ಅಕ್ಟೋಬರ್ 31ರಂದು ಬೆಂಗಳೂರಿನಲ್ಲಿ ʼನನ್ನ ಇ-ಖಾತಾ ನನ್ನ ಹಕ್ಕುʼ ಯೋಜನೆಯಡಿ ಖಾತಾ ಮೇಳವು ಮತ್ತೆ ಆರಂಭಗೊಳ್ಳಲಿದೆ. ನವೆಂಬರ್ 1ರಿಂದ ವಾರ್ಡ್ ಒನ್ ಎಂಬ ನೂತನ ಅಭಿಯಾನಕ್ಕೆ ಚಾಲನೆ ಸಿಗಲಿದೆ.
ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳ 62 ಸ್ಥಳಗಳಲ್ಲಿ ನನ್ನ ಇ-ಖಾತಾ ನನ್ನ ಹಕ್ಕು ಅಭಿಯಾನವೂ ಮತ್ತೆ ಆರಂಭ:
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ 62 ಸಹಾಯಕ ಕಂದಾಯ ಅಧಿಕಾರಿ ಕಚೇರಿಗಳಲ್ಲಿ ಇಂದಿನಿಂದ ಮತ್ತೆ ʼನನ್ನ ಇ-ಖಾತಾ ನನ್ನ ಹಕ್ಕುʼ ಅಭಿಯಾನವೂ ಮತ್ತೆ ಆರಂಭವಾಗಲಿದೆ. ನಾಗರಿಕರು ಇ-ಖಾತಾಗೆ ಸಂಬಂಧಿಸಿದ ವಿವಿಧ ಸೇವೆಗಳನ್ನು ಸುಲಭವಾಗಿ ಪಡೆಯಲು ಖಾತಾ ಮೇಳ ಆಯೋಜನೆ ಮಾಡಲಾಗಿದುದ ನಗರದಾದ್ಯಂತ
62 ಸ್ಥಳಗಳಲ್ಲಿ ಈ ಮೇಳ ನಡೆಯಲಿದೆ.
ನಾಗರಿಕರು ಇದರ ಪ್ರಯೋಜನವನ್ನು ಪಡೆಯಲು https://gba.karnataka.gov.in/download/openhousevenues.pdf ಲಿಂಕ್ ಗೆ ಭೇಟಿ ನೀಡಿ ಹತ್ತಿರವಿರುವ ಅಭಿಯಾನದ ಸ್ಥಳಗಳಿಗೆ ಭೇಟಿ ನೀಡಬಹುದು. ಇ-ಖಾತಾ ಮಾಹಿತಿಗಾಗಿ ಪಾಲಿಕೆ ಕಂದಾಯ ವಿಭಾಗದ ಸಹಾಯವಾಣಿ ಸಂಖ್ಯೆ 9480683695 ಕರೆ ಮಾಡಿ ಅಗತ್ಯ ಮಾಹಿತಿ ಪಡೆದುಕೊಳ್ಳಬಹುದು.
ಇ-ಖಾತಾ ಸೇವೆಗಳನ್ನು ಪಡೆಯುವ ಕುರಿತು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾಹಿತಿ ನೀಡುವ ವಿಡಿಯೋಗಳನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.
ಯೂಟ್ಯೂಬ್ https://youtube.com/@revenuebmp?si=8Jh4AVM18g-stdgf ಲಿಂಕ್ ಮೂಲಕ ಈ ಕುರಿತ ಮಾಹಿತಿಯನ್ನೂ ಪಡೆಯಬಹುದು. ನಾಗರಿಕರು ಈ ವಿಡಿಯೋಗಳನ್ನು ವೀಕ್ಷಿಸುವ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ತಿಳಿದುಕೊಳ್ಳಬಹುದು.
ಸಾರ್ವಜನಿಕರು ಜಿಬಿಎ ಇ-ಆಸ್ತಿ ಪೋರ್ಟಲ್‌ಗೆ ಭೇಟಿ ನೀಡಿ ಸ್ವತಃ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಜೊತೆಗೆ ನಾಗರಿಕರು ತಮ್ಮ ಸಮೀಪದ ಬೆಂಗಳೂರು ಒನ್ ಕೇಂದ್ರಕ್ಕೆ ಭೇಟಿ ನೀಡಿ, ₹45 ಶುಲ್ಕ ಪಾವತಿಸುವ ಮೂಲಕ ಇ-ಖಾತಾಗೆ ಅರ್ಜಿ ಸಲ್ಲಿಸಬಹುದು.
