• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಕರ್ನಾಟಕದಲ್ಲಿ ಮತ್ತೊಂದು ಬೆಲೆ ಏರಿಕೆ ಶಾಕ್: ಲೀಟರ್ ಮೊಸರಿನ ದರ ಬರೋಬ್ಬರಿ 14 ರೂ. ಹೆಚ್ಚಳ!

ಕರ್ನಾಟಕದಲ್ಲಿ ಮತ್ತೊಂದು ಬೆಲೆ ಏರಿಕೆ ಶಾಕ್: ಲೀಟರ್ ಮೊಸರಿನ ದರ ಬರೋಬ್ಬರಿ 14 ರೂ. ಹೆಚ್ಚಳ!

ಹಾಲಿನ ದರ ಏರಿಕೆ ಬೆನ್ನಲ್ಲೇ ರಾಜ್ಯದ ಜನತೆಗೆ ಮತ್ತೊಂದು ಶಾಕ್ ನೀಡಿರುವ ಕೆಎಂಎಫ್‌ ನಂದಿನಿ ಮೊಸರಿನ ದರವನ್ನೂ ಲೀಟರ್​​ಗೆ​​ 14 ರೂ. ಹೆಚ್ಚಿಸಿದೆ.

Written ByYashaswini V
Published: Oct 31, 2026, 09:04 AM IST|Updated: Oct 31, 2026, 09:09 AM IST
joinshare
ಕರ್ನಾಟಕದಲ್ಲಿ ಮತ್ತೊಂದು ಬೆಲೆ ಏರಿಕೆ ಶಾಕ್: ಲೀಟರ್ ಮೊಸರಿನ ದರ ಬರೋಬ್ಬರಿ 14 ರೂ. ಹೆಚ್ಚಳ!

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ನಂದಿನಿ ಗ್ರಾಹಕರಿಗೆ ಬೆಲೆ ಏರಿಕೆ ಶಾಕ್‌! ಹಾಲು, ಮೊಸರು ಎರಡೂ ದುಬಾರಿ.. ನಾಳೆಯಿಂದಲೇ ಹೊಸ ದರ ಜಾರಿ!

ನಂದಿನಿ ಗ್ರಾಹಕರಿಗೆ ಬೆಲೆ ಏರಿಕೆ ಶಾಕ್‌! ಹಾಲು, ಮೊಸರು ಎರಡೂ ದುಬಾರಿ.. ನಾಳೆಯಿಂದಲೇ ಹೊಸ ದರ ಜಾರಿ!

2

“ವಾರ್ಡ್ ಒನ್” ಅಭಿಯಾನಕ್ಕೆ ಚಾಲನೆ! ಇಂದಿನಿಂದ ಖಾತಾ ಮೇಳ ಆರಂಭ

3

ಕರ್ನಾಟಕದಲ್ಲಿ ಮತ್ತೊಂದು ಬೆಲೆ ಏರಿಕೆ ಶಾಕ್: ಲೀಟರ್ ಮೊಸರಿನ ದರ ಬರೋಬ್ಬರಿ 14 ರೂ. ಹೆಚ್ಚಳ!

4

ಬಾಗಲಕೋಟೆಯಲ್ಲಿ ರೈತರ ಬಂದ್‌ ಕರೆ: ರಾಷ್ಟ್ರೀಯ ಹೆದ್ದಾರಿ ತಡೆ ಹಿನ್ನಲೆ BNS 163 ನಿಷೇದಾಜ್ಞೆ ಜಾರಿ

5

ದಿನ ಭವಿಷ್ಯ 31-10-2026: ಶನಿವಾರದಂದು ಸಿದ್ಧ ಯೋಗ.. ಈ ರಾಶಿಯವರಿಗೆ ಕನಸು ನನಸಾಗುವ ಸಮಯ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ದೀಪಾವಳಿಗೆ ರೈತರಿಗೆ ಸಿಹಿ ನೀಡಿರುವ ಕೆಎಂಎಫ್‌ ಗ್ರಾಹಕರಿಗೆ ಬೆಲೆ ಏರಿಕೆಯ ಬಿಗ್‌ ಶಾಕ್‌ ನೀಡಿದೆ. ನಂದಿನ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ₹8 ಏರಿಕೆ ಮಾಡಿರುವ ಬೆನ್ನಲ್ಲೇ ಇದೀಗ ಮೊಸರಿನ ಬೆಲೆಯನ್ನೂ ಕೂಡ ಲೀಟರ್‌ಗೆ 14 ರೂಪಾಯಿ ಏರಿಕೆ ಮಾಡಿದೆ. ನಂದಿನಿ ಹಾಲು ಮತ್ತು ಮೊಸರಿನ ಹೊಸ ದರಗಳು ನಾಳೆಯಿಂದ (ನ. 01) ಅನ್ವಯವಾಗಲಿವೆ.

ಹಾಲಿನ ದರ ಏರಿಕೆ ಬೆನ್ನಲ್ಲೇ ಅದರ ಉತ್ಪನ್ನಗಳ ಬೆಲೆಯಲ್ಲೂ ಹೆಚ್ಚಳಕ್ಕೆ ಕೆಎಂಎಫ್‌ ಮುಂದಾಗಿದ್ದು ಮೊಸರಿನ ಬೆಲೆಯಲ್ಲೂ ಗಣನೀಯ ಏರಿಕೆಗೆ ನಿರ್ಧರಿಸಿದೆ. ಲೀಟರ್​​ಗೆ​​ ಮೊಸರಿನ ಬೆಲೆ ₹54 ರಿಂದ ₹68ಕ್ಕೆ ಹೆಚ್ಚಲಿದ್ದು, ಬರೋಬ್ಬರಿ 14 ರೂಪಾಯಿ ಏರಿಕೆ ಕಂಡಿದೆ.

