿಗೆ ನಿರೀಕ್ಷೆಗಿಂತ ಹೆಚ್ಚಿನ ಲಾಭ ದೊರೆಯುವ ಸಾಧ್ಯತೆಯಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಬಹುದು. ಕೆಲಸದ ನಿಮಿತ್ತ ಪ್ರಯಾಣಿಸುವ ಸಂದರ್ಭ ಎದುರಾಗಬಹುದು. ಇತರರ ಸಲಹೆಗಳನ್ನ ಪರಿಗಣಿಸುವುದರಿಂದ ಪ್ರಯೋಜನವಾಗಬಹುದು. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುವ ನಿರೀಕ್ಷೆಯಿದೆ. ಕುಟುಂಬದೊಂದಿಗೆ ಸಂತೋಷದಿಂದ ಸಮಯ ಕಳೆಯಲು ಅವಕಾಶ ಸಿಗಬಹುದು.
ಅದೃಷ್ಟ ಬಣ್ಣ: ಹಳದಿ | ಅದೃಷ್ಟ ಸಂಖ್ಯೆ: 1

ತುಲಾ ರಾಶಿ: ತುಲಾ ರಾಶಿಯವರಿಗೆ ಪ್ರಗತಿಗೆ ಹೊಸ ಮಾರ್ಗಗಳು ತೆರೆದುಕೊಳ್ಳಬಹುದು. ಸಾಮಾಜಿಕ ಸಂಪರ್ಕಗಳು ಹೆಚ್ಚಾಗುವ ಸಾಧ್ಯತೆಯಿದೆ. ಸ್ನೇಹಿತರೊಂದಿಗೆ ಹೊಸ ವ್ಯವಹಾರ ಆರಂಭಿಸುವ ಕುರಿತು ಚಿಂತನೆ ನಡೆಸಬಹುದು. ಮಾರ್ಕೆಟಿಂಗ್ ಕ್ಷೇತ್ರದಲ್ಲಿರುವವರಿಗೆ ಉತ್ತಮ ಗ್ರಾಹಕರು ದೊರೆಯಬಹುದು. ಆದಾಯ ಮತ್ತು ಸಂಪತ್ತಿನ ಬೆಳವಣಿಗೆಗೆ ಅವಕಾಶಗಳು ಸಿಗಬಹುದು. ಭವಿಷ್ಯಕ್ಕೆ ಅನುಕೂಲವಾಗುವ ಬದಲಾವಣೆಗಳನ್ನ ಕೈಗೊಳ್ಳುವ ಸಾಧ್ಯತೆಯಿದೆ.
ಅದೃಷ್ಟ ಬಣ್ಣ: ನೀಲಿ | ಅದೃಷ್ಟ ಸಂಖ್ಯೆ: 3

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ವೃತ್ತಿ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಶುಭಸುದ್ದಿ ಸಿಗಬಹುದು. ಸಂಗಾತಿಯೊಂದಿಗೆ ಪ್ರವಾಸ ಕೈಗೊಳ್ಳುವ ಯೋಜನೆ ರೂಪುಗೊಳ್ಳಬಹುದು. ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡವರಿಗೆ ಇತರರಿಗೆ ನೆರವಾಗುವ ಅವಕಾಶ ಸಿಗಲಿದೆ. ಕುಟುಂಬದಲ್ಲಿ ಮಕ್ಕಳ ಸಂತೋಷದಿಂದ ಸಕಾರಾತ್ಮಕ ವಾತಾವರಣ ಇರಬಹುದು.
ಅದೃಷ್ಟ ಬಣ್ಣ: ಕಿತ್ತಳೆ | ಅದೃಷ್ಟ ಸಂಖ್ಯೆ: 5

ಧನು ರಾಶಿ: ಧನು ರಾಶಿಯ ಉದ್ಯೋಗಾಕಾಂಕ್ಷಿಗಳಿಗೆ ಪ್ರತಿಷ್ಠಿತ ಕಂಪನಿಯಿಂದ ಉದ್ಯೋಗದ ಆಫರ್ ಸಿಗುವ ಸಾಧ್ಯತೆಯಿದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಬಹುದು. ಬಾಕಿ ಉಳಿದ ಮನೆಕೆಲಸಗಳು ಪೂರ್ಣಗೊಳ್ಳಬಹುದು. ಕುಟುಂಬದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಸಾಧ್ಯತೆಯಿದೆ. ಆನ್‌ಲೈನ್ ವ್ಯವಹಾರ ನಡೆಸುವ ಮಹಿಳೆಯರಿಗೆ ಆದಾಯ ಹೆಚ್ಚಿಸಿಕೊಳ್ಳುವ ಅವಕಾಶಗಳು ದೊರೆಯಬಹುದು.
ಅದೃಷ್ಟ ಬಣ್ಣ: ಕೆಂಪು | ಅದೃಷ್ಟ ಸಂಖ್ಯೆ: 2