“ವಾರ್ಡ್ ಒನ್” ಅಭಿಯಾನ:
ವಾರ್ಡ್ ಮಟ್ಟದಿಂದ ಅಭಿವೃದ್ದಿಗೆ ಸಹಾಯವಾಗುವ ನಿಟ್ಟಿನಲ್ಲಿ ಇಂದಿನಿಂದ “ವಾರ್ಡ್ ಒನ್” ಹೊಸ ಅಭಿಯಾನಕ್ಕೆ ಸಿಗಲಿದೆ ಚಾಲನೆ. 43 ವಾರ್ಡ್‌ಗಳಲ್ಲಿ ಇಂದು “ವಾರ್ಡ್ ಒನ್” ಅಭಿಯಾನಕ್ಕೆ ಸೆಂಟ್ರಲ್ ಸಿಲ್ಕ್ ಬೋರ್ಡ್ ಬಳಿ ಬೆಂಗಳೂರು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರಿಂದ ಇಂದು ಚಾಲನೆ ನೀಡಲಿದ್ದಾರೆ.
From November 1, GBA’s Ward One campaign will bring departments together to fix potholes, improve junctions, clear waste, restore streetlights and address everyday civic issues, ward by ward. Our aim is to make a visible difference where it matters most - in the neighbourhoods citizens live, work and commute in every day. #BetterBengaluru
— Greater Bengaluru Authority (@GBA_office) October 28, 2026
ವಿವಿಧ ಇಲಾಖೆಗಳ ಅಧಿಕಾರಿಗಳು ಸಮನ್ವಯದೊಂದಿಗೆ ನಡೆಯಲಿರುವ ವಾರ್ಡ್ ಒನ್ ಅಭಿಯಾನದಲ್ಲಿ ಆಯಾ ನಗರ ಪಾಲಿಕೆಗಳು ಬೆಸ್ಕಾಂ, ಜಲಮಂಡಳಿ, ಮೆಟ್ರೋ, ಸಾರಿಗೆ, ಸಂಚಾರ ವಿಭಾಗ ಸೇರಿದಂತೆ ವಿವಿಧ ಇಲಾಖೆಗಳೊಂದಿಗೆ ಸಮನ್ವಯದೊಂದಿಗೆ ಜಂಕ್ಷನ್‌ಗಳ ಸ್ವಚ್ಛತೆ, ರಸ್ತೆ ಗುಂಡಿಗಳ ಮುಚ್ಚುವಿಕೆ, ರಸ್ತೆ ಮೇಲ್ಮೈ ದುರಸ್ತಿ, ಪಾದಚಾರಿ ಕ್ರಾಸಿಂಗ್ ಸೇರಿದಂತೆ ಅಗತ್ಯ ಕಾಮಗಾರಿಗಳು ನಡೆಲಿದೆ.
“ವಾರ್ಡ್ ಒನ್” ಅಭಿಯಾನದಲ್ಲಿ ನಾಗರಿಕರು ಹಾಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಭಾಗವಹಿಸಲಿದ್ದಾರೆ. ಐದು ನಗರ ಪಾಲಿಕೆಗಳಲ್ಲಿ ಸ್ವಚ್ಛತಾ ಕಾರ್ಯಕ್ಕೆ ಆಯ್ಕೆ ಮಾಡಿರುವ ವಾರ್ಡ್‌ಗಳ ವಿವರ ಈ ಕೆಳಕಂಡಂತಿದೆ:
- ಕೇಂದ್ರ ನಗರ ಪಾಲಿಕೆ: 6 ವಾರ್ಡ್‌ಗಳು
- ಉತ್ತರ ನಗರ ಪಾಲಿಕೆ: 7 ವಾರ್ಡ್‌ಗಳು
- ದಕ್ಷಿಣ ನಗರ ಪಾಲಿಕೆ: 12 ವಾರ್ಡ್‌ಗಳು
- ಪಶ್ಚಿಮ ನಗರ ಪಾಲಿಕೆ: 10 ವಾರ್ಡ್‌ಗಳು
- ಪೂರ್ವ ನಗರ ಪಾಲಿಕೆ: 8 ವಾರ್ಡ್‌ಗಳು
ಸೇರಿದಂತೆ ಒಟ್ಟು: 43 ವಾರ್ಡ್‌ಗಳ ಆಯ್ಕೆ
ಅಭಿಯಾನದಲ್ಲಿ ಮೆಟ್ರೋ, ಬೆಸ್ಕಾಂ, ಕೆಎಸ್‌ಆರ್‌ಟಿಸಿ, ಜಲಮಂಡಳಿ, ಬಿಡಿಎ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ.