ಜ್ಯೋತಿಷ್ಯದಲ್ಲಿ ಗಜಕೇಸರಿ ರಾಜಯೋಗವನ್ನು ಅತ್ಯಂತ ಬಲಶಾಲಿಯಾದ ಯೋಗ ಎನ್ನಲಾಗುತ್ತದೆ.
1/6
ಗುರು ಚಂದ್ರರ ಸಂಯೋಗ
ಹಿಂದೂ ಪಂಚಾಂಗದ ಪ್ರಕಾರ, ದೀಪಾವಳಿ ಹಬ್ಬಕ್ಕೂ ಮೊದಲು ನವೆಂಬರ್ 02, 2026ರಂದು ಸೂರ್ಯನ ರಾಶಿಯಲ್ಲಿ ಗುರು ಚಂದ್ರರ ಸಂಯೋಗ ಏರ್ಪಡಲಿದೆ. ಇದರಿಂದಾಗಿ ಪವರ್‌ಫುಲ್ ಗಜಕೇಸರಿ ರಾಜಯೋಗ ನಿರ್ಮಾಣವಾಗಲಿದೆ.
2/6
ಪವರ್‌ಫುಲ್ ಗಜಕೇಸರಿ ರಾಜಯೋಗ
ದೀಪಾವಳಿಗೂ ಮೊದಲೇ ನಿರ್ಮಾಣವಾಗಲಿರುವ ಪವರ್‌ಫುಲ್ ಗಜಕೇಸರಿ ರಾಜಯೋಗವು ನಾಲ್ಕು ರಾಶಿಯವರ ಬದುಕಿನಲ್ಲಿ ಬಂಗಾರದ ಸಮಯವನ್ನು ಹೊತ್ತು ತರಲಿದ್ದು ಈ ಅವಧಿಯಲ್ಲಿ ಅವರಿಗೆ ಮಣ್ಣೂ ಕೂಡ ಹೊನ್ನಾಗುವ ಕಾಲ ಎಂದು ಸಾಬೀತುಪಡಿಸಲಿದೆ.
3/6
ಮೇಷ ರಾಶಿ
ಮೇಷ ರಾಶಿಯವರಿಗೆ ಐದನೇ ಮನೆಯಲ್ಲಿ ನಿರ್ಮಾಣವಾಗಿಲರುವ ಪವರ್‌ಫುಲ್ ಗಜಕೇಸರಿ ರಾಜಯೋಗವು ವೃತ್ತಿ, ವ್ಯವಹಾರದಲ್ಲಿ ಪ್ರಗತಿಯ ಹಾದಿಯನ್ನು ತೆರೆಯಲಿದೆ. ವಿದ್ಯಾರ್ಥಿಗಳಿಗೆ ಯಶಸ್ಸನ್ನು ನೀಡಲಿದೆ. ಈ ಹಿಂದೆ ಮಾಡಿರುವ ಹೂಡಿಕೆಗಳಿಂದ ಉತ್ತಮ ಆದಾಯ ಹರಿದುಬರಲಿದೆ. ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಬೆಂಬಲ ಸಿಗುವ ನಿರೀಕ್ಷೆ ಇದೆ.
4/6
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಎರಡನೇ ಮನೆಯಲ್ಲಿ ಪವರ್‌ಫುಲ್ ಗಜಕೇಸರಿ ರಾಜಯೋಗ ನಿರ್ಮಾಣವು ಭೂಮಿ, ಮನೆ ಖರೀದಿ ಯೋಗವನ್ನು ನೀಡಲಿದೆ. ಈ ಸಮಯದಲ್ಲಿ ಸಮಾಜದಲ್ಲಿ ನಿಮ್ಮ ಕೀರ್ತಿ, ಗೌರವಗಳನ್ನು ಹೆಚ್ಚಿಸಲಿದ್ದು, ಉದ್ಯಮಿಗಳಿಗೆ ಅಪಾರ ಆದಾಯವನ್ನು ಹೊತ್ತು ತರಲಿದೆ. ಪ್ರೇಮ ಜೀವನದಲ್ಲಿ ಅನುಕೂಲಕರ ವಾತಾವರಣ ಇರಲಿದೆ.
5/6
ಸಿಂಹ ರಾಶಿ
ಸ್ವ ರಾಶಿಯಲ್ಲಿ ರೂಪುಗೊಳ್ಳಲಿರುವ ಪವರ್‌ಫುಲ್ ಗಜಕೇಸರಿ ರಾಜಯೋಗವು ಸಿಂಹ ರಾಶಿಯವರಿಗೆ ಆತ್ಮ ವಿಶ್ವಾಸವನ್ನು ಹೆಚ್ಚಿಸಲಿದ್ದು ಕೆಲಸದಲ್ಲಿ ಉತ್ಸಾಹ ಹೆಚ್ಚಾಗಲಿದೆ. ಉದ್ಯೋಗಸ್ಥರಿಗೆ ಬಡ್ತಿ ಸೂಚನೆಗಳಿದ್ದರೆ, ಸ್ವಂತ ವ್ಯವಹಾರ ಮಾಡುವವರಿಗೆ ಆದಾಯದ ಮೂಲಗಳು ಹೆಚ್ಚಾಗಲಿವೆ. ವೈವಾಹಿಕ ಬದುಕು ಸುಖ-ಸಂತೋಷದಿಂದ ಕೂಡಿರಲಿದೆ.
6/6
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಿಗೆ ಹತ್ತನೇ ಮನೆಯಲ್ಲಿ ನಿರ್ಮಾಣವಾಗಲಿರುವ ಪವರ್‌ಫುಲ್ ಗಜಕೇಸರಿ ರಾಜಯೋಗವು ವೃತ್ತಿ ಬದುಕಿನಲ್ಲಿ ಉತ್ತಮ ಫಲಿತಾಂಶವನ್ನು ನೀಡಲಿದೆ. ಉದ್ಯೋಗಸ್ಥರಿಗೆ ಕಚೇರಿಯಲ್ಲಿ ಇದ್ದ ಸಮಸ್ಯೆಗಳು ನಿವಾರಣೆ ಆಗಲಿವೆ. ಷೇರು ಮಾರುಕಟ್ಟೆಯಲ್ಲಿ ಹಿಂದೆ ಮಾಡಿರುವ ಹೂಡಿಕೆಗಳಿಂದ ಉತ್ತಮ ಆದಾಯ ಗಳಿಸುವ ಅವಕಾಶಗಳಿವೆ.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.