• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಮೈಸೂರು
  • /ಮೂರನೇ ವರ್ಷದ ಕಾಫಿ ದಸರಾ: ಮಡಿಕೇರಿಯಲ್ಲಿ ಘಮ‌ಘಮಿಸಿದ ಕಾಫಿ ಸ್ವಾದ

ಮೂರನೇ ವರ್ಷದ ಕಾಫಿ ದಸರಾ: ಮಡಿಕೇರಿಯಲ್ಲಿ ಘಮ‌ಘಮಿಸಿದ ಕಾಫಿ ಸ್ವಾದ

ಮಡಿಕೇರಿಯಲ್ಲಿ ಮೂರನೇ ವರ್ಷದ ಕಾಫಿ ದಸರಾ ಸರಳವಾಗಿ ನಡೆದಿದ್ದು ಜನರು ಕಾಫಿಯ ಜೊತೆ ಬಗೆ ಬಗೆಯ ಕಾಫಿ ಖಾದ್ಯ ಸವಿದು ಹರ್ಷ ವ್ಯಕ್ತಪಡಿಸಿದ್ದಾರೆ.

Written ByYashaswini V
Published: Oct 14, 2026, 03:13 PM IST|Updated: Oct 14, 2026, 03:31 PM IST
joinshare
ಮೂರನೇ ವರ್ಷದ ಕಾಫಿ ದಸರಾ: ಮಡಿಕೇರಿಯಲ್ಲಿ ಘಮ‌ಘಮಿಸಿದ ಕಾಫಿ ಸ್ವಾದ

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ಸ್ಟಿಂಗ್ ವಿಡಿಯೋ ಮೂಲಕ ಮಾಜಿ ಸಿಎಂ ಸಿದ್ದು ಚಾರಿತ್ರ್ಯ ಹರಣಕ್ಕೆ ಯತ್ನ.. ಇಬ್ಬರು ಅರೆಸ್ಟ್..

ಸ್ಟಿಂಗ್ ವಿಡಿಯೋ ಮೂಲಕ ಮಾಜಿ ಸಿಎಂ ಸಿದ್ದು ಚಾರಿತ್ರ್ಯ ಹರಣಕ್ಕೆ ಯತ್ನ.. ಇಬ್ಬರು ಅರೆಸ್ಟ್..

2

Kwala Intel: ಸ್ಟಾಕ್‌ ಮಾರ್ಕೆಟ್‌ ರಿಸರ್ಚ್‌ ಇನ್ನು ಸುಲಭ! ಕನ್ನಡದಲ್ಲೇ ಉತ್ತರ ನೀಡಲಿದೆ ಈ AI ಟೂಲ್‌

3

ಮೂರನೇ ವರ್ಷದ ಕಾಫಿ ದಸರಾ: ಮಡಿಕೇರಿಯಲ್ಲಿ ಘಮ‌ಘಮಿಸಿದ ಕಾಫಿ ಸ್ವಾದ

4

ಜನಸಾಮಾನ್ಯರಿಗೆ ಭರ್ಜರಿ ಸಿಹಿಸುದ್ದಿ! ದೀಪಾವಳಿಗೂ ಮುನ್ನ ಸಕ್ಕರೆ ಬೆಲೆ ಇಳಿಕೆಗೆ ಕೇಂದ್ರದ ಮಾಸ್ಟರ್‌ಪ್ಲಾನ್‌!

