• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಹುಬ್ಬಳ್ಳಿ ಧಾರವಾಡ
  • /ಮಾಜಿ ಶಾಸಕ ಸುರೇಶ್ ಬಾಬುಗೆ ಬಂಧನ ಭೀತಿ: ಬಳ್ಳಾರಿಗೆ ಬಂದ ಬಿಹಾರ ಪೊಲೀಸರು, ಜಾಮೀನು ರಹಿತ ವಾರಂಟ್ ಜಾರಿ!

ಮಾಜಿ ಶಾಸಕ ಸುರೇಶ್ ಬಾಬುಗೆ ಬಂಧನ ಭೀತಿ: ಬಳ್ಳಾರಿಗೆ ಬಂದ ಬಿಹಾರ ಪೊಲೀಸರು, ಜಾಮೀನು ರಹಿತ ವಾರಂಟ್ ಜಾರಿ!

ಮಾಜಿ ಸಚಿವ ಬಿ.ಶ್ರೀರಾಮುಲು ಅವರ ಸೋದರಳಿಯ, ಕಂಪ್ಲಿ ಮಾಜಿ ಶಾಸಕ ಸುರೇಶ್ ಬಾಬು ವಿರುದ್ಧ ಬಿಹಾರದ ಈಸ್ಟ್ ಚಂಪಾರಣ್ ನ್ಯಾಯಾಲಯ ನಾನ್‌ಬೇಲೇಬಲ್ ವಾರಂಟ್ ಜಾರಿ ಮಾಡಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸುರೇಶ್ ಬಾಬುರನ್ನ ಬಂಧಿಸಲು ಬಿಹಾರ ಪೊಲೀಸರ ತಂಡ ಬಳ್ಳಾರಿಗೆ ಆಗಮಿಸಿದ್ದು, ಸ್ಥಳೀಯ ಪೊಲೀಸರ ಸಹಕಾರ ಕೋರಿದೆ ಎಂದು ವರದಿಯಾಗಿದೆ.

Written ByPuttaraj K Alur
Published: Oct 30, 2026, 06:49 AM IST|Updated: Oct 30, 2026, 06:59 AM IST
joinshare
ಮಾಜಿ ಶಾಸಕ ಸುರೇಶ್ ಬಾಬುಗೆ ಬಂಧನ ಭೀತಿ: ಬಳ್ಳಾರಿಗೆ ಬಂದ ಬಿಹಾರ ಪೊಲೀಸರು, ಜಾಮೀನು ರಹಿತ ವಾರಂಟ್ ಜಾರಿ!
Image Credit: Former MLA Suresh Babu

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಸ್ಟಿಂಗ್‌ ಕೇಸ್‌ ಕಿಡಿ ದೆಹಲಿಗೆ: ಡಿ.ಕೆ.ಶಿವಕುಮಾರ್‌, ಪ್ರಿಯಾಂಕ್ ಖರ್ಗೆ ವಿರುದ್ಧ ಹೈಕಮಾಂಡ್‌ಗೆ ಸಿದ್ದರಾಮಯ್ಯ ದೂರು?

ಸ್ಟಿಂಗ್‌ ಕೇಸ್‌ ಕಿಡಿ ದೆಹಲಿಗೆ: ಡಿ.ಕೆ.ಶಿವಕುಮಾರ್‌, ಪ್ರಿಯಾಂಕ್ ಖರ್ಗೆ ವಿರುದ್ಧ ಹೈಕಮಾಂಡ್‌ಗೆ ಸಿದ್ದರಾಮಯ್ಯ ದೂರು?

2

Today's Horoscope for October 30: ಈ 3 ರಾಶಿಗಳಿಗೆ ಸಮಸ್ಯೆಗಳಿಂದ ಮುಕ್ತಿ, ಉದ್ಯೋಗ–ವ್ಯವಹಾರದಲ್ಲಿ ಯಶಸ್ಸಿನ ಯೋಗ!

