• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಸ್ಟಿಂಗ್ ವಿಡಿಯೋ ಮೂಲಕ ಮಾಜಿ ಸಿಎಂ ಸಿದ್ದು ಚಾರಿತ್ರ್ಯ ಹರಣಕ್ಕೆ ಯತ್ನ.. ಇಬ್ಬರು ಅರೆಸ್ಟ್..

ಸ್ಟಿಂಗ್ ವಿಡಿಯೋ ಮೂಲಕ ಮಾಜಿ ಸಿಎಂ ಸಿದ್ದು ಚಾರಿತ್ರ್ಯ ಹರಣಕ್ಕೆ ಯತ್ನ.. ಇಬ್ಬರು ಅರೆಸ್ಟ್..

ಸ್ಟಿಂಗ್ ವಿಡಿಯೋ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಮಸಿ ಬಳೆಯಲು ಯತ್ನಿಸಿರುವ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.

Written ByYashaswini V
Published: Oct 14, 2026, 04:09 PM IST|Updated: Oct 14, 2026, 04:11 PM IST
joinshare
ಸ್ಟಿಂಗ್ ವಿಡಿಯೋ ಮೂಲಕ ಮಾಜಿ ಸಿಎಂ ಸಿದ್ದು ಚಾರಿತ್ರ್ಯ ಹರಣಕ್ಕೆ ಯತ್ನ.. ಇಬ್ಬರು ಅರೆಸ್ಟ್..

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ಸಂಧಾನ ಸಭೆ ಯಶಸ್ವಿ: ಮುಷ್ಕರ ಕೈಬಿಟ್ಟ 108 ಆಂಬ್ಯುಲೆನ್ಸ್ ನೌಕರರು

ಸಂಧಾನ ಸಭೆ ಯಶಸ್ವಿ: ಮುಷ್ಕರ ಕೈಬಿಟ್ಟ 108 ಆಂಬ್ಯುಲೆನ್ಸ್ ನೌಕರರು

2

ರೈಲ್ವೆ ಉದ್ಯೋಗಿಗಳಿಗೆ ದೀಪಾವಳಿ ಬಂಪರ್‌ ಗಿಫ್ಟ್‌! 78 ದಿನಗಳ ಬೋನಸ್‌ಗೆ ಕೇಂದ್ರ ಸಚಿವ ಸಂಪುಟ ಅಸ್ತು!

3

ಮದ್ದೂರಿನಲ್ಲಿ ರೈತರ ರಸ್ತೆ ತಡೆ: ಕಾವೇರಿ ಆರತಿಗೆ ರೈತರ ವಿರೋಧ... ನಾಲೆಗಳಿಗೆ ನೀರು ಬಿಡಲು ಆಗ್ರಹ!

4

ಬಂಡೀಪುರದಲ್ಲಿ ಬವಾರಿಯ ಗ್ಯಾಂಗ್..? ಉರುಳಿಗೆ ಹುಲಿ ಬಲಿ- ಕಾಡಾನೆ ದಂತ ನಾಪತ್ತೆ

5

ರಾಜ್ಯದಲ್ಲಿ ಮೂರನೇ ಮುಖ್ಯಮಂತ್ರಿ ಬಂದರೂ ಅಚ್ಚರಿಯಿಲ್ಲ: ಬಿ.ವೈ.ವಿಜಯೇಂದ್ರ ಸ್ಫೋಟಕ ಹೇಳಿಕೆ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ಬಿರುಗಾಳಿ ಎದ್ದಿದೆ. ರಾಜಕೀಯ ನಾಯಕರ ನಡುವೆ ವಾಗ್ವಾದ ಜೋರಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯಗೆ ಕಳಂಕ ತರಲು ಯತ್ನಿಸಿದ್ದ ವಿಡಿಯೋ ಹಲ್-ಚಲ್ ಸೃಷ್ಟಿ ಮಾಡಿತ್ತು. ವಿಡಿಯೋಗೆ ಕೋರ್ಟ್ ತಡೆಯಾಜ್ಞೆ ನೀಡುತ್ತಿದ್ದಂತೆ ಪೊಲೀಸರ ತನಿಖೆಗೂ ವೇಗ ಸಿಕ್ಕಿದೆ. ವಿಡಿಯೋ ಅಪ್ಲೋಡ್ ಮಾಡಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು ವಿಚಾರಣೆ ತೀವ್ರಗೊಳಿಸಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಅಪರೇಷನ್ ಸುನಾಮಿ:
ಸ್ಟಿಂಗ್ ಅಪರೇಷನ್ ಸುನಾಮಿ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದೆ. ಕೈಪಾಳಯದಲ್ಲಿ ಸ್ಟಿಂಗ್ ವಿಡಿಯೋ ಸಂಚಲನ ಸೃಷ್ಟಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯರ 4 ದಶಕದ‌ ಕಳಂಕ ರಹಿತ ರಾಜಕರಣಕ್ಕೆ ಕಪ್ಪು ಮಸಿ ಬಳಿಯಲು ಕಿಡಿಗೇಡಿಗಳಿಂದ ಷಡ್ಯಂತ್ರ ನಡೆದಿದೆ. ಕೋರ್ಟ್ ಮೊರೆ ಹೋಗಿದ್ದ ಸಿದ್ದರಾಮಯ್ಯ ಅಕ್ಷೇಪಾರ್ಹ ವಿಡಿಯೋ ಪ್ರಸಾರ ಮಾಡದಂತೆ ತಡೆ ತಂದಿದ್ದಾರೆ. ವಿಪಕ್ಷಗಳಿಂದ ಸಿಬಿಐ ತನಿಖೆಗೆ ಆಗ್ರಹವಾಗ್ತಿದ್ದಂತೆ, ಸಿಸಿಬಿ ಪೊಲೀಸರು ಇಬ್ಬರು ಶಂಕಿತರನ್ನ ಲಾಕ್ ಮಾಡಿದ್ದಾರೆ.