ಮಕರ ರಾಶಿ: ಮಕರ ರಾಶಿಯವರಿಗೆ ಆನ್‌ಲೈನ್ ವ್ಯವಹಾರದಲ್ಲಿ ದೊಡ್ಡ ಆರ್ಡರ್ ದೊರೆಯುವ ಸಾಧ್ಯತೆಯಿದೆ. ಕೆಲವು ಕೆಲಸಗಳು ಪೂರ್ಣಗೊಳ್ಳಲು ಹೆಚ್ಚಿನ ಸಮಯ ಬೇಕಾಗಬಹುದು. ಕುಟುಂಬದ ಸಹಕಾರದಿಂದ ಜವಾಬ್ದಾರಿಗಳನ್ನ ನಿಭಾಯಿಸಲು ಸಾಧ್ಯವಾಗುತ್ತದೆ. ಆದಾಯದ ಹೊಸ ಮೂಲಗಳು ಕಾಣಿಸಿಕೊಳ್ಳಬಹುದು. ಕುಟುಂಬದ ಕೆಲಸಕ್ಕಾಗಿ ಪ್ರಯಾಣಿಸುವ ಸಂದರ್ಭ ಎದುರಾಗಬಹುದು.
ಅದೃಷ್ಟ ಬಣ್ಣ: ಗುಲಾಬಿ | ಅದೃಷ್ಟ ಸಂಖ್ಯೆ: 6

ಕುಂಭ ರಾಶಿ: ಕುಂಭ ರಾಶಿಯವರು ಇಂದು ತಮ್ಮ ಕೋಪವನ್ನ ನಿಯಂತ್ರಿಸಿಕೊಳ್ಳಬೇಕು. ಹಳೆಯ ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸುವುದರಿಂದ ಸಂತೋಷ ಸಿಗಬಹುದು. ವಿದ್ಯಾರ್ಥಿಗಳಿಗೆ ಸಹಪಾಠಿಗಳ ನೆರವು ದೊರೆಯಲಿದೆ. ಖಾಸಗಿ ಉದ್ಯೋಗದಲ್ಲಿರುವವರಿಗೆ ದಿನವು ಅನುಕೂಲಕರವಾಗಿರಬಹುದು. ವ್ಯವಹಾರದಲ್ಲಿ ಸ್ಥಿರತೆ ಕಂಡುಬರುವ ನಿರೀಕ್ಷೆಯಿದೆ.
ಅದೃಷ್ಟ ಬಣ್ಣ: ಬೆಳ್ಳಿ | ಅದೃಷ್ಟ ಸಂಖ್ಯೆ: 9

ಮೀನ ರಾಶಿ: ಮೀನ ರಾಶಿಯವರಿಗೆ ಹೊಸ ಉದ್ಯೋಗಾವಕಾಶಗಳು ದೊರೆಯುವ ಸಾಧ್ಯತೆಯಿದೆ. ವಿದ್ಯಾರ್ಥಿಗಳಿಗೆ ಶಿಕ್ಷಕರ ಬೆಂಬಲ ಸಿಗಬಹುದು. ವಕೀಲರಿಗೆ ಹೊಸ ಪ್ರಕರಣಗಳು ಲಭಿಸಬಹುದು. ರಸಾಯನಿಕ ಔಷಧಗಳ ಅಂಗಡಿ ನಡೆಸುವವರಿಗೆ ಉತ್ತಮ ಲಾಭದ ನಿರೀಕ್ಷೆಯಿದೆ. ಒಡಹುಟ್ಟಿದವರೊಂದಿಗಿನ ಸಂಬಂಧ ಬಲಗೊಳ್ಳಬಹುದು. ಮಾತನಾಡುವಾಗ ಸಂಯಮ ವಹಿಸಿ, ಅನಗತ್ಯ ವಿವಾದಗಳಿಂದ ದೂರವಿರುವುದು ಉತ್ತಮ.
ಅದೃಷ್ಟ ಬಣ್ಣ: ಮರೂನ್ | ಅದೃಷ್ಟ ಸಂಖ್ಯೆ: 4

(ಸೂಚನೆ: ಈ ರಾಶಿಭವಿಷ್ಯವು ಜ್ಯೋತಿಷ್ಯ ನಂಬಿಕೆಗಳನ್ನ ಆಧರಿಸಿದೆ. ಇಲ್ಲಿ ನೀಡಿರುವ ಫಲಿತಾಂಶಗಳು ಖಚಿತವಾಗಿ ಸಂಭವಿಸುತ್ತವೆ ಎಂಬುದಕ್ಕೆ ವೈಜ್ಞಾನಿಕ ದೃಢೀಕರಣವಿಲ್ಲ. Zee News Kannada ಇದನ್ನ ದೃಢಪಡಿಸುವುದಿಲ್ಲ.)

Add Zee News as a Preferred Source
TAGS:
Astro Tips
Kannada News