3

ಮಾಜಿ ಶಾಸಕ ಸುರೇಶ್ ಬಾಬುಗೆ ಬಂಧನ ಭೀತಿ: ಬಳ್ಳಾರಿಗೆ ಬಂದ ಬಿಹಾರ ಪೊಲೀಸರು, ಜಾಮೀನು ರಹಿತ ವಾರಂಟ್ ಜಾರಿ!

4

SSLC ವಿದ್ಯಾರ್ಥಿಗಳಿಗೆ ಬಿಗ್ ಅಪ್‌ಡೇಟ್: ಪರೀಕ್ಷೆ-1ರ ಅಂತಿಮ ವೇಳಾಪಟ್ಟಿ ಪ್ರಕಟ; ಮಾರ್ಚ್ 22ರಿಂದ ಪರೀಕ್ಷೆ ಆರಂಭ!

5

ಸಹಕಾರಿ ಸಂಸ್ಥೆಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲಿ: ಸಿಎಂ ಡಿ ಕೆ ಶಿವಕುಮಾರ್

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Former Kampli MLA Suresh Babu: ಕಂಪ್ಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಬಾಬುಗೆ ಕಾನೂನು ಸಂಕಷ್ಟ ಎದುರಾಗಿದೆ. ಬಿಹಾರದ ಈಸ್ಟ್ ಚಂಪಾರಣ್ ನ್ಯಾಯಾಲಯದಿಂದ ಜಾಮೀನು ರಹಿತ ಬಂಧನ ವಾರಂಟ್ ಜಾರಿಯಾಗಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಶಾಸಕರನ್ನ ಬಂಧಿಸುವ ಉದ್ದೇಶದಿಂದ ಬಿಹಾರ ಪೊಲೀಸರ ತಂಡ ಬಳ್ಳಾರಿಗೆ ಆಗಮಿಸಿದೆ ಎನ್ನಲಾಗಿದೆ. ಈ ಬೆಳವಣಿಗೆಯಿಂದ ಸುರೇಶ್ ಬಾಬುರಿಗೆ ಬಂಧನದ ಆತಂಕ ಎದುರಾಗಿದೆ.

ಬಳ್ಳಾರಿಗೆ ಬಂದ ಬಿಹಾರ ಪೊಲೀಸರ ತಂಡ

ಬಿಹಾರದ ಈಸ್ಟ್ ಚಂಪಾರಣ್ ನ್ಯಾಯಾಲಯವು ಸುರೇಶ್ ಬಾಬು ವಿರುದ್ಧ ನಾನ್ ಬೇಲೇಬಲ್ ವಾರಂಟ್ ಹೊರಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಬಿಹಾರ ಪೊಲೀಸರು ಬಳ್ಳಾರಿಗೆ ಆಗಮಿಸಿದ್ದು, ಮುಂದಿನ ಕ್ರಮ ಕೈಗೊಳ್ಳಲು ಸ್ಥಳೀಯ ಪೊಲೀಸ್ ಇಲಾಖೆಯ ನೆರವು ಕೋರಿದ್ದಾರೆ ಎಂದು ವರದಿಯಾಗಿದೆ. ಮಾಜಿ ಶಾಸಕ ಸುರೇಶ್ ಬಾಬುರನ್ನ ಬಂಧಿಸುವ ಸಂಬಂಧ ಬಿಹಾರ ಪೊಲೀಸರ ತಂಡ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನ ಸಂಪರ್ಕಿಸಿದೆ ಎನ್ನಲಾಗಿದೆ. ಈ ಕುರಿತು ಸ್ಥಳೀಯ ಪೊಲೀಸರ ಸಹಕಾರ ಪಡೆಯಲು ಮುಂದಾಗಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.

