ಚಾಮರಾಜನಗರ ಜಿಲ್ಲೆಯಲ್ಲಿ ಕಾಡುಗಳ್ಳರು ಆಕ್ಟೀವ್ ಆಗಿದ್ದಾರೆ ಎಂಬ ಸ್ಪೋಟಕ ಮಾಹಿತಿಯನ್ನು ಜೀ ಕನ್ನಡ ನ್ಯೂಸ್ ಬ್ರೇಕ್ ಮಾಡಿತ್ತು.. ಈಗ ಜೀ ಕನ್ನಡ ನ್ಯೂಸ್ ಮಾಡಿದ ಸುದ್ದಿಗೆ ಜೀವಂತ ಸಾಕ್ಷ್ಯ ಸಿಕ್ಕಿದೆ.. ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ ಒಳಗಡೆ ಉರುಳಿಗೆ ಸಿಲುಕಿ ಹುಲಿ ಮೃತ ಪಟ್ರೆ ಮತ್ತೊಂದೆಡೆ ಆನೆ ಕಳೇಬರ ಪತ್ತೆಯಾಗಿದ್ದು ದಂತ ನಾಪತ್ತೆಯಾಗಿದೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಕ್ಷಿತಾರಣ್ಯದ ಮದ್ದೂರು ರೇಂಜ್ ನ ಹೊಂಗಳ್ಳಿ ಬೀಟ್ ಬಳಿ 2 ವರ್ಷದ ಹುಲಿ ಕಳೇಬರ ಪತ್ತೆಯಾಗಿದೆ. ಹುಲಿಯ ಕತ್ತಿಗೆ ಕಬ್ಬಿಣದ ಉರುಳು ಸಿಲುಕಿದೆ. ಕಾಡಿನ 300 ಮೀಟರ್ ಒಳಗೆ ಈ ಘಟನೆ ನಡೆದಿದ್ದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ.
ಈ ಹಿಂದೆ 2009 ರಲ್ಲಿ ಕೊಳ್ಳೇಗಾಲ ತಾಲೂಕಿನ ಗುಂಡಾಲ್ ಜಲಾಶಯ ಸುತ್ತಾಮುತ್ತಾ ಇದೇ ರೀತಿ ಕಬ್ಬಿಣದ ಉರುಳುಗಳನ್ನ ಹಾಕಿ ಹುಲಿಯನ್ನ ಬೇಟೆಯಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂದ ಪಟ್ಟಂತೆ ಮದ್ಯ ಪ್ರದೇಶ ರಾಜ್ಯದ ಕಟ್ನಿ ಜಿಲ್ಲೆಯ ಭವಾರಿಯ ಟ್ರೈಬಲ್ ಗ್ಯಾಂಗ್ ಬಂಧನವಾಗಿತ್ತು. ಈ ಗ್ಯಾಂಗ್ ಹುಲಿ ಬೇಟೆ ಆಡುವಲ್ಲಿ ಸಿಕ್ಕಾ ಪಟ್ಟೆ ಎಕ್ಸ್ ಪರ್ಟ್ ಆಗಿದ್ದು ಚಾಮರಾಜನಗರದ ಬಂಡೀಪುರ, ಬಿಆರ್ ಟಿ, ತಮಿಳುನಾಡಿನ ಸತ್ಯಮಂಗಲಂ, ಮಧುಮಲೈ ಅರಣ್ಯದಲ್ಲಿ ಈ ಗ್ಯಾಂಗ್ ಓಡಾಟದ ಬಗ್ಗೆ ಅರಣ್ಯ ಇಲಾಖೆಗೆ ಗುಪ್ತಚರ ಮಾಹಿತಿ ತಿಳಿಸಿರುವುದು ದೃಢಪಟ್ಟಿದೆ.
ಇನ್ನು ಇತ್ತೀಚಿನ ದಿನಗಳಲ್ಲಿ ತಮಿಳುನಾಡಿನ ಸತ್ಯಮಂಗಲ ಟೈಗರ್ ರಿಸರ್ವ್ ಫಾರೆಸ್ಟ್ ಹಾಗೂ ಮಧುಮಲೈ ಕಾಡಿನಲ್ಲೂ ಈ ಭವಾರಿಯ ಗ್ಯಾಂಗ್ ಸುತ್ತಾಡಿರುವುದು ಗಮನಕ್ಕೆ ಬಂದಿದ್ದು ಹಾಗಾಗಿ ಇದೇ ಗ್ಯಾಂಗ್ ಬಂಡೀಪುರ ಕಾಡಿನಲ್ಲಿ ಉರುಳು ಹಾಕಿ ಹುಲಿ ಬೇಟೆ ಆಡಿದ್ಯ ಎಂಬ ಶಂಕೆ ವ್ಯಕ್ತವಾಗಿದೆ.. ಇನ್ನು ಕರಡಿಕಲ್ಲು ಗುಡ್ಡದ ಬಳಿ ಆನೆಯ ಕಳೇಬರ ಪತ್ತೆಯಾಗಿದ್ದು ಎರಡು ದಂತಗಳು ಮಿಸ್ ಆಗಿವೆ. ಹಾಗಾಗಿ ಬಂಡೀಪುರ ಕಾಡಿನ ಒಳಗೆ ನಟೋರಿಯಸ್ ಭವಾರಿಯ ಗ್ಯಾಂಗ್ ನುಗ್ಗಿತ್ತಾ ಎಂಬ ಗಾಢ ಅನುಮಾನ ಮೂಡಿದೆ.
ಸದ್ಯ ಹುಲಿ ಹಾಗೂ ಆನೆ ಕಳೇಬರ ಪತ್ತೆಯಾದ ಸ್ಥಳಕ್ಕೆ ಡಿಸಿಎಫ್ ನಂದೀಶ್ ಬೇಟೆ ನೀಡಿ ಪರಿಶೀಲಿಸಿದ್ದು ಬೆಲ್ಜಿಯಂ ಸ್ನಿಫರ್ ಡಾಗ್ಸ್ ನಿಂದಲು ಶೋಧಕಾರ್ಯ ನಡೆಸಲಾಗಿದೆ.. ಇನ್ನು ಎಫ್ ಎಸ್ ಎಲ್ ತಂಡ ಹುಲಿ ಮತ್ತು ಆನೆಯ ಕಳೇಬರ ಸ್ಯಾಂಪಲ್ ಪತ್ತೆ ಸಂಗ್ರಹಿಸಿದ್ದು ಲ್ಯಾಬ್ ಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಮೃತ ಹುಲಿ ಹಾಗೂ ಆನೆ ಲಿಂಗ ಹಾಗೂ ವಯಸ್ಸು ಪತ್ತೆಯಾಗಲಿದೆ.. ಸದ್ಯ ಬಂಡೀಪುರ ಎಸಿಎಫ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು ತನಿಖೆಯ ಬಳಿಕವಷ್ಟೇ ಸತ್ಯಾಸತ್ಯತೆ ಆಚೆ ಬರ ಬೇಕಿದೆ.