ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನದಡಿ ವಾರ್ಡ್ ನಂ. 15ರಲ್ಲಿ ತೀವ್ರ ಸ್ವಚ್ಛತಾ ಕಾರ್ಯಾಚರಣೆ (Intensive Cleaning) ಹಮ್ಮಿಕೊಳ್ಳಲಾಗಿದ್ದು, ಬ್ಯಾಟರಾಯನಪುರದಲ್ಲಿ ಮೂರು ದಿನಗಳ ಕಾಲ ನಿರಂತರ ಸ್ವಚ್ಛತಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಜೆ.ಪಿ. ನಗರದಿಂದ ಗೊಟ್ಟಿಗೆರೆವರೆಗೆ ದಿಢೀರ್ ರಾತ್ರಿ ರೌಂಡ್ಸ್ ನಡೆಸಿದ ಸಚಿವ ಕೃಷ್ಣ ಬೈರೇಗೌಡ, ಬೀದಿ ದೀಪ ದುರಸ್ತಿ, ಪಾದಚಾರಿ ಮಾರ್ಗಗಳ ಅವ್ಯವಸ್ಥೆ ಕಂಡು ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡರು. ಅರ್ಧಂಬರ್ಧ ಫುಟ್‌ಪಾತ್ ಕಾಮಗಾರಿ, ತೆರೆದ ಚರಂಡಿ ಮುಚ್ಚದ ಎಂಜಿನಿಯರ್‌ಗಳ ವಿರುದ್ಧ ಗರಂ ಆದ ಸಚಿವರು ಬನ್ನೇರುಘಟ್ಟ ರಸ್ತೆಯ ಪೂರ್ಣ ಸ್ಟ್ರೆಚ್ ವೈಟ್ ಟಾಪಿಂಗ್‌ಗೆ ಸೂಚಿಸಿದರು. ಪಾದಚಾರಿ ಮಾರ್ಗಗಳ ಮರು ಒತ್ತುವರಿ ತಡೆಗೆ ಜಿಬಿಎ-ಪೊಲೀಸ್ ‘ಜಂಟಿ ಟಾಸ್ಕ್ ಫೋರ್ಸ್’ ರಚನೆಗೂ ಸೂಚಿಸಲಾಯಿತು.
ಪೊಲೀಸರಿಂದ ಜಪ್ತಿ ಮಾಡಲಾದ ವಾಹನಗಳನ್ನು ಪೊಲೀಸ್ ಠಾಣೆಯಿಂದ ನಗರದ ಹೊರ ವಲಯಕ್ಕೆ ಸಾಗಿಸುವ ವಿನೂತನ ಅಭಿಯಾನಕ್ಕೆ ಸಚಿವ ಕೃಷ್ಣ ಬೈರೇಗೌಡ ಇಂದು ಚಾಲನೆ ನೀಡಿದರು.