5

ರೈತರಿಗೆ ನ್ಯಾಯ ಸಿಗುವವರೆಗೆ ಸಕ್ಕರೆ ಸೇವಿಸುವುದಿಲ್ಲ: ದಿಂಗಾಲೇಶ್ವರ ಶ್ರೀ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಐತಿಹಾಸಿಕ ಮಡಿಕೇರಿ ದಸರಾ ಆರಂಭವಾಗಿದ್ದು, ದಿನ ದಿಂದ ದಿನಕ್ಕೆ ವೈವಿಧ್ಯಮಯ ಕಾರ್ಯಕ್ರಮಗಳು ಕೊಡಗಿನ ಜನತೆಯ ಗಮನ ಸೆಳೆಯುತ್ತಿದೆ. ಈ ಭಾರಿ ಮೂರನೇ ವರ್ಷದ ಕಾಫಿ ದಸರಾ ಆಯೋಜನೆಗೊಂಡಿದ್ದು ಮಡಿಕೇರಿಯಲ್ಲಿ ಕಾಫಿ ಸ್ವಾದ ಪಸರಿಸಿತು. ಬಗೆ ಬಗೆಯ ಕಾಫಿ ತಿನಿಸುಗಳು ಕೊಡಗಿನ ಜನತೆಯನ್ನ ಆಕರ್ಷಿಸಿತು. ಹೇಗಿತ್ತು ಮಡಿಕೇರಿ ಕಾಫಿ ದಸರಾ ಎಂಬ ವಿಶೇಷ ವರದಿ ಇಲ್ಲಿದೆ.

ಮಡಿಕೇರ ದಸರಾ:
ಐತಿಹಾಸಿಕ ಹಿನ್ನೆಲೆಯುಳ್ಳ ಮಡಿಕೇರ ದಸರಾ ಈಗಾಗಲೇ ಆರಂಭವಾಗಿದ್ದು ವೈವಿಧ್ಯಮಯ ಕಾರ್ಯಕ್ರಮಗಳು ಕೊಡಗಿನ ಜನತೆಯನ್ನ ಗಮನ ಸೆಳೆಯುತ್ತಿವೆ. ಜಿಲ್ಲಾಡಳಿತ ಮಡಿಕೇರಿ ದಸರಾ ಸಮಿತಿ, ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಮೂರನೇ ವರ್ಷದ ʼಕಾಫಿ ದಸರಾʼ ಆಯೋಜನೆಗೊಂಡಿದ್ದು ಕಾಫಿ ಕಪ್ ಗೆ ಕಾಫಿ ಸುರಿಯುವ ಮೂಲಕ ವಿನೂತನವಾಗಿ ಕಾಫಿ ದಸರಾದ ಉದ್ಘಾಟನೆ ನಡೆಸಿದರು.

ಕಾಫಿ ದಸರಾ:
ಗಾಂಧಿ ಮೈದಾನದಲ್ಲಿ ಆಯೋಜನೆಗೊಂಡಿದ್ದ ಕಾಫಿ ದಸರಾದಲ್ಲಿ ನಲವತ್ತಕ್ಕು ಹೆಚ್ಚು ಮಳಿಗೆಗಳಿದ್ದು ಬಗೆ ಬಗೆಯ ಕಾಫಿ ಹಾಗೂ ಕಾಫಿಯ ವೈವಿಧ್ಯತೆಯನ್ನು ಸಾರಿದರು. ಕೊಡಗು ಕಾಫಿಗೆ ಹೆಸರುವಾಸಿಯಾದ ಹಿನ್ನಲೆ ಹಾಗೂ ಕೊಡಗಿನ ಕಾಫಿಯ ಮಹತ್ವವನ್ನ ಜನತೆಗೆ ಮತ್ತಷ್ಟು ಪಸರಿಸುವ ನಿಟ್ಟಿನಲ್ಲಿ ಜೊತೆಗೆ ಕೊಡಗಿನ ಕಾಫಿ ಕೃಷಿಕರನ್ನ ಉತ್ತೇಜಿಸುವ ನಿಟ್ಟಿನಲ್ಲಿ ಕಳೆದ ವರ್ಷದಿಂದ ಈ ವಿನೂತನ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ.