ಬಳ್ಳಾರಿ ಎಸ್ಪಿ ಜೊತೆ ಬಿಹಾರ ಪೊಲೀಸರ ಚರ್ಚೆ

ಸುರೇಶ್ ಬಾಬು ಬಂಧನಕ್ಕೆ ಸಂಬಂಧಿಸಿದಂತೆ ಬಿಹಾರ ಪೊಲೀಸರ ತಂಡ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ. ಪೆನ್ನೇಕರ್ ಅವರ ಸಹಕಾರ ಕೋರಿದೆ ಎಂದು ವರದಿಯಾಗಿದೆ. ಈ ಬೆಳವಣಿಗೆಯ ಕುರಿತು ಎಸ್ಪಿ ಸುಮನ್ ಡಿ.ಪೆನ್ನೇಕರ್ ಅವರು ತಮ್ಮ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಬಿಹಾರ ಪೊಲೀಸರ ಮನವಿ ಹಾಗೂ ಮುಂದಿನ ಕ್ರಮಗಳ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಯಾವ ಪ್ರಕರಣಕ್ಕೆ ಬಂಧನ ವಾರಂಟ್?

ಮಾಜಿ ಶಾಸಕ ಸುರೇಶ್ ಬಾಬು ವಿರುದ್ಧ ಬಿಹಾರದ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದೆ ಎಂದು ವರದಿಯಾಗಿದ್ದರೂ, ಅದು ಯಾವ ಪ್ರಕರಣಕ್ಕೆ ಸಂಬಂಧಿಸಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನ್ಯಾಯಾಲಯದಿಂದ ವಾರಂಟ್ ಜಾರಿಯಾಗಲು ಕಾರಣವೇನು? ಯಾವ ಪ್ರಕರಣದ ಹಿನ್ನೆಲೆಯಲ್ಲಿ ಬಿಹಾರ ಪೊಲೀಸರು ಬಳ್ಳಾರಿಗೆ ಆಗಮಿಸಿದ್ದಾರೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಬಿಹಾರ ಪೊಲೀಸರ ಆಗಮನ ಹಾಗೂ ಬಂಧನ ವಾರಂಟ್ ಕುರಿತ ವರದಿಗಳಿಂದ ಸುರೇಶ್ ಬಾಬುರಿಗೆ ಬಂಧನ ಭೀತಿ ಎದುರಾಗಿದೆ.

2013ರಲ್ಲಿ ಸಿಬಿಐನಿಂದ ಬಂಧನವಾಗಿತ್ತು

ಮಾಜಿ ಶಾಸಕ ಸುರೇಶ್ ಬಾಬು ಅವರು ಈ ಹಿಂದೆಯೂ ಕಬ್ಬಿಣದ ಅದಿರು ಅಕ್ರಮ ಸಾಗಣೆ ಆರೋಪಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದರು. 2013ರ ಸೆಪ್ಟೆಂಬರ್ 19ರಂದು ಕೇಂದ್ರ ತನಿಖಾ ದಳದ ಅಧಿಕಾರಿಗಳು ಸುರೇಶ್ ಬಾಬುರನ್ನ ಬಂಧಿಸಿದ್ದರು. ಕರ್ನಾಟಕದ ಬೇಲೇಕೇರಿ ಬಂದರಿನ ಮೂಲಕ ಕಬ್ಬಿಣದ ಅದಿರನ್ನ ಅಕ್ರಮವಾಗಿ ಸಾಗಣೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ಈ ಕ್ರಮ ಕೈಗೊಂಡಿತ್ತು. ಕಬ್ಬಿಣದ ಅದಿರು ಸಾಗಣೆ ಮತ್ತು ರಫ್ತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸುರೇಶ್ ಬಾಬುರ ಹೆಸರು ಕೇಳಿಬಂದಿತ್ತು. ಈ ಪ್ರಕರಣದ ತನಿಖೆಯ ಭಾಗವಾಗಿ ಸಿಬಿಐ ಅಧಿಕಾರಿಗಳು ಅವರನ್ನ ಬಂಧಿಸಿದ್ದರು.

