ನಿಮ್ಮ ಕಣ್ಣಿನ ಟೆಸ್ಟ್ ಮಾಡಿಸಬೇಕು ಎಂದು ದೇಹ ನೀಡುವ ಈ ಸೂಚನೆಗಳ ಬಗ್ಗೆ ನಿಮಗೆ ಗೊತ್ತಾ?
ನಮ್ಮ ಕಣ್ಣಿನ ಪವರ್ ಬದಲಾಗುವುದಕ್ಕೆ ಹಲವಾರು ಕಾರಣಗಳು ಇರಬಹುದು. ಇದರಲ್ಲಿ ವಯೋಸಹಜತೆ ಪ್ರಮುಖ ಕಾರಣವಾದರೆ, ಅತಿಯಾಗಿ ಸ್ಕ್ರೀನ್ ನೋಡುವುದು ಮತ್ತೊಂದು ಕಾರಣ.
1/8
ಕಣ್ಣಿನ ಟೆಸ್ಟ್
ಕಣ್ಣುಗಳು ನಮ್ಮ ದೇಹದ ಅತ್ಯಂತ ಸೂಕ್ಷ್ಮ ಮತ್ತು ಪ್ರಮುಖ ಅಂಗಗಳು. ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವುದು ಮತ್ತು ವೈದ್ಯರ ಸಲಹೆಯಂತೆ ಕನ್ನಡಕವನ್ನು ಆಗಾಗ ಬದಲಾಯಿಸುವುದು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತ್ಯಗತ್ಯ.
2/8
ಕಣ್ಣಿನ ತಪಾಸಣೆ
ನಿಮ್ಮ ಕನ್ನಡಕ ಬದಲಿಸಿ ಎಷ್ಟು ದಿನಗಳಾದವು? ಕೊನೆಯ ಬಾರಿ ನಿಮ್ಮ ಕಣ್ಣಿನ ತಪಾಸಣೆ ಮಾಡಿಸಿದ್ದು ಯಾವಾಗ? ವರ್ಷಗಳಿಂದ ಇನ್ನೂ ಹಳೆಯ ಕನ್ನಡಕವನ್ನೇ ಬಳಸುತ್ತಿದ್ದೀರಾ? ಕನ್ನಡ ಬದಲಾಯಿಸಬೇಕು... ಕಣ್ಣಿನ ತಪಾಸಣೆ ಮಾಡಿಸಿ ಎಂದು ನಮ್ಮ ದೇಹವೇ ನಮಗೆ ಸೂಚನೆ ನೀಡುತ್ತೆ ಅಂದ್ರೆ ನೀವು ನಂಬಲೇಬೇಕು. ಕಣ್ಣಿನ ತಪಾಸಣೆ ಅಗತ್ಯ ಎಂದು ಹೇಳುವ ಈ ಸೂಚನೆಗಳನ್ನು ದೇಹ ನೀಡುತ್ತಿದ್ದರೆ ನೀವು ತಪ್ಪದೇ ಕಣ್ಣಿನ ಟೆಸ್ಟ್ ಮಾಡಿಸಿ.
3/8
ಕ್ಲಿಯರ್ ಆಗಿ ಕಾಣದಿರುವುದು
ನೀವು ಕನ್ನಡಕ ಧರಿಸಿದ್ದರೂ ನಿಮಗೆ ಸರಿಯಾಗಿ ಕಾಣಿಸದಿರುವುದು ಅಥವಾ ದೃಶ್ಯಗಳು ಕ್ಲಿಯರ್ ಆಗಿ ಗೋಚರಿಸದೇ ಇದ್ದರೆ, ಇಲ್ಲವೇ ಏನನ್ನಾದರೂ ನೋಡುವಾಗ ಅದು ಕಣ್ಣಿನ ಮೇಲೆ ಒತ್ತಡ ಉಂಟು ಮಾಡುತ್ತಿದ್ದರೆ ತಡಮಾಡದೆ ಮೊದಲು ನಿಮ್ಮ ಕಣ್ಣಿನ ಟೆಸ್ಟ್ ಮಾಡಿಸಿ.
4/8
ಕಣ್ಣು ಮಸುಕಾಗುವುದು
ಓದುವಾಗ ಅಕ್ಷರಗಳು ಸ್ಪಷ್ಟವಾಗಿಲ್ಲದಿರುವುದು ಅಥವಾ ಕೊಂಚ ಮಸುಕು ಮಸುಕೆಂದೆನಿಸುವುದು.
5/8
ಡ್ರೈವಿಂಗ್ ವೇಳೆ ಅಸ್ಪಷ್ಟ ಗೋಚರ
ವಾಹನ ಚಾಲನೆ ಮಾಡುವಾಗ ದೂರದಲ್ಲಿರುವ ವಾಹನ, ರಸ್ತೆ ಫಲಕಗಳು ಸ್ಪಷ್ಟವಾಗಿ ಗೋಚರಿಸದೇ ಇರುವುದು.
6/8
ಬ್ಲರ್ ಆಗುವುದು
ಸ್ಕ್ರೀನ್ ನೋಡುವಾಗ ಆಗಾಗ್ಗೆ ಪರದೆ ಬ್ಲರ್ ಆಗುವುದು, ಇಲ್ಲವೇ ಮೊಬೈಲ್ ನೋಡುವಾಗ ಕಣ್ಣಿನಲ್ಲಿ ನೀರು ತುಂಬಿಕೊಳ್ಳುವುದು.
7/8
ತಲೆನೋವು
ಒಂದೊಮ್ಮೆ ನೀವು ಕಂಪ್ಯೂಟರ್ನಲ್ಲಿ ಕೆಲಸ ಮಾಡುವವರಾಗಿದ್ದರೆ ಆಗಾಗ್ಗೆ ತಲೆನೋವು ಕಾಡುವುದು, ಇಲ್ಲವೇ ಯಾವುದೇ ಕೆಲಸ ಮಾಡುವಾಗ ಏಕಾಗ್ರತೆಯ ಕೊರತೆ ಕಾಡುವುದು.
8/8
ಕಣ್ಣಿಗೆ ಅತಿಯಾದ ಒತ್ತಡ
ಸ್ವಲ್ಪ ಸಮಯ ಓದಿದರೂ, ಟಿವಿ ನೋಡಿದರೂ ಕಣ್ಣಿನ ಮೇಲೆ ಒತ್ತಡ ಹೆಚ್ಚು ಎಂದೆನಿಸುವುದು. ಇವೆಲ್ಲವೂ ಕೂಡ ನಿಮ್ಮ ಕಣ್ಣಿಗೆ ತಪಾಸಣೆ ಅಗತ್ಯ ಎಂಬುದನ್ನು ಸೂಚಿಸುವ ಲಕ್ಷಣಗಳಾಗಿವೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.