ಬಗೆ ಬಗೆಯ ಕಾಫಿ ತಿನಿಸುಗಳು:
ಬ್ಲಾಕ್ ಕಾಫಿ, ಫೀಲ್ಟರ್ ಕಾಫಿಯ ಸವಿಯನ್ನ ವಿದಿದ್ದ  ನಾಡಿನ ಜನತೆ ಇದೀಗ ಮಡಿಕೇರಿಯಲ್ಲಿ ಆಯೋಜನೆಗೊಂಡಿದ್ದ ಕಾಫಿ ದಸರಾದಲ್ಲಿ ಕೇವಲ ಬ್ಲಾಕ್ ಕಾಫಿ, ಫಿಲ್ಟರ್ ಕಾಫಿಯ ಜೊತೆಗೆ ಕಾಫಿ ಪ್ಲೇವನಲ್ಲಿ ತಯಾರಿಸಿದ ಕಾಫಿ ಐಸ್ ಕ್ರೀಮ್,  ಕಾಫಿ ಜ್ಯೂಸ್, ಕಾಫಿ ಕೇಕ್, ಕಾಫಿ ಬಿಸ್ಕೆಟ್, ಕಾಫಿ ಚಾಕಲೇಟ್, ಕಪ್ ಕೇಕ್ ಕಾಫಿ ವೈನ್, ಕಾಫಿ ಭರ್ಫಿ  ಸೇರಿದಂದತೆ ಬಗೆ ಬಗೆಯ ಕಾಫಿಯ ಪ್ಲೇವರ್ ನಿಂದ ಮಾಡಿದ ಖಾದ್ಯಗಳನ್ನ ಸವಿಯುವ ಮೂಲಕ ಕಾಫಿ ದಸರಾದ ಸೊಬಗನ್ನ ಸವಿದರು.

ಅಷ್ಟು ಮಾತ್ರವಲ್ಲ ಕಾಫಿಯ ಬೀಜಗಳಿಂದ, ಕಾಫಿ ಪೌಡರ್ ನಿಂದ ನಾನಾ ರೀತಿಯ ಕಾಲಕೃತಿಗಳನ್ನ ಮಾಡುವ ಮೂಲಕವು ಜನತೆಯ ಗಮನ ಸೆಳೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಮಡಿಕೇರಿಯ ಜನತೆ ಕಾಫಿಯ ಸವಿಯನ್ನ ಸವಿಯುವುದರ ಜೊತೆಗೆ ಕಾಫಿಯ ತಿಸಿಸುಗಳನ್ನ ಸವಿಯುವ ಮೂಲಕ ಸಖತ್ ಖುಷಿ  ಪಟ್ಟರು. ಕಾಫಿ ದಸರಾಗೆ ಆಗಮಿಸಿದ ಜನತೆಗೆ ಉಚಿತವಾಗಿ ಕಾಫಿಯನ್ನ ಕೂಡ ಇದೇ ಸಂದರ್ಭದಲ್ಲಿ ನೀಡಲಾಯಿತು. ಜೊತೆಗೆ ಕಾಫಿ ಮಹತ್ವದ ಕುರಿತು ಜನತೆಗೆ ಉಪನ್ಯಾಸ ಕೂಡ ನಡೆಯಿತು.

ಒಟ್ಟಿನಲ್ಲಿ ಕೊಡಗಿನ‌ಲ್ಲಿ ನಡೆದ ಮೂರನೇ ವರ್ಷದ ಕಾಫಿ ಸೊಗಡಿನ ದಸಾರಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು ಕಾಫಿಯ ಸ್ವಾದ ಸವಿಯುವುದರ ಜೊತೆಗೆ ಕಾಫಿ ಲಾಭ ನಷ್ಟಗಳನ್ನ ಕೂಡ ಕೃಷಿಕರು ಹಾಗೂ ಮಡಿಕೇರಿ ಜನತೆ ಪಡೆದುಕೊಂಡಿರೊದಂತು ಸತ್ಯ.
 

Add Zee News as a Preferred Source
TAGS:
Kannada News