2009ರಿಂದ 2011ರವರೆಗಿನ ಅದಿರು ಸಾಗಣೆ ಆರೋಪ

2009ರಿಂದ 2011ರ ಅವಧಿಯಲ್ಲಿ ವಿದೇಶಿ ಕಂಪನಿಗಳಿಗೆ ಕಬ್ಬಿಣದ ಅದಿರನ್ನ ಅಕ್ರಮವಾಗಿ ಸಾಗಣೆ ಮಾಡಿದ ಆರೋಪ ಸುರೇಶ್ ಬಾಬು ವಿರುದ್ಧ ಕೇಳಿಬಂದಿತ್ತು. ಗಾಲಿ ಜನಾರ್ದನ ರೆಡ್ಡಿ ಅವರ ಕಂಪನಿಗೆ ಸಂಬಂಧಿಸಿದ ಕಬ್ಬಿಣದ ಅದಿರನ್ನ ವಿದೇಶಿ ಕಂಪನಿಗಳಿಗೆ ಅಕ್ರಮವಾಗಿ ಸಾಗಣೆ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸುರೇಶ್ ಬಾಬುರ ವಿರುದ್ಧ ತನಿಖೆ ನಡೆದಿತ್ತು. ಬೇಲೇಕೇರಿ ಬಂದರಿನ ಮೂಲಕ ಅದಿರು ಸಾಗಣೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ 2013ರಲ್ಲಿ ಸಿಬಿಐ ಅಧಿಕಾರಿಗಳು ಸುರೇಶ್ ಬಾಬುರನ್ನ ಬಂಧಿಸಿದ್ದರು.

ಸಿದ್ದರಾಮಯ್ಯ ವಿರುದ್ಧದ ರಾಜಕೀಯ ಬೆಳವಣಿಗೆಯಲ್ಲೂ ಹೆಸರು

ಮಾಜಿ ಶಾಸಕ ಸುರೇಶ್ ಬಾಬು ಅವರು ಈ ಹಿಂದೆ ರಾಜ್ಯ ರಾಜಕೀಯದಲ್ಲಿಯೂ ಗಮನ ಸೆಳೆದಿದ್ದರು. ಸಿದ್ದರಾಮಯ್ಯರ ವಿರುದ್ಧ ವಿಧಾನಸಭೆಯಲ್ಲಿ ತೀವ್ರವಾಗಿ ಪ್ರತಿಕ್ರಿಯಿಸಿದ್ದ ಸುರೇಶ್ ಬಾಬು, ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸುವ ಬೆಳವಣಿಗೆಗೂ ಕಾರಣವಾಗಿದ್ದರು. ವಿಧಾನಸಭೆಯಲ್ಲಿ ಸಿದ್ದರಾಮಯ್ಯ ವಿರುದ್ಧ ತೋಳೇರಿಸಿ ಆಕ್ರೋಶ ವ್ಯಕ್ತಪಡಿಸಿದ್ದ ಘಟನೆಗೂ ಸುರೇಶ್ ಬಾಬು ಅವರ ಹೆಸರು ಸಂಬಂಧಿಸಿತ್ತು.

ಬಂಧನದ ಆತಂಕದಲ್ಲಿ ಮಾಜಿ ಶಾಸಕ

ಇದೀಗ ಬಿಹಾರದ ಈಸ್ಟ್ ಚಂಪಾರಣ್ ನ್ಯಾಯಾಲಯದಿಂದ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ ಎಂಬ ವರದಿ ಹೊರಬಿದ್ದಿದ್ದು, ಸುರೇಶ್ ಬಾಬು ಮತ್ತೊಮ್ಮೆ ಕಾನೂನು ಸಂಕಷ್ಟ ಎದುರಿಸುವಂತಾಗಿದೆ. ಬಿಹಾರ ಪೊಲೀಸರ ತಂಡ ಬಳ್ಳಾರಿಗೆ ಆಗಮಿಸಿ ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರ ಕೋರಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ವಾರಂಟ್ ಯಾವ ಪ್ರಕರಣಕ್ಕೆ ಸಂಬಂಧಿಸಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸದ್ಯ ಮಾಜಿ ಶಾಸಕ ಸುರೇಶ್ ಬಾಬು ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿರುವ ವರದಿ ಹಾಗೂ ಬಿಹಾರ ಪೊಲೀಸರ ಆಗಮನದ ಮಾಹಿತಿ ಪ್ರಮುಖ ಬೆಳವಣಿಗೆಯಾಗಿದೆ.

Add Zee News as a Preferred Source
TAGS:
Karnataka Politics
Kannada News