ರಾಜಕೀಯ ಷಡ್ಯಂತ್ರ ರೂಪಿಸಿ, ತೇಜೋವಧೆ ಮಾಡುವ ದುರುದ್ದೇಶದಿಂದ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರಗೊಂಡಿದ್ದಾರೆ. ತಮ್ಮಿ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿರುವ ವಿಡಿಯೋ ವಿರುದ್ಧವಾಗಿ ಖುದ್ದು ಸಿದ್ದರಾಮಯ್ಯ ಅವರೇ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಗೆ ದೂರು ಸಲ್ಲಿಸಿದ್ದರು. ದೂರಿನಲ್ಲಿ ಸುಳ್ಳು ಮಾಹಿತಿ ಹರಡುತ್ತಿದ್ದ ನಿರ್ದಿಷ್ಟ ಸಾಮಾಜಿಕ ಜಾಲತಾಣ ಖಾತೆಗಳ ವಿವರಗಳನ್ನೂ ಒದಗಿಸಿದ್ದರು. ಈ ಬೆನ್ನಲ್ಲೆ ಪ್ರಕರಣದ ದಾಖಲಿಸಿಕೊಂಡ ಸಿಸಿಬಿ ಸೈಬರ್‌ ಕ್ರೈಂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.‌ ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಈ ಸುಳ್ಳು ಸುದ್ದಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆಧಾರದ ಮೇಲೆ ಅರೆಸ್ಟ್‌ ಮಾಡಲಾಗಿರುವ ಇಬ್ಬರೂ ಆರೋಪಿಗಳನ್ನು ಪ್ರತ್ಯೇಕ ಸ್ಥಳದಲ್ಲಿಟ್ಟು ವಿಡಿಯೋ ಹೇಗೆ ಸಿಗ್ತು ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.

ಸಿದ್ದರಾಮಯ್ಯ ಅವರ ಹೆಸರಿಗೆ ಚ್ಯುತಿ ತರುವಂತಿರುವ ವಿಡಿಯೋ ಬಗ್ಗೆ ಪ್ರಕರಣದ ದಾಖಲಾಗಿರುವ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ಪ್ರಕರಣ ಕುರಿತು ಎಫ್ಐಆರ್ ಆಗಿತ್ತು, ಸಮಗ್ರವಾಗಿ ನಾವು ತನಿಖೆ ನಡೆಸುತ್ತೇವೆ. ಅಲ್ಲದೆ ವಿಡಿಯೋದಲ್ಲಿರುವ ವಿಷಯಗಳೆಲ್ಲ ಸುಳ್ಳು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ವಿಡಿಯೊವನ್ನು ಯಾರು ಚಿತ್ರೀಕರಿಸಿದ್ದಾರೆ, ಎಲ್ಲಿಗೆ ಅಪ್‌ಲೋಡ್ ಮಾಡಲಾಗಿದೆ ಮತ್ತು ಇದರ ಹಿಂದೆ ಯಾರಿದ್ದಾರೆ ಅಂತ ತನಿಖೆ ನಡೆಸುತ್ತೇವೆ ಎಂದಿದ್ದಾರೆ.

ಸದ್ಯ ವಿಡಿಯೋ ಮೂಲ ಹುಡುಕಿ ಹೊರಟ ಪೊಲೀಸರು ಸೂತ್ರಧಾರಿಗಳ ಪತ್ತೆಗೆ ಮುಂದಾಗಿದೆ. ಇಬ್ಬರನ್ನ ವಿಚಾರಣೆ ಮಾಡ್ತಿದ್ದು, ಇದರ ಹಿಂದೆ ಯಾರಿದ್ದಾರೆ ಅನ್ನೋದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಒಟ್ನಲ್ಲಿ ಸಿದ್ದರಾಮಯ್ಯ ಅವರ ಶುದ್ಧ ರಾಜಕೀಯ ಜೀವನಕ್ಕ ಮಸಿ ಬಳೆಯುವ ಉದ್ದೇಶದಿಂದ ಈ ವಿಡಿಯೋ ಹರಿಬಿಡಲಾಗಿದ್ಯಾ? ಇದರ ಹಿಂದೆ ಇರುವವರು ಯಾರು? ಎಂಬಿತ್ಯಾದಿ ಪ್ರಶ್ನೆಗಳಿಗೆ ತನಿಖೆ ನಂತರವೇ ಉತ್ತರ ಸಿಗಬೇಕಿದೆ. 

Add Zee News as a Preferred Source
TAGS:
Siddaramaiah
Karnataka Politics
Kannada News