ಅರ್ಧ ಲೀಟರ್​​ ಮೊಸರಿಗೆ 6 ರೂಪಾಯಿ ಏರಿಕೆ:
ಅರ್ಧ ಲೀಟರ್​​ ಮೊಸರಿನ ಪ್ಯಾಕೆಟ್ ಬೆಲೆಯಲ್ಲಿ 6 ರೂಪಾಯಿ ಹೆಚ್ಚಳವಾಗಿದ್ದು, ₹28 ರಿಂದ ₹34ಕ್ಕೆ ತಲುಪಿದೆ. ಈಗಾಗಲೇ ನಂದಿನಿ ಹಾಲಿನ ದರ ಲೀಟರ್​​ಗೆ ₹8 ಏರಿಕೆಗೆ ನಿರ್ಧರಿಸಲಾಗಿದ್ದು, ನಂದಿನಿ ಹಾಲು ಮತ್ತು ಮೊಸರಿನ ಈ ಪರಿಷ್ಕೃತ ದರಗಳು ನಾಳೆಯಿಂದಲೇ ಜಾರಿಗೆ ಬರಲಿವೆ.

ನವೆಂಬರ್ 1ರಿಂದಲೇ ಬೆಲೆ ಏರಿಕೆ ಬಿಸಿ:
ನಂದಿನಿ ಹಾಲು  ಮತ್ತು ಮೊಸರು ಖರೀದಿಸುವ ಗ್ರಾಹಕರಿಗೆ ನವೆಂಬರ್ ತಿಂಗಳ ಆರಂಭದಲ್ಲೇ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಕರ್ನಾಟಕ ಹಾಲು ಮಹಾಮಂಡಳಿ (KMF) ಹಾಲು ಮತ್ತು ಮೊಸರಿನ ಮಾರಾಟ ದರವನ್ನು ಪರಿಷ್ಕರಿಸಿದ್ದು, ಹೊಸ ದರಗಳು ನವೆಂಬರ್ 1ರಿಂದಲೇ ಜಾರಿಗೆ ಬರಲಿವೆ. ಮೊಸರಿನ 500 ಗ್ರಾಂ ಮತ್ತು ಒಂದು ಕೆಜಿ ಪ್ಯಾಕೆಟ್‌ಗಳ ದರವನ್ನೂ ಹೆಚ್ಚಿಸಲಾಗಿದೆ.

ಹಾಲಿನ ಮಾದರಿಹಳೆಯ ದರಪರಿಷ್ಕೃತ ದರ
ಟೋನ್ಡ್ (ನೀಲಿ)₹46₹54
ಹೋಮೋಜಿನೈಸ್ಡ್₹47₹56
ಹೋಮೋಜಿನೈಸ್ಡ್ ಹಸುವಿನ ಹಾಲು₹50₹58
ಸ್ಪೆಷಲ್ ಟೋನ್ಡ್ ಹಾಲು₹52₹64
ಶುಭಂ₹52₹64
ಹೋಮೋಜಿನೈಸ್ಡ್ ಶುಭಂ₹53₹65
ಮೊಸರು 500 ಗ್ರಾಂ₹28₹34
ಮೊಸರು 1 ಲೀಟರ್‌₹54₹68

ಇತ್ತೀಚೆಗೆ ನಡೆದ ಕ್ಯಾಬಿನೆಟ್‌ ಸಭೆಯಲ್ಲಿ ರಾಜ್ಯದ ಹೈನುಗಾರಿಕೆಯನ್ನೇ ಅವಲಂಬಿಸಿರುವ ರೈತರಿಗೆ ಅನುಕೂಲವಾಗಲೆಂದು ಪ್ರತಿ ಲೀಟರ್‌ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ₹8 ಏರಿಸಲು ಸರ್ಕಾರ ಅನುಮೋದನೆ ನೀಡಿದೆ. ಇದರಲ್ಲಿ 7 ರೂಪಾಯಿಗಳನ್ನು ರೈತರಿಗೆ ನೀಡಿದರೆ, 1 ಹಾಲು ಒಕ್ಕೂಟಗಳಿಗೆ ನೀಡಲಾಗುವುದು ಎನ್ನಲಾಗಿದೆ.

ಕೆಎಂಎಫ್ ವ್ಯಾಪ್ತಿಯಲ್ಲಿ ಸುಮಾರು 26.89 ಲಕ್ಷ ಹಾಲು ಉತ್ಪಾದಕರು ಸದಸ್ಯರಾಗಿದ್ದಾರೆ. ಇವರಲ್ಲಿ ಸುಮಾರು 8.9 ಲಕ್ಷ ರೈತರು ಪ್ರತಿದಿನ ಹಾಲನ್ನು ಸಹಕಾರ ಸಂಘಗಳಿಗೆ ಪೂರೈಸುತ್ತಿದ್ದಾರೆ. ಈ ಮೂಲಕ ಹಾಲು ಉತ್ಪಾದಕರಿಗೆ ದಿನವೊಂದಕ್ಕೆ ಸರಾಸರಿ 28.60 ಕೋಟಿ ರೂಪಾಯಿ ಪಾವತಿಸಲಾಗುತ್ತಿದೆ.

Add Zee News as a Preferred Source
TAGS:
Price Hike